ಮೊಣಕಾಲುಗಳ ಕೀಲು ಮೂಳೆ ಕಳೆದುಕೊಂಡು ನಡೆಯಲು ಸಾಧ್ಯವಾಗದೇ ಇದ್ದ ದೆಹಲಿಯ ಕಾಲೇಜು ವಿದ್ಯಾರ್ಥಿ ಈಗ ಮತ್ತೆ ನಡೆಯುವಂತಾಗಿದೆ. ಹೌದು, ಏಮ್ಸ್ ವೈದ್ಯರು ಈ ವಿದ್ಯಾರ್ಥಿಗೆ ಮೊಣಕಾಲು ಶಸ್ತ್ರ ಚಿಕಿತ್ಸೆ ಮಾಡಿ ಮೊಣಕಾಲಿನ ಕೀಲು ಮೂಳೆಯನ್ನು ತೆಗೆದು ಅದಕ್ಕೆ ಮೂಳೆ ದಾನಿಯ ಮೂಳೆಯನ್ನು ಬದಲಾಯಿಸಿದ್ದಾರೆ. ಇದರೊಂದಿಗೆ, ವಿದ್ಯಾರ್ಥಿಯು ಈಗ ಮತ್ತೆ ನಡೆಯಲು ಸಾಧ್ಯವಾಗಿದೆ.
ಎಐಐಎಂಎಸ್‌ನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡ ಹೇಳುವಂತೆ ” ಅಪಘಾತದಲ್ಲಿ ಮೊಣಕಾಲಿನ ಮೂಳೆಗಳು ಮುರಿದು ಮಲಗಿದಲ್ಲೇ ಇದ್ದ ವಿದ್ಯಾರ್ಥಿಗೆ ಏಮ್ಸ್‌ನ ಟ್ರಾಮಾ ಸೆಂಟರ್‌ನಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಮೃತ ದಾನಿಯೊಬ್ಬರು ದಾನ ಮಾಡಿದ ಮೂಳೆಗಳನ್ನು ವಿದ್ಯಾರ್ಥಿಯ ಎಡಗಾಲಿನ ಮೊಣಕಾಲಿನ ಮೂಳೆಯೊಂದಿಗೆ ಬದಲಾಯಿಸಲಾಯಿತು. ಅಸ್ಥಿ ದಾನದಿಂದ ಜನರ ಜೀವ ಉಳಿಸಲು ಸಾಧ್ಯವಾಗದಿದ್ದರೂ, ಖಂಡಿತವಾಗಿಯೂ ಜನರ ಬದುಕನ್ನು ಬದಲಾಯಿಸಲು ಸಾಧ್ಯವಿದೆ” ಎಂದು ಹೇಳುತ್ತಾರೆ.
ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಜನರು ರಸ್ತೆ ಅಪಘಾತದಲ್ಲಿ ಮೂಳೆ ಮುರಿತಕೊಳಗಾಗುತ್ತಿದ್ದಾರೆ. ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಲ್ಲಿ ಶೇಕಡಾ 70 ರಷ್ಟು ಜನರು 20 ರಿಂದ 40 ವರ್ಷ ವಯಸ್ಸಿನವರು. ಅಪಘಾತದ ನಂತರ ಮೂಳೆ ಮುರಿತದಿಂದಾಗಿ ಸಾಮಾನ್ಯವಾಗಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಮೂಳೆ ಬ್ಯಾಂಕ್ ಸಹಾಯದಿಂದ, ಅವರು ಮತ್ತೆ ಸಕ್ರಿಯ ಜೀವನವನ್ನು ನಡೆಸಬಹುದು. ಬೋನ್ ಬ್ಯಾಂಕ್ ನ ವಿಶೇಷತೆ ಎಂದರೆ ಇಲ್ಲಿ ದಾನ ಮಾಡುವ ಮೂಳೆಗಳನ್ನು ಐದು ವರ್ಷಗಳ ಕಾಲ ಸುರಕ್ಷಿತವಾಗಿ ಇಡಬಹುದು.
ಇದನ್ನೂ ಓದಿ: ಬೆಳಿಗ್ಗೆ ಎದ್ದ ತಕ್ಷಣ ದೇಹ ಭಾರವಾದಂತೆ ಅನಿಸಿದರೆ ನಿರ್ಲಕ್ಷ್ಯ ಮಾಡಬೇಡಿ
ದೇಶದಲ್ಲಿ ಅನೇಕ ಬೋನ್ ಬ್ಯಾಂಕ್‌ಗಳು ತೆರೆದಿವೆ, ಆದರೆ ಅರಿವಿನ ಕೊರತೆಯಿಂದ ಜನರು ಇಲ್ಲಿ ಮೂಳೆಗಳನ್ನು ದಾನ ಮಾಡುವುದಿಲ್ಲ. ಅಸ್ಥಿ ದಾನ ಮಾಡಿದರೆ ದಾನಿಯ ದೇಹದ ಸ್ಥಿತಿ ಹದಗೆಡುತ್ತದೆ ಎಂಬ ಭಯ ಜನರಲ್ಲಿದೆ. ಅದರಲ್ಲೂ ಯುವ ದಾನಿಗಳ ಸಂಖ್ಯೆ ತೀರಾ ಕಡಿಮೆ ಮತ್ತು ಮೂಳೆ ದಾನಕ್ಕೆ ಯುವ ದಾನಿಗಳ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ