Kidney Disease: ರಕ್ತದ ಮಾದರಿ ಮೂಲಕ ಟೈಪ್ 2 ಮಧುಮೇಹಿಗಳಲ್ಲಿ ಮೂತ್ರಪಿಂಡದ ಕಾಯಿಲೆ ಪತ್ತೆ ಮಾಡಬಹುದು: ಅಧ್ಯಯನ

| Updated By: ಅಕ್ಷಯ್​ ಪಲ್ಲಮಜಲು​​

Updated on: May 17, 2023 | 3:24 PM

ಟೈಪ್ 2 ಮಧುಮೇಹ ಹೊಂದಿರುವ ವ್ಯಕ್ತಿಯು ಮೂತ್ರಪಿಂಡದ ಕಾಯಿಲೆಗೆ ಒಳಗಾಗುತ್ತಾನೆಯೇ ಎಂದು ಊಹಿಸಲು ಸಂಶೋಧಕರು ಪರಿಕಲ್ಪನಾ ವಿಧಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

Kidney Disease: ರಕ್ತದ ಮಾದರಿ ಮೂಲಕ ಟೈಪ್ 2 ಮಧುಮೇಹಿಗಳಲ್ಲಿ ಮೂತ್ರಪಿಂಡದ ಕಾಯಿಲೆ ಪತ್ತೆ ಮಾಡಬಹುದು: ಅಧ್ಯಯನ
ಸಾಂದರ್ಭಿಕ ಚಿತ್ರ
Follow us on

ಚೀನೀ ಯುನಿವರ್ಸಿಟಿ ಆಫ್ ಹಾಂಗ್ ಕಾಂಗ್ ಮತ್ತು ಅಮೇರಿಕಾದ ಸ್ಯಾನ್ ಫೋರ್ಡ್ ಬರ್ನ್ಹ್ಯಾಮ್ ಪ್ರಿಬಿಸ್ ನ ಸಂಶೋಧಕರು ಟೈಪ್ 2 ಮಧುಮೇಹ ಹೊಂದಿರುವ ವ್ಯಕ್ತಿಯು ಮೂತ್ರ ಪಿಂಡದ ಕಾಯಿಲೆಗೆ ಒಳಗಾಗುತ್ತಾರೆಯೇ ಎಂದು ಊಹಿಸಲು ಕಂಪ್ಯೂಟೇಶನಲ್ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ನೇಚರ್ ಕಮ್ಯುನಿಕೇಷನ್ಸ್ ನಲ್ಲಿ ಪ್ರಕಟವಾದ ಈ ಅಧ್ಯಯನದ ಫಲಿತಾಂಶವು ಟೈಪ್ 2 ಮಧುಮೇಹ ಹೊಂದಿರು ಜನರಲ್ಲಿ ಮೂತ್ರಪಿಂಡದ ಕಾಯಿಲೆಯನ್ನು ತಡೆಗಟ್ಟಲು ಅಥವಾ ಉತ್ತಮವಾಗಿ ನಿರ್ವಹಿಸಲು ವೈದ್ಯರಿಗೆ ಸಹಾಯ ಮಾಡಲಿದೆ. ಈ ಅಧ್ಯಯನವು ಮುನ್ಸೂಚಕ ರೋಗನಿರ್ಣಯದ ಪ್ರಬಲ ಭವಿಷ್ಯದ ನೋಟವನ್ನು ಒದಗಿಸುತ್ತದೆ ಎಂದು ಸ್ಯಾನ್ ಫೋರ್ಡ್ ಬರ್ನ್ ಹ್ಯಾಮ್ ಪ್ರಿಬಿಸ್ ನ ಬಯೋಇನ್ಫರ್ಮ್ಯಾಟಿಕ್ಸ್ ನ ಪ್ರಾಧ್ಯಪಕ ಮತ್ತು ನಿರ್ದೇಶಕ ಹಾಗೂ ಸಂಶೋಧನೆಯ ಲೇಖಕರಾದ ಕೆವಿನ್ ಯೀಪ್ ಹೇಳಿದ್ದಾರೆ. ಮತ್ತು ಅವರು ಹೇಳಿದರು, ನಮ್ಮ ತಂಡವು ಕ್ಲಿನಿಕಲ್ ಡೇಟಾವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ, ಮೂತ್ರಪಿಂಡದ ಕಾಯಿಲೆಯನ್ನು ತಡೆಗಟ್ಟಲು ಟೈಪ್ 2 ಮಧುಮೇಹದ ಚಿಕಿತ್ಸೆಯನ್ನು ಆಪ್ಟಿಮೈಸ್ ಮಾಡಲು ವೈದ್ಯರಿಗೆ ಸಹಾಯ ಮಾಡಲು ಕಂಪ್ಯೂಟೇಷನಲ್ ಮಾದರಿಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿದೆ ಎಂದು ತೋರಿಸಿದೆ.”

ವಿಶ್ವದಾದ್ಯಂತ ಮೂತ್ರಪಿಂಡ ವೈಫಲ್ಯಕ್ಕೆ ಮಧುಮೇಹವು ಪ್ರಮುಖ ಕಾರಣವಾಗಿದೆ. ಏಷ್ಯಾದಲ್ಲಿ, ಅಂತಿಮ ಹಂತದ ಮೂತ್ರಪಿಂಡದ ಕಾಯಿಲೆ ಮತ್ತು ಡಯಾಲಿಸಿಸ್ ನ ಸುಮಾರು 50% ಪ್ರಕರಣಗಳು ಮಧುಮೇಹದಿಂದ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಸಂಶೋಧಕರು ಅಭಿವೃದ್ಧಿಪಡಿಸಿರುವ ಹೊಸ ಅಲ್ಗಾರಿದಮ್ ಡಿ ಎನ್ ಎ ಮೆತಿಲೀಕರಣ ಎಂಬ ಪ್ರಕ್ರಿಯೆಯ ಮಾಪನಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ನಮ್ಮ ಡಿ ಎನ್ ಎ ಯಲ್ಲಿ ಸೂಕ್ಷ್ಮ ಬದಲಾವಣೆಗಳು ಸಂಗ್ರಹವಾದಾಗ ಸಂಭವಿಸುತ್ತದೆ. ಡಿ ಎನ್ ಎ ಮೆತಿಲೀಕರಣವು ಯಾವ ಜೀನ್ ಗಳನ್ನು ಆನ್ ಮತ್ತು ಆಫ್ ಮಾಡಲಾಗುತ್ತಿದೆ ಎಂಬುದರ ಕುರಿತು ಪ್ರಮುಖ ಮಾಹಿತಿಯನ್ನು ಎನ್ ಕೋಡ್ ಮಾಡಬಹುದು ಮತ್ತು ಅದನ್ನು ರಕ್ತ ಪರೀಕ್ಷೆಗಳ ಮೂಲಕ ಸುಲಭವಾಗಿ ಅಳೆಯಬಹುದು.

ನಮ್ಮ ಕಂಪ್ಯೂಟೇಶನಲ್ ಮಾದರಿಯು ಪ್ರಸ್ತುತ ಮೂತ್ರಪಿಂಡದ ಕಾರ್ಯವನ್ನು ಊಹಿಸಲು ರಕ್ತದ ಮಾದರಿಯಿಂದ ಮೆತಿಲೀಕರಣದ ಗುರುತುಗಳನ್ನು ಬಳಸಬಹುದು ಮತ್ತು ಭವಿಷ್ಯದಲ್ಲಿ ಮೂತ್ರಪಿಂಡಗಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಊಹಿಸಬಹುದು. ಅಂದರೆ ಮೂತ್ರಪಿಂಡದ ಕಾಯಿಲೆಗೆ ರೋಗಿಯ ಅಪಾಯವನ್ನು ಮೌಲ್ಯಮಾಪನ ಮಾಡುವ ಪ್ರಸ್ತುತ ವಿಧಾನಗಳೊಂದಿಗೆ ಇದನ್ನು ಸುಲಭವಾಗಿ ಕಾರ್ಯಗತಗೊಳಿಸಬಹುದು ಎಂದು ಕೆವಿನ್ ಯಿಪ್ ಹೇಳಿದರು.

ಇದನ್ನೂ ಓದಿ:Kidney Cancer: ಕಿಡ್ನಿ ಕ್ಯಾನ್ಸರ್ ಬಗ್ಗೆ 7 ಮಿಥ್ಯೆಗಳು ಯಾವುದು? ಇಲ್ಲಿದೆ ಮಾಹಿತಿ

ಹಾಂಕ್ ಕಾಂಗ್ ಡಯಾಬಿಟಿಸ್ ರಿಜಿಸ್ಟರ್​​​ನಲ್ಲಿ ಟೈಪ್ 2 ಮಧುಮೇಹ ಹೊಂದಿರುವ 1,200 ಕ್ಕೂ ಹೆಚ್ಚು ರೋಗಿಗಳಿಂದ ವಿವರವಾದ ಡೇಟಾವನ್ನು ಪಡೆದುಕೊಂಡು ಸಂಶೋಧಕರು ತಮ್ಮ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ತಮ್ಮ ಮಾದರಿಯನ್ನು ಟೈಪ್ 2 ಡಯಾಬಿಟಿಸ್ ನೊಂದಿಗೆ 326 ಸ್ಥಳೀಯ ಅಮೆರಿಕನ್ನರ ಪ್ರತ್ಯೇಕ ಗುಂಪಿನಲ್ಲಿ ಪರೀಕ್ಷಿಸಿದರು. ಇದು ಅವರ ವಿಧಾನವು ವಿಭಿನ್ನ ಜನಸಂಖ್ಯೆಯಲ್ಲಿ ಮೂತ್ರಪಿಂಡದ ಕಾಯಿಲೆಯನ್ನು ಮುನ್ಸೂಚಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿತು.

ಸಂಶೋಧಕರು ಪ್ರಸ್ತುತ ತಮ್ಮ ಮಾದರಿಯನ್ನು ಇನ್ನಷ್ಟು ಪರಿಷ್ಕರಿಸಲು ಕೆಲಸ ಮಾಡುತ್ತಿದ್ದಾರೆ. ಇತರ ಮಧುಮೇಹ ಸಂಬಂಧಿತ ಫಲಿತಾಂಶಗಳನ್ನು ಊಹಿಸುವ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಇತರ ಡೇಟಾವನ್ನು ಸಂಯೋಜಿಸಲು ಅವರು ತಮ್ಮ ವಿಧಾನದ ಅನ್ವಯವನ್ನು ವಿಸ್ತರಿಸುತ್ತಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: