ಕಿವಿಯೊಳಗೆ ಇಯರ್ ಬಡ್ಸ್ ಹಾಕುವ ಮುನ್ನ ಎಚ್ಚರ, ಈ ಬಡ್ಸ್ ಯಾಕೆ ಬಳಸುತ್ತಾರೆ ಗೊತ್ತಾ?

ಇಯರ್ ಬಡ್ಸ್ ಅಥವಾ ಕಾಟನ್ ಬಡ್ಸ್​ಗಳನ್ನು ಕಿವಿಗೆ ಹಾಕುವುದರಿಂದ ಯಾವೆಲ್ಲ ಸಮಸ್ಯೆಗಳು ಬರುತ್ತದೆ ಗೊತ್ತಾ? ಈ ಬಗ್ಗೆ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ನಿರ್ದೇಶಕ ಪ್ರಾಧ್ಯಾಪಕ ಮತ್ತು ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ರವಿ ಮೆಹರ್ ಅವರು ಕೆಲವೊಂದು ಮಾಹಿತಿಯನ್ನು ಹಾಗೂ ಸಲಹೆಗಳನ್ನು ನೀಡಿದ್ದಾರೆ. ಇದರ ಜತೆಗೆ ಈ ಇಯರ್ ಬಡ್ಸ್ ನ್ನು ಯಾವ ಕಾರಣಕ್ಕೆ ಬಳಸುತ್ತಾರೆ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.

ಕಿವಿಯೊಳಗೆ ಇಯರ್ ಬಡ್ಸ್ ಹಾಕುವ ಮುನ್ನ ಎಚ್ಚರ, ಈ ಬಡ್ಸ್ ಯಾಕೆ ಬಳಸುತ್ತಾರೆ ಗೊತ್ತಾ?
ಸಾಂದರ್ಭಿಕ ಚಿತ್ರ
Edited By:

Updated on: Jun 29, 2025 | 4:54 PM

ಇಯರ್ ಬಡ್ಸ್  (Earbuds) ಅಥವಾ ಕಾಟನ್ ಬಡ್ಸ್ ಬಳಸುವಾಗ ತುಂಬಾ ಎಚ್ಚರದಿಂದಿರಬೇಕು. ಇದರಿಂದ ಕಿವಿಗೆ ದೊಡ್ಡಮಟ್ಟ ಪೆಟ್ಟು ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ನಿರ್ದೇಶಕ ಪ್ರಾಧ್ಯಾಪಕ ಮತ್ತು ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ರವಿ ಮೆಹರ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕಾಲ ಕಾಲಕ್ಕೆ ಕಿವಿಯನ್ನು ಸ್ವಚ್ಛಗೊಳಿಸುತ್ತಿರಬೇಕು ಒಂದು ವೇಳೆ ಸಚ್ಛ ಮಾಡಿಲ್ಲ ಎಂದರೆ ಕಿವಿ ಅಸ್ಪಷ್ಟವಾಗಿ ಕೇಳುತ್ತದೆ, ಸೋಂಕು ಕೂಡ ಹರಡಬಹುದು. ಅದಕ್ಕಾಗಿ ಅನೇಕ ಜನರು ಕಿವಿಗಳಲ್ಲಿ ಸಂಗ್ರಹವಾದ ಇಯರ್‌ವಾಕ್ಸ್​​​​ನ್ನು ಸ್ವಚ್ಛಗೊಳಿಸಲು, ಕೊಳೆ ತೆಗೆಯಲು ಹತ್ತಿ ಬಡ್ಸ್  ಉಪಯೋಗಿಸುತ್ತಾರೆ. ಆದರೆ ಇದು ಕಿವಿಗಳಿಗೆ ಹಾನಿ ಮಾಡುತ್ತದೆ ಎಂದು ಡಾ. ರವಿ ಮೆಹರ್ ಹೇಳುತ್ತಾರೆ.  ಹೆಚ್ಚಿನ  ಜನರಿಗೆ ಹತ್ತಿ ಬಡ್ಸ್‌ನಿಂದ ಕಿವಿಗಳನ್ನು ಹೇಗೆ ಸ್ವಚ್ಛಗೊಳಿಸಬೇಕು, ಇದನ್ನು ಹೇಗೆ ಕಿವಿಗೆ ಹಾಕಬೇಕು ಎಂಬುದು ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಕಿವಿಗೆ ಇಯರ್‌ಬಡ್‌ ಯಾಕೆ ಹಾಕಬಾರದು?

ಕಿವಿಗಳಿಗೆ ಹತ್ತಿ ಇಯರ್‌ಬಡ್‌ ಬಳಸುವುದು 3 ವಿಧಗಳಲ್ಲಿ ಹಾನಿಕಾರಕ:

  • ಕಿವಿಗೆ ಹತ್ತಿ ಇಯರ್‌ಬಡ್‌ ಹಾಕಿ ಸ್ವಚ್ಛ ಮಾಡಿದ್ರೆ, ಹೆಚ್ಚಿನ ಇಯರ್‌ವಾಕ್ಸ್ ಅಥವಾ ಕೊಳಕು ಕ್ರಿಮಿಗಳು ಅಥವಾ ಕಸಗಳು ಕಿವಿಗೆ ಪ್ರವೇಶಿಸಬಹುದು. ಇದು ಅಡಚಣೆ, ಶ್ರವಣ ದೋಷ ಸಮಸ್ಯೆಗಳನ್ನು ಉಂಟುಮಾಡಬಹುದು.
  • ಕಿವಿಯಲ್ಲಿ ಕಾಲುವೆ ರೀತಿಯಲ್ಲಿರುವ ಭಾಗದಲ್ಲಿ ಸಮಸ್ಯೆಯನ್ನು ಉಂಟು ಮಾಡಬಹುದು. ಹತ್ತಿಯ ಇಯರ್‌ಬಡ್‌ ಕಿವಿಯ ಸೂಕ್ಷ್ಮ ಚರ್ಮಕ್ಕೆ ಹಾನಿ ಮಾಡಬಹುದು. ಇದು ನೋವನ್ನು ಉಂಟುಮಾಡುತ್ತದೆ ಮತ್ತು ಸೋಂಕಿಗೆ ಕಾರಣವಾಗಬಹುದು.
  • ಹತ್ತಿಯ ಇಯರ್‌ಬಡ್​​ನ್ನು ಒತ್ತಡಪೂರ್ವಕವಾಗಿ ಕಿವಿಯ ಒಳಗೆ ಹಾಕಿದ್ರೆ ಕಿವಿಯ ಟಮಟೆ ಒಡೆದು ಹೋಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಳಗ್ಗಿನ ತಿಂಡಿಯಲ್ಲಿ ಆವಕಾಡೊ ಸೇರಿಸಿ ನೋಡಿ! ಒಳ್ಳೆಯ ಫಲಿತಾಂಶ ವಾರದಲ್ಲಿಯೇ ಸಿಗುತ್ತೆ

ಕಿವಿಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಕಿವಿಗಳು ನೈಸರ್ಗಿಕವಾಗಿ ಸ್ವಚ್ಛವಾಗಬೇಕೆಂದು ವೈದ್ಯರ ಈ ಸಲಹೆ ಕೇಳಿ, ಕಿವಿಗೆ ಹನಿ ಹನಿ ನೀರು ಹಾಕಿ ಕಿವಿಯ ಮೇಣವನ್ನು ಮೃದುಗೊಳಿಸಬಹುದು, ಇದರಿಂದ ಕಿವಿಯಲ್ಲಿರುವ ಕಸಗಳು ತಾನಾಗಿಯೇ ಹೊರಬರುತ್ತದೆ. ಕಿವಿಯಲ್ಲಿ ಬಹಳಷ್ಟು ಕೊಳಕು ಇದ್ದರೆ, ನೀವು ಕಿವಿಯ ತಜ್ಞರ  ಬಳಿ ಹೋಗಿ ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸಬಹುದು.

ಇದನ್ನೂ ಓದಿ
ಬೆಳಿಗ್ಗೆ ಉಪಾಹಾರದಲ್ಲಿ ಆವಕಾಡೊ ಸೇರಿಸುವುದರಿಂದ ಸಿಗುವ ಲಾಭಗಳು
ಎದೆಯುರಿ ಇದ್ದರೆ ಅಸಿಡಿಟಿ ಎನ್ನಬೇಡಿ: ಹೃದಯದ ಆರೋಗ್ಯಕ್ಕೆ ಇಲ್ಲಿದೆ ಟಿಪ್ಸ್
ಕಣ್ಣಿನ ಆರೋಗ್ಯದಿಂದ ಕ್ಯಾನ್ಸರ್ ತಡೆಗಟ್ಟುವ ವರೆಗೆ; ಚೀನಿಕಾಯಿಯ ಉಪಯೋಗಗಳಿವು
ರಾತ್ರಿಯಲ್ಲಿ ಕಂಡು ಬರುವ ಕಾಲು ಸೆಳೆತವನ್ನು ತಡೆಯಲು ಇಲ್ಲಿದೆ ಸಲಹೆಗಳು

ಹತ್ತಿ ಇಯರ್‌ಬಡ್‌ ಬಳಸುವ ಸರಿಯಾದ ವಿಧಾನ ಯಾವುದು?

ಈ ಹತ್ತಿ ಇಯರ್‌ಬಡ್​​ಗಳನ್ನು ಕಿವಿಯ ಒಳಗೆ ಸ್ವಚ್ಛ ಮಾಡಲು ಅಲ್ಲ ತಯಾರಿಸಿರುವುದು. ಕಿವಿ ಹೊರಗೆ ಸಂಗ್ರಹವಾಗಿರುವ ಕೊಳಕುಗಳನ್ನು ತೆಗೆಯಲು ಈ ಹತ್ತಿ ಇಯರ್‌ಬಡ್​​​ ಮಾಡಿರುವುದು. ಕಿವಿಯ ಹೊರ ಆಕಾರವು ತುಂಬಾ ವಕ್ರವಾಗಿರುತ್ತದೆ ಮತ್ತು ಅದಕ್ಕಾಗಿಯೇ ಹತ್ತಿ ಇಯರ್‌ಬಡ್​​ನ್ನು ಕಿವಿಯ ಹೊರ ಭಾಗವನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ