Toothache: ಹಲ್ಲು ನೋವಿನ ತ್ವರಿತ ಪರಿಹಾರಕ್ಕೆ ಮನೆ ಮದ್ದುಗಳು

|

Updated on: Mar 28, 2023 | 6:59 AM

ಹಲ್ಲಿನ ಕೊಳೆತ, ಬ್ಯಾಕ್ಟೀರಿಯಾದ ಸೋಂಕು ಮತ್ತು ದಂತಕ್ಷಯದಂತಹ ಅನೇಕ ಕಾರಣಗಳಿಂದ ತೀವ್ರವಾದ ಹಲ್ಲುನೋವು ಉಂಟಾಗುತ್ತದೆ. ಈ ನೋವಿನಿಂದಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಹಲ್ಲಿನ ಒಳಗಿನ ನರಗಳು, ಅಂಗಾಂಶಗಳು ಮತ್ತು ರಕ್ತನಾಳಗಳು ತುಂಬಾ ಮೃದುವಾಗಿರುತ್ತವೆ.

Toothache: ಹಲ್ಲು ನೋವಿನ ತ್ವರಿತ ಪರಿಹಾರಕ್ಕೆ ಮನೆ ಮದ್ದುಗಳು
ಹಲ್ಲು ನೋವಿಗೆ ಪರಿಹಾರ
Follow us on

ಹಲ್ಲಿನ ಕೊಳೆತ, ಬ್ಯಾಕ್ಟೀರಿಯಾದ ಸೋಂಕು ಮತ್ತು ದಂತಕ್ಷಯದಂತಹ ಅನೇಕ ಕಾರಣಗಳಿಂದ ಹಲ್ಲುನೋವು (Toothache) ಉಂಟಾಗುತ್ತದೆ. ಈ ನೋವಿನಿಂದಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಹಲ್ಲಿನ ಒಳಗಿನ ನರಗಳು, ಅಂಗಾಂಶಗಳು ಮತ್ತು ರಕ್ತನಾಳಗಳು ತುಂಬಾ ಮೃದುವಾಗಿರುತ್ತವೆ. ಅವುಗಳು ದೇಹದಲ್ಲಿ ಅತ್ಯಂತ ಸೂಕ್ಷ್ಮವಾದ ನರಗಳಾಗಿವೆ. ಈ ನರಗಳು ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾದಾಗ ತೀವ್ರವಾದ ನೋವನ್ನು ಉಂಟುಮಾಡಬಹುದು. ಈ ಪರಿಸ್ಥಿತಿಯಲ್ಲಿ ದಂತವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಅದಾಗ್ಯೂ, ಮನೆಯಲ್ಲಿ ನಿತ್ಯ ಬಳಕೆ ಮಾಡುವ ಕೆಲವೊಂದು ಆಹಾರ ಪದಾರ್ಥಗಳಿಂದ (Home remedies) ಹಲ್ಲು ನೋವಿಗೆ ತಕ್ಷಣದ ಪರಿಹಾರ ಪಡೆಯಬಹುದು ಎನ್ನುತ್ತಾರೆ ತಜ್ಞರು. ಅವುಗಳು ಹೀಗಿವೆ:

ಲವಂಗ ಎಣ್ಣೆ: ಲವಂಗವು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಒಂದು ಹತ್ತಿಯ ಉಂಡೆಯಲ್ಲಿ ಒಂದು ಅಥವಾ ಎರಡು ಹನಿ ಲವಂಗದ ಎಣ್ಣೆಯನ್ನು ಹಾಕಿ ಮತ್ತು ಅದನ್ನು ನೋವು ಇರುವ ಹಲ್ಲಿಗೆ ಅನ್ವಯಿಸಿ. ಹೀಗೆ ಮಾಡುವುದರಿಂದ ಹಲ್ಲು ನೋವಿನಿಂದ ತ್ವರಿತ ಪರಿಹಾರ ಪಡೆಯಬಹುದು.

ಬೆಳ್ಳುಳ್ಳಿ: ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೆಳ್ಳುಳ್ಳಿಯನ್ನು ಪ್ರತಿದಿನ ಖಾಲಿ ಹೊಟ್ಟೆಗೆ ಸೇವಿಸಬಹುದು. ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹಲ್ಲುನೋವು ಕೂಡ ನಿವಾರಣೆಯಾಗುತ್ತದೆ. ಏಕೆಂದರೆ ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ.

ಪೇರಳೆ ಎಲೆಗಳು: ಪೇರಳೆ ಎಲೆಗಳು ಆಂಟಿಮೈಕ್ರೊಬಿಯಲ್ ಗುಣಗಳಿಂದ ತುಂಬಿವೆ. ಕುಳಿಗಳನ್ನು ತಡೆಯಲು ಇವು ಒಳ್ಳೆಯದು. ಪೇರಳೆ ಎಲೆಗಳನ್ನು ಕುದಿಸಿ ಮೌತ್ ವಾಶ್ ಆಗಿ ಬಳಸಬಹುದು.

ನಿಂಬೆ ರಸ: ನಿಂಬೆ ಸಿಟ್ರಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಹಾರವನ್ನು ಸೇವಿಸಿದ ನಂತರ, ನಿಂಬೆ ರಸವನ್ನು ಕುಡಿಯಿರಿ. ಇದು ಹಲ್ಲಿನ ಕ್ಷಯವನ್ನು ತಡೆಯುತ್ತದೆ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ.

(ಗಮನಿಸಿ: ಇಲ್ಲಿ ನೀಡಲಾದ ಮನೆ ಮದ್ದು ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದನ್ನು ಟಿವಿ9 ಕನ್ನಡ ಖಚಿತಪಡಿಸಿಲ್ಲ. ನೀವು ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ, ವೈದ್ಯರ ಸಲಹೆ ಪಡೆಯುವುದು ಅವಶ್ಯಕ)

ಮತ್ತಷ್ಟು ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ