ಹೊಟ್ಟೆಯಿಂದ ಆಗಾಗ ಶಬ್ದಗಳು ಬರುತ್ತಿದ್ದರೆ ಎಂದಿಗೂ ನಿರ್ಲಕ್ಷ್ಯಬೇಡ; ತಜ್ಞರ ಸಲಹೆ ಇಲ್ಲಿದೆ

ಹೊಟ್ಟೆಯಿಂದ ಆಗಾಗ ಶಬ್ದಗಳು ಬರುತ್ತಿದ್ದರೆ ಸಾಮಾನ್ಯ ಪ್ರಕ್ರಿಯೆ ಎಂದು ನಿರ್ಲಕ್ಷ್ಯಿಸದಿರಿ. ಇಂತಹ ಸಾಮಾನ್ಯ ಲಕ್ಷಣಗಳು ಕರುಳಿನ ಕ್ಯಾನ್ಸರ್​​​ನ ಆರಂಭಿಕ ಲಕ್ಷಣವಾಗಿರಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಹೊಟ್ಟೆಯಿಂದ ಆಗಾಗ ಶಬ್ದಗಳು ಬರುತ್ತಿದ್ದರೆ ಎಂದಿಗೂ ನಿರ್ಲಕ್ಷ್ಯಬೇಡ; ತಜ್ಞರ ಸಲಹೆ ಇಲ್ಲಿದೆ
Bowel CancerImage Credit source: Healthline
Follow us
ಅಕ್ಷತಾ ವರ್ಕಾಡಿ
|

Updated on: Aug 12, 2023 | 6:25 AM

ದೇಹದಲ್ಲಿನ ಕೆಲವೊಂದು ಅಸಹಜ ಕೋಶಗಳ ಬೆಳವಣಿಗೆಯಿಂದ ಉಂಟಾಗುವ ಕಾಯಿಲೆಯ ಮಾರಣಾಂತಿಕ ರೂಪಗಳಲ್ಲಿ ಕರುಳಿನ ಕ್ಯಾನ್ಸರ್ (Bowel Cancer) ಕೂಡ ಒಂದು. ಯಾವುದೇ ಕ್ಯಾನ್ಸರ್​​ ಪ್ರಾರಂಭಿಕ ಹಂತದಲ್ಲಿ ಸಹಜವಾಗಿ ಕಾಣಿಸಿಕೊಂಡರೂ ಕೂಡ ಎಂದಿಗೂ ನಿರ್ಲಕ್ಷ್ಯಬೇಡ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ನೀವು ನಿರ್ಲಕ್ಷ್ಯಿಸುತ್ತಾ ಹೋದ ಹಾಗೆ ದೇಹದ ಇತರ ಭಾಗಗಳಿಗೂ ಹರಡಿ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಬಹುದು. ಕರುಳಿನ ಕ್ಯಾನ್ಸರ್​​ ವಿಷಯಕ್ಕೆ ಬಂದರೆ ಪ್ರಾರಂಭಿಕ ಹಂತದಲ್ಲಿ ಸಾಮಾನ್ಯವಾಗಿ ಅಜೀರ್ಣ, ಹೊಟ್ಟೆ ನೋವಿನಂತಹ ಸೌಮ್ಯ ಲಕ್ಷಣಗಳೊಂದಿಗೆ ಪ್ರಾರಂಭವಾಗಿ ಕಾಲಕ್ರಮೇಣ ಪ್ರಾಣಕ್ಕೆ ಹಾನಿಯುಂಟು ಮಾಡಬಹುದು.

ಹೊಟ್ಟೆಯಿಂದ ಆಗಾಗ ಬರುವ ಶಬ್ದಗಳು ಮತ್ತು ಕರುಳಿನ ಕ್ಯಾನ್ಸರ್:

ಕರುಳಿನ ಕ್ಯಾನ್ಸರ್ ಗ್ಯಾಸ್ ಅಥವಾ ಜೀರ್ಣಾಂಗವ್ಯೂಹದ ಮೂಲಕ ಚಲಿಸುವ ಇತರ ಪದಾರ್ಥಗಳ ರೂಪದಲ್ಲಿ ಹೊಟ್ಟೆಯ ಶಬ್ದಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಕರುಳಿನಲ್ಲಿನ ಬದಲಾವಣೆಗಳು ಆಹಾರದ ಮೂಲಕ ಹಾದುಹೋದಾಗ ಶಬ್ದಗಳಿಗೆ ಕಾರಣವಾಗಬಹುದು. ಇದಲ್ಲದೇ ಒಬ್ಬರಿಗೆ ಹಸಿವಾದಾಗಲೂ ಹೊಟ್ಟೆಯು ಸದ್ದು ಮಾಡಲು ಪ್ರಾರಂಭಿಸುತ್ತದೆ. ಮತ್ತು ಕರುಳುಗಳು ಖಾಲಿಯಾದಾಗ ಈ ಶಬ್ದಗಳು ಇನ್ನಷ್ಟು ಜೋರಾಗಬಹುದು. ಹೊಟ್ಟೆಯ ಶಬ್ದಗಳಿಂದ ಮಾತ್ರ ರೋಗವನ್ನು ನಿರ್ಣಯಿಸುವುದು ಕಷ್ಟಕರವಾಗಿರುತ್ತದೆ. ಆದ್ದರಿಂದ ಬಿಟ್ಟು ಬಿಡದೇ ಕಾಡುವ ಹೊಟ್ಟೆ ನೋವು, ಮೂತ್ರದ ಬಣ್ಣದಲ್ಲಿ ಬದಲಾವಣೆ ಕಂಡು ಬಂದರೆ ತಕ್ಷಣ ನಿಮ್ಮ ಹತ್ತಿರದ ವೈದ್ಯರನ್ನು ಭೇಟಿ ಮಾಡಿ ರಕ್ತ ಪರೀಕ್ಷೆ ಮಾಡಿಸುವುದು ಅಗತ್ಯ ಎಂದು ವೈದ್ಯರು ಶಿಫಾರಸು ಮಾಡುತ್ತಾರೆ.

ಇದನ್ನೂ ಓದಿ: ಇತ್ತೀಚಿನ ದಿನಗಳಲ್ಲಿ ಉದರ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ, ಕಾರಣವೇನೆಂಬುದ ತಿಳಿಯಿರಿ

ಕರುಳಿನ ಕ್ಯಾನ್ಸರ್​​​​ನ ಲಕ್ಷಣಗಳು:

ವೈದ್ಯರ ಪ್ರಕಾರ, ಕರುಳಿನ ಕ್ಯಾನ್ಸರ್ನ ಪ್ರಮುಖ ಲಕ್ಷಣವೆಂದರೆ ಮಲದಲ್ಲಿನ ಬದಲಾವಣೆಗಳು. ರೋಗಿಯು ಅತಿಸಾರ ಅಥವಾ ಮಲಬದ್ಧತೆಯಿಂದ ಬಳಲಬಹುದು. ಇದಲ್ಲದೇ ಇನ್ನಿತರ ಪ್ರಮುಖ ಲಕ್ಷಣವೆಂದರೆ:

  • ಹಠಾತ್​​​ ತೂಕ ನಷ್ಟ
  • ಹೊಟ್ಟೆ ಉಬ್ಬುವುದು
  • ಹೊಟ್ಟೆ ನೋವು
  • ಯಾವುದೇ ಕಾರಣವಿಲ್ಲದೆ ದಣಿದ ಭಾವನೆ

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್