Sinus: ಉಸಿರಾಟವನ್ನು ಸರಾಗಗೊಳಿಸಿ ‘ಸೈನಸ್’ ಸಮಸ್ಯೆಗೆ ಪರಿಹಾರ ನೀಡುವ ಆಸನಗಳಿವು

ಸಾಕಷ್ಟು ಮಂದಿ ಸೈನಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಸೈನಸ್ ಎಂದರೆ ಮೂಗಿನ ಎರಡು ಬದಿಯಲ್ಲಿ ಗಾಳಿಯಿಂದ ತುಂಬಿರುವ ಸೂಕ್ಷ್ಮ ಜೀವಕೋಶಗಳಿರುವ ಕುಳಿಗಳು.

Sinus: ಉಸಿರಾಟವನ್ನು ಸರಾಗಗೊಳಿಸಿ 'ಸೈನಸ್' ಸಮಸ್ಯೆಗೆ ಪರಿಹಾರ ನೀಡುವ ಆಸನಗಳಿವು
Sinus
Follow us
TV9 Web
| Updated By: ನಯನಾ ರಾಜೀವ್

Updated on: Aug 17, 2022 | 4:23 PM

ಸಾಕಷ್ಟು ಮಂದಿ ಸೈನಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಸೈನಸ್ ಎಂದರೆ ಮೂಗಿನ ಎರಡು ಬದಿಯಲ್ಲಿ ಗಾಳಿಯಿಂದ ತುಂಬಿರುವ ಸೂಕ್ಷ್ಮ ಜೀವಕೋಶಗಳಿರುವ ಕುಳಿಗಳು. ಕೆಲವೊಮ್ಮೆ ಈ ಕುಳಿಗಳು ಅಲರ್ಜಿ, ಶೀತ ಹಾಗೂ ಬ್ಯಾಕ್ಟೀರಿಯಾಗಳಿಂದಾಗಿ ಮುಚ್ಚಿಹೋಗುತ್ತವೆ. ಆಗ ತಲೆನೋವು, ಉಸಿರಾಟದ ಸಮಸ್ಯೆ, ಗೊರಕೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.

ಇದರಲ್ಲಿ ಮುಖ್ಯವಾಗಿ ತಲೆನೋವು ಬಹಳಷ್ಟು ಜನರನ್ನು ಕಾಡುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಸೈನಸ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಿಮಗೆ ತಲೆನೋವು ಪದೇ ಪದೇ ಬರುತ್ತಿದ್ದರೆ, ಮೂಗು ಸ್ರವಿಸುವ ಅನುಭವವಾದರೆ, ಗಂಟಲು ನೋಯುತ್ತಿದ್ದರೆ, ಕೆಮ್ಮು ಮತ್ತು ನಿಮ್ಮ ಕಣ್ಣುಗಳು, ಮೂಗು, ಕೆನ್ನೆ ಅಥವಾ ಹಣೆಯ ಸುತ್ತಲೂ ನೋವು ಅನುಭವಿಸಿದರೆ ನೀವು ಸೈನಸ್ ಅನ್ನು ಹೊಂದಿರಬಹುದು.

ಮಳೆಗಾಲ ಅಥವಾ ಚಳಿಗಾಲದ ಅವಧಿಯಲ್ಲಿ ಸೈನಸ್​ನಿಂದ ಬಳಲುತ್ತಿರುವವರಿಗೆ ಕಷ್ಟಕರವಾಗುತ್ತದೆ. ಇದು ಗಂಭೀರ ಸಂದರ್ಭಗಳಲ್ಲಿ ಮೆದುಳಿನ ಜ್ವರಕ್ಕೆ ಕಾರಣವಾಗಬಹುದು

ಸೈನಸ್ ಲಕ್ಷಣಗಳು ಸೈನಸ್ಸಿನ ಲಕ್ಷಣಗಳು ಸಾಮಾನ್ಯವಾಗಿ ನೆಗಡಿಯಾದಾಗ ಕಂಡುಬರುವ ಲಕ್ಷಣಗಳಂತೆಯೇ ಇರುತ್ತವೆ. ವಾಸನೆ ಸರಿಯಾಗಿ ಗೊತ್ತಾಗದೇ ಇರುವುದು, ಆಯಾಸ, ಕೆಮ್ಮು, ಆಯಾಸ, ತಲೆನೋವು ಮತ್ತು ಕೆಲವೊಮ್ಮೆ ಜ್ವರ ಕಾಣಿಸಿಕೊಳ್ಳುತ್ತದೆ. ಸೈನಸ್ ಹಾಗೆ ಬಂದು ಹೀಗೆ ಹೋಗುವ ತಲೆನೋವಲ್ಲ. ಎರಡು ಮೂರು ದಿನ ತಲೆ ಎತ್ತಲು ಸಾಧ್ಯವಾಗದಷ್ಟು ನೋವು, ತಲೆಭಾರದಿಂದ ಏನೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಮಲಗಿ ನಿದ್ದೆ ಮಾಡಲು ಆಗುವುದಿಲ್ಲ. ಎದ್ದು ಓಡಾಡಲು ಆಗದಂತಹ ಸಂಕಟ ಇರುತ್ತದೆ. ತಲೆನೋವಿನಿಂದಾಗಿ ಹಣೆಯ ಭಾಗ, ಕಣ್ಣಿನ ಕೆಳಭಾಗ ಹಾಗೂ ಕಣ್ಣಿನ ಸುತ್ತ ನೋವು ಇರುತ್ತದೆ. ಮುಖ ಹಾಗೂ ಹಣೆಯ ಭಾಗದಲ್ಲಿ ಸಿಡಿತವನ್ನು ಉಂಟುಮಾಡುತ್ತದೆ.

ಸೈನಸ್ ಬಂದಾಗ ನಿರ್ವಹಣೆ ಹೇಗೆ? ಸೈನಸ್ ಬಂದಾಗ ಹೆಚ್ಚಿನವರು ಮಾತ್ರೆಯ ತೆಗೆದುಕೊಳ್ಳುತ್ತಾರೆ, ಆದರೆ ಮಾತ್ರೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ, ಮಾತ್ರೆ ತೆಗೆದುಕೊಳ್ಳುವುದರಿಂದ ಆ ಕ್ಷಣಕ್ಕೆ ನೋವು ಕಡಿಮೆಯಾಗುವುದು ಹಾಗೂ ಸ್ವಲ್ಪ ದಿನ ಬಿಟ್ಟು ಮತ್ತೆ ಕಾಡಲಾರಂಭಿಸುವುದು.

ಸೈನಸ್ ಆರೋಗ್ಯ ಸಮಸ್ಯೆ ಇರುವವರು ಹೆಚ್ಚು ನೀರು, ಸಕ್ಕರೆ ಹಾಕದ ಪಾನೀಯಗಳು ಹಾಗೂ ಬೆಚ್ಚಗಿನ ಪಾನೀಯಗಳನ್ನು ಆಗಾಗ ಸೇವಿಸುತ್ತಲೇ ಇರಬೇಕು. ಹೀಗೆ ದೇಹವನ್ನು ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ದೇಹದಲ್ಲಿ ನೀರಿನಂಶ ಹೆಚ್ಚಾಗಿದ್ದರೆ ಕಿರಿಕಿರಿ ಉಂಟುಮಾಡುವ ಸೈನಸ್ಗೆತ ಪರಿಹಾರವನ್ನು ನೀಡುವುದು. ದೇಹವನ್ನು ನಿರ್ಜಲೀಕರಣ ಮಾಡುವ ಆಲ್ಕೋಹಾಲ್, ಕೆಫೀನ್ ಮತ್ತು ಧೂಮಪಾನಗಳನ್ನು ಆದಷ್ಟು ಬಿಡಬೇಕು.

ಸೈನಸ್ ಕಡಿಮೆ ಮಾಡುವ ಯೋಗಗಳಿವು

1. ವಜ್ರಾಸನ ನಿಮ್ಮ ಚಾಪೆಯ ಮೇಲೆ ನಿಧಾನವಾಗಿ ಮಂಡಿಯೂರಿ ನಿಮ್ಮ ಹಿಮ್ಮಡಿಗಳನ್ನು ಒಂದಕ್ಕೊಂದು ಹತ್ತಿರ ಇರಿಸಿ ನಿಮ್ಮ ಕಾಲ್ಬೆರಳುಗಳನ್ನು ಪರಸ್ಪರ ಪಕ್ಕದಲ್ಲಿ ಇರಿಸಿ ನಿಮ್ಮ ಅಂಗೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ ನಿಮ್ಮ ಬೆನ್ನನ್ನು ನೇರಗೊಳಿಸಿ ಮತ್ತು ಮುಂದಕ್ಕೆ ನೋಡಿ ಸ್ವಲ್ಪ ಹೊತ್ತು ಈ ಆಸನದಲ್ಲೇ ಇರಿ.

2. ಹಾಲಾಸನ ವಿಪರೀತ ಕರಣಿ ಮತ್ತು ಸರ್ವಾಂಗಸನದ ಮೇಲೆ ಪ್ರಭುತ್ವ ಸಾಧಿಸಿದ್ದರೆ ಮಾತ್ರ ನೀವು ಹಲಾಸನದ ಅಭ್ಯಾಸ ನಡೆಸಬೇಕು. ಹಲಾಸನವು ಪಶ್ಚಿಮೋತ್ತಾಸನಕ್ಕೆ ಪೂರಕವಾದುದು. ಚಕ್ರಾಸನ ಮತ್ತು ಮತ್ಸ್ಯಾಸನಗಳು ಹಲಾಸನದ ವಿರುದ್ಧ ಭಂಗಿಯ ಆಸನ. ವಿಧಾನ ಹಲಾಸನ ಅಭ್ಯಾಸ ಆರಂಭದ ಅತ್ಯುತ್ತಮ ವಿಧಾನವೆಂದರೆ, ಅರ್ಧ ಹಲಾಸನ ಭಂಗಿಯಿಂದ ಆರಂಭ. ಆದರೆ ನೀವು ನಿಮ್ಮ ಕೈಗಳ ಮೇಲೆ ಯಾವುದೇ ಒತ್ತಡ ಹಾಕಬೇಕಿಲ್ಲ. ನೀವು ನಿಮ್ಮ ಅಂಗೈಗಳನ್ನು ನೆಲಕ್ಕೆ ಊರುವ ವೇಳೆಯೂ ನಿಧಾನಕ್ಕೆ ಉಸಿರುಬಿಡಿ. ಏಕಕಾಲಕ್ಕೆ ನಿಮ್ಮ ಬೆನ್ನು, ಸೊಂಟ ಮತ್ತು ನಿತಂಬವನ್ನು ನೆಲದಿಂದ ಮೇಲಕ್ಕೆತ್ತಿ.

ಅದೇ ವೇಳೆ ನಿಧಾನಕ್ಕೆ, ಆದರೆ ಒಂದೇ ನಡೆಯಲ್ಲಿ ನಿಮ್ಮ ಕಾಲುಗಳನ್ನು ಮೊಣಕಾಲುಗಳನ್ನು ಬಗ್ಗಿಸದೆ ನಿಮ್ಮ ತಲೆಯ ಮೇಲಕ್ಕೆ ತನ್ನಿ. ನೇರವಾದ, ಭಾಗದ ನಿಮ್ಮ ಕಾಲುಗಳನ್ನು ತಲೆಯಿಂದ ಆಚೆಗೆ ಕಾಲ್ಬೆರಳುಗಳು ನೆಲಕ್ಕೆ ಮುಟ್ಟುವಂತೆ ಭಾಗಿಸಿ. ಕಾಲ್ಬೆರಳುಗಳು ನಿಮ್ಮ ತಲೆಯಿಂದ ಆಚೆಗೆ ಹತ್ತಿರದ ಬಿಂದುವಿಗೆ ತಾಕುತ್ತಿರಬೇಕು. ಉಸಿರನ್ನು

ಒಳಗೆಳೆದುಕೊಂಡು ಸಹಜವಾಗಿ ಉಸಿರಾಡಿ. ನಿಧಾನಕ್ಕೆ ಕಾಲ್ಬೆಳುಗಳನ್ನು ಒಟ್ಟಿಗೆ ನೆಲದ ಮೇಲೆ ಇನ್ನು ಜಾರಿಸಿ. ಸಾಧ್ಯವಾದಷ್ಟು ಬೆನ್ನನ್ನು ಸುರುಳಿ ಮಾಡಿ. ನಿಮ್ಮ ಗಲ್ಲವನ್ನು ಎದೆಗೆ ಒತ್ತಿ. ಈಗ ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ಮತ್ತು ಅವುಗಳನ್ನು ನಿಧಾನವಾಗಿ ನಿಮ್ಮ ತಲೆಗಳ ಎರಡೂ ಪಕ್ಕದಲ್ಲಿ ಇರಿಸಿ. ನಿಮ್ಮ ಕೈಬೆಳುಗಳನ್ನು ಪರಸ್ಪರ ಬಂಧಿಸಿ ನಿಮ್ಮ ತಲೆಯು ಅದರಿಂದ ಆವೃತವಾಗುವಂತೆ ಇರಿಸಿ.

ಇಷ್ಟೂ ಹೊತ್ತು ನಿಮ್ಮ ಕಾಲುಗಳು ಜೋಡಿಸಿದಂತೆ ನೆಟ್ಟಗಿರಬೇಕು. ಸಹಜವಾಗಿ ಉಸಿರಾಡುತ್ತಿರಿ. ಆರಂಭದ ಹಂತದಲ್ಲಿ ಕನಿಷ್ಠ ಎರಡು ನಿಮಿಷಗಳ ಕಾಲ ಅಥವಾ ನಿಮಗೆ ಆಹಿತವೆನಿಸುವ ತನಕ ಈ ಭಂಗಿಯಲ್ಲಿರಿ.

3. ಸರ್ವಾಂಗಾಸನ ನಿಮ್ಮ ಬೆನ್ನಿನ ಮೇಲೆ ಮಲಗುವ ಮೂಲಕ ಪ್ರಾರಂಭಿಸಿ. ನಿಮ್ಮ ತೋಳುಗಳನ್ನು ನಿಮ್ಮ ದೇಹದ ಪಕ್ಕದಲ್ಲಿ ಇರಿಸಿ. ನಿಧಾನವಾಗಿ ನಿಮ್ಮ ಕಾಲುಗಳನ್ನು ನೆಲದಿಂದ ಮೇಲಕ್ಕೆತ್ತಿ ಮತ್ತು ನಿಮ್ಮ ಪಾದಗಳನ್ನು ಆಕಾಶಕ್ಕೆ ಎದುರಾಗಿ ನೆಲಕ್ಕೆ ಲಂಬವಾಗಿ ಇರಿಸಿ. ನಿಧಾನವಾಗಿ ನಿಮ್ಮ ಸೊಂಟವನ್ನು ಮೇಲಕ್ಕೆತ್ತಿ ಮತ್ತು ನೆಲದಿಂದ ಹಿಂತಿರುಗಿ.

ನಿಮ್ಮ ಮುಂದೋಳುಗಳನ್ನು ತನ್ನಿ ನೆಲ ಮತ್ತು ಬೆಂಬಲಕ್ಕಾಗಿ ನಿಮ್ಮ ಅಂಗೈಗಳನ್ನು ನಿಮ್ಮ ಬೆನ್ನಿನ ಮೇಲೆ ಇರಿಸಿ. ನಿಮ್ಮ ಭುಜಗಳು, ಮುಂಡ, ಸೊಂಟ, ಕಾಲುಗಳು ಮತ್ತು ಪಾದಗಳ ನಡುವೆ ನೇರ ರೇಖೆಯನ್ನು ಸಾಧಿಸಲು ಪ್ರಯತ್ನಿಸಿ. ನಿಮ್ಮ ಗಲ್ಲವನ್ನು ನಿಮ್ಮ ಎದೆಯಿಂದ ಸ್ಪರ್ಶಿಸಲು ಪ್ರಯತ್ನಿಸಿ ಮತ್ತು ನಿಮ್ಮ ನೋಟವನ್ನು ನಿಮ್ಮ ಪಾದಗಳ ಕಡೆಗೆ ಕೇಂದ್ರೀಕರಿಸಿ

4. ಪಾದಹಸ್ತಾಸನ ಸಮಸ್ಥಿತಿ ಉಸಿರು ಬಿಡುವ ಮೂಲಕ ಪ್ರಾರಂಭಿಸಿ ಮತ್ತು ನಿಮ್ಮ ಮೇಲಿನ ದೇಹವನ್ನು ಸೊಂಟದಿಂದ ಕೆಳಕ್ಕೆ ಬಗ್ಗಿಸಿ ಮತ್ತು ನಿಮ್ಮ ಮೂಗನ್ನು ನಿಮ್ಮ ಮೊಣಕಾಲುಗಳಿಗೆ ಸ್ಪರ್ಶಿಸಿರಿ ಪಾದಗಳ ಎರಡೂ ಬದಿಗಳಲ್ಲಿ ಅಂಗೈಗಳನ್ನು ಇರಿಸಿ, ನೀವು ಅಭ್ಯಾಸದೊಂದಿಗೆ ನಿಮ್ಮ ಮೊಣಕಾಲುಗಳನ್ನು ಸ್ವಲ್ಪ ಬಗ್ಗಿಸಬಹುದು, ನಿಧಾನವಾಗಿ ನಿಮ್ಮ ಮೊಣಕಾಲುಗಳನ್ನು ನೇರಗೊಳಿಸಿ ಮತ್ತು ನಿಮ್ಮ ಎದೆಯನ್ನು ಸ್ಪರ್ಶಿಸಲು ಪ್ರಯತ್ನಿಸಿ.

5. ಶವಾಸನ ಆರಾಮದಾಯಕವಾದ ಮೇಲ್ಮೈಯಲ್ಲಿ ಅಥವಾ ನಿಮ್ಮ ಯೋಗ ಚಾಪೆಯ ಮೇಲೆ ಮಲಗಿಕೊಳ್ಳಿ. ಈ ಭಂಗಿಯನ್ನು ಶಾಂತ ವಾತಾವರಣದಲ್ಲಿ ಮಾಡಲು ಪ್ರಯತ್ನಿಸಿ ಮತ್ತು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ. ನಿಮ್ಮ ಕಣ್ಣುಗಳನ್ನು ಮುಚ್ಚಿ. ನಿಮ್ಮ ಕಾಲುಗಳು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲಿ ಮತ್ತು ಅವುಗಳನ್ನು ಆರಾಮವಾಗಿ ದೂರದಲ್ಲಿ ಇರಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ