Monsoon Skin Diet: ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಆಹಾರ ಕ್ರಮ ಹೇಗಿರಬೇಕು?

| Updated By: shruti hegde

Updated on: Jun 11, 2021 | 3:37 PM

ಚರ್ಮದ ಆರೈಕೆಗಾಗಿ ಸಕ್ಕರೆ ಅಥವಾ ಅತಿಯಾಗಿ ಸಿಹಿತಿಂಡಿಗಳ ಸೇವನೆಯನ್ನು ತಪ್ಪಿಸಿ. ಇದು ನಿಮ್ಮ ಮುಖದಲ್ಲಿ ಮೊಡವೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಹಾಗಾಗಿ ಆದಷ್ಟು ಸಕ್ಕರೆ ಪದಾರ್ಥಗಳಿಂದ ದೂರವಿರಿ.

Monsoon Skin Diet: ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಆಹಾರ ಕ್ರಮ ಹೇಗಿರಬೇಕು?
ಸಾಂದರ್ಭಿಕ ಚಿತ್ರ
Follow us on

ಬೇಸಿಗೆ ಅಥವಾ ಮಳೆಗಾಲದ ಸಮಯದಲ್ಲಿ ನಿಮ್ಮ ಚರ್ಮವು ಹೆಚ್ಚು ಹಾನಿಗೆ ಒಳಗಾಗಬಹುದು. ಮೊಡವೆಗಳು, ಎಣ್ಣೆಯುಕ್ತ ಮುಖದಂತಹ ಸಮಸ್ಯೆ ಕಾಡಬಹುದು. ಹೀಗಿರುವಾಗ ನಿಮ್ಮ ದೇಹಕ್ಕೆ ಬೇಕಾದ ಅಥವಾ ನಿಮ್ಮ ಚರ್ಮದ ಸುರಕ್ಷತೆಗೆ ಬೇಕಾದ ಪೌಷ್ಠಿಕಾಂಶಯುಕ್ತ ಆಹಾರ ಪದ್ಧತಿ ನಿಮ್ಮದಾಗಿದೆಯೇ ಎಂಬುದರ ಕುರಿತಾಗಿ ಒಮ್ಮೆ ಗಮನಹರಿಸಿ.

ಪ್ರತಿಯೊಬ್ಬರಿಗೂ ಕೂಡಾ ನಮ್ಮ ಮುಖ ನೋಡುಗರಿಗೆ ಆಕರ್ಷಕವಾಗಿರಬೇಕು ಎಂಬ ಆಸೆ ಇರುವುದು ಸಹಜ. ಜತೆಗೆ ಮೊಡವೆಗಳೆದ್ದ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಹಿಂಸೆ ಅನಿಸುತ್ತದೆ. ಹೀಗಿರುವಾಗ ಮಳೆಗಾಲದಲ್ಲಿ ಬಿಡುವ ಪೌಷ್ಠಿಕಾಂಶಯುಕ್ತ ಹಣ್ಣುಗಳನ್ನು ತಿನ್ನುವ ಮೂಲಕ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದಲ್ಲದೇ ಚರ್ಮದ ಸಮಸ್ಯೆಗಳಿಂದ ದೂರವಿರಬಹುದು.

ಮಳೆಗಾಲದ ಸಮಯದಲ್ಲಿ ಅತ್ಯಧಿಕ ಹಣ್ಣುಗಳು ಬಿಡುತ್ತದೆ. ಹೆಚ್ಚು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ಹಣ್ಣುಗಳನ್ನು ಆರಿಸಿ ಸೇವಿಸಿ. ಲಿಚ್ಚಿ, ನೇರಳೆ ಹಣ್ಣು ಹೀಗೆ ವಿವಿಧ ತೆರೆನಾದ ಪ್ರೊಟೀನ್​ಯುಕ್ತ ಹಣ್ಣುಗಳಲ್ಲಿ ವಿಟಮಿನ್​ ಸಿ ಅಂಶಗಳು ತುಂಬಿರುತ್ತದೆ. ಇವು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಳೆಗಾಲದ ಸಮಯದಲ್ಲಿ ಆದಷ್ಟು ರಸ್ತೆಯ ಪಕ್ಕದಲ್ಲಿ ಸೇವಿಸುವ ಆಹಾರ ಪದಾರ್ಥದಿಂದ ದೂರವಿರಿ. ಅಂದರೆ, ಸಮೋಸಾ, ಪಾನಿಪುರಿ ಹೀಗೆ ಮುಂತಾದ ತಿನಿಸುಗಳು. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ನಿಮ್ಮ ಚರ್ಮ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಮತ್ತು ಮುಖದಲ್ಲಿ ಹೆಚ್ಚು ಮೊಡವೆಗಳು ಏಳಲು ಕಾರಣವಾಗುತ್ತದೆ.

ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ನೀರನ್ನು ಸೇವಿಸಿ. ಗ್ರೀನ್​ ಟೀ, ಸೂಪ್​ಗಳನ್ನು ಕುಡಿಯಬಹುದು. ಮಳೆಗಾಲದ ಸಮಯದಲ್ಲಿ ನೀರು ಕಲುಷಿತವಾಗಿರಬಹುದು. ಹಾಗಾಗಿ ಆದಷ್ಟು ಕುದಿಸಿದ ನೀರನ್ನು ಕುಡಿಯಲು ಉಪಯೋಗಿಸಿ. ಇದರಿಂದ ಜ್ವರ, ಶೀತದಂತಹ ಲಕ್ಷಣಗಳಿಂದ ದೂರವಿರಬಹುದು.

ಸೂರ್ಯಕಾಂತಿ ಬೀಜ ಹಾಗೂ ಕುಂಬಳಕಾಯಿ ಬೀಜಗಳು ವಿಟಮಿನ್​ ಇ ಯುಕ್ತ ಅಂಶದಿಂದ ಕೂಡಿದೆ. ನಿಮ್ಮ ಚರ್ಮ ತಾರುಣ್ಯ ಹಾಗೂ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಕುಂಬಳಿಕಾಯಿ ಮತ್ತು ಸೂರ್ಯಕಾಂತಿ ಬೀಜಗಳನ್ನು ಎಸೆಯುವ ಬದಲು ನಿಮ್ಮ ಆರೋಗ್ಯದ ದೃಷ್ಟಿಯಿಂದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಚರ್ಮದ ಆರೈಕೆಗಾಗಿ ಸಕ್ಕರೆ ಅಥವಾ ಅತಿಯಾಗಿ ಸಿಹಿತಿಂಡಿಗಳ ಸೇವನೆಯನ್ನು ತಪ್ಪಿಸಿ. ಇದು ನಿಮ್ಮ ಮುಖದಲ್ಲಿ ಮೊಡವೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಹಾಗಾಗಿ ಆದಷ್ಟು ಸಕ್ಕರೆ ಪದಾರ್ಥಗಳಿಂದ ದೂರವಿರಿ.

ಇದನ್ನೂ ಓದಿ:

Oily Skin: ನಿಮ್ಮ ಮುಖದಲ್ಲಿನ ಎಣ್ಣೆಯುಕ್ತ ಚರ್ಮಕ್ಕೆ ಗುಡ್​ಬೈ ಹೇಳಲು ಕೆಲವೊಂದಿಷ್ಟು ಸಲಹೆಗಳು ಹೀಗಿವೆ

Aloe Vera Benefits: ಕೂದಲು ಮತ್ತು ಚರ್ಮದ ಆರೈಕೆಗೆ ಅಲೋವೆರಾ; ಬಳಸುವ ಕ್ರಮ ಹೇಗೆ ಗೊತ್ತಾ?