ದೇಹದಲ್ಲಿನ ಕೆಲವೊಂದು ಅಸಹಜ ಕೋಶಗಳ ಬೆಳವಣಿಗೆಯಿಂದ ಉಂಟಾಗುವ ಕಾಯಿಲೆಯ ಮಾರಣಾಂತಿಕ ರೂಪಗಳಲ್ಲಿ ಕರುಳಿನ ಕ್ಯಾನ್ಸರ್ (Bowel Cancer) ಕೂಡ ಒಂದು. ಯಾವುದೇ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿ ಸಹಜವಾಗಿ ಕಾಣಿಸಿಕೊಂಡರೂ ಕೂಡ ಎಂದಿಗೂ ನಿರ್ಲಕ್ಷ್ಯಬೇಡ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ನೀವು ನಿರ್ಲಕ್ಷ್ಯಿಸುತ್ತಾ ಹೋದ ಹಾಗೆ ದೇಹದ ಇತರ ಭಾಗಗಳಿಗೂ ಹರಡಿ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಬಹುದು. ಕರುಳಿನ ಕ್ಯಾನ್ಸರ್ ವಿಷಯಕ್ಕೆ ಬಂದರೆ ಪ್ರಾರಂಭಿಕ ಹಂತದಲ್ಲಿ ಸಾಮಾನ್ಯವಾಗಿ ಅಜೀರ್ಣ, ಹೊಟ್ಟೆ ನೋವಿನಂತಹ ಸೌಮ್ಯ ಲಕ್ಷಣಗಳೊಂದಿಗೆ ಪ್ರಾರಂಭವಾಗಿ ಕಾಲಕ್ರಮೇಣ ಪ್ರಾಣಕ್ಕೆ ಹಾನಿಯುಂಟು ಮಾಡಬಹುದು.
ಕರುಳಿನ ಕ್ಯಾನ್ಸರ್ ಗ್ಯಾಸ್ ಅಥವಾ ಜೀರ್ಣಾಂಗವ್ಯೂಹದ ಮೂಲಕ ಚಲಿಸುವ ಇತರ ಪದಾರ್ಥಗಳ ರೂಪದಲ್ಲಿ ಹೊಟ್ಟೆಯ ಶಬ್ದಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಕರುಳಿನಲ್ಲಿನ ಬದಲಾವಣೆಗಳು ಆಹಾರದ ಮೂಲಕ ಹಾದುಹೋದಾಗ ಶಬ್ದಗಳಿಗೆ ಕಾರಣವಾಗಬಹುದು. ಇದಲ್ಲದೇ ಒಬ್ಬರಿಗೆ ಹಸಿವಾದಾಗಲೂ ಹೊಟ್ಟೆಯು ಸದ್ದು ಮಾಡಲು ಪ್ರಾರಂಭಿಸುತ್ತದೆ. ಮತ್ತು ಕರುಳುಗಳು ಖಾಲಿಯಾದಾಗ ಈ ಶಬ್ದಗಳು ಇನ್ನಷ್ಟು ಜೋರಾಗಬಹುದು. ಹೊಟ್ಟೆಯ ಶಬ್ದಗಳಿಂದ ಮಾತ್ರ ರೋಗವನ್ನು ನಿರ್ಣಯಿಸುವುದು ಕಷ್ಟಕರವಾಗಿರುತ್ತದೆ. ಆದ್ದರಿಂದ ಬಿಟ್ಟು ಬಿಡದೇ ಕಾಡುವ ಹೊಟ್ಟೆ ನೋವು, ಮೂತ್ರದ ಬಣ್ಣದಲ್ಲಿ ಬದಲಾವಣೆ ಕಂಡು ಬಂದರೆ ತಕ್ಷಣ ನಿಮ್ಮ ಹತ್ತಿರದ ವೈದ್ಯರನ್ನು ಭೇಟಿ ಮಾಡಿ ರಕ್ತ ಪರೀಕ್ಷೆ ಮಾಡಿಸುವುದು ಅಗತ್ಯ ಎಂದು ವೈದ್ಯರು ಶಿಫಾರಸು ಮಾಡುತ್ತಾರೆ.
ಇದನ್ನೂ ಓದಿ: ಇತ್ತೀಚಿನ ದಿನಗಳಲ್ಲಿ ಉದರ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ, ಕಾರಣವೇನೆಂಬುದ ತಿಳಿಯಿರಿ
ವೈದ್ಯರ ಪ್ರಕಾರ, ಕರುಳಿನ ಕ್ಯಾನ್ಸರ್ನ ಪ್ರಮುಖ ಲಕ್ಷಣವೆಂದರೆ ಮಲದಲ್ಲಿನ ಬದಲಾವಣೆಗಳು. ರೋಗಿಯು ಅತಿಸಾರ ಅಥವಾ ಮಲಬದ್ಧತೆಯಿಂದ ಬಳಲಬಹುದು. ಇದಲ್ಲದೇ ಇನ್ನಿತರ ಪ್ರಮುಖ ಲಕ್ಷಣವೆಂದರೆ:
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: