Kidney Cancer: ಕಿಡ್ನಿ ಕ್ಯಾನ್ಸರ್ ಬಗ್ಗೆ 7 ಮಿಥ್ಯೆಗಳು ಯಾವುದು? ಇಲ್ಲಿದೆ ಮಾಹಿತಿ

ಕ್ಯಾನ್ಸರ್ ಬಗ್ಗೆ ಸಂಬಂಧಿಸಿದ ಅನೇಕ ಮಿಥ್ಯೆಗಳಿವೆ, ಇದು ಪ್ರಪಂಚದಾದ್ಯಂತ ಅನೇಕ ಸಾವುಗಳಿಗೆ ಕಾರಣವಾಗುತ್ತದೆ. ಅವು ಯಾವುವು ಮತ್ತು ಅವುಗಳ ಹಿಂದಿನ ನೈಜ ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ.

Kidney Cancer: ಕಿಡ್ನಿ ಕ್ಯಾನ್ಸರ್ ಬಗ್ಗೆ 7 ಮಿಥ್ಯೆಗಳು ಯಾವುದು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 22, 2023 | 6:29 PM

ಮೂತ್ರಪಿಂಡದ ಕ್ಯಾನ್ಸರ್ (Kidney Cancer) ಪ್ರಪಂಚದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಯಾನ್ಸರ್ಗಳಲ್ಲಿ ಒಂದಾಗಿದೆ, ಪ್ರತಿ ವರ್ಷ 1.5 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಳ್ಳುತ್ತದೆ. ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಒಂದರಲ್ಲೇ ಈ ವರ್ಷ ಅಂದಾಜು 81,800 ಹೊಸ ಪ್ರಕರಣಗಳು ಪತ್ತೆಯಾಗಲಿವೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಈ ರೋಗವು ಮಹಿಳೆಯರಿಗಿಂತ ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುವ ಎಂಟನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. ಚಿಕಿತ್ಸೆ ನೀಡಬಹುದಾಗಿದ್ದ ಅನೇಕ ರೋಗಿಗಳು ಸಾಯಲು ವಿಳಂಬವಾದ ರೋಗನಿರ್ಣಯವು ಒಂದು ಮುಖ್ಯ ಕಾರಣವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಅಲ್ಲದೆ, ಅರಿವಿನ ಕೊರತೆ ಮತ್ತು ರೋಗಕ್ಕೆ ಸಂಬಂಧಿಸಿದ ಮಿಥ್ಯೆಗಳ ಹರಡುವಿಕೆಯು ಮೂತ್ರಪಿಂಡದ ಕ್ಯಾನ್ಸರ್ ಬಗ್ಗೆ ಗೊಂದಲ ಮತ್ತು ತಪ್ಪು ತಿಳುವಳಿಕೆ ಹುಟ್ಟಲು ಕಾರಣವಾಗಿದೆ.

ಮೂತ್ರಪಿಂಡದ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಹೆಚ್ಚಿನ ಜನರು ನಂಬುವ ಕೆಲವು ಮಿಥ್ಯೆಗಳು ಇಲ್ಲಿವೆ:

-ನೀವು ನಿಯಮಿತವಾಗಿ ತಪಾಸಣೆಗೆ ಒಳಗಾಗಬೇಕು ಎನ್ನುವುದು ಮಿಥ್ಯೆ. ಆದರೆ ವಾಸ್ತವದಲ್ಲಿ ಮೂತ್ರಪಿಂಡದ ಕ್ಯಾನ್ಸರ್ ತಪಾಸಣೆಗೆ ಮ್ಯಾಮೊಗ್ರಾಮ್ ಪರೀಕ್ಷೆಗೆ ಸಮನಾದ ಯಾವುದೂ ಇಲ್ಲ ಎಂದು ವೈದ್ಯರು ಹೇಳುತ್ತಾರೆ. ಆನುವಂಶಿಕ ಪರಿಸ್ಥಿತಿಗಳಿಂದಾಗಿ ಹೆಚ್ಚಿನ ಅಪಾಯದಲ್ಲಿರುವವರನ್ನು ಇಮೇಜಿಂಗ್ ಪರೀಕ್ಷೆಗಳ ಮೂಲಕ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

-ಮೂತ್ರದಲ್ಲಿನ ರಕ್ತವು ಮೂತ್ರಪಿಂಡದ ಕ್ಯಾನ್ಸರ್ನ ಸೂಚಕವಾಗಿದೆ ಎಂಬುದು ಮಿಥ್ಯ. ಮೂತ್ರನಾಳದ ಸೋಂಕು ಇತರ ಮೂತ್ರದ ಸಮಸ್ಯೆಗಳ ಸಂಕೇತವೂ ಆಗಿರಬಹುದು ಎಂಬುದು ಸತ್ಯ.

-ಮೂತ್ರಪಿಂಡದ ಕ್ಯಾನ್ಸರ್ ಅಪರೂಪ ಎಂಬುದು ಮಿಥ್ಯೆ. ಆರೋಗ್ಯ ತಜ್ಞರ ಪ್ರಕಾರ, ಇಂದು ಯಾವುದೇ ಕ್ಯಾನ್ಸರ್ ಅಪರೂಪವಲ್ಲ. ಮೂತ್ರಪಿಂಡದ ಕ್ಯಾನ್ಸರ್ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಕೊಲ್ಲುತ್ತದೆ ಎಂಬುದು ವಾಸ್ತವ.

-ಧೂಮಪಾನದಿಂದಾಗಿ ಮೂತ್ರಪಿಂಡದ ಕ್ಯಾನ್ಸರ್ ಸಂಭವಿಸುವುದಿಲ್ಲಎಂಬುದು ಸುಳ್ಳು. ಧೂಮಪಾನವು ಮೂತ್ರಪಿಂಡದ ಕ್ಯಾನ್ಸರ್ಗೆ ದೊಡ್ಡ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ ಎಂದು ವೈದ್ಯರು ಹೇಳುತ್ತಾರೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಧೂಮಪಾನವು ಮೂತ್ರಪಿಂಡದ ಕೋಶ ಕಾರ್ಸಿನೋಮಾದ ಅಪಾಯವನ್ನು ಹೆಚ್ಚಿಸುತ್ತದೆ, ಇದು ಕ್ಯಾನ್ಸರ್ನ ಸಾಮಾನ್ಯ ರೂಪಗಳಲ್ಲಿ ಒಂದಾಗಿದೆ.

-ಮೂತ್ರಪಿಂಡದ ಕ್ಯಾನ್ಸರ್ ಆನುವಂಶಿಕವಲ್ಲ ಎನ್ನುವುದು ಸುಳ್ಳು. ತಮ್ಮ ಕುಟುಂಬದಲ್ಲಿ ಯಾರಿಗೂ ಮೂತ್ರಪಿಂಡದ ಕ್ಯಾನ್ಸರ್ ಇಲ್ಲದಿರುವುದರಿಂದ ಅಪಾಯದ ಅಂಶಗಳನ್ನು ನಿರ್ಲಕ್ಷಿಸಬಹುದು ಎಂದು ಅನೇಕ ಜನರು ಭಾವಿಸುತ್ತಾರೆ. ಆದಾಗ್ಯೂ, ಅಂಕಿಅಂಶಗಳ ಪ್ರಕಾರ, ಮೂತ್ರಪಿಂಡದ ಕ್ಯಾನ್ಸರ್ ಪ್ರಕರಣಗಳಲ್ಲಿ 2-3 ಪ್ರತಿಶತದಷ್ಟು ಆನುವಂಶಿಕವಾಗಿವೆ.

ಇದನ್ನೂ ಓದಿ:Kidney Cancer: ಕಿಡ್ನಿ ಕ್ಯಾನ್ಸರ್​ನ ಈ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಬಳಿ ಹೋಗಿ

– ಮೂತ್ರಪಿಂಡದ ಕ್ಯಾನ್ಸರ್ಗೆ ಶಸ್ತ್ರಚಿಕಿತ್ಸೆಯು ಮೂತ್ರಪಿಂಡದ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದು ಶುದ್ಧ ಸುಳ್ಳು. ಯಾವುದೇ ಕ್ಯಾನ್ಸರ್ ಅನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿದರೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು ಎಂದು ವೈದ್ಯರು ಹೇಳುತ್ತಾರೆ. ಶಸ್ತ್ರಚಿಕಿತ್ಸೆಯು ಗೆಡ್ಡೆಯನ್ನು ತೆಗೆದುಹಾಕುತ್ತದೆಯೇ ವಿನಃ ಇಡೀ ಮೂತ್ರಪಿಂಡವನಲ್ಲ.

-ಮೂತ್ರಪಿಂಡದ ಕ್ಯಾನ್ಸರ್ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತದೆ ಎಂಬುವುದು ಕೂಡಾ ಸುಳ್ಳು. ಸತ್ಯವೇನೆಂದರೆ ಅಧ್ಯಯನಗಳ ಪ್ರಕಾರ, ಪುರುಷರು ಮಹಿಳೆಯರಿಗಿಂತ ಹೆಚ್ಚಾಗಿ ಮೂತ್ರಪಿಂಡದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಹಾಗಾಗಿ ಇಬ್ಬರಲ್ಲಿಯೂ ಕಂಡುಬರಬಹುದು.

ಮೂತ್ರಪಿಂಡದ ಕ್ಯಾನ್ಸರ್​ನಲ್ಲಿ ಏನಾಗುತ್ತದೆ?

ಮೂತ್ರಪಿಂಡಗಳು ಮುಷ್ಟಿ ಗಾತ್ರದ ಅಂಗಗಳಾಗಿವೆ. ಮೂತ್ರಪಿಂಡದ ಕ್ಯಾನ್ಸರ್ ಒಂದು ಅಥವಾ ಎರಡೂ ಮೂತ್ರಪಿಂಡಗಳಲ್ಲಿನ ಆರೋಗ್ಯಕರ ಜೀವಕೋಶಗಳು ಅಸಹಜವಾಗಿ ಬೆಳೆದು ಅಂತಿಮವಾಗಿ ಕ್ಯಾನ್ಸರ್ ಗೆಡ್ಡೆ ಅಥವಾ ಉಂಡೆಯನ್ನು ರೂಪಿಸಿದಾಗ ಮೂತ್ರಪಿಂಡದ ಕ್ಯಾನ್ಸರ್ ಸಂಭವಿಸುತ್ತದೆ. ಕಿರಿಯ ವಯಸ್ಸಿನವರಲ್ಲಿ ಮೂತ್ರಪಿಂಡದ ಕ್ಯಾನ್ಸರ್ ಅಪರೂಪ. ಮೂತ್ರಪಿಂಡ ಕೋಶ ಕಾರ್ಸಿನೋಮವು ವಯಸ್ಕ ಮೂತ್ರಪಿಂಡದ ಕ್ಯಾನ್ಸರ್ ನ ಅತ್ಯಂತ ಸಾಮಾನ್ಯ ವಿಧವಾಗಿದೆ ಎಂದು ಗಮನಿಸಲಾಗಿದೆ. ಆದಾಗ್ಯೂ, ಪ್ರತಿಯೊಂದು ಗೆಡ್ಡೆಯೂ ಕ್ಯಾನ್ಸರ್ ಅಲ್ಲ ಮತ್ತು ಆದರೆ ಕೆಲವು ಹಾನಿಕಾರಕವೂ ಆಗಿರಬಹುದು. ಮೂತ್ರಪಿಂಡಗಳು ಮೂತ್ರದ ರೂಪದಲ್ಲಿ ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕುವ ಮೂಲಕ ರಕ್ತವನ್ನು ಫಿಲ್ಟರ್ ಮಾಡಲು ಸಹಾಯ ಮಾಡುತ್ತದೆ. ಗೆಡ್ಡೆಯ ಸಂದರ್ಭದಲ್ಲಿ, ಈ ಕಾರ್ಯಕ್ಷಮತೆಯು ತೊಂದರೆಗೊಳಗಾಗುತ್ತದೆ ಮತ್ತು ಗೆಡ್ಡೆ ಹರಡಬಹುದು, ಆದ್ದರಿಂದ ರೋಗಿಗೆ ವೃತ್ತಿಪರ ಆರೈಕೆಯ ಅಗತ್ಯವಿರುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Sat, 22 April 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ