ಕಲ್ಲಂಗಡಿ ಬೀಜಗಳನ್ನ ಎಸೆಯುವ ಮುನ್ನ ಅದರ ಪ್ರಯೋಜನಗಳನ್ನ ತಿಳಿದುಕೊಳ್ಳಿ

| Updated By: sandhya thejappa

Updated on: Mar 22, 2022 | 10:47 AM

Watermelon Seeds: ಬೇಸಿಗೆಯಲ್ಲಿ ಜನ ಇಷ್ಟಪಡುವ ಹಣ್ಣುಗಳಲ್ಲಿ ಕಲ್ಲಂಗಡಿ ಕೂಡಾ ಒಂದು. ಕಲ್ಲಂಗಡಿ ಜ್ಯೂಸ್ ಮಾಡಿ ಕುಡಿದರೆ ದೇಹ ತಣ್ಣಗಾಗುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ಕಲ್ಲಂಗಡಿ ಬೀಜಗಳನ್ನ ಎಸೆಯುವ ಮುನ್ನ ಅದರ ಪ್ರಯೋಜನಗಳನ್ನ ತಿಳಿದುಕೊಳ್ಳಿ
ಕಲ್ಲಂಗಡಿ ಬೀಜಗಳು
Follow us on

ಹೊರಗಡೆ ಹೋದರೆ ಉರಿ ಬಿಸಿಲು. ದೇಹ ತಣ್ಣಗಾಗಲು ಏನಾದರೂ ಕುಡಿಬೇಕು ಅಥವಾ ತಿನ್ನಬೇಕು ಅಂತ ಅನಿಸುವುದು ಸಹಜ. ಬೇಸಿಗೆಯಲ್ಲಿ ಜನ ಇಷ್ಟಪಡುವ ಹಣ್ಣುಗಳಲ್ಲಿ ಕಲ್ಲಂಗಡಿ (Watermelon) ಕೂಡಾ ಒಂದು. ಕಲ್ಲಂಗಡಿ ಜ್ಯೂಸ್ ಮಾಡಿ ಕುಡಿದರೆ ದೇಹ ತಣ್ಣಗಾಗುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಇದೇನೇಯಿರಲಿ. ನೀವು ಕಲ್ಲಂಗಡಿ ಕತ್ತರಿಸಿ ಜ್ಯೂಸ್ ಮಾಡಿದ ಮೇಲೆ ಒಂದು ತಪ್ಪು ಮಾಡುತ್ತೀರ. ಅದೇ ಕಲ್ಲಂಗಡಿ ಹಣ್ಣಿನ ಬೀಜವನ್ನು ಎಸೆಯುವುದು. ಕಲ್ಲಂಗಡಿ ಬೀಜದಲ್ಲಿ (Watermelon Seeds) ಆರೋಗ್ಯ ಪ್ರಯೋಜನಗಳು ಅಡಗಿದೆ. ಹೀಗಾಗಿ ಬೀಜ ಅಗತ್ಯವಿಲ್ಲ ಎಂದು ಎಸೆಯುವ ಮುನ್ನಾ ಅದರ ಪ್ರಯೋಜನಗಳನ್ನ ತಿಳಿದುಕೊಳ್ಳಿ.

* ಮೂಳೆಗಳನ್ನ ಬಲಪಡಿಸುತ್ತದೆ:
ಕಲ್ಲಂಗಡಿ ಬೀಜಗಳಲ್ಲಿ ಮ್ಯಾಂಗನೀಸ್, ತಾಮ್ರ, ಪೊಟ್ಯಾಸಿಯಂನಂತಹ ಖನಿಜ ಅಂಶ ಹೆಚ್ಚಿದೆ. ಹೀಗಾಗಿ ಇದು ದೇಹದ ಮೂಳೆಗಳಿಗೆ ಬಹಳ ಒಳ್ಳೆಯದು. ದಿನಕ್ಕೆ 5 6 ಒಣಗಿದ ಕಲ್ಲಂಗಡಿ ಬೀಜಗಳನ್ನು ತಿನ್ನಿ.

* ವೀರ್ಯ ಗುಣಮಟ್ಟ ಸುಧಾರಣೆ:
ಬಂಜೆತನಕ್ಕೆ ಕೇವಲ ಹೆಣ್ಣು ಕಾರಣವಾಗಲ್ಲ. ಗಂಡು ಇದಕ್ಕೆ ಕಾರಣ. ಗಂಡಿನಲ್ಲಿ ವೀರ್ಯದ ಕೊರತೆ ಉಂಟಾದಾಗ ಭವಿಷ್ಯದಲ್ಲಿ ಮಗು ಪಡೆಯಲು ಸಾಧ್ಯವಾಗದೇ ಇರಬಹುದು. ಕಲ್ಲಂಗಡಿ ಹೆಚ್ಚಿನ ಪ್ರಮಾಣದ ಸತುವನ್ನು ಹೊಂದಿರುತ್ತದೆ. ಹೀಗಾಗಿ ಇದು ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

* ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ:
ಕಲ್ಲಂಗಡಿ ಬೀಜ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ಗಳಿಂದ ಕೂಡಿದ್ದು, ಚರ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಜೊತೆಗೆ ವಿವಿಧ ಸೌಂದರ್ಯ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ. ಕಲ್ಲಂಗಡಿ ಬೀಜಗಳು ಮೆಗ್ನೀಸಿಯಮ್ ಅನ್ನು ಒಳಗೊಂಡಿರುತ್ತವೆ. ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತವೆ.

* ತಲೆ ಕೂದಲಿಗೆ ಒಳ್ಳೆಯದು:
ಪ್ರತಿಯೊಬ್ಬರೂ ಆರೋಗ್ಯಕರ ತಲೆ ಕೂದಲನ್ನು ಇಷ್ಟಪಡುತ್ತಾರೆ. ಕಲ್ಲಂಗಡಿ ಬೀಜಗಳಲ್ಲಿ ಇರುವ ಪ್ರೋಟೀನ್ಗಳು, ಕಬ್ಬಿಣ, ಮೆಗ್ನೀಸಿಯಂ, ಸತು ಮತ್ತು ತಾಮ್ರ ಕೂದಲಿನ ಗುಣಮಟ್ಟವನ್ನು ಸುಧಾರಿಸುತ್ತದೆ. ಜೊತೆಗೆ ಕೂದಲನ್ನು ಬಲಪಡಿಸುತ್ತದೆ. ಕಲ್ಲಂಗಡಿ ಬೀಜದಲ್ಲಿರುವ ಮ್ಯಾಂಗನೀಸ್ ಕೂದಲು ಉದುರುವಿಕೆಯನ್ನು ತಡೆಯುತ್ತದೆ.

* ರೋಗ ನಿರೋಧಕ ಶಕ್ತಿ ಹೆಚ್ಚಳ:
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರಬೇಕು. ಆಗ ಮಾತ್ರ ಕಾಯಿಲೆಗಳ ವಿರುದ್ಧ ಹೋರಾಡಬಹುದು. ಕೊರೊನಾ ಹೆಚ್ಚಾದ ವೇಳೆ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಜನ ಪರದಾಡುತ್ತಿದ್ದರು. ಕಲ್ಲಂಗಡಿ ಬೀಜದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಂಶ ಅಡಗಿದೆ. ಹಾಗಾಗಿ ಕಲ್ಲಂಗಡಿ ಬೀಜಗಳನ್ನು ಸೇವಿಸಿ.

ಕಲ್ಲಂಗಡಿ ಬೀಜಗಳನ್ನು ತಿನ್ನುವುದು ಹೇಗೆ?
ನೀವು ಕಲ್ಲಂಗಡಿ ಬೀಜಗಳನ್ನು ಒಣಗಿಸಿ ಸೇವಿಸಬಹುದು. ಬಾಣಲಿಯಲ್ಲಿ ಹುರಿದು ಕೂಡಾ ತಿನ್ನಬಹುದು. ಹೇಗೆ ತಿಂದರೂ ಇದು ತುಂಬಾ ಟೇಸ್ಟಿಯಾಗಿದೆ.

ಇದನ್ನೂ ಓದಿ

ಮುಂಬೈನ ಆರಂತಸ್ತಿನ ಮಾಲ್​ ಮೇಲೆ ರಾರಾಜಿಸಿದ ಯಶ್​ ಪೋಸ್ಟರ್​​; ಇದು ‘ಕೆಜಿಎಫ್​ 2’ ಕ್ರೇಜ್​

ಉರುಸ್ ಮೆರವಣಿಗೆಯಲ್ಲಿ ರಾರಾಜಿಸಿದ ಪುನೀತ್ ಫೋಟೋ; ಇಲ್ಲಿದೆ ವಿಡಿಯೋ

Published On - 10:26 am, Tue, 22 March 22