ಕೊರೊನಾ ಸೋಂಕು ಜನರನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಕೊವಿಡ್-19 ವೈರಾಣುವಿನ ಹರಡುವಿಕೆಯ ಎರಡನೇ ಅಲೆ ಭಾರತದೆಲ್ಲೆಡೆ ತಲ್ಲಣವನ್ನು ಉಂಟುಮಾಡಿದೆ. ವೈದ್ಯಕೀಯ ಕ್ಷೇತ್ರದಿಂದ ಹಿಡಿದು ಸಾಮಾನ್ಯರ ಜನಜೀವನಕ್ಕೂ ಸವಾಲು ಹಾಕಿದೆ. ಎರಡನೇ ಅಲೆ ವೇಗವಾಗಿ ಹರಡಿ ಬಹಳಷ್ಟು ಸಾವು ನೋವು ಸಂಭವಿಸಿದೆ. ಕೊರೊನಾ ಸೋಂಕು ಚಿಕಿತ್ಸೆಗೆ ಈಗ ಸ್ಟಿರಾಯ್ಡ್ನ್ನು ಔಷಧಿಯಾಗಿ ನೀಡಲಾಗುತ್ತಿದೆ. ಆದರೆ, ಸಮಸ್ಯೆ ಎಂಬಂತೆ ಸ್ಟಿರಾಯ್ಡ್ ಪಡೆದುಕೊಂಡ ಸೋಂಕಿತರ ಶುಗರ್ ಲೆವೆಲ್ ಏರಿಕೆಯಾಗುತ್ತಿದೆ. ಕೊರೊನಾದಿಂದ ಗುಣಮುಖರಾಗಿದ್ದರೂ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತಿದೆ. ವೈದ್ಯರ ಪ್ರಕಾರ ರೆಮ್ಡಿಸಿವಿರ್ ಔಷಧ ಬಳಕೆ ಮಾಡುವ ಕೊರೊನಾ ಸೋಂಕಿತರಲ್ಲಿ ಕೂಡ ಸಕ್ಕರೆ ಪ್ರಮಾಣ ಏರಿಕೆಯಾಗಿರುವುದು ಕಂಡುಬಂದಿದೆ.
ಕೊರೊನಾ ಸೋಂಕು ಪ್ರಮಾಣ ಅಧಿಕವಾಗಿರುವ ಜನರಿಗೆ ರೆಮ್ಡಿಸಿವಿರ್ ಹಾಗೂ ಸ್ಟಿರಾಯ್ಡ್ ಔಷಧಗಳನ್ನು ನೀಡಲಾಗುತ್ತಿತ್ತು. ಇದೀಗ ಕೊರೊನಾ ಚಿಕಿತ್ಸೆಯ ಮಾರ್ಗಸೂಚಿಯಿಂದ ರೆಮ್ಡಿಸಿವಿರ್ ಔಷಧವನ್ನು ಕೈಬಿಡಲಾಗಿದೆ ಆದರೆ ಸ್ಟಿರಾಯ್ಡ್ ಔಷಧವನ್ನು ನೀಡಲಾಗುತ್ತಿದೆ. ಈ ಔಷಧಗಳು ಕೊರೊನಾ ಸೋಂಕಿತರನ್ನು ಕಾಪಾಡಬಲ್ಲದು ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ, ಇದೆಲ್ಲಾ ಚಿಕಿತ್ಸೆಯ ಒಂದು ಭಾಗವಾಗಿದೆ. ಮತ್ತೊಂದು ಭಾಗದಲ್ಲಿ ಈ ಔಷಧಗಳಿಂದ ಅಡ್ಡಪರಿಣಾಮಗಳು ಇರುವುದು ಕೂಡ ಕಂಡುಬಂದಿದೆ. ಶುಗರ್ ಲೆವೆಲ್ನಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ.
ಹೀಗಾಗಿ ಕೊರೊನಾ ಸೋಂಕು ಗುಣವಾದ ಬಳಿಕ, ಜನರು ಸಕ್ಕರೆ ಖಾಯಿಲೆಗೆ ತುತ್ತಾಗಿರುವುದು ಕಂಡುಬಂದಿದೆ. ಕೆಲವರಲ್ಲಿ ನಿಯಂತ್ರಣದಲ್ಲಿ ಇಲ್ಲದಷ್ಟು ಸಕ್ಕರೆ ಪ್ರಮಾಣ ಏರಿರುವುದು ಕೂಡ ಆಗಿದೆ. ಹಾಗಾಗಿ ಕೊರೊನಾ ಚಿಕಿತ್ಸೆಯಲ್ಲಿ ರೆಮ್ಡಿಸಿವಿರ್ ಬಳಸುವ ಬಗ್ಗೆ ವೈದ್ಯರು ಎಚ್ಚರಿಕೆ ಹೇಳುತ್ತಿದ್ದರು. ಸ್ಟಿರಾಯ್ಡ್ ಬಳಕೆ ಬಗ್ಗೆಯೂ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಅದರಂತೆ ಸೋಂಕು ಅಧಿಕ ಪ್ರಮಾಣದಲ್ಲಿ ಇರುವ ವ್ಯಕ್ತಿಗಳಿಗೆ ಮಾತ್ರ ಸ್ಟಿರಾಯ್ಡ್ ಔಷಧ ನೀಡಲಾಗುತ್ತಿದೆ.
ಆದರೆ, ಕೆಲವು ವೈದ್ಯರ ಅಭಿಪ್ರಾಯದಂತೆ ಸ್ಟಿರಾಯ್ಡ್ ಅಥವಾ ರೆಮ್ಡಿಸಿವಿರ್ ಔಷಧ ಪಡೆದುಕೊಂಡಾಗ ದೇಹದ ಸಕ್ಕರೆ ಪ್ರಮಾಣ ಅಧಿಕವಾಗಿರುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ: Steroids in Covid: ಸ್ಟಿರಾಯ್ಡ್ ಎಂದರೇನು? ಕೊರೊನಾ ಸೋಂಕು ಚಿಕಿತ್ಸೆಯಲ್ಲಿ ಈ ಔಷಧವನ್ನು ಹೇಗೆ ಬಳಸಲಾಗುತ್ತದೆ?
ಹೋಮ್ ಕ್ವಾರೆಂಟೈನ್ ಆಗಿರುವ ಕೊರೊನಾ ಸೋಂಕಿತರು ಗಮನಿಸಿ: ಬೇಗ ಗುಣವಾಗಲು ಆಯುಷ್-64 ಔಷಧ ಸಹಕಾರಿ; ವಿವರ ಇಲ್ಲಿದೆ
Published On - 10:53 pm, Fri, 21 May 21