Benefits of kalonji: ಕಪ್ಪು ಎಳ್ಳು ತಿನ್ನುವುದರಿಂದಾಗುವ ಉಪಯೋಗಗಳೇನು? ಇಲ್ಲಿವೆ 5 ಆರೋಗ್ಯ ಪ್ರಯೋಜನ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 24, 2023 | 6:18 PM

ಕಪ್ಪು ಎಳ್ಳು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದ್ದು, ಇದು ಹಲವಾರು ರೋಗಗಲು ಬರದಂತೆ ತಡೆಯಲು ನಿಮಗೆ ಸಹಾಯ ಮಾಡುತ್ತದೆ. ಚರ್ಮದ ಸಮಸ್ಯೆಗಳನ್ನು ಬರದಂತೆ ನೋಡಿಕೊಳ್ಳುವುದರಿಂದ ಹಿಡಿದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುವವರೆಗೆ, ಕಪ್ಪು ಎಳ್ಳಿನ ಪ್ರಯೋಜನಗಳನ್ನು ತಿಳಿದುಕೊಳ್ಳಲು ಇಲ್ಲಿದೆ ಮಾಹಿತಿ.

Benefits of kalonji: ಕಪ್ಪು ಎಳ್ಳು ತಿನ್ನುವುದರಿಂದಾಗುವ ಉಪಯೋಗಗಳೇನು? ಇಲ್ಲಿವೆ 5 ಆರೋಗ್ಯ ಪ್ರಯೋಜನ
ಸಾಂದರ್ಭಿಕ ಚಿತ್ರ
Follow us on

ಭಾರತೀಯರ ಅಡುಗೆಮನೆಯಲ್ಲಿ ಪ್ರಕೃತಿಯ ಉಡುಗೊರೆಗಳೇ ತುಂಬಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಸಾವಿರಾರು ವರ್ಷಗಳಿಂದ, ಅನೇಕ ತಲೆಮಾರಿನವರು ಆರೋಗ್ಯಕ್ಕಾಗಿ ಪ್ರಕೃತಿ ನೀಡಿದ ಮಸಾಲೆಗಳಿಂದ ಆರೋಗ್ಯ ಕಾಪಾಡಿಕೊಂಡು ಬರುತ್ತಿದ್ದಾರೆ. ಇಂತಹ ಅದ್ಭುತಗಳಲ್ಲಿ ಕಪ್ಪು ಎಳ್ಳು ಕೂಡ ಒಂದು. ಇದು ಚರ್ಮದ ಸಮಸ್ಯೆಗಳು ಬರದಂತೆ ತಡೆಯುವುದರಿಂದ ಹಿಡಿದು ಥೈರಾಯ್ಡ್ ವಿರುದ್ಧ ಹೋರಾಡುವವರೆಗೆ, ಕಪ್ಪು ಎಳ್ಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.

ನಿಗೆಲ್ಲಾ ಬೀಜಗಳು ಎಂದೂ ಕರೆಯಲ್ಪಡುವ ಕಪ್ಪು ಎಳ್ಳು, ಭಕ್ಷ್ಯಗಳಿಗೆ ಸುಂದರವಾದ ಸುವಾಸನೆಯನ್ನು ನೀಡುವುದಲ್ಲದೆ, ಜೀವಸತ್ವಗಳು, ಫೈಬರ್, ಅಮೈನೊ ಆಮ್ಲಗಳು, ಪ್ರೋಟೀನ್, ಕೊಬ್ಬಿನಾಮ್ಲಗಳು ಮತ್ತು ಅತ್ಯಧಿಕ ಪೋಷಕಾಂಶಗಳನ್ನು ಸೇರಿದಂತೆ ಹಲವಾರು ಒಳ್ಳೆಯ ಗುಣಗಳಿಂದ ತುಂಬಿದೆ, ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಪೌಷ್ಟಿಕ ತಜ್ಞೆ ಲೀಮಾ ಮಹಾಜನ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಪ್ಪು ಎಳ್ಳಿನ ಅನೇಕ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕಪ್ಪು ಬೀಜದ ಆರೋಗ್ಯ ಪ್ರಯೋಜನಗಳು:

ಕಪ್ಪು ಎಳ್ಳು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಬಗ್ಗೆ ವಿವಿಧ ಅಧ್ಯಯನ ಮಾಡಲಾಗಿದೆ ಎಂದು ಮಹಾಜನ್ ಹೇಳುತ್ತಾರೆ, ಅದು ಸಾವನ್ನು ಹೊರತುಪಡಿಸಿ ಏನನ್ನೂ ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಕಲೋಂಜಿ ಅಥವಾ ಕಪ್ಪು ಎಳ್ಳು ಕೆಲವು ಪ್ರಮುಖ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿವೆ ಮಾಹಿತಿ.

1. ಚರ್ಮದ ಸಮಸ್ಯೆಗಳಿಗೆ ರಾಮಬಾಣ:

ನೀವು ಮಾನ್ಸೂನ್​​ನಲ್ಲಿ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ನಿಮಗೆ ಸೋರಿಯಾಸಿಸ್ ಅಥವಾ ಮೊಡವೆ ಸಮಸ್ಯೆ ಇದೆಯಾ? ಹಾಗಾದರೆ ಕಪ್ಪು ಬೀಜಗಳು ಇಂತಹ ರೋಗಲಕ್ಷಣಗಳನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಸೂಕ್ಷ್ಮಜೀವಿ ವಿರೋಧಿ, ವೈರಲ್ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಪರಾವಲಂಬಿ ವಿರೋಧಿ ಗುಣಗಳಿವೆ, ಇದು ಚರ್ಮದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಮಹಾಜನ್ ಹೇಳುತ್ತಾರೆ. ಚರ್ಮದ ಸಮಸ್ಯೆಗಳ ವಿರುದ್ಧ ಇದು ಪರಿಣಾಮಕಾರಿ ಎಂದು ನಂಬಲಾಗಿದೆ. ಅಲ್ಲದೆ ಅಧ್ಯಯನಗಳಿಂದಲೂ ಸಾಬೀತಾಗಿದೆ. ಇದು ಸೋರಿಯಾಸಿಸ್, ಮೊಡವೆ, ವಲ್ಗರಿಸ್ ರೋಗಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಅಲ್ಲಲ್ಲಿ ಆದ ಗಾಯ ಅದರ ಕಲೆಗಳನ್ನು ಸಹ ಕಡಿಮೆ ಮಾಡುತ್ತದೆ. ಹಾಗಾಗಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಲೋಂಜಿ ಸಕಾರಾತ್ಮಕ ಪರಿಣಾಮಗಳನ್ನು ನೀಡುತ್ತದೆ.

2. ತೂಕ ಇಳಿಸಿಕೊಳ್ಳಲು ಎಳ್ಳು ಹೇಗೆ ಸಹಕಾರಿ:

ತೂಕ ಇಳಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ಪ್ರತಿದಿನ ನಿಮ್ಮ ಆಹಾರ ಮತ್ತು ವ್ಯಾಯಾಮದಲ್ಲಿ ಬದಲಾವಣೆಗಳನ್ನು ಮಾಡುವುದು. ಹೇಗೆಂದರೆ? ನಿಮ್ಮ ಆಹಾರದಲ್ಲಿ ಆರೋಗ್ಯಕರ ಆಹಾರವನ್ನು ಸೇರಿಸುವುದು ಸ್ವಾಭಾವಿಕ, ಅದರ ಜೊತೆಗೆ ಎಳ್ಳನ್ನು ಅವುಗಳಲ್ಲಿ ಒಂದಾಗಿದೆ. ಇವು ನಿಮಗೆ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ, ಸಕ್ರಿಯ ಪದಾರ್ಥಗಳನ್ನು ಒಳಗೊಂಡಿರುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕಗಳನ್ನು ಸಹ ಹೊಂದಿರುತ್ತದೆ, ಇವೆಲ್ಲವೂ ನಿಮ್ಮ ತೂಕ ನಷ್ಟಕ್ಕೆ ಕಾರಣವಾಗಬಹುದು. ಡವ್ಪ್ರೆಸ್ನಲ್ಲಿ ಪ್ರಕಟವಾದ ಅಧ್ಯಯನವು ಕಲೋಂಜಿಯಲ್ಲಿನ ಸಕ್ರಿಯ ಪದಾರ್ಥಗಳು ತೂಕ ನಷ್ಟಕ್ಕೆ ಕಾರಣವಾಗಬಹುದು ಎಂದು ಕಂಡು ಹಿಡಿದಿದೆ. ಇದು ದೇಹದ ತೂಕ ಕಡಿಮೆ ಮಾಡುವ ಮೂಲಕ ನೀವು ಫಿಟ್ ಇರುವಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ: ಪುರುಷರಿಗೆ ಅಲರ್ಟ್​! ಕಾಲಾ ಜೀರಾ ಬೀಜ ತಿಂದರೆ ಪುರುಷರಿಗೆ ಡಬಲ್ ಸ್ಟ್ಯಾಮಿನಾ.. ಮತ್ತು ಇನ್ನೂ ಅನೇಕ ಪ್ರಯೋಜನಗಳಿವೆ

3. ಥೈರಾಯ್ಡ್ ಗೆ ಕಲೋಂಜಿ:

ಥೈರಾಯ್ಡ್ ಅಂತಃಸ್ರಾವಕ ಗ್ರಂಥಿಯಾಗಿದ್ದು, ಇದು ಚಯಾಪಚಯ ಕ್ರಿಯೆಯನ್ನು ನಿರ್ವಹಣೆ ಮಾಡಲು ಸಹಾಯ ಮಾಡುವ ಹಾರ್ಮೋನುಗಳನ್ನು ತಯಾರಿಸುತ್ತದೆ ಮತ್ತು ಬಿಡುಗಡೆ ಮಾಡುತ್ತದೆ. ಇದು ಸರಿಯಾಗಿ ಕೆಲಸ ಮಾಡದಿದ್ದಾಗ, ಹೈಪೋಥೈರಾಯ್ಡಿಸಮ್ ಅಥವಾ ಹೈಪರ್ ಥೈರಾಯ್ಡಿಸಮ್​​ಗೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಎಳ್ಳನ್ನು ಬಳಸುವುದರಿಂದ ಥೈರಾಯ್ಡ್ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಮಹಾಜನ್ ತಿಳಿಸಿದ್ದಾರೆ.

4. ಕೊಲೆಸ್ಟ್ರಾಲ್​​ಗಾಗಿ ಎಳ್ಳು:

ಅಧಿಕ ಕೊಲೆಸ್ಟ್ರಾಲ್ ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಹೃದಯಾಘಾತ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆಗಳು ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಸರಿದೂಗಿಸಲು ಆರೋಗ್ಯಕರ ಆಹಾರವು ಪ್ರಮುಖವಾಗಿದೆ, ಮತ್ತು ನಿಮ್ಮ ಆಹಾರದಲ್ಲಿ ಕಪ್ಪು ಎಳ್ಳನ್ನು ಸೇರಿಸುವುದು ಉತ್ತಮ. ನಿಮ್ಮ ಎಲ್ಡಿಎಲ್ (ಕೆಟ್ಟ) ಮತ್ತು ಎಚ್ಡಿಎಲ್ (ಉತ್ತಮ) ಕೊಲೆಸ್ಟ್ರಾಲ್ ಅನ್ನು ಉಳಿಸಿಕೊಳ್ಳಲು ಇದು ಸಹಾಯ ಮಾಡುವುದರಿಂದ ನಿಮ್ಮ ಆಹಾರದಲ್ಲಿ ಎಳ್ಳನ್ನು ಸೇರಿಸಲು ಮಹಾಜನ್ ಶಿಫಾರಸು ಮಾಡುತ್ತಾರೆ.

5. ರಕ್ತದಲ್ಲಿನ ಸಕ್ಕರೆ ಮಟ್ಟಕ್ಕೆ ಎಳ್ಳು:

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬೇಕೆಂದು ಅಂದುಕೊಂಡಿದ್ದರೇ ಒಳ್ಳೆಯದು, ಎಳ್ಳು ಅವುಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ವಾಸ್ತವವಾಗಿ, ಬ್ರಿಟಿಷ್ ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ರಿಸರ್ಚ್ನಲ್ಲಿ ಪ್ರಕಟವಾದ ಅಧ್ಯಯನವು ನಿಮ್ಮ ಆಹಾರದಲ್ಲಿ ಸ್ಯಾಟಿವಾ ಅಂದರೆ ಕಪ್ಪು ಎಳ್ಳನ್ನು ಸೇರಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಕಂಡುಹಿಡಿದಿದೆ.

6. ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಎಳ್ಳು:

ನೀವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಎಳ್ಳು ಸಹಾಯ ಮಾಡುತ್ತದೆ. ಇದು ಹಿಸ್ಟಮೈನ್ಗಳ ಬಿಡುಗಡೆಯನ್ನು ತಡೆಯುವ ಗುಣಲಕ್ಷಣಗಳನ್ನು ಹೊಂದಿದೆ, ಇದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕಾಗಿ ಎಳ್ಳನ್ನು  ಹೇಗೆ ಬಳಸುವುದು?

-ದಿನಕ್ಕೆ 2 ಗ್ರಾಂ. ಎಳ್ಳನ್ನು ತೆಗೆದುಕೊಳ್ಳಿ. ಇದರಲ್ಲಿ ಅರ್ಧದಷ್ಟು ಹುರಿದು, ಅವುಗಳನ್ನು ರುಬ್ಬಿ, ಮತ್ತು ಉಗುರು ಬೆಚ್ಚಗಿನ ನೀರಿನಲ್ಲಿ ಬೆಲ್ಲದ ಜೊತೆಯಲ್ಲಿ ಕುಡಿಯಿರಿ.

– ಎಳ್ಳನ್ನು ಮಸಾಲೆ ಮಿಶ್ರಣದಲ್ಲಿಯೂ ಸೇರಿಸಿಕೊಳ್ಳಬಹುದು. ಕೆಲವು ಎಳ್ಳನ್ನು, ಜೀರಿಗೆ, ಕೊತ್ತಂಬರಿ ಬೀಜಗಳು ಮತ್ತು ಸೋಂಪಿನ ಜೊತೆಯಲ್ಲಿ ತೆಗೆದುಕೊಂಡು ಒಣಗಿಸಿ ಹುರಿಯಿರಿ. ನುಣ್ಣಗೆ ಪುಡಿ ಮಾಡಿ. ಈಗ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ಮತ್ತು ಅದನ್ನು ಬಿಗಿಯಾದ ಡಬ್ಬದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಇದು ಒಳ್ಳೆಯ ಮಸಾಲಾ ಮಿಶ್ರಣವಾಗಿದ್ದು ನಿಮ್ಮ ಪದಾರ್ಥಗಳಿಗೆ ಸೇರಿಸುವುದರಿಂದ ರುಚಿಯನ್ನು ಹೆಚ್ಚಿಸುತ್ತದೆ.

-ಕಲೋಂಜಿ ಅಥವಾ ಕಪ್ಪು ಎಳ್ಳನ್ನು ಪಲ್ಯಗಳು, ಗ್ರೇವಿ, ಅನ್ನದಿಂದ ಮಾಡುವ ತಿಂಡಿಗಳಿಗೆ ಮತ್ತು ಚಪಾತಿಗಳಿಗೆ ಸೇರಿಸಬಹುದು.

-ಎಳ್ಳನ್ನು ಬಳಸಲು ಸುರಕ್ಷಿತವೆಂದು ಪರಿಗಣಿಸಲಾಗಿದ್ದರೂ, ಸಂಭಾವ್ಯ ಅಪಾಯಗಳ ಬಗ್ಗೆ ತಿಳಿದುಕೊಳ್ಳಲು ನೀವು ಯಾವಾಗಲೂ ನಿಮ್ಮ ಆರೋಗ್ಯ ಆರೈಕೆ ಮಾಡುವ ಅಥವಾ ವೈದ್ಯರನ್ನು ಕೇಳಬೇಕು. ಯಾವುದೇ ಅಡ್ಡಪರಿಣಾಮವಿದ್ದಲ್ಲಿ ಅದನ್ನು ನಿಲ್ಲಿಸಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:16 pm, Mon, 24 July 23