AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Thyroid Day: ಥೈರಾಯ್ಡ್​ ಇರುವವರು ಈ ಆಹಾರಗಳಿಂದ ದೂರವಿರಿ

World Thyroid Day:ಥೈರಾಯ್ಡ್(thyroid)‌ ಸಮಸ್ಯೆ ಇರುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಹಾಗೆಯೇ ಈ ದಿನಗಳಲ್ಲಿ ಹೈಪೋಥೈರಾಯ್ಡ್(Hypothyroidism)‌ ನಿರ್ವಹಣೆಯ ಬಗ್ಗೆ ತುಂಬಾ ಎಚ್ಚರವಾಗಿರಬೇಕು.

World Thyroid Day: ಥೈರಾಯ್ಡ್​ ಇರುವವರು ಈ ಆಹಾರಗಳಿಂದ ದೂರವಿರಿ
Thyroid
TV9 Web
| Updated By: ನಯನಾ ರಾಜೀವ್|

Updated on:May 25, 2022 | 1:17 PM

Share

ಥೈರಾಯ್ಡ್(thyroid)‌ ಸಮಸ್ಯೆ ಇರುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಹಾಗೆಯೇ ಈ ದಿನಗಳಲ್ಲಿ ಹೈಪೋಥೈರಾಯ್ಡ್(Hypothyroidism)‌ ನಿರ್ವಹಣೆಯ ಬಗ್ಗೆ ತುಂಬಾ ಎಚ್ಚರವಾಗಿರಬೇಕು. ಏಕೆಂದರೆ ನಾವು ತಿನ್ನುವ ಆಹಾರ ಅದರ ಚಿಕಿತ್ಸೆಗೆ ಅಡ್ಡಿ ಆಗಬಹುದು. ಕೆಲವು ಪೋಷಕಾಂಶಗಳು ಥೈರಾಯ್ಡ್‌ ಗ್ರಂಥಿಯ ಕಾರ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ.

ಹೈಪೋಥೈರಾಯ್ಡ್ ಆಹಾರ ಕ್ರಮ ಎಂಬುವಂತದ್ದು ಯಾವುದೂ ಇಲ್ಲ. ಆದರೂ ಕೆಲವು ಆಹಾರಗಳು ನಿಮಗೆ ಹೈಪೋಥೈರಾಯ್ಡ್‌ ಪರಿಸ್ಥಿಯನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡಬಲ್ಲವು.

ಈ ಆಹಾರಗಳಿಂದ ದೂರವಿರಿ

ಚಾಕೊಲೇಟ್ ಕೇಕ್‍ನಂತಹ ಸಕ್ಕರೆಯುಕ್ತ ಆಹಾರಗಳು ಸಕ್ಕರೆಯುಕ್ತ ತಿನಿಸುಗಳನ್ನು ಕಡಿಮೆ ಮಾಡುವುದು ಅಥವಾ ಅದನ್ನು ನಿಮ್ಮ ಆಹಾರ ಕ್ರಮದಿಂದ ಸಂಪೂರ್ಣವಾಗಿ ತೆಗೆದುಹಾಕುವುದು ಉತ್ತಮ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಹೈಪೋ ಥೈರಾಯ್ಡ್‌ ದೇಹದ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸಬಹುದು. ಹಾಗಾಗಿ ಎಚ್ಚರಿಕೆ ವಹಿಸದಿದ್ದರೆ ತೂಕ ಹೆಚ್ಚಳವಾಗಬಹುದು.

ಸಂಸ್ಕರಿತ ಮತ್ತು ಪ್ರೋಜನ್ ಆಹಾರ ಅಧಿಕ ರಕ್ತದ ಒತ್ತಡ ಹೊಂದಿರುವವರು, ಸೋಡಿಯಂ ದಿನಕ್ಕೆ 1,500 ಮಿ. ಗ್ರಾಂ ಗೆ ಸೀಮಿತಗೊಳಿಸಬೇಕು ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ಹೇಳಿದೆ. ಕಡಿಮೆ ಥೈರಾಯ್ಡ್‌ ಹೊಂದಿರುವ ವ್ಯಕ್ತಿಯಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಅಧಿಕವಾಗಿರುತ್ತದೆ ಮತ್ತು ಅತಿಯಾದ ಸೋಡಿಯಂ ಈ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಂಸ್ಕರಿತ ಆಹಾರಗಳು ಬಹಳಷ್ಟು ಸೋಡಿಯಂ ಹೊಂದಿರುತ್ತವೆ ಮತ್ತು ಹೈಪೋ ಥೈರಾಯ್ಡ್‌ ಇರುವವರು ಅವುಗಳ ಸೇವನೆ ತಪ್ಪಿಸಬೇಕು ಎನ್ನುತ್ತಾರೆ ತಜ್ಞರು.

ಬೀನ್ಸ್, ದ್ವಿದಳ ಧಾನ್ಯ ಮತ್ತು ತರಕಾರಿಗಳಿಂದ ಅಧಿಕ ಫೈಬರ್ ನೀವು ಅಧಿಕ ಫೈಬರ್ ಆಹಾರ ಕ್ರಮ ಅನುಸರಿಸುತ್ತಿದ್ದರೆ, ನಿಮಗೆ ಹೆಚ್ಚಿನ ಪ್ರಮಾಣದ ಥೈರಾಯ್ಡ್‌ ಔಷಧಿ ಅಗತ್ಯ ಇದೆಯೇ ಎಂದು ವೈದ್ಯರಲ್ಲಿ ಕೇಳಿ. ನಿಮ್ಮ ದೇಹವು ಔಷಧಿಗಳನ್ನು ಹೀರಿಕೊಳ್ಳದಿದ್ದರೆ, ಅದರ ಪ್ರಮಾಣ ಹೆಚ್ಚು ಮಾಡಬೇಕಾಗಬಹುದು. ಅಧಿಕ ಫೈಬರ್ ಸೇವನೆ ಒಳ್ಳೆಯದೇ, ಆದರೆ ಅದು ಅತಿಯಾದರೆ ಹೈಪೋ ಥೈರಾಯ್ಡ್‌ ಚಿಕಿತ್ಸೆ ಅಡ್ಡಿ ಆಗಬಹುದು.

ಕಾಫಿ ಸೇವನೆ ಜರ್ನಲ್ ಥೈರಾಯ್ಡ್‌ ಅಧ್ಯಯನದ ಪ್ರಕಾರ, ಕೆಫೀನ್ ಥೈರಾಯ್ಡ್‌ ಹಾರ್ಮೊನ್ ಬದಲಿ ಹೀರುವಿಕೆಗೆ ಅಡ್ಡಿ ಉಂಟು ಮಾಡುತ್ತದೆ ಬೆಳಗ್ಗೆಯ ಕಾಫಿಯ ಜೊತೆ ಥೈರಾಯ್ಡ್‌ ಔಷಧಿ ತೆಗೆದುಕೊಳ್ಳುವವರಲ್ಲಿ ಥೈರಾಯ್ಡ್‌ ಅನಿಯಂತ್ರತ ಪ್ರಮಾಣದಲ್ಲಿ ಇರುತ್ತದೆ. ಥೈರಾಯ್ಡ್‌ ಔಷಧಿಯನ್ನು ನೀರಿನ ಜೊತೆ ಸೇವಿಸಬೇಕು, ಆ ಬಳಿಕ ಕಾಫಿ ಕುಡಿಯಲು ಕನಿಷ್ಟ ಅರ್ಧ ಗಂಟೆ ಕಾಯಬೇಕು.

ಮದ್ಯಪಾನ ಮದ್ಯಪಾನ ಥೈರಾಯ್ಡ್‌ ಗ್ರಂಥಿಯ ಮೇಲೆ ವಿಷಕಾರಿ ಪರಿಣಾಮ ಬೀರುತ್ತದೆ. ಹೈಪೋ ಥೈರಾಯ್ಡ್‌ ಇರುವ ಜನರು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಇಂಡಿಯನ್ ಜರ್ನಲ್ ಆಫ್ ಎಂಡ್ರೋಕ್ರೈನಾಲಜಿ ಮತ್ತು ಮೆಟಬಾಲಿಸಂ ಪ್ರಕಾರ, ಮದ್ಯಪಾನದಿಂದ ದೇಹದಲ್ಲಿ ಥೈರಾಯ್ಡ್‌ ಹಾರ್ಮೋನ್ ಪ್ರಮಾಣ ಮತ್ತು ಥೈರಾಯ್ಡ್‌ ಹಾರ್ಮೋನ್ ಉತ್ಪಾದಿಸುವ ದೇಹದ ಸಾಮಥ್ರ್ಯ ಎರಡರ ಮೇಲೂ ತೊಂದರೆ ಆಗಬಹುದು.

ಬೆಣ್ಣೆ, ಮಾಂಸ, ಕೊಬ್ಬಿನ ಆಹಾರ ಬೆಣ್ಣೆ, ಮಾಂಸ ಮತ್ತು ಎಲ್ಲಾ ರೀತಿಯ ಕರಿದ ಆಹಾರಗಳ ಸೇವನೆ ಕಡಿಮೆ ಮಾಡಬೇಕು ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ. ಕೊಬ್ಬುಗಳು, ಥೈರಾಯ್ಡ್‌ ಹಾರ್ಮೋನ್ ಬದಲಿ ಔಷಧಿಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿ ಪಡಿಸುತ್ತವೆ. ಅದಲ್ಲದೆ, ಹಾರ್ಮೋನುಗಳನ್ನು ಉತ್ಪಾದಿಸುವ ಥೈರಾಯ್ಡ್‌ ಸಾಮರ್ಥ್ಯಕ್ಕೆ ಕೊಬ್ಬಿನಿಂದ ಅಡ್ಡಿಯಾಗಬಹುದು.

ಈ ಮೇಲಿನ ಮಾಹಿತಿಯು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Wed, 25 May 22

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ