ಅಬ್ಬಾ ಇದೆಂಥಾ ಬಿಸಿಲು !- ಬೇಸಿಗೆಯಲ್ಲಿ ಈ ಐದು ಅಂಶಗಳು ನಿಮ್ಮ ಗಮನದಲ್ಲಿರಲಿ, ಎಚ್ಚರಿಕೆಯಿರಲಿ

ಆಹಾರಗಳನ್ನು ಬೇಸಿಗೆಯಲ್ಲಿ ಆದಷ್ಟು ತಾಜಾ ಇರುವಾಗಲೇ ಸೇವಿಸಬೇಕು. ಇಂದು ಏನೋ ಹೆಚ್ಚಾಯಿತು ಎಂದು ಅದನ್ನು ಹಾಗೇ ಇಟ್ಟು ನಾಳೆ ತಿನ್ನುವ ಅಭ್ಯಾಸ ಬೇಡ.

ಅಬ್ಬಾ ಇದೆಂಥಾ ಬಿಸಿಲು !- ಬೇಸಿಗೆಯಲ್ಲಿ ಈ ಐದು ಅಂಶಗಳು ನಿಮ್ಮ ಗಮನದಲ್ಲಿರಲಿ, ಎಚ್ಚರಿಕೆಯಿರಲಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: May 01, 2022 | 9:52 AM

ಈಗ ಏಪ್ರಿಲ್ ತಿಂಗಳ ಅಂತ್ಯ. ಬಿರುಬೇಸಿಗೆ..ಅದರಲ್ಲೂ ಈ ಬಾರಿ ಜಾಸ್ತಿ ಎನ್ನಿಸುವಷ್ಟು ಉಷ್ಣತೆ ಉಂಟಾಗಿದೆ. ಸೆಖೆ, ಮೈಯುರಿಯ ಜತೆಗೆ ಒಂದಷ್ಟು ಅನಾರೋಗ್ಯಗಳೂ ಉಂಟಾಗುತ್ತಿವೆ. ಪ್ರತಿದಿನ ಈ ಬಿಸಿಲಿನ ಬೇಗೆಯಿಂದ ಪಾರಾಗುವುದೇ ಒಂದು ಸವಾಲಾಗಿಬಿಟ್ಟಿದೆ. ಈಗಾಗಲೇ ಅತ್ಯಂತ ಅಪಾಯದ ಮಟ್ಟ ತಲುಪಿರುವ ಉಷ್ಣತೆ ಇನ್ನೆಷ್ಟರ ಮಟ್ಟಿಗೆ ಏರಿಕೆಯಾಗಬಹುದು ಎಂಬ ಆತಂಕವೂ ಶುರುವಾಗಿದೆ. ಅದರೊಂದಿಗೆ ಬಿಸಿಲಿನ ತಾಪಮಾನದಿಂದ ಪಾರಾಗಲು ಜನರು ಪರದಾಡುತ್ತಿದ್ದಾರೆ. ಡಿಹೈಡ್ರೇಶನ್​,  ತಲೆಸುತ್ತು, ವಾಂತಿ, ತಲೆ ನೋವು, ಸನ್​ಬರ್ನ್​, ಹೀಟ್​ ಸ್ಟ್ರೋಕ್​​ಗಳಂಥ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗೆ ಬೇಸಿಗೆಯಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಯಿಂದ ಪಾರಾಗಲು ನಾವಿಲ್ಲಿ ಕೆಲವು ಟಿಪ್ಸ್​ ಕೊಟ್ಟಿದ್ದೇವೆ ನೋಡಿ.

1. ಹೈಡ್ರೇಶನ್​ ಬೇಸಿಗೆಯಲ್ಲಿ ಹೆಚ್ಚಿಗೆ ನೀರು ಮತ್ತಿತರ ಆರೋಗ್ಯಕರ ಪಾನೀಯಗಳನ್ನು ಹೆಚ್ಚಾಗಿ ಕುಡಿಯಬೇಕು. ಈ ಮೂಲಕ ನಮ್ಮ ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಬೇಕು. ಡಿ ಹೈಡ್ರೇಶನ್​ ಎಂಬುವುದು ಬೇಸಿಗೆಯ ಸಮಯದಲ್ಲಿ ಉಂಟಾಗುವ ಒಂದು ಸಾಮಾನ್ಯ ಸಮಸ್ಯೆ. ಆದರೆ ಅದು ಗಂಭೀರವೂ ಹೌದು. ಸಾಧ್ಯವಾದಷ್ಟು ಟೀ, ಕಾಫಿಗಳನ್ನೆಲ್ಲ ಕಡಿಮೆ ಮಾಡಿ, ನೀರು, ಎಳೆನೀರು, ಲಸ್ಸಿ, ಲಿಂಬು ಪಾನೀಯ, ಕಲ್ಲಗಂಡಿ ಜ್ಯೂಸ್​, ಮತ್ತಿತರ ಪಾನೀಯಗಳನ್ನು ಹೆಚ್ಚಾಗಿ ಸೇವಿಸಿ.

2. ಆಹಾರ ಕ್ರಮದಲ್ಲಿ ಬದಲಾವಣೆ ಬೇಕು ಆಹಾರಗಳನ್ನು ಬೇಸಿಗೆಯಲ್ಲಿ ಆದಷ್ಟು ತಾಜಾ ಇರುವಾಗಲೇ ಸೇವಿಸಬೇಕು. ಇಂದು ಏನೋ ಹೆಚ್ಚಾಯಿತು ಎಂದು ಅದನ್ನು ಹಾಗೇ ಇಟ್ಟು ನಾಳೆ ತಿನ್ನುವ ಅಭ್ಯಾಸ ಬೇಡ. ಸಾಮಾನ್ಯವಾಗಿ ಬೇಸಿಗೆಯಲ್ಲಿ ರೆಫ್ರಿಜರೇಟರ್​​ನಲ್ಲಿ ಇಟ್ಟ, ಪಾನೀಯ, ತಿಂಡಿಗಳನ್ನೇ ತಿನ್ನಬೇಕು ಎನ್ನಿಸುತ್ತದೆ. ಆದರೆ ಹಾಗೆ ಮಾಡಬೇಡಿ. ಆ ಹೊತ್ತಿಗೆ ಎಷ್ಟು ಬೇಕೋ ಅಷ್ಟು ಆಹಾರ ತಯಾರಿಸಿಕೊಂಡು, ಅದು ತಾಜಾ ಇರುವಾಗಲೇ ತಿಂದುಬಿಡಿ. ಬೇಸಿಗೆಯಲ್ಲಿ ಸಹಜವಾಗಿಯೇ ನಮ್ಮ ಜೀರ್ಣಕ್ರಿಯೆ ಸಾಮರ್ಥ್ಯ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿರುವುದರಿಂದ ಲಘು ಆಹಾರಗಳೇ ಬೆಸ್ಟ್​. ಅದರಲ್ಲೂ ಎಣ್ಣೆಯುಕ್ತ, ಕರಿದ ತಿಂಡಿಗಳು ಬೇಡ್ವೇ ಬೇಡ. ನೀರಿನ ಅಂಶ ಇರುವ  ಹಣ್ಣುಗಳ ಬಳಕೆ ಹೆಚ್ಚಿಸಿ.

3. ಮಕ್ಕಳ ಬಗ್ಗೆಯೂ ಕಾಳಜಿ ಇರಲಿ ಬೇಸಿಗೆಯಲ್ಲಿ ಮಕ್ಕಳ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕು. ಮಕ್ಕಳು ನೀರು ಕುಡಿಯುವುದಿಲ್ಲ. ಆದರೆ ಬೇಸಿಗೆಯಲ್ಲಿ ಅವರ ದೇಹವನ್ನು ಹೈಡ್ರೇಟ್​ ಆಗಿ ಇರುವಂತೆ ಕಾಳಜಿವಹಿಸಿಬೇಕು. ಅವರನ್ನು ಮನೆಯಿಂದ ಆಚೆಗೆ ಕಳಿಸಬೇಡಿ. ಇದರೊಂದಿಗೆ ನಿಮ್ಮ ಮನೆಯಲ್ಲಿರುವ ಸಾಕು, ಮೂಕ ಪ್ರಾಣಿಗಳ ಬಗ್ಗೆಯೂ ಕಾಳಜಿ ವಹಿಸಿ.

4. ಸನ್​ಸ್ಕ್ರೀನ್​​ನಿಂದ ಚರ್ಮ ರಕ್ಷಣೆ  ಇದನ್ನು ಮರೆಯಲೇಬೇಡಿ. ಬೇಸಿಗೆಯಲ್ಲಿ ಚರ್ಮದ ರಕ್ಷಣೆಯೂ ಅತ್ಯಂತ ಮುಖ್ಯ. ಹಾಗಾಗಿ ಮನೆಯಿಂದ ಹೊರಹೋಗುವಾಗ, ಅಂದರೆ ನಿಮ್ಮನ್ನು ನೀವು ಬಿಸಿಲಿಗೆ ಒಡ್ಡಿಕೊಳ್ಳುವಾಗ ಕಡ್ಡಾಯವಾಗಿ ಮುಖಕ್ಕೆ, ಕೈಯಿಗೆಲ್ಲ ಸನ್​ಸ್ಕ್ರೀನ್​ ಹಚ್ಚಿಕೊಳ್ಳಿ. ನಿಮ್ಮದು ಆಯ್ಲಿ ಸ್ಕಿನ್ ಆಗಿದ್ದರೆ, ನೀವು ಜೆಲ್​ ರೂಪದ ಸನ್​​ಸ್ಕ್ರೀನ್​ ಹಚ್ಚಬೇಕು.

ಇದನ್ನೂ ಓದಿ: Literature: ಅನುಸಂಧಾನ; ಕಲಾತ್ಮಕ ಅಭಿವ್ಯಕ್ತಿಯಲ್ಲಿ ಸತ್ಯಕ್ಕೆ ಮುಸುಕು ತೊಡಿಸಿ ಹೇಳಿ ಪರವಾಗಿಲ್ಲ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್