Green Tea Benefits: ಗ್ರೀನ್​ ಟೀ ನಿಮ್ಮ ದೇಹಕ್ಕೆ ಎಷ್ಟು ಒಳಿತು? ಇಲ್ಲಿದೆ ಗ್ರೀನ್​ ಟೀ ಮಹತ್ವ

ಗ್ರೀನ್​ ಟೀಯಲ್ಲಿನ ಎಲೆಗಳನ್ನು ಕ್ಯಾಮೆಲಿಯಾ ಸಿನೆನ್ಸಿಸ್​ ಎನ್ನುವ ಸಸ್ಯದಿಂದ ಪಡೆಯಲಾಗುತ್ತದೆ. ಬಳಿಕ ಅದನ್ನು ಆಕ್ಸಿಡೀಕರಿಸಲಾಗುತ್ತದೆ. ಗ್ರೀನ್​ ಟೀ ಕಡಿಮೆ ಸಂಸ್ಕರಣೆಗೆ ಒಳಗಾದ ಟೀ ಗಳಲ್ಲಿ ಒಂದಾಗಿದೆ.

Green Tea Benefits: ಗ್ರೀನ್​ ಟೀ ನಿಮ್ಮ ದೇಹಕ್ಕೆ ಎಷ್ಟು ಒಳಿತು? ಇಲ್ಲಿದೆ ಗ್ರೀನ್​ ಟೀ ಮಹತ್ವ
ಗ್ರೀನ್ ಟೀ
Follow us
TV9 Web
| Updated By: Pavitra Bhat Jigalemane

Updated on: Dec 11, 2021 | 7:40 AM

ನಾವು ಸೇವಿಸುವ ಆಹಾರ ನಮ್ಮನ್ನು ಆರೋಗ್ಯಯುತವಾಗಿ ಇಡುವಂತೆ ಮಾಡಬೇಕು. ಆಗ ಮಾತ್ರ ಸ್ವಾಸ್ಥ್ಯ ಜೀವನವನ್ನು ನಡೆಸಲು ಸಾಧ್ಯ. ಹಿತಮಿತ ಆಹಾರ ಸೇವನೆ, ವ್ಯಾಯಾಮದಂತಹ ಅಭ್ಯಾಸಗಳಿಂದ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಕೆಲವೊಂದು ಪಾನೀಯಗಳನ್ನು ನಮ್ಮ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ. ಅವುಗಳಲ್ಲಿ ಗ್ರೀನ್​ ಟೀ ಕೂಡ ಒಂದು. ಗ್ರೀನ್​ ಟೀಯಲ್ಲಿನ ಎಲೆಗಳನ್ನು ಕ್ಯಾಮೆಲಿಯಾ ಸಿನೆನ್ಸಿಸ್​ ಎನ್ನುವ ಸಸ್ಯದಿಂದ ಪಡೆಯಲಾಗುತ್ತದೆ. ಬಳಿಕ ಅದನ್ನು ಆಕ್ಸಿಡೀಕರಿಸಲಾಗುತ್ತದೆ. ಗ್ರೀನ್​ ಟೀ ಕಡಿಮೆ ಸಂಸ್ಕರಣೆಗೆ ಒಳಗಾದ ಟೀ ಗಳಲ್ಲಿ ಒಂದಾಗಿದೆ. ಅಲ್ಲದೆ ಗ್ರೀನ್​ಟೀಯಲ್ಲಿ ಹೆಚ್ಚು ರೋಗ ನಿರೊಧಕ ಶಕ್ತಿ ಇರುತ್ತದೆ. ಜತೆಗೆ ಪಲಿಫಿನಾಲ್​ ಅಂಶಗಳು ಹೇರಳವಾಗಿರುತ್ತವೆಗ್ರೀನ್​ ಟೀ ದೇಹದಲ್ಲಿರುವ ಅನಗತ್ಯ ಕೊಬ್ಬು ಕರಗಲು ಸಹಾಯ ಮಾಡುತ್ತದೆ. ಅಲ್ಲದೆ ಒಂದು ಅಧ್ಯಯನದ ಪ್ರಕಾರ ಗ್ರೀನ ಟಿ ಮಾನವನ ಜೀವಿತಾವಧಿಯನ್ನು ಕೂಡ ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿದಿನ ಗ್ರೀನ್​ ಟೀ ಸೇವನೆ ಉತ್ತಮ ಅಭ್ಯಾಸವಾಗಿದೆ.

ರೋಗ ನಿರೋಧಕ ಶಕ್ತಿ ಗ್ರೀನ್​ ಟೀ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಗ್ರೀನ್​ ಟೀಯಲ್ಲಿರುವ ಉತ್ತಮ ಪೋಷಕಾಂಶಗಳು ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳುವಲ್ಲಿ ನೆರವಾಗಿ,ದೇಹವನ್ನು ಶುದ್ಧವಾಗಿರಿಸುತ್ತದೆ.

ತ್ವಚೆಯ ರಕ್ಷಣೆ ಗ್ರೀನ್​ ಟೀ ತ್ವಚೆಯ ರಕ್ಷಣೆಯನ್ನು ಮಾಡುತ್ತದೆ. ಸುಕ್ಕಾದ ಹಾಗೂ ಕಳೆಗುಂದಿದ ಚರ್ಮಕ್ಕೆ ಹೊಸ ಕಾಂತಿಯನ್ನು ನೀಡುತ್ತದೆ. ಅತಿಯಾದ ತೂಕವನ್ನೂ ತೆಗೆದುಹಾಕಲು ಗ್ರೀನ್​ ಟೀ ಉತ್ತಮ ಪಾನೀಯವಾಗಿದೆ.

ಹೃದಯದ ರಕ್ಷಣೆ ಗ್ರೀನ್​ ಟೀ ನಿಮ್ಮ ಹೃದಯದ ಆರೋಗ್ಯ ಕಾಪಾಡುತ್ತದೆ. ಹೃದಯದ ರಕ್ತನಾಳದಲ್ಲಿನ ಕಾಯಿಲೆಗಳನ್ನು ದೂರಮಾಡುತ್ತವೆ. ಹಾಗೂ ರಕ್ತದೊತ್ತಡವನ್ನು ಕಡಿಮೆಗೊಳಿಸಿ ರಕ್ತಸಂಚಾರವನ್ನು ಸರಾಗಗೊಳಿಸುತ್ತದೆ.

ಅಮೆರಿಕನ್​ ಜರ್ನಲ್​ ಆಫ್​ ಕ್ಲಿನಕಲ್​ ನ್ಯೂಟ್ರಿಷನ್​ನಲ್ಲಿ ಪ್ರಕಟವಾದ ವರದಿ ಕೂಡ ಗ್ರೀನ್​ ಟೀ ಸೇವನೆ ಮಧ್ಯ ವಯಸ್ಕರಲ್ಲಿ ಕೊಲೆಸ್ಟ್ರಾಲ್​ ಮಟ್ಟವನ್ನು ತಗ್ಗಿಸುವಲ್ಲಿ ನೆರವಾಗುತ್ತದೆ ಎಂದು ಸಾಬೀತುಪಡಿಸಿದೆ. ಹೀಗಾಗಿ ದಿನಕ್ಕೆ 2-3ಬಾರಿಯಾದರೂ ಗ್ರೀನ್​ ಟೀ ಸೇವಿಸಿ ಇದು ನಿಮ್ಮ ಆರೋಗ್ಯ ಜೀವನಕ್ಕೆ ಕೀಲಿಕೈ ಆಗಲಿದೆ. ನೆನಪಿಡಿ ದಿನದಲ್ಲಿ 3 ಕ್ಕಿಂತ ಹೆಚ್ಚು ಬಾರಿ ಗ್ರೀನ್ ಟೀ ಸೇವನೆ ಒಳಿತಲ್ಲ. ಇದು ನಿಮ್ಮ ದೇಹದ ನಿರ್ಜಲೀಕರಣಕ್ಕೆ ಕಾರಣವಾಗಬಹುದು.​

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?