Lyme disease: ಲೈಮ್ ಡಿಸೀಸ್ ಎಂದರೇನು? ಈ ರೋಗದ ಬಗ್ಗೆ ಸೂಪರ್ ಮಾಡೆಲ್ ಬೆಲ್ಲಾ ಹ್ಯಾಡಿಡ್ ಅನುಭವ ಹೇಗಿತ್ತು? ಇಲ್ಲಿದೆ ತಜ್ಞರ ಸಲಹೆ

ಲೈಮ್ ರೋಗವು ಬೊರೆಲಿಯಾ ಬರ್ಗ್ಡೋರ್ಫೆರಿ ಎಂಬ ಬ್ಯಾಕ್ಟೀರಿಯಾದ ಸೋಂಕು ಹೊಂದಿರುವ ಕೀಟಗಳು ಕಚ್ಚಿದಾಗ ಈ ಕಾಯಿಲೆ ಬರುತ್ತದೆ. ಹಾಗೂ ಈ ಕೀಟಗಳು ಕಡಿಯುವ ಇತರ ವ್ಯಕ್ತಿಗಳಿಗೂ ಈ ರೋಗ ಹರಡುತ್ತದೆ ಹಾಗಾಗಿ ಈ ಕಾಯಿಲೆಗಳನ್ನು ವೆಕ್ಟರ್ -ಬೋರ್ನ್ ಡಿಸೀಸಸ್ ಎಂದು ಕರೆಯುತ್ತಾರೆ. ಲೈಮ್ ಕಾಯಿಲೆ ಎಂದರೇನು? ಅದರ ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆಯ ಬಗ್ಗೆ ಇಲ್ಲಿದೆ ಮಾಹಿತಿ.

Lyme disease: ಲೈಮ್ ಡಿಸೀಸ್ ಎಂದರೇನು? ಈ ರೋಗದ ಬಗ್ಗೆ ಸೂಪರ್ ಮಾಡೆಲ್ ಬೆಲ್ಲಾ ಹ್ಯಾಡಿಡ್ ಅನುಭವ ಹೇಗಿತ್ತು? ಇಲ್ಲಿದೆ ತಜ್ಞರ ಸಲಹೆ
Lyme disease
Follow us
| Updated By: ಅಕ್ಷತಾ ವರ್ಕಾಡಿ

Updated on: Aug 12, 2023 | 5:28 PM

ನೀವು ಲೈಮ್ ಡಿಸೀಸ್ ಬಗ್ಗೆ ಕೇಳಿದ್ದೀರಾ? ಲೈಮ್ ಕಾಯಿಲೆ (Lyme disease) ರಕ್ತ ಹೀರುವ ಕೀಟಗಳ ಕಡಿತದಿಂದ ಉಂಟಾಗುವ ಕಾಯಿಲೆಯಾಗಿದೆ. ಇಸ್ವ್ಡ್ಸ್ ಸ್ಕ್ಯಾಪುಲಾರಿಸ್ (Ixodes scapularis) ಅಥವಾ ಕಪ್ಪು ಕಾಲಿನ ಟಿಕ್ (black- legged tick) ಎಂದು ಕರೆಯಲ್ಪಡುವ ರಕ್ತ ಹೀರುವ ಕೀಟದ ಕಡಿತದಿಂದ ಲೈಮ್ ಕಾಯಿಲೆ ಬರುತ್ತದೆ. ಅಥವಾ ಬೊರೆಲಿಯಾ ಬರ್ಗ್ಡೋರ್ಫೆರಿ (Borrelia burgdorferi) ಎಂಬ ಬ್ಯಾಕ್ಟೀರಿಯಾದ ಸೋಂಕು ಹೊಂದಿರುವ ಕೀಟಗಳು ಕಡಿತದಿಂದ ಈ ಕಾಯಿಲೆ ಬರುತ್ತದೆ. ಈ ಕೀಟಗಳ ಕಡಿತದಿಂದ ಇತರ ವ್ಯಕ್ತಿಗಳಿಗೂ ಈ ರೋಗ ಹರಡುತ್ತದೆ ಹಾಗಾಗಿ ಈ ಕಾಯಿಲೆಗಳನ್ನು ವೆಕ್ಟರ್ -ಬೋರ್ನ್ ಡಿಸೀಸಸ್ (vector-borne diseases) ಎಂದು ಕರೆಯುತ್ತಾರೆ.

ಈ ರೋಗದ ಬಗ್ಗೆ ಸೂಪರ್ ಮಾಡೆಲ್ ಬೆಲ್ಲಾ ಹ್ಯಾಡಿಡ್ ಎಂಬವರು ಇತ್ತೀಚೆಗೆ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತಮ್ಮ ಆರೋಗ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ 2013ರಲ್ಲಿ ಅವರು ಲೈಮ್ ಕಾಯಿಲೆಯೊಂದಿಗಿನ ತನ್ನ ಹೋರಾಟದ ಬಗ್ಗೆ ವಿವರಿಸಿದ್ದಾರೆ. “ಆ ಸ್ಥಿತಿಯಲ್ಲಿ ನಾನು ಜೀವನ ಮಾಡಿದ್ದು ನಿಜವಾಗಿಯೂ ನನಗೆ ಹೆಮ್ಮೆ ಇದೆ. ನನ್ನನ್ನು ಮತ್ತು ನನ್ನ ಕುಟುಂಬವನ್ನು ಬೆಂಬಲಿಸಿದ ರೀತಿ ನೋಡಿ ನನಗೆ ಏನು ಮಾತನಾಡಬೇಕೆಂದು ತಿಳಿಯುತ್ತಿಲ್ಲ” ಎಂದು ಹೇಳಿಕೊಂಡಿದ್ದಾರೆ. ಇನ್ನು ಬೆಲ್ಲಾ ಮಾತ್ರವಲ್ಲ, ಅವರ ತಾಯಿ ಯೋಲಾಂಡಾ ಮತ್ತು ಸಹೋದರ ಅನ್ವರ್ ಹ್ಯಾಡಿಡ್ ಇದೇ ಕಾಯಿಲೆಯಿಂದ ಬಳಲುತ್ತಿದ್ದಾರೆ. 2012 ಮತ್ತು 2013 ರಲ್ಲಿ ಇದಕ್ಕೆ ಒಂದು ಉತ್ತಮ ಔಷಧಿಯನ್ನು ಕಂಡುಹಿಡಿದು ಇದನ್ನು ನಿವಾರಣೆ ಮಾಡಲಾಗಿದೆ.

ಫರಿದಾಬಾದ್ನ ಮರೆಂಗೊ ಏಷ್ಯಾ ಆಸ್ಪತ್ರೆಯ ಆಂತರಿಕ ಔಷಧದ ಹಿರಿಯ ಸಲಹೆಗಾರ ಡಾ. ಸಂತೋಷ್ ಅಗರ್ವಾಲ್ ಅವರು ನೀಡಿದ ಸಂದರ್ಶನದಲ್ಲಿ ಲೈಮ್ ಕಾಯಿಲೆ ಎಂದರೇನು? ಅದರ ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆಯ ಬಗ್ಗೆ ಮಾತನಾಡಿದ್ದಾರೆ.

ಲೈಮ್ ಕಾಯಿಲೆ ಅಥವಾ ಲೈಮ್ ಡಿಸೀಸ್ ಎಂದರೇನು?

ಲೈಮ್ ರೋಗವು ಇಸ್ವ್ಡ್ಸ್ ಸ್ಕ್ಯಾಪುಲಾರಿಸ್ (Ixodes scapularis) ಎಂಬ ಹೆಸರಿನ ಉಣುಗು ಅಥವಾ ಕಪ್ಪು ಕಾಲಿನ ಟಿಕ್ (black-legged tick) ಎಂದು ಕರೆಯಲ್ಪಡುವ ರಕ್ತ ಹೀರುವ ಕೀಟದ ಕಡಿತದಿಂದ ಲೈಮ್ ಕಾಯಿಲೆ ಬರುತ್ತದೆ. ಅಥವಾ ಬೊರೆಲಿಯಾ ಬರ್ಗ್ಡೋರ್ಫೆರಿ ಎಂಬ ಬ್ಯಾಕ್ಟೀರಿಯಾದ ಸೋಂಕು ಹೊಂದಿರುವ ಕೀಟಗಳು ಕಡಿದಾಗ ಈ ಕಾಯಿಲೆ ಬರುತ್ತದೆ. ಇದು ಪ್ರಾಥಮಿಕವಾಗಿ ಚರ್ಮ, ನರಮಂಡಲ, ಹೃದಯ ಮತ್ತು ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಕನೆಕ್ಟಿಕಟ್ ನ (ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯೂ ಇಂಗ್ಲೆಂಡ್ ಪ್ರದೇಶದಲ್ಲಿರುವ ರಾಜ್ಯ) ಲೈಮ್ ಪಟ್ಟಣದ ಹೆಸರಿನಿಂದ ಹೆಸರಿಸಲಾಗಿದ್ದು, ಅಲ್ಲಿ ಮೊದಲ ಬಾರಿಗೆ ಅಂದರೆ 1976ರಲ್ಲಿ ಮಕ್ಕಳಲ್ಲಿ ಈ ರೋಗಗಳು ಕಾಣಿಸಿಕೊಂಡಿತ್ತು. ಹಾಗಾಗಿ ಆ ಪಟ್ಟಣದ ಹೆಸರನ್ನೇ ಇಡಲಾಗಿದೆ.

ಲೈಮ್ ಕಾಯಿಲೆಗೆ ಕಾರಣಗಳೇನು?

ಲೈಮ್ ರೋಗವು ಪ್ರಾಥಮಿಕವಾಗಿ ಬೊರೆಲಿಯಾ ಬ್ಯಾಕ್ಟೀರಿಯಾದ ಸೋಂಕು ಹೊಂದಿರುವ ಕೀಟದ (ಜಿಂಕೆ ಉಣ್ಣೆಗಳು ಎಂದೂ ಕರೆಯಲ್ಪಡುತ್ತದೆ) ಕಡಿತದ ಮೂಲಕ ಮಾನವರಿಗೆ ಹರಡುತ್ತದೆ. ಈ ಉಣ್ಣೆಗಳು ಸಾಮಾನ್ಯವಾಗಿ ಕಾಡು ಅಥವಾ ಹುಲ್ಲುಗಾವಲು ಪ್ರದೇಶಗಳಲ್ಲಿ ಕಂಡುಬರುತ್ತವೆ, ಜೊತೆಗೆ ಅವು ಮಾನವರು ಮತ್ತು ಪ್ರಾಣಿಗಳ ಚರ್ಮಕ್ಕೆ ಸುಲಭವಾಗಿ ಅಂಟಿಕೊಳ್ಳಬಲ್ಲವು, ಅವುಗಳ ಆಹಾರ ಪ್ರಕ್ರಿಯೆಯಲ್ಲಿ ಬ್ಯಾಕ್ಟೀರಿಯಾವನ್ನು ಹರಡಬಲ್ಲವು.

ಲೈಮ್ ರೋಗದ ಲಕ್ಷಣಗಳೇನು?

ಲೈಮ್ ರೋಗದ ರೋಗಲಕ್ಷಣಗಳು ಸೋಂಕಿನ ಹಂತವನ್ನು ಅವಲಂಬಿಸಿ ಬದಲಾಗಬಹುದು ಮತ್ತು ಇತರ ಕಾಯಿಲೆಗಳನ್ನು ಅನುಕರಿಸಬಹುದು, ಹಾಗಾಗಿ ರೋಗನಿರ್ಣಯ ಮಾಡುವುದು ಸವಾಲಿನ ಸಂಗತಿಯಾಗಿದೆ. ರೋಗವು ಸಾಮಾನ್ಯವಾಗಿ ಮೂರು ಹಂತಗಳಲ್ಲಿ ಮುಂದುವರಿಯುತ್ತದೆ:

ಇದು ಸಾಮಾನ್ಯವಾಗಿ ಟಿಕ್ ಕಚ್ಚಿದ ನಂತರ 3 ರಿಂದ 32 ದಿನಗಳಲ್ಲಿ ಕಾಣುವ ಆರಂಭಿಕ ರೋಗಲಕ್ಷಣಗಳಾಗಿವೆ. ಅವು ಯಾವುದೆಂದರೆ ಸ್ಪಷ್ಟವಾದ ಜಾಗದಲ್ಲಿ ನೋವಿನಿಂದ ಕೂಡಿದ ಕೆಂಪು, ವೃತ್ತಾಕಾರದ ದದ್ದು (ಎರಿಥೆಮಾ ಮೈಗ್ರೇನ್). ಜೊತೆಗೆ ದದ್ದುಗಳು ಕಾಲಾನಂತರದಲ್ಲಿ ವಿಸ್ತರಿಸಬಹುದು. ಇದು ಗೂಳಿಯ ಕಣ್ಣಿನ ಮಾದರಿಯನ್ನು ಹೋಲುತ್ತದೆ. ಜೊತೆಗೆ ತೊಡೆ, ಸೊಂಟ ಇನ್ನಿತರ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.

ಹರಡಿದ ಸೋಂಕಿನ ರೋಗಲಕ್ಷಣಗಳು ಹೀಗಿರುತ್ತದೆ:

  • ದದ್ದು
  • ಜ್ವರ
  • ಶೀತ
  • ತೀವ್ರ ತಲೆನೋವು
  • ಕುತ್ತಿಗೆ ಬಿಗಿತ
  • ಸ್ನಾಯು ಮತ್ತು ಕೀಲುಗಳಲ್ಲಿ ನೋವು
  • ಹಿಗ್ಗಿದ ದುಗ್ಧರಸ ಗ್ರಂಥಿಗಳು
  • ಕೆಮ್ಮು

ಲೈಮ್ ಕಾಯಿಲೆಗೆ ಚಿಕಿತ್ಸೆ ನೀಡದಿದ್ದಾಗ ಉಂಟಾಗುವ ತೊಡಕುಗಳೇನು?

“ಹಲವಾರು ವಾರಗಳು ಅಥವಾ ತಿಂಗಳುಗಳ ನಂತರವೂ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿಯು ಮೆನಿಂಜೈಟಿಸ್ (ಮೆದುಳಿನ ಅಂಗಾಂಶವನ್ನು ಅತಿಯಾಗಿ ಆವರಿಸುವ ಪೊರೆಗಳ ಉರಿಯೂತ), ಎನ್ಸೆಫಾಲಿಟಿಸ್, ಅಟಾಕ್ಸಿಯಾ ಎಂದು ಕರೆಯಲ್ಪಡುವ, ನಡೆಯಲು ಕಷ್ಟ ಮತ್ತು ಮುಖದ ಪಾರ್ಶ್ವವಾಯುವಿನಂತಹ ಸ್ಪಷ್ಟ ನರವೈಜ್ಞಾನಿಕ ಅಸಹಜತೆಗಳು ಕಂಡು ಬರಬಹುದು. ಇನ್ನು ಕೆಲವು ರೋಗಿಗಳಲ್ಲಿ ಅನಿಯಮಿತ ಹೃದಯ ಬಡಿತ (ಹೃದಯದ ಬ್ಲಾಕ್ಗಳು), ಮಯೋಪೆರಿಕಾರ್ಡಿಟಿಸ್ (ಹೃದಯ ಸ್ನಾಯುಗಳ ಉರಿಯೂತ ಮತ್ತು ಅತಿಯಾದ ಪೊರೆ) ಮತ್ತು ಹೃದಯ ವೈಫಲ್ಯವನ್ನು ಸಹ ಕಂಡುಬರುತ್ತದೆ ಎಂದು ಡಾ. ಅಗರ್ವಾಲ್ ಹೇಳುತ್ತಾರೆ.

ನಿರಂತರ ಸೋಂಕು:

ಲೈಮ್ ರೋಗವು ಹಲವಾರು ತಿಂಗಳುಗಳು ಅಥವಾ ವರ್ಷಗಳವರೆಗೆ ಚಿಕಿತ್ಸೆ ನೀಡದಿದ್ದರೆ, ಅದು ಕೀಲುಗಳು, ನರಮಂಡಲ ಮತ್ತು ಇತರ ಅಂಗಗಳ ಮೇಲೆ ಪರಿಣಾಮ ಬೀರುವ ತೀವ್ರವಾದ ಮತ್ತು ದೀರ್ಘಕಾಲೀನ ರೋಗಲಕ್ಷಣಗಳಿಗೆ ಕಾರಣವಾಗಬಹುದು. ಈ ರೋಗಲಕ್ಷಣಗಳಲ್ಲಿ ತೀವ್ರ ಕೀಲು ನೋವು ಮತ್ತು ಊತ (ಫ್ರಾಂಕ್ ಆರ್ಥ್ರೈಟಿಸ್) ಜೊತೆಗೆ ಸ್ಮರಣ ಶಕ್ತಿ, ಮನಸ್ಥಿತಿ ಮತ್ತು ನಿದ್ರೆಯ ಅಸ್ವಸ್ಥತೆಗಳು, ನರ ನೋವು (ಬಾಹ್ಯ ನರರೋಗ) ಕಂಡುಬರಬಹುದು.

ಲೈಮ್ ಕಾಯಿಲೆ ಹೊಂದಿರುವ ಎಲ್ಲಾ ವ್ಯಕ್ತಿಗಳಲ್ಲಿ ದದ್ದುಗಳು ಕಂಡು ಬರುವುದಿಲ್ಲ ಮತ್ತು ಕೆಲವರಲ್ಲಿ ವಿಲಕ್ಷಣ ರೋಗಲಕ್ಷಣಗಳು ಕಂಡು ಬರಬಹುದು ಎಂಬುದನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ.

ಇದನ್ನೂ ಓದಿ: ಹೊಟ್ಟೆಯಿಂದ ಆಗಾಗ ಶಬ್ದಗಳು ಬರುತ್ತಿದ್ದರೆ ಎಂದಿಗೂ ನಿರ್ಲಕ್ಷ್ಯಬೇಡ; ತಜ್ಞರ ಸಲಹೆ ಇಲ್ಲಿದೆ

ರೋಗನಿರ್ಣಯ ಮತ್ತು ಚಿಕಿತ್ಸೆಗಳೇನು?

ಲೈಮ್ ರೋಗದಿಂದ ಯಶಸ್ವಿಯಾಗಿ ಚೇತರಿಸಿಕೊಳ್ಳಲು ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ನಿರ್ಣಾಯಕವಾಗಿದೆ. ಸೋಂಕನ್ನು ಪತ್ತೆಹಚ್ಚಲು ಬಳಸುವ ವಿಧಾನಗಳೆಂದರೆ, ಕಲ್ಚರ್, ಪಿಸಿಆರ್, ಎಲಿಸಾ ಸೆರಾಲಜಿ. ಲೈಮ್ ರೋಗಕ್ಕೆ ಪ್ರಾಥಮಿಕ ಚಿಕಿತ್ಸೆಯಾಗಿದೆ. ಸಾಮಾನ್ಯವಾಗಿ ಸೂಚಿಸಲಾಗುವ ಪ್ರತಿಜೀವಕ ಅಥವಾ ಔಷದಗಳಲ್ಲಿ ಡಾಕ್ಸಿಸೈಕ್ಲಿನ್, ಅಮೋಕ್ಸಿಸಿಲಿನ್, ಮತ್ತು ಸೆಫುರಾಕ್ಸಿಮ್, ಸೆಫ್ಟ್ರಿಯಾಕ್ಸೋನ್ ಸೇರಿವೆ. ಚಿಕಿತ್ಸೆಯ ಅವಧಿಯು ರೋಗದ ಹಂತ ಮತ್ತು ವೈಯಕ್ತಿಕ ಅಂಶಗಳನ್ನು ಅವಲಂಬಿಸಿರುತ್ತದೆ. ಆರಂಭಿಕ ಹಂತದ ಲೈಮ್ ಕಾಯಿಲೆಗೆ, ಸಾಮಾನ್ಯ ಔಷಧಗಳ ಕೋರ್ಸ್ ಸಾಕಾಗುತ್ತದೆ, ಆದರೆ ನಂತರದ ಹಂತಗಳಿಗೆ ಹೆಚ್ಚು ವಿಸ್ತೃತ ಅವಧಿಗೆ ಇಂಟ್ರಾವೆನಸ್ (IV) ಪ್ರತಿಜೀವಕಗಳು ಬೇಕಾಗಬಹುದು.

ನಿಮಗೆ ಟಿಕ್ ಕಚ್ಚಿರಬಹುದು ಎಂದು ಶಂಕೆ ಇದ್ದಲ್ಲಿ ಅಥವಾ ಲೈಮ್ ಕಾಯಿಲೆಗೆ ಅನುಗುಣವಾಗಿ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅತ್ಯಗತ್ಯ. ಚಿಕಿತ್ಸೆ ನೀಡದಿದ್ದರೆ ಲೈಮ್ ರೋಗವು ನಿಮ್ಮನ್ನು ದುರ್ಬಲಗೊಳಿಸಬಹುದು, ಆದ್ದರಿಂದ ಅದನ್ನು ತಡೆಗಟ್ಟಲು ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆ ಅತ್ಯಗತ್ಯ. ಹೆಚ್ಚುವರಿಯಾಗಿ, ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸುವುದು, ಕೀಟ ನಿವಾರಕವನ್ನು ಬಳಸುವುದು ಮತ್ತು ಹೊರಾಂಗಣ ಚಟುವಟಿಕೆಗಳ ನಂತರ ದೇಹವನ್ನು ಕೂಲಂಕುಷವಾಗಿ ಏನಾದರೂ ಕಚ್ಚಿರಬಹುದಾ ಎಂದು ಪರೀಕ್ಷಿಸುವುದು ಇಂತಹ ತಡೆಗಟ್ಟುವ ಕ್ರಮಗಳು ಲೈಮ್ ರೋಗಕ್ಕೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ