Sleeping Pattern: ಈ ಭಾಗಕ್ಕೆ ತಿರುಗಿ ಮಲಗಿದರೆ ಹೊಟ್ಟೆ ಮತ್ತು ಹೃದಯದ ಸಮಸ್ಯೆಗಳು ಹೆಚ್ಚಾಗುತ್ತವೆ

ನಿದ್ರೆಯ ಮೇಲೂ ಆರೋಗ್ಯ ಅವಲಂಬಿತವಾಗಿರುತ್ತದೆ. ನೀವು ಉತ್ತಮ ನಿದ್ರೆ ಹೊಂದಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಅದೇ ರೀತಿ ರಾತ್ರಿಯಲ್ಲಿ ಮಲಗುವ ಭಂಗಿಯು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಬಗ್ಗೆ ಮಾಹಿತಿ ಇಲ್ಲಿದೆ.

Sleeping Pattern: ಈ ಭಾಗಕ್ಕೆ ತಿರುಗಿ ಮಲಗಿದರೆ ಹೊಟ್ಟೆ ಮತ್ತು ಹೃದಯದ ಸಮಸ್ಯೆಗಳು ಹೆಚ್ಚಾಗುತ್ತವೆ
ಮಲಗುವ ಭಂಗಿ
Follow us
Rakesh Nayak Manchi
|

Updated on: Mar 28, 2023 | 6:43 AM

ಆರೋಗ್ಯವು ನಮ್ಮ ನಿದ್ರೆಯ ಮೇಲೆ ಅವಲಂಬಿತವಾಗಿರುತ್ತದೆ. ನೀವು ಉತ್ತಮ ನಿದ್ರೆ ಹೊಂದಿದ್ದರೆ ಸಂಪೂರ್ಣವಾಗಿ ಆರೋಗ್ಯವಂತರಾಗಿರುತ್ತೀರಿ. ನಿದ್ರೆ ದೇಹವನ್ನು ಉಲ್ಲಾಸಗೊಳಿಸುತ್ತದೆ. ಇದು ನಮ್ಮ ನಿಮ್ಮೆಲ್ಲರ ದಿನವನ್ನು ಉತ್ತಮವಾಗಿಸುತ್ತದೆ. ಅದೇ ರೀತಿ, ರಾತ್ರಿಯಲ್ಲಿ ನಾವು ಮಲಗುವ ಭಂಗಿ (Sleeping Position) ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ನೀವು ಎಡಭಾಗಕ್ಕೆ ತಿರುಗಿ ಮಲಗಿದರೆ ಏನಾಗುತ್ತದೆ? ನಿಮ್ಮ ಬಲ ಭಾಗಕ್ಕೆ ತಿರುಗಿ ಮಲಗಿದರೆ ಏನಾಗುತ್ತದೆ? ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು ಎಂಬುದನ್ನು ತಿಳಿಯೋಣ.

ಜೀರ್ಣಕ್ರಿಯೆ: ನೀವು ಬಲಭಾಗಕ್ಕೆ ತಿರುಗಿ ಹೆಚ್ಚು ಹೊತ್ತು ಮಲಗಿದರೆ ಇಂದೇ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಬಲಬದಿಯ ಬದಲು ಎಡಭಾಗಕ್ಕೆ ತಿರುಗಿ ಮಲಗುವುದು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಎಡ ಭಾಗಕ್ಕೆ ಮಲಗುವುದರಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಎಡಭಾಗದಲ್ಲಿ ಮಲಗಿದಾಗ ಹೊಟ್ಟೆ ಮತ್ತು ಮೇದೋಜ್ಜೀರಕ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ತ್ಯಾಜ್ಯ ವಸ್ತುಗಳು ದೇಹದಿಂದ ಸುಲಭವಾಗಿ ಹೊರಹಾಕಲ್ಪಡುತ್ತವೆ. ಅಲ್ಲದೆ ಆಸಿಡ್ ರಿಫ್ಲಕ್ಸ್ ಮತ್ತು ಎದೆಯುರಿ ಸಮಸ್ಯೆಯನ್ನು ಸಹ ನಿವಾರಿಸುತ್ತದೆ.

ಹೃದಯ ಆರೋಗ್ಯ: ಎಡ ಭಾಗಕ್ಕೆ ಮಲಗುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಿಮ್ಮ ಹೃದಯದ ಮೇಲೆ ಯಾವುದೇ ಒತ್ತಡವನ್ನು ಉಂಟುಮಾಡುವುದಿಲ್ಲ. ಈ ಭಂಗಿಯಲ್ಲಿ ಮಲಗುವುದರಿಂದ ರಕ್ತವು ಹೃದಯಕ್ಕೆ ಸರಿಯಾಗಿ ಚಲನೆಯಾಗುತ್ತದೆ. ಹೃದಯವು ದೇಹದ ಎಡಭಾಗದಲ್ಲಿದೆ. ಆದ್ದರಿಂದ ಎಡಭಾಗಕ್ಕೆ ಮಲಗುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.

ಇದನ್ನೂ ಓದಿ: Brinjal Side Effects: ಈ 5 ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬದನೆಕಾಯಿಯಿಂದ ದೂರವಿರಿ

ಆಮ್ಲಜನಕ ಮತ್ತು ರಕ್ತದ ಹರಿವು: ಎಡಭಾಗಕ್ಕೆ ತಿರುಗಿ ಮಲಗುವುದರಿಂದ ದೇಹದ ವಿವಿಧ ಅಂಗಗಳು ಮತ್ತು ಮೆದುಳಿಗೆ ಸರಿಯಾದ ರಕ್ತ ಮತ್ತು ಆಮ್ಲಜನಕದ ಪೂರೈಕೆ ಆಗುತ್ತದೆ. ಆರೋಗ್ಯಕರ ಹೃದಯವು ದೇಹದ ಎಲ್ಲಾ ಅಂಗಗಳನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಬೆನ್ನು ನೋವಿಗೆ ಪರಿಹಾರ: ಬೆನ್ನು ನೋವಿನಿಂದ ಬಳಲುತ್ತಿದ್ದರೆ ಎಡ ಭಾಗಕ್ಕೆ ತಿರುಗಿ ಮಲಗುವುದರಿಂದ ನೋವನ್ನು ನಿವಾರಿಸಬಹುದು. ಏಕೆಂದರೆ ಈ ಸ್ಥಾನದಲ್ಲಿ ಬೆನ್ನುಹುರಿ ಬೆಂಬಲಿತವಾಗಿದೆ. ಈ ಕಾರಣದಿಂದಾಗಿ ಬೆನ್ನಿನ ಮೇಲೆ ಕಡಿಮೆ ಹೊರೆ ಇರುತ್ತದೆ.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ಇದನ್ನು ಟಿವಿ9 ಕನ್ನಡ ಖಚಿತಪಡಿಸಿಲ್ಲ. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ)

ಆರೋಗ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ