Fatty liver disease: ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯಿಂದ ಮುಖದಲ್ಲಿ ಉಂಟಾಗುವ ಬದಲಾವಣೆ ಯಾವುವು?
ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯು ಅನಾರೋಗ್ಯಕರ ಆಹಾರ ಸೇವನೆ, ಕಳಪೆ ಮಟ್ಟದ ಜೀವನಶೈಲಿಯ ಕಾರಣದಿಂದ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮುಖದಲ್ಲಿ ಕೆಲವೊಂದು ಬದಲಾವಣೆಗಳು ಗೋಚರಿಸಿದಾಗ ಈ ಕಾಯಿಲೆಯ ಮುಂದುವರೆದ ಮಟ್ಟವನ್ನು ತಲುಪಿದೆ ಎಂದು ಅರ್ಥ.
ಪ್ರಸ್ತುತ ದಿನಗಳಲ್ಲಿನ ಒತ್ತಡದ ಜೀವನಶೈಲಿ, ಕಳಪೆಮಟ್ಟದ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣದಿಂದ ಅನೇಕ ಜನರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅದರಲ್ಲಿ ಕೊಬ್ಬಿನ ಯಕೃತ್ತಿನ ಕಾಯಿಲೆಯು ಒಂದು. ಆರಂಭಿಕ ಹಂತದಲ್ಲಿ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ (Fatty liver diseas) ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಮಾರಣಾಂತಿಕ ಕಾಯಿಲೆಯನ್ನು ಪತ್ತೆಹಚ್ಚಲು ಕಷ್ಟಕರವಾಗುತ್ತದೆ. ಕಾಲಾನಂತರದಲ್ಲಿ ಈ ರೋಗವು ಉಲ್ಬಣಗೊಂಡಂತೆ ಮುಖದಲ್ಲಿ ಕೆಲವೊಂದು ಬದಲಾವಣೆಗಳು ಗೋಚರಿಸುತ್ತದೆ. ಚರ್ಮದಲ್ಲಿ ಊತ, ಚರ್ಮದ ಬಣ್ಣ ಬದಲಾವಣೆ, ತುರಿಕೆ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಕಾರಣದಿಂದ ಉಂಟಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ ಆಲ್ಕೋಹಾಲ್‌ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಅತ್ಯಂತ ಸಾಮಾನ್ಯವಾದ ದೀರ್ಘಕಾಲದ ಪಿತ್ತಜನಕಾಂಗದ ಕಾಯಿಲೆಗಳಲ್ಲಿ ಒಂದಾಗಿದೆ. ಇದಕ್ಕಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ, ಇದು ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು. ನಂತರ ಇದು ಸಿರೋಸಿಸ್‌ಗೆ ಕಾರಣವಾಗುತ್ತದೆ.
ನಿಮ್ಮ ಪಿತ್ತಜನಕಾಂಗದಲ್ಲಿ ಹೆಚ್ಚಿನ ಮಟ್ಟದ ಕೊಬ್ಬನ್ನು ಹೊಂದಿರುವುದು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ. ಆಲ್ಕೋಹಾಲ್‌ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯಿಂದ ಮುಖದ ಮೇಲೆ ಕಾಣಿಸಿಕೊಳ್ಳುವ ಬದಲಾವಣೆಗಳು.
ವೈದ್ಯರು ಸಾಮಾನ್ಯವಾಗಿ ಹೆಚ್ಚಿನ ಕೊಬ್ಬು ಮತ್ತು ಕ್ಯಾಲೋರಿಯುಕ್ತ ಆಹಾರಗಳು ಈ ರೋಗವನ್ನು ಉಂಟು ಮಾಡುತ್ತದೆ ಎಂದು ಹೇಳುತ್ತಾರೆ. ಇದು ಉರಿಯೂತವನ್ನು ಉಂಟುಮಾಡುವುದರ ಜೊತೆಗೆ ಆರೋಗ್ಯಕರ ಯಕೃತ್ತಿನ ಜೀವಕೋಶಗಳಿಗೆ ಹಾನಿಯನ್ನುಂಟುಮಾಡುತ್ತದೆ.
ಇದನ್ನೂ ಓದಿ: Fatty Liver Disease: ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಹೋಗಲಾಡಿಸಲು 5 ಆಹಾರ ಮತ್ತು ಜೀವನಶೈಲಿ ಸಲಹೆ
ಮುಖ ಊದಿಕೊಳ್ಳುವುದು: ಕಣ್ಣುಗಳ ಊತ ಮತ್ತು ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುವುದು, ಕಣ್ಣುಗಳು ಹಳದಿಯಾಗುವುದು ಇವೆಲ್ಲವೂ ಕೊಬ್ಬಿನ ಪಿತ್ತಜನಕಾಂಗದ ಕೆಲವು ಲಕ್ಷಣಗಳಾಗಿವೆ. ರೋಗವು ಮುಂದುವರೆದಂತೆ, ಇದು ಪ್ರೋಟೀನ್‌ಗಳನ್ನು ತಯಾರಿಸುವ ಯಕೃತ್ತಿನ ಸಾಮಾರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ರಕ್ತದ ಹರಿವನ್ನು ದುರ್ಬಲಗೊಳಿಸುತ್ತದೆ. ಪರಿಣಾಮವಾಗಿ ಮುಖವು ಊದಿಕೊಂಡಂತೆ ಆಗುತ್ತದೆ.
ಮೊಡವೆ: ಹಾರ್ವೋನ್ ಬದಲಾವಣೆಯಿಂದ ಹದಿಹರೆಯದವರಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಇದ್ದರೂ ಕೂಡಾ ಹೆಚ್ಚಾಗಿ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಎನ್‌ಹೆಚ್‌ಎಸ್ ಪ್ರಕಾರ ಪ್ರಪಂಚದಾದ್ಯಂತ 25% ವಯಸ್ಕರು ಕಳಪೆ ಆಹಾರ ಮತ್ತು ಕಳಪೆ ಮಟ್ಟದ ಜೀವನಶೈಲಿಯ ಕಾರಣದಿಂದ ಆಲ್ಕೋಹಾಲ್‌ಯುಕ್ತವಲ್ಲದ ಕೊಬ್ಬಿನ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದಾರೆ.
ರೋಸೇಸಿಯಾ: ರೋಸೇಸಿಯಾ ಒಂದು ಸಾಮಾನ್ಯ ಚರ್ಮದ ಸ್ಥಿತಿಯಾಗಿದ್ದು, ಅದು ನಿಮ್ಮ ಚರ್ಮವನ್ನು ಕೆಂಪಾಗಿಸುತ್ತದೆ. ಇದು ನಿಮ್ಮ ಮುಖದ ಮೇಲೆ ಸಣ್ಣ ಕೆಂಪುರಕ್ತನಾಳಗಳು ಅಥವಾ ಬಿಳಿ ಉಬ್ಬುಗಳನ್ನು ಉಂಟುಮಾಡುತ್ತದೆ.
ಬಾಯಿಯ ಸುತ್ತ ದದ್ದುಗಳು ಮತ್ತು ಉಬ್ಬುವುದು: ನೀವು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯನ್ನು ಹೊಂದಿದ್ದರೆ, ನಿಮ್ಮ ದೇಹವು ಸತುವಿನಂತಹ ಕೆಲವು ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಪೋಷಕಾಂಶದ ಕೊರತೆಗೆ ಕಾರಣವಾಗುತ್ತದೆ. ಈ ಕೊರತೆಯು ಡರ್ಮಟೈಟಿಸ್‌ಗೆ ಕಾರಣವಾಗಬಹುದು. ಈ ಸ್ಥಿತಿಯು ಸಾಮಾನ್ಯವಾಗಿ ಬಾಯಿಯ ಸುತ್ತಲೂ ದದ್ದುಗಳು ಮತ್ತು ಉಬ್ಬುವಿಕೆ ಉಂಟಾಗಲು ಕಾರಣವಾಗುತ್ತದೆ.
ತುರಿಕೆ: ಮುಖದ ಮೇಲಿನ ತುರಿಕೆಯು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಸಾಮಾನ್ಯ ಚಿಹ್ನೆಗಳಲ್ಲಿ ಒಂದಾಗಿದೆ. ವೈದ್ಯರ ಪ್ರಕಾರ ಆಲ್ಕೋಹಾಲ್‌ರಹಿತ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿದ್ದರೆ, ಚರ್ಮದ ಅಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಿತ್ತರಸ ಉಪ್ಪು ಸಂಗ್ರಹಗೊಳ್ಳಬಹುದು. ಇದು ತುರಿಕೆಗೆ ಕಾರಣವಾಗುತ್ತದೆ.
ಕಾಮಾಲೆ: ಮುಖದ ಮೇಲೆ ಆಲ್ಕೋಹಾಲ್‌ಯುಕ್ತವಲ್ಲದ ಯಕೃತ್ತಿನ ಕಾಯಿಲೆಯನ್ನು ಅತ್ಯಂತ ಸುಲಭವಾಗಿ ಗುರುತಿಸಬಹುದಾದ ಲಕ್ಷಣಗಳಲ್ಲಿ ಕಾಮಾಲೆಯು ಒಂದಾಗಿದೆ. ವೈದ್ಯರ ಪ್ರಕಾರ ಯಕೃತ್ತಿನ ಕಾಯಿಲೆಗಳು ಮುಂದುವರೆದ ಮಟ್ಟವನ್ನು ತಲುಪಿದಾಗ ಇದು ಸಂಭವಿಸುತ್ತದೆ. ಇದು ನಿಮ್ಮ ಚರ್ಮ ಮತ್ತು ನಿಮ್ಮ ಕಣ್ಣುಗಳ ಬಿಳಿಭಾಗವನ್ನು ಹಳದಿಯಾಗಿ ಕಾಣುವಂತೆ ಮಾಡುತ್ತದೆ.
Published On - 1:24 pm, Tue, 28 March 23