Madras Eye: ಕರ್ನಾಟಕ, ದೆಹಲಿ ಸೇರಿದಂತೆ ಹಲವೆಡೆ ಮದ್ರಾಸ್ ಐ ಪ್ರಕರಣಗಳು ಹೆಚ್ಚಳ, ಲಕ್ಷಣಗಳು, ತಡೆಗಟ್ಟುವ ಮಾರ್ಗ, ಚಿಕಿತ್ಸೆ ಬಗ್ಗೆ ಮಾಹಿತಿ ಇಲ್ಲಿದೆ

Conjunctivitis: ಮುಂಗಾರು ಆರಂಭವಾಗುತ್ತಿದ್ದಂತೆ ಕರ್ನಾಟಕ, ದೆಹಲಿ ಸೇರಿದಂತೆ ಹಲವೆಡೆ ಮದ್ರಾಸ್ ಐ ಪ್ರಕರಣಗಳು ಹೆಚ್ಚಾಗಿವೆ. ಉತ್ತರ ಭಾರತದ ಹಲವು ಭಾಗಗಳಲ್ಲಿ ತೀವ್ರ ಪ್ರವಾಹ ಉಂಟಾಗಿದೆ.

Madras Eye: ಕರ್ನಾಟಕ, ದೆಹಲಿ ಸೇರಿದಂತೆ ಹಲವೆಡೆ ಮದ್ರಾಸ್ ಐ ಪ್ರಕರಣಗಳು ಹೆಚ್ಚಳ, ಲಕ್ಷಣಗಳು, ತಡೆಗಟ್ಟುವ ಮಾರ್ಗ, ಚಿಕಿತ್ಸೆ ಬಗ್ಗೆ ಮಾಹಿತಿ ಇಲ್ಲಿದೆ
ಮದ್ರಾಸ್ ಐ
Follow us
ನಯನಾ ರಾಜೀವ್
|

Updated on: Jul 24, 2023 | 1:12 PM

ಮುಂಗಾರು ಆರಂಭವಾಗುತ್ತಿದ್ದಂತೆ ಕರ್ನಾಟಕ, ದೆಹಲಿ ಸೇರಿದಂತೆ ಹಲವೆಡೆ ಮದ್ರಾಸ್ ಐ(Madras Eye) ಪ್ರಕರಣಗಳು ಹೆಚ್ಚಾಗಿವೆ. ಉತ್ತರ ಭಾರತದ ಹಲವು ಭಾಗಗಳಲ್ಲಿ ತೀವ್ರ ಪ್ರವಾಹ ಉಂಟಾಗಿದೆ. ಯಮುನಾ ಸೇರಿದಂತೆ ಹಲವು ನದಿಗಳ ನೀರಿನ ಮಟ್ಟ ಹೆಚ್ಚಿದೆ. ಇಷ್ಟು ಮಾತ್ರವಲ್ಲದೆ ಈ ಸಂದರ್ಭದಲ್ಲಿ ಕಾಯಿಲೆಗಳು ಕೂಡ ಹೆಚ್ಚಾಗಿವೆ.

ಮದ್ರಾಸ್ ಐ ಎಂಬುದು ಮಾರಣಾಂತಿಕ ಸೋಂಕಲ್ಲ ಆದರೂ ಅದನ್ನು ಗಂಭೀರವಾಗಿ ಪರಿಗಣಿಸಲೇಬೇಕು, ಈ ಸೋಂಕು 5-6 ದಿನಗಳ ಕಾಲ ಇರುತ್ತದೆ.

ಈ ಸೋಂಕು ಗಾಳಿಯ ಮೂಲಕವಾಗಲಿ, ಕಣ್ಣನ್ನು ನೋಡುವುದರಿಂದಾಗಲಿ ಹರಡುವುದಿಲ್ಲ, ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳನ್ನು ಬಳಸಿದಾಗ ಕಣ್ಣಿನ ನೀರು ತಾಕಿದಾಗ ಹರಡುತ್ತದೆ.

ಮತ್ತಷ್ಟು ಓದಿ: Madras Eye: ಏನಿದು ಮದ್ರಾಸ್ ಐ, ಲಕ್ಷಣಗಳು ಹಾಗೂ ಚಿಕಿತ್ಸೆಗಳೇನು? ಇಲ್ಲಿದೆ ಮಾಹಿತಿ

ಮದ್ರಾಸ್ ಐ ಲಕ್ಷಣಗಳೇನು? ಮದ್ರಾಸ್ ಐ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯ ಕಣ್ಣುಗಳ ಬಿಳಿ ಭಾಗವು ಕೆಂಪಾಗುತ್ತದೆ. ಕಣ್ಣುಗಳಲ್ಲಿ ತುರಿಕೆ ಮತ್ತು ನೋವು ಇರುತ್ತದೆ, ಕಣ್ಣಿಂದ ನೀರು ನಿರಂತರವಾಗಿ ಹೊರಬರುತ್ತಿರುತ್ತದೆ. ಕೆಲವೊಮ್ಮೆ ದೃಷ್ಟಿ ಮಸುಕಾಗುತ್ತದೆ. ಕಣ್ಣುಗಳು ಊದಿಕೊಳ್ಳುತ್ತವೆ. ಈ ಆರೋಗ್ಯ ಸಮಸ್ಯೆಯು ದೃಷ್ಟಿಯ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ, ದೃಷ್ಟಿ ಸ್ವಲ್ಪ ಸಮಯದವರೆಗೆ ಮಸುಕಾಗಿ ಕಾಣಬಹುದು.

ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? -ಶುಚಿತ್ವವನ್ನು ಕಾಪಾಡಿಕೊಳ್ಳಿ -ಆಗಾಗ ಕೈಗಳನ್ನು ತೊಳೆಯಿರಿ -ಪದೇ ಪದೇ ಕಣ್ಣುಗಳನ್ನು ಮುಟ್ಟಬೇಡಿ -ನಿಮ್ಮ ಟವೆಲ್, ಹಾಸಿಗೆ ಅಥವಾ ಕರವಸ್ತ್ರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ -ಕ್ಯಾಂಟಾಕ್ಟ್​ ಲೆನ್ಸ್​ ಹಾಕುವುದನ್ನು ತಪ್ಪಿಸಿ -ನಿಮ್ಮ ಸ್ವಂತ ಇಚ್ಛೆಯಿಂದ ಯಾವುದೇ ಔಷಧಿಯನ್ನು ತೆಗೆದುಕೊಳ್ಳಬೇಡಿ -ಸಾರ್ವಜನಿಕ ಈಜುಕೊಳಕ್ಕೆ ಹೋಗುವುದನ್ನು ತಪ್ಪಿಸಿ -ಸೋಂಕಿತ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಿ -ಸೋಂಕಿತ ವ್ಯಕ್ತಿ ಬಳಸಿದ ಯಾವುದನ್ನೂ ನೀವು ಬಳಸಬೇಡಿ

ಈ ರೋಗದ ಸಮಯದಲ್ಲಿ, ಸೋಂಕಿತ ವ್ಯಕ್ತಿಗೆ ಕಣ್ಣುಗಳಲ್ಲಿ ತುರಿಕೆ, ಮಸುಕಾದ ದೃಷ್ಟಿ ಮುಂತಾದ ಸಮಸ್ಯೆಗಳಿವೆ. ವೈದ್ಯರ ಪ್ರಕಾರ, ದಿನದಲ್ಲಿ ಸಾಕಷ್ಟು ನೀರು ಕುಡಿಯುವುದು ಇದನ್ನು ತಪ್ಪಿಸಲು ಉತ್ತಮ ಮಾರ್ಗವಾಗಿದೆ. ಇದಲ್ಲದೆ, ಹಸಿರು ತರಕಾರಿಗಳು, ತಾಜಾ ಹಣ್ಣುಗಳನ್ನು ಸೇವಿಸುವುದು, ಉತ್ತಮ ನಿದ್ರೆ ಇತ್ಯಾದಿಗಳನ್ನು ಸಹ ಈ ರೋಗವನ್ನು ದೂರವಿರಿಸಲು ಸಹಾಯ ಮಾಡುತ್ತದೆ.

ಸೌತೆಕಾಯಿ ಮೊದಲಾದ ತಣ್ಣನೆಯ ವಸ್ತುಗಳನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳುವುದು ಕೂಡ ಈ ಋತುವಿನಲ್ಲಿ ತಾಜಾತನದ ಅನುಭವ ನೀಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
"ಇಸ್ಪೀಟ್ ಆಟ ಆಡಲೇಬೇಕಾ ಸರ್​"? ಪೊಲೀಸರಿಗೆ ಮಕ್ಕಳ ಪ್ರಶ್ನೆ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?