Thyroid Awareness: ಥೈರಾಯ್ಡ್ ಗಂಟು ಎಂದರೇನು? ಇದನ್ನು ಮನೆಯಲ್ಲಿಯೇ ಪರಿಶೀಲಿಸುವುದು ಹೇಗೆಂದು ತಿಳಿಯಿರಿ

ಹೈಪರ್ ಥೈರಾಯ್ಡಿಸಮ್, ಹೈಪೋಥೈರಾಯ್ಡಿಸಮ್, ಥೈರಾಯ್ಡಿಟಿಸ್ ಮತ್ತು ಹಶಿಮೊಟೊಸ್ ಇತ್ಯಾದಿಗಳಂತಹ ವಿವಿಧ ರೀತಿಯ ಥೈರಾಯ್ಡ್ ಕಾಯಿಲೆಗಳು ದೇಹದಲ್ಲಿ ಕಂಡುಬರುತ್ತದೆ.

Thyroid Awareness: ಥೈರಾಯ್ಡ್ ಗಂಟು ಎಂದರೇನು? ಇದನ್ನು ಮನೆಯಲ್ಲಿಯೇ ಪರಿಶೀಲಿಸುವುದು ಹೇಗೆಂದು ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Feb 01, 2022 | 7:07 AM

ಇಂದಿನ ಕಾಲದಲ್ಲಿ ಥೈರಾಯ್ಡ್(Thyroid) ಒಂದು ದೊಡ್ಡ ಕಾಯಿಲೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನ ಅನೇಕ ಜನರು ಈ ಸಮಸ್ಯೆಯಿಂದ ಬಳಲುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಥೈರಾಯ್ಡ್ ಆರೋಗ್ಯ ಸಮಸ್ಯೆ(Thyroid Health issue) ದೇಹದಲ್ಲಿ ವಿವಿಧ ರೂಪಗಳಲ್ಲಿ ಕಾಣುತ್ತದೆ.  ಹೆಚ್ಚು ಅಥವಾ ಕಡಿಮೆ ಹಾರ್ಮೋನುಗಳನ್ನು(Hormone) ಉತ್ಪಾದಿಸಲು ಪ್ರಾರಂಭಿಸಿದಾಗ, ಥೈರಾಯ್ಡ್ ರೋಗವಾಗಿ ಬದಲಾಗುತ್ತದೆ. ಹೈಪರ್ ಥೈರಾಯ್ಡಿಸಮ್, ಹೈಪೋಥೈರಾಯ್ಡಿಸಮ್, ಥೈರಾಯ್ಡಿಟಿಸ್ ಮತ್ತು ಹಶಿಮೊಟೊಸ್ ಇತ್ಯಾದಿಗಳಂತಹ ವಿವಿಧ ರೀತಿಯ ಥೈರಾಯ್ಡ್ ಕಾಯಿಲೆಗಳು ದೇಹದಲ್ಲಿ ಕಂಡುಬರುತ್ತದೆ.

ಜನರು ಥೈರಾಯ್ಡ್ ಸಮಸ್ಯೆಯನ್ನು ಸಾಮಾನ್ಯವೆಂದು ಕಂಡುಕೊಳ್ಳುತ್ತಾರೆ. ಆದರೆ ಅನೇಕ ಜನರಿಗೆ ಇದು ತೊಂದರೆಯಾಗಿ ಪರಿಣಮಿಸುತ್ತದೆ. ಸಾಮಾನ್ಯವಾಗಿ, ಥೈರಾಯ್ಡ್ ರೋಗವನ್ನು ಪತ್ತೆಹಚ್ಚಲು ಕುತ್ತಿಗೆ ಪರೀಕ್ಷೆಯನ್ನು ಸುಲಭ ಮತ್ತು ಅತ್ಯಂತ ವಿಶ್ವಾಸಾರ್ಹ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಅನೇಕ ಬಾರಿ ಜನರು ಥೈರಾಯ್ಡ್ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಆದರೆ ನಂತರ ಅದು ಸಂಕೀರ್ಣ ರೂಪವನ್ನು ಪಡೆಯುತ್ತದೆ. ಈ ಕಾರಣದಿಂದಾಗಿ ಥೈರಾಯ್ಡ್ ಗ್ರಂಥಿ ಮತ್ತು ಗಂಟುಗಳನ್ನು ಮನೆಯಲ್ಲಿಯೇ ಆಗಾಗ ಪರೀಕ್ಷಿಸುವುದು ಉತ್ತಮವಾಗಿದೆ.

ಮನೆಯಲ್ಲಿ ಥೈರಾಯ್ಡ್ ಪರೀಕ್ಷೆ ಏಕೆ ಅಗತ್ಯ?

ನೀವು ಥೈರಾಯ್ಡ್ ಸಮಸ್ಯೆಯನ್ನು ಅನುಭವಿಸಿದರೆ, ನೀವು ಅದನ್ನು ಮನೆಯಲ್ಲಿಯೇ ಸ್ವಯಂ ಪರೀಕ್ಷೆಯ ಮೂಲಕ ಕಂಡುಹಿಡಿಯಬಹುದು. ನೀವು ಯಾವುದೇ ರೀತಿಯ ಗಡ್ಡೆಯನ್ನು ಹೊಂದಿದ್ದರೆ, ನಂತರ ಅದನ್ನು ಸುಲಭವಾಗಿ ಕಂಡುಹಿಡಿಯಬಹುದು. ನಿಮ್ಮ ಕುತ್ತಿಗೆಯಲ್ಲಿ ಉಂಡೆಗಳು ಥೈರಾಯ್ಡ್ ಕಾಯಿಲೆಯ ಕಾರಣದಿಂದಾಗಿರಬಹುದು, ಇದು ದುಗ್ಧರಸ ಗ್ರಂಥಿಗಳ ಹಿಗ್ಗುವಿಕೆ, ಸಾಂಕ್ರಾಮಿಕ ಬಾವು, ಆಘಾತಕಾರಿ ಗಾಯ ಇತ್ಯಾದಿಗಳಂತಹ ಹಲವು ರೂಪಗಳನ್ನು ಹೊಂದಿರಬಹುದು. ಹೀಗಾಗಿ ಮನೆಯಲ್ಲಿಯೇ ಈ ಬಗ್ಗೆ ಗಮನಹರಿಸುವುದು ಉತ್ತಮ.

ಮನೆಯಲ್ಲಿ ಥೈರಾಯ್ಡ್ ತಪಾಸಣೆ ಮಾಡುವುದು ಹೇಗೆ ?

  1. ಮನೆಯಲ್ಲಿ ಯಾವುದೇ ಕನ್ನಡಿಯ ಮುಂದೆ ನಿಂತುಕೊಳ್ಳಿ ಇದರಿಂದ ನಿಮ್ಮ ಕುತ್ತಿಗೆಯನ್ನು ನೀವು ಸ್ಪಷ್ಟವಾಗಿ ನೋಡಬಹುದು. ನಂತರ ಸ್ಕಾರ್ಫ್, ನೆಕ್ಟೈ, ಆಭರಣಗಳು ಇನ್ನಿತರ ವಸ್ತುಗಳನ್ನು ತೆಗೆದುಹಾಕಿ. ಈಗ ನಿಮ್ಮ ಕತ್ತಿನ ಭಾಗವನ್ನು ಸರಿಯಾಗಿ ಗಮನಿಸಬಹುದು.
  2. ಇದರ ನಂತರ ನಿಧಾನವಾಗಿ ಕುತ್ತಿಗೆಯನ್ನು ಹಿಂದಕ್ಕೆ ಚಲಿಸುವಂತೆ ಮಾಡಿ. ಈ ಸಮಯದಲ್ಲಿ ನಿಮ್ಮ ಕುತ್ತಿಗೆಯನ್ನು ಸರಿಯಾಗಿ ನೋಡಿ.
  3. ಕತ್ತನ್ನು ಸ್ವಲ್ಪ ಹಿಂದಕ್ಕೆ ಸರಿಸುತ್ತಾ ಒಂದು ಗುಟುಕು ನೀರು ತೆಗೆದುಕೊಂಡು ಕುಡಿಯಿರಿ. ಈ ಕ್ರಿಯೆಯು ನಿಮ್ಮ ಧ್ವನಿಪೆಟ್ಟಿಗೆಯ ಸ್ಥಾನವನ್ನು ಮುನ್ನಡೆಸುತ್ತದೆ. ಇದು ಥೈರಾಯ್ಡ್ ಗ್ರಂಥಿಯ ಗಾತ್ರವನ್ನು ಉತ್ತಮವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ.

ಥೈರಾಯ್ಡ್ ಗ್ರಂಥಿ ಎಂದರೇನು?

ಥೈರಾಯ್ಡ್ ಕತ್ತಿನ ಕೆಳಭಾಗದಲ್ಲಿ ಇರುವ ಅತ್ಯಂತ ಚಿಕ್ಕ ಚಿಟ್ಟೆ ಆಕಾರದ ಅಂಗವಾಗಿದೆ. ಇದು ಕಾಲರ್‌ಬೋನ್‌ನ ಮೇಲ್ಭಾಗದಲ್ಲಿ ಮತ್ತು ನಿಮ್ಮ ಧ್ವನಿ ಪೆಟ್ಟಿಗೆಯ ಕೆಳಗೆ ದೇಹದಲ್ಲಿ ಇರುತ್ತದೆ.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಯಾವುದೇ ರೀತಿಯ ಉಬ್ಬು ಅಥವಾ ಗಂಟಲಿನ ಭಾಗದಲ್ಲಿನ ಗುಂಟು ಕಂಡುಬಂದರೆ, ಇದರಿಂದ ನೋವನ್ನು ಹೊಂದಿದ್ದರೆ, ತಕ್ಷಣ ವೈದ್ಯರಿಗೆ ತಿಳಿಸಿ. ಏಕೆಂದರೆ ದೊಡ್ಡದಾದ ಥೈರಾಯ್ಡ್ ಅಥವಾ ಥೈರಾಯ್ಡ್ ಗಂಟು ಇರುವ ಸಾಧ್ಯತೆ ಹೆಚ್ಚು. ಥೈರಾಯ್ಡ್ ಗ್ರಂಥಿಯು ಕ್ಯಾನ್ಸರ್ ಎಂದು ಅರ್ಥವಲ್ಲ ನೆನಪಿನಲ್ಲಿಡಿ.

ಇದನ್ನೂ ಓದಿ: Health Tips: ಈ 5 ಆಹಾರ ಪದಾರ್ಥಗಳು ಮೂಳೆಗಳನ್ನು ದುರ್ಬಲಗೊಳಿಸುತ್ತವೆ; ಆರೋಗ್ಯದ ಬಗ್ಗೆ ಸದಾ ಕಾಳಜಿ ಇರಲಿ

ಹಾಲಿನಲ್ಲಿರುವಷ್ಟೇ ಕ್ಯಾಲ್ಸಿಯಂ ಎಲೆಕೋಸಿನಲ್ಲಿದೆ; ಇದರ ಆರೋಗ್ಯ ಪ್ರಯೋಜನಗಳು ಇಲ್ಲಿದೆ ಗಮನಿಸಿ

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ