Dehydration: ದೇಹವು ನಿರ್ಜಲೀಕರಣಗೊಂಡಾಗ ಮೂತ್ರದ ಬಣ್ಣ ಬದಲಾಗುವುದೇ?

Dehydration:ನೀರನ್ನು ಸಮರ್ಪಕವಾಗಿ ಕುಡಿಯದೇ ಇದ್ದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಡಿಹೈಡ್ರೇಶನ್ ತೊಂದರೆಗೆ ಕಾರಣವಾಗುತ್ತದೆ. ಇದರಿಂದಾಗಿ ಬಾಯಾರಿಕೆ, ಆಯಾಸ, ಬಾಯಿ ಹಾಗೂ ತುಟಿ ಒಣಗುವಿಕೆ ಸದಾ ಇರುತ್ತದೆ.

Dehydration: ದೇಹವು ನಿರ್ಜಲೀಕರಣಗೊಂಡಾಗ ಮೂತ್ರದ ಬಣ್ಣ ಬದಲಾಗುವುದೇ?
Dehydration
Follow us
TV9 Web
| Updated By: ನಯನಾ ರಾಜೀವ್

Updated on:May 25, 2022 | 4:18 PM

ನೀರನ್ನು ಸಮರ್ಪಕವಾಗಿ ಕುಡಿಯದೇ ಇದ್ದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಡಿಹೈಡ್ರೇಶನ್ ತೊಂದರೆಗೆ ಕಾರಣವಾಗುತ್ತದೆ. ಇದರಿಂದಾಗಿ ಬಾಯಾರಿಕೆ, ಆಯಾಸ, ಬಾಯಿ ಹಾಗೂ ತುಟಿ ಒಣಗುವಿಕೆ ಸದಾ ಇರುತ್ತದೆ. ಹಾಗೆಯೇ ನಿಮ್ಮ ಮೂತ್ರದ ಬಣ್ಣದಿಂದಲೂ ನಿಮಗೆ ಡಿಹೈಡ್ರೇಶನ್ ಆಗಿರುವ ಕುರಿತು ಮಾಹಿತಿ ಪಡೆಯಬಹುದು.

ಬಿಸಿಲ ಝಳವಿರುವ ಕಡೆ ನೀರು ಸೇವನೆ ಮಾಡದೇ ಬೆವರು ಹರಿಸುವಂತಹ ಕೆಲಸ ಮಾಡಿದರೆ ಡಿಹೈಡ್ರೇಶನ್ ಆಗುತ್ತೆ. ದೀರ್ಘಕಾಲೀನ ಒಣಗಾಳಿ ಸೇವನೆ, ರಕ್ತ ನಷ್ಟ ಅಥವಾ ದೈಹಿಕ ಗಾಯದಿಂದಾಗಿ ಒತ್ತಡ ಹೀನತೆಯೂ ಕೂಡ ಕಾರಣ. ಇದರೊಂದಿಗೆ ಅತಿಸಾರಭೇದಿ, ವಾಂತಿ, ಕಾಲರಾ, ಜಠರದ ಉರಿ ಯೂತ, ಕಾಮಾಲೆ, ಅಪೌಷ್ಠಿಕತೆಗಳಿಂದಲೂ ನಿರ್ಜಲೀಕರಣ ಸಮಸ್ಯೆಯಾಗುತ್ತದೆ.

ಡಿಹೈಡ್ರೇಶನ್​ಗೆ ಕಾರಣವೇನು? ಸಾಮಾನ್ಯವಾಗಿ ಬೇಸಿಗೆಯಲ್ಲಿ ಅದರಲ್ಲೂ ಅತ್ಯಂತ ಉರಿ ಬಿಸಿಲಿನ ಸಮಯದಲ್ಲಿ ‘ಡಿಹೈಡ್ರೇಷನ್’ ಅಥವಾ ನಿರ್ಜಲೀಕರಣ ಉಂಟಾಗುತ್ತದೆ. ದೇಹದಿಂದ ಸುಮಾರು 75%ಕ್ಕಿಂತಲೂ ಅಧಿಕವಾಗಿ ನೀರು ಹೊರಹೋದಾಗ ಈ ಲಕ್ಷಣಗಳು ಕಂಡುಬರುತ್ತವೆ. ಇದು ಜೀವಿಯೊಂದರಲ್ಲಿರುವ ದ್ರವಾಂಶದ ಕೊರತೆಯನ್ನು ಸೂಚಿಸುತ್ತದೆ.

ನಿರ್ಜಲೀಕರಣ ಸ್ಥಿತಿಯು ಕೇವಲ ಜಲ ಅಥವಾ ನೀರಿನ ಕೊರತೆಯಷ್ಟೇ ಅಲ್ಲ, ರಕ್ತದ ಪ್ಲಾಸ್ಮಾದಲ್ಲಿರುವ ಪ್ರಮಾಣ ಕ್ಕನುಗುಣವಾಗಿ ಬಹುಮಟ್ಟಿಗೆ ಸಮಾನ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಕಾರಣ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು ಅಥವಾ ದೇಹದಲ್ಲಿನ ಪರಿಚಲನಾ ವ್ಯವಸ್ಥೆಗೆ ಧಕ್ಕೆಯುಂಟಾಗುವುದಾಗಿದೆ.

ರಕ್ತದಲ್ಲಿ ಸೋಡಿಯಂ ಪ್ರಮಾಣದ ಇಳಿಕೆ, ತ್ವರಿತ ತೂಕ ಇಳಿಕೆಯ ಕ್ರಮವೂ ಕೂಡ ನಿರ್ಜಲೀಕರಣಕ್ಕೆ ಪ್ರಮುಖ ಕಾರಣವಾಗಿದೆ. ಲಕ್ಷಣ ಮೈಭಾರ, ತಲೆನೋವು, ಸ್ನಾಯು ಸೆಳೆತ, ಸುಸ್ತು, ನಿಶ್ಯಕ್ತಿ, ಹಸಿವು ಕಡಿಮೆಯಾಗುವುದು. ಮೈಯಲ್ಲಿ ಬೆವರಿನ ಗುಳ್ಳೆಗಳು ಕಾಣಿಸುವುದು, ತುಟಿ ಒಣಗಿದಂತಾಗುವುದು, ಪ್ರಜ್ಞೆಯಿಲ್ಲದಿರುವಿಕೆ, ನಾಲಿಗೆಯಲ್ಲಿ ಊತ.

ನಿರ್ಜಲೀಕರಣ ಕಂಡುಹಿಡಿಯುವುದು ಹೇಗೆ? ನಿರ್ಜಲೀಕರಣವನ್ನು ಕಂಡುಹಿಡಿಯಬೇಕಾದರೆ ವ್ಯಕ್ತಿಯ ಮೂತ್ರ ವಿಸರ್ಜನೆಯತ್ತ ಗಮನವಿಡುವಿವುದು ಅತ್ಯಗತ್ಯ. ಓರ್ವ ವ್ಯಕ್ತಿ ಪ್ರತಿ 3 ರಿಂದ 5 ಗಂಟೆಗಳಿ ಗೊಮ್ಮೆ ಮೂತ್ರಿಸುತ್ತಿದ್ದರೆ, ಮೂತ್ರವು ದಟ್ಟ ಹಳದಿ ವರ್ಣದ್ದಾಗಿದ್ದರೆ ಮೂತ್ರ ವಿಸರ್ಜನೆಗೆ ತಕ್ಕಷ್ಟು ನೀರಿನ ಪ್ರಮಾಣ ದೇಹದಲ್ಲಿಲ್ಲವೆಂದು ಅರ್ಥೈಸಿ ಕೊಳ್ಳಬೇಕು.

ಮಕ್ಕಳಲ್ಲಿ ಡಿಹೈಡ್ರೇಶನ್ಯಾದರೆ ನಿದ್ರಾಹೀನತೆ, ಕಿರಿಕಿರಿ, ಬಾಯಾರಿಕೆ, ಕಣ್ಣೀರು ಇಲ್ಲದಿರುವಿಕೆ, ಮೂತ್ರ ವಿಸರ್ಜನೆಯು ಕಡಿಮೆ ಯಾಗುವುದು ಉಂಟಾಗುವುದು. ಹೀಗಾದ್ರೆ ತಕ್ಷಣ ವೈದ್ಯರಿಗೆ ತೋರಿಸಿ.

  • ನಿರ್ಜಲೀಕರಣ ತಡೆಯುವ ಬಗೆ?
  • ನೀರಿನಂಶವುಳ್ಳ ತರಕಾರಿ – ಸೌತೆಕಾಯಿ, ಟೊಮೋಟೋ, ಕ್ಯಾರೆಟ್, ಬೀಟ್‌ರೂಟ್, ಸೋರೆಕಾಯಿಗಳನ್ನು ಹಸಿಯಾಗಿ ತಿನ್ನಿ. ಸಲಾಡ್ ರೀತಿ ತರಕಾರಿ ಪಾನೀಯದೊಂದಿಗೆ ಚಿಟಿಕೆ ಉಪ್ಪು ಬೆರಸುವುದರಿಂದಲೂ ನಿರ್ಜಲೀಕರಣ ವನ್ನು ತಡೆಗಟ್ಟಬಹುದು.
  • ಗಂಜಿ ಊಟ- ರಾಗಿ ಗಂಜಿ, ಅಂಬಲಿ, ಅಕ್ಕಿ ಗಂಜಿ ಊಟ ಮಾಡಿ. ಇದಕ್ಕೆ ಸ್ವಲ್ಪ ಸಕ್ಕರೆ, ಬೆಲ್ಲ ಅಥವಾ ಉಪ್ಪನ್ನು ಸೇರಿಸಿ ತಿಂದರೂ ದೇಹಕ್ಕೆ ತಂಪು.
  • ಎಳನೀರು, ತಣ್ಣೀರಿನ ಸ್ನಾನ, ಮಜ್ಜಿಗೆ ಉತ್ತಮ.ಜೊತೆಗೆ ಸ್ಪೈಸಿ ಫುಡ್‌ಗಳಿಗೆ ಕಡಿವಾಣ ಹಾಕಿ.
  • ಹೆಚ್ಚು ನೀರನ್ನು ಸೇವನೆ- ಪ್ರಮುಖವಾಗಿ ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುವವರು, ಕ್ರೀಡಾಪಟುಗಳು ದಿನಕ್ಕೆ ಕನಿಷ್ಠ ಎರಡು ಲೀಟರಿನಷ್ಟಾದರೂ ನೀರನ್ನು ಸೇವಿಸಿ.
  • ನೀರಿನಂಶವುಳ್ಳ ಹಣ್ಣು ತಿನ್ನಿ – ಕಲ್ಲಂಗಡಿ, ಸ್ಟ್ರಾಬೆರಿ, ಬಾಳೆಹಣ್ಣು, ಹಲಸಿನಹಣ್ಣು, ದ್ರಾಕ್ಷಿ ತಿನ್ನುವುದರ ಜೊತೆಗೆ ತಾಜಾ ಹಣ್ಣಿನ ರಸವನ್ನು ಕುಡಿಯಿರಿ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:17 pm, Wed, 25 May 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್