ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ವ್ಯಾಯಾಮ ಮಾಡುವುದು ಅತ್ಯಗತ್ಯ. ದೇಹದ ಸುಸ್ತು, ಆಯಾಸದ ನಿವಾರಣೆಯ ಜತೆಗೆ ಮಾನಸಿಕ ಒತ್ತಡದಿಂದ ಹೊರಬರಲು ವ್ಯಾಯಾಮ ಸಹಾಯ ಮಾಡುತ್ತದೆ. ಅದರಲ್ಲಿ ಮುಖ್ಯವಾಗಿ ವಾಂಕಿಗ್ ಮಾಡುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ. ದಿನದಲ್ಲಿ ಅರ್ಧಗಂಟೆಯಾದರೂ ನಡೆಯುವ ಅಭ್ಯಾಸವಿದ್ದರೆ ಮನಸ್ಸಿನ ವಿಶ್ರಾಂತಿಯ ಜತೆಗೆ ದೇಹದ ಸದೃಢತೆಗೆ ಸಹಾಯವಾಗುತ್ತದೆ.
ಮನೆಯಲ್ಲಿ ದಿನಪೂರ್ತಿ ಕೆಲಸವಿರಬಹುದು. ಆದರೆ ನಿಮಗಾಗಿಯೇ ಒಂದಿಷ್ಟು ಸಮಯವನ್ನು ಮೀಸಲಿಡಿ. ನಡೆಯುವ ವ್ಯಾಯಾಮಕ್ಕೆ ವಿಶೇಷವಾದ ತರಬೇತಿ ಬೇಕಂತೇನಿಲ್ಲ. ಮಕ್ಕಳಿಂದ ವಯಸ್ಕರವರೆಗೂ ಸಹ ವಾಕಿಂಗ್ನಿಂದ ಅತಿಹೆಚ್ಚು ಪ್ರಯೋಜನಗಳೇ ಇದೆ ಹೊರತು ಇದರಿಂದ ಯಾವುದೆ ಹಾನಿಯಿಲ್ಲ. ಹೀಗಿರುವಾಗ ನಿಮ್ಮನ್ನು ನೀವು ಪ್ರತಿನಿತ್ಯದ ವ್ಯಾಯಾಮ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ.
ಕೊರೊನಾ ಸಾಂಕ್ರಾಮಿಕದ ಸಮಯವಾದ್ದರಿಂದ ಹೊರಗಡೆ ಹೋಗಲು ತೊಂದರೆಯಾಗುತ್ತಿದ್ದರೆ, ಮನೆಯ ಅಂಗಳದಲ್ಲಿಯೇ ನಡೆಯುವ ರೂಢಿ ಇಟ್ಟುಕೊಳ್ಳಿ. ಹೃದ್ರೋಗ, ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಖಿನ್ನತೆ ಇತ್ಯಾದಿಗಳಿಂದ ದೂರವಿರಲು ಸಹಾಯಕವಾಗುತ್ತದೆ. ನಿಮ್ಮ ದೇಹದ ಅಂಗಾಂಗಗಳ ಸದೃಢತೆಗೆ ಅನುಕೂಲ ಮಾಡಿಕೊಡುತ್ತದೆ. ಹೆಚ್ಚು ಕ್ಯಾಲರಿ, ಬೊಜ್ಜಿನ ಅಂಶವನ್ನು ಕರಗಿಸಲು ಸಹಾಯಕವಾಗಿದೆ. ಹಾಗೆಯೇ ಮೆದುಳು, ಮೂತ್ರಪಿಂಡ, ಶ್ವಾಸಕೋಶ, ಜಠರ ಮುಂತಾದ ಅಂಗಗಳಿಗೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ತಿಂದ ಆಹಾರ, ಹೆಚ್ಚಿನ ಕೊಬ್ಬಿನಾಂಶವನ್ನು ಕರಗಿಸಲು ಸಹಾಯ ಮಾಡುತ್ತದೆ. ವಯಸ್ಸಾದಂತೆಯೇ ನಡಿಗೆ ನಿಧಾನವಾಗುತ್ತದೆ ಮತ್ತು ಹೆಚ್ಚು ವಯಸ್ಸಾದಂತೆ ಕಾಣುಸುತ್ತೀನಿ ಎಂಬುದು ಹೆಚ್ಚಿನವರ ಕೊರಗು. ಹೀಗಿರುವಾಗ ದಿನನಿತ್ಯ ವಾಕಿಂಗ್ ಅಭ್ಯಾಸ ರೂಢಿಯಲ್ಲಿದ್ದರೆ ಪ್ರಾಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ರಕ್ತದೊತ್ತಡ, ಅನಗತ್ಯ ಚಿಂತೆಗಳಿಂದ ದೂರವಿರಲು ವಾಕಿಂಗ್ ಸಹಾಯಕ. ಅದರಲ್ಲಿಯೂ ಪ್ರಸ್ತುತ ಸಮಯದಲ್ಲಿ ಹೆಚ್ಚಿನ ಚಿಂತೆ ಕಾಡುತ್ತಿರಬಹುದು. ಮನಸ್ಸು ಭಾರವೆನಿಸಿರಬಹುದು. ಸೋಂಕಿನ ಲಕ್ಷಣಗಳಿಂದ ಹೊರ ಬಂದರೂ ಕೂಡಾ ಮಾನಸಿಕ ನೆಮ್ಮದಿ ಇಲ್ಲವೆಂದಾದರೆ ದಿನನಿತ್ಯ ಅರ್ಧಗಂಟೆಯಾದರೂ ನಡೆಯುವ ಕ್ರಮ ರೂಢಿಯಲ್ಲಿರಲಿ. ಇದರಿಂದ ಶುದ್ಧ ಗಾಳಿಯನ್ನು ಪಡೆಯುವುದರ ಜತೆಗೆ ಆರೋಗ್ಯವೂ ಕೂಡಾ ಬಹುಬೇಗ ಚೇತರಿಕೊಳ್ಳುತ್ತದೆ.
ಇದನ್ನೂ ಓದಿ:
Health Tips: ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರಿಗಾಗಿ ಕಿವಿಮಾತು; ನಿಮಗಾಗಿಯೇ ಒಂದಿಷ್ಟು ಸಮಯ ಮೀಸಲಿಡಿ