ಫರ್ಟಿಲಿಟಿ ಹೆಚ್ಚಿಸಿಕೊಳ್ಳಲು ಇದಕ್ಕಿಂತ ಸುಲಭ ಉಪಾಯ ಮತ್ತೊಂದಿಲ್ಲ!

ಬೀಟ್ರೂಟ್ ನಂತೆಯೇ ಅದರ ಎಲೆಗಳು ಸಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದು ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು. ಏಕೆಂದರೆ ಸಾಮಾನ್ಯವಾಗಿ ಬೀಟ್ರೂಟ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂಬುದು ತಿಳಿದ ವಿಚಾರ. ಆದರೆ ಅದರ ಎಲೆಗಳನ್ನು ಕೂಡ ಸೇವನೆ ಮಾಡಬಹುದೇ ಎಂಬ ಅನುಮಾನ ಹಲವರನ್ನು ಕಾಡುತ್ತದೆ. ಆದರೆ ಬೀಟ್ರೂಟ್ ನಂತೆಯೇ ಅದರ ಎಲೆ ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿ. ಇದರ ನಿಯಮಿತ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಬಗ್ಗೆ ಮತ್ತಷ್ಟು ತಿಳಿಯಲು ಸ್ಟೋರಿ ಓದಿ.

ಫರ್ಟಿಲಿಟಿ ಹೆಚ್ಚಿಸಿಕೊಳ್ಳಲು ಇದಕ್ಕಿಂತ ಸುಲಭ ಉಪಾಯ ಮತ್ತೊಂದಿಲ್ಲ!
ಬೀಟ್ರೂಟ್ ಎಲೆ ಸೇವನೆಯಿಂದ ಸಿಗುವ ಪ್ರಯೋಜನ

Updated on: Dec 06, 2025 | 3:45 PM

ಬೀಟ್ರೂಟ್ (Beetroot) ನಂತೆಯೇ ಅದರ ಎಲೆಗಳು ಸಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಹೌದು, ಬೀಟ್ರೂಟ್ ಎಲೆಗಳ (Beetroot Leaves) ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಈ ವಿಷಯ ಹಲವರಿಗೆ ಗೊತ್ತಿಲ್ಲ. ಇದರ ನಿಯಮಿತ ಸೇವನೆಯಿಂದ ಫಲವತ್ತತೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಈ ಎಲೆಗಳಲ್ಲಿ ವಿಟಮಿನ್ ಎ, ಸಿ, ಬಿ6 ಹಾಗೂ ಕಬ್ಬಿಣದ ಅಂಶ ಸಮೃದ್ಧವಾಗಿದೆ. ಜೊತೆಗೆ ಇದರಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಸೋಂಕುಗಳಿಂದ ದೂರವಿರಲು ಕೂಡ ಸಹಾಯ ಮಾಡುತ್ತದೆ. ಹಾಗಾದರೆ ಇದರ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೀಟ್ರೂಟ್ ಎಲೆಗಳಲ್ಲಿರುವ ಫೋಲೇಟ್ ಅಂಶ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇವು ನೈಟ್ರೇಟ್ ಗಳನ್ನು ಹೊಂದಿದ್ದು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯವನ್ನು ಆರೋಗ್ಯವಾಗಿಡಲು, ಕಣ್ಣಿನ ದ್ರಷ್ಠಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೀಟ್ರೂಟ್ ಎಲೆಗಳು ಕರಗುವ ಮತ್ತು ಕರಗದ ನಾರು ಎರಡನ್ನೂ ಹೊಂದಿರುತ್ತವೆ, ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಜೊತೆಗೆ ಇದರ ನಿಯಮಿತ ಸೇವನೆ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ.

ಇದನ್ನೂ ಓದಿ: ಟೊಮೇಟೊ ತಿಂದ್ರೆ ಕಿಡ್ನಿ ಸ್ಟೋನ್ ಆಗುತ್ತದೆಯೇ… ಸತ್ಯ ತಿಳಿದರೆ ಶಾಕ್ ಆಗ್ತೀರಾ!

ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿ

ಬೀಟ್ರೂಟ್ ಎಲೆಗಳಲ್ಲಿ ಫೈಬರ್ ಅಧಿಕವಾಗಿದ್ದು, ಇದರ ಸೇವನೆ ಮಾಡಿದಾಗ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಇದರ ಪರಿಣಾಮ, ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುತ್ತಾರೆ, ಇದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಇನ್ನು ಬೀಟ್ರೂಟ್ ಎಲೆಗಳಲ್ಲಿ ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದ್ದು, ಇದು ಮೂಳೆಗಳ ಆರೋಗ್ಯವನ್ನು ಬಲಪಡಿಸುತ್ತದೆ. ಬೀಟ್ರೂಟ್ ಎಲೆಗಳಲ್ಲಿರುವ ವಿಟಮಿನ್ ಬಿ6 ಮೆದುಳಿನ ಆರೋಗ್ಯವನ್ನು ರಕ್ಷಿಸುತ್ತದೆ. ಮಾತ್ರವಲ್ಲ, ಇದರ ಸೇವನೆಯಿಂದ ಮೆದುಳಿನ ಕಾರ್ಯ ಸುಧಾರಿಸುತ್ತದೆ ಮತ್ತು ಸ್ಮರಣಶಕ್ತಿ ಹೆಚ್ಚಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ