ಒಳ್ಳೆಯ ಆಹಾರ ಸೇವಿಸಿದರೂ ಅಜೀರ್ಣ ಸಮಸ್ಯೆ ಕಾಡುತ್ತಿದೆಯೇ? ಹೀಗೆ ಮಾಡಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 18, 2022 | 7:45 AM

ಕೆಲವೊಮ್ಮೆ ಡಯಟ್ ಪ್ಲಾನ್‌ನಲ್ಲಿ ಉತ್ತಮ ಆಹಾರವನ್ನು ಸೇರಿಸಿದರೂ ಸಹ.. ಜೀರ್ಣಾಂಗ ವ್ಯವಸ್ಥೆಯು ತುಂಬಾ ದುರ್ಬಲವಾಗಿರುತ್ತದೆ.

ಒಳ್ಳೆಯ ಆಹಾರ ಸೇವಿಸಿದರೂ ಅಜೀರ್ಣ ಸಮಸ್ಯೆ ಕಾಡುತ್ತಿದೆಯೇ? ಹೀಗೆ ಮಾಡಿ
Food
Follow us on

ಪ್ರತಿಯೊಬ್ಬರೂ ಆರೋಗ್ಯಕರ ಮತ್ತು ಫಿಟ್ ಆಗಿರಲು ಬಯಸುತ್ತಾರೆ. ಇದಕ್ಕಾಗಿ ಅವರು ಉತ್ತಮ ಆಹಾರ ಸೇವಿಸುತ್ತಾರೆ ಮತ್ತು ವ್ಯಾಯಾಮ ಮಾಡುತ್ತಾರೆ. ಆದರೆ, ಕೆಲವೊಮ್ಮೆ ಡಯಟ್ ಪ್ಲಾನ್‌ನಲ್ಲಿ ಉತ್ತಮ ಆಹಾರವನ್ನು ಸೇರಿಸಿದರೂ ಸಹ.. ಜೀರ್ಣಾಂಗ ವ್ಯವಸ್ಥೆಯು ತುಂಬಾ ದುರ್ಬಲವಾಗಿರುತ್ತದೆ. ದುರ್ಬಲ ಜೀರ್ಣಾಂಗ ವ್ಯವಸ್ಥೆಯಿಂದಾಗಿ, ದೇಹದಲ್ಲಿ ಅನೇಕ ಸಮಸ್ಯೆಗಳು ಪ್ರಾರಂಭವಾಗುತ್ತವೆ.

ಅತಿಸಾರ, ವಾಂತಿ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಜೀರ್ಣಾಂಗ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಯಿಂದಾಗಿ, ವ್ಯಕ್ತಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಲ್ಲಾ ರೀತಿಯಲ್ಲೂ ಸದೃಢವಾಗಿರುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಆಹಾರಕ್ಕೆ ಸೇರಿಸುವ ಪದಾರ್ಥಗಳ ಬಗ್ಗೆ ಜಾಗರೂಕರಾಗಿರಬೇಕು. ಈಗ ತಿನ್ನುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳನ್ನು ನೋಡೋಣ..

ಆಹಾರವನ್ನು ಅಗಿದು ತಿನ್ನಿರಿ
ಉತ್ತಮ ಜೀರ್ಣಕ್ರಿಯೆಯು ಬಾಯಿಯಿಂದ ಪ್ರಾರಂಭವಾಗುತ್ತದೆ. ಯಾವುದೇ ಆಹಾರವನ್ನು ತಿನ್ನಲು, ಅದನ್ನು ಸರಿಯಾಗಿ ಅಗಿಯುವುದು ಮುಖ್ಯ.
ಆಹಾರವನ್ನು ಅಗಿಯುತ್ತಿದ್ದರೆ, ಅದು ಜೀರ್ಣಾಂಗ ವ್ಯವಸ್ಥೆಯ ಕೆಲಸವನ್ನು ಸುಲಭಗೊಳಿಸುತ್ತದೆ. ನಿಧಾನವಾಗಿ ಅಗಿಯುವ ಮೂಲಕ, ನಿಮ್ಮ ದೇಹವು ಅಗತ್ಯವಾದ ಹಾರ್ಮೋನುಗಳನ್ನು ಸ್ರವಿಸಲು ಸಾಕಷ್ಟು ಸಮಯವನ್ನು ಪಡೆಯುತ್ತದೆ.

ಊಟ ಮಾಡುವಾಗ ಮಾತನಾಡಬೇಡಿ
ಅನೇಕರು ಊಟ ಮಾಡುವಾಗ ಮಾತನಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದ್ದರಿಂದ ಈ ಅಭ್ಯಾಸವನ್ನು ಸರಿಪಡಿಸಬೇಕು. ತಿನ್ನುವಾಗ ಮಾತನಾಡದೆ ಆಹಾರವನ್ನು ಸೇವಿಸಿ. ಊಟ ಮಾಡುವಾಗ ಮಾತನಾಡುವುದರಿಂದ ನಮ್ಮ ಆಹಾರದ ಜೊತೆಗೆ ಹೊಟ್ಟೆಗೆ ಗಾಳಿಯೂ ಹೋಗುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ತಡೆಯುತ್ತದೆ. ಅದಕ್ಕಾಗಿಯೇ ನೀವು ತಿನ್ನುವಾಗ ಎಂದಿಗೂ ಮಾತನಾಡಬಾರದು.

ತಿಂದ ತಕ್ಷಣ ನೀರು ಕುಡಿಯಬೇಡಿ
ತಿಂದ 50 ರಿಂದ 60 ನಿಮಿಷಗಳ ನಂತರ ಮಾತ್ರ ನೀರು ಕುಡಿಯಿರಿ. ಕೆಲವರಿಗೆ ಆಹಾರ ನುಂಗಿದ ತಕ್ಷಣ ನೀರು ಕುಡಿಯುವ ಅಭ್ಯಾಸವಿರುತ್ತದೆ. ಈ ಅಭ್ಯಾಸವನ್ನು ಬಿಟ್ಟುಬಿಡಿ. ಏಕೆಂದರೆ ಈ ಅಭ್ಯಾಸವು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಹಾನಿಕಾರಕವಾಗಿದೆ. ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 7:00 am, Thu, 18 August 22