AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇತ್ತೀಚಿನ ದಿನಗಳಲ್ಲಿ ಉದರ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ, ಕಾರಣವೇನೆಂಬುದ ತಿಳಿಯಿರಿ

ತಪ್ಪು ಆಹಾರ ಪದ್ಧತಿಯಿಂದಾಗಿ ಜನರಲ್ಲಿ ಉದರ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ನಿಮಗೆ ನೀವು ತಿನ್ನುತ್ತಿರುವ ಆಹಾರವು ಆರೋಗ್ಯದಾಯಕವಾದದ್ದು ಎನಿಸಬಹುದು. ಆದರೆ ನಿಮ್ಮ ತಪ್ಪು ಆಹಾರ ಸೇವನೆಯಿಂದಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಇತ್ತೀಚಿನ ದಿನಗಳಲ್ಲಿ ಉದರ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ, ಕಾರಣವೇನೆಂಬುದ ತಿಳಿಯಿರಿ
ಉದರ ಸಮಸ್ಯೆImage Credit source: ABP Live
Follow us
ನಯನಾ ರಾಜೀವ್
|

Updated on: Aug 11, 2023 | 3:00 PM

ತಪ್ಪು ಆಹಾರ ಪದ್ಧತಿಯಿಂದಾಗಿ ಜನರಲ್ಲಿ ಉದರ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ನಿಮಗೆ ನೀವು ತಿನ್ನುತ್ತಿರುವ ಆಹಾರವು ಆರೋಗ್ಯದಾಯಕವಾದದ್ದು ಎನಿಸಬಹುದು. ಆದರೆ ನಿಮ್ಮ ತಪ್ಪು ಆಹಾರ ಸೇವನೆಯಿಂದಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ದೇಶದಲ್ಲಿ ಶೇಕಡಾ 5 ಕ್ಕಿಂತ ಹೆಚ್ಚು ಜನರಿಗೆ ಕರುಳಿನ ಉರಿಯೂತದ ಸಮಸ್ಯೆ ಇದೆ ಎಂಬುದು ಕಂಡುಬಂದಿದೆ. ಇದರಲ್ಲಿ ಹೊಟ್ಟೆ ನೋವು, ಕರುಳಿನ ಸೋಂಕು, ಆ್ಯಸಿಡಿಟಿ, ಅಲ್ಸರೇಟಿವ್ ಕೊಲೈಟಿಸ್ ಮತ್ತು ಭೇದಿಯಂತಹ ಸಮಸ್ಯೆಗಳಿವೆ.

2006ರ ವರೆಗೆ, ಕೇವಲ 0.1 ಪ್ರತಿಶತದಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದು, ಅದು ಕ್ರಮೇಣ ಹೆಚ್ಚಾಗುತ್ತಿದೆ. ಲ್ಯಾನ್ಸೆಟ್ ರೀಜನಲ್ ಹೆಲ್ತ್-ಸೌತ್ ಈಸ್ಟ್ ಏಷ್ಯಾ ವೈದ್ಯಕೀಯ ಜರ್ನಲ್‌ನಲ್ಲಿ ಈ ಸಂಶೋಧನೆಯನ್ನು ಪ್ರಕಟಿಸಲಾಗಿದೆ.

ವರದಿಯ ಪ್ರಕಾರ, ದೇಶದಲ್ಲಿ ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದ ನಂತರ ಯಾವುದಾದರೂ ರೋಗವಿದ್ದರೆ ಅದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ.

ವೈದ್ಯರ ಪ್ರಕಾರ, ಕರುಳಿನ ಉರಿಯೂತ, ಕಳಪೆ ಆಹಾರಶೈಲಿ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಉಂಟಾಗುತ್ತದೆ. ಅನೇಕ ಸಂದರ್ಭಗಳಲ್ಲಿ, ದುರ್ಬಲ ರೋಗನಿರೋಧಕ ಶಕ್ತಿ ಕೂಡ ಈ ಸಮಸ್ಯೆಗೆ ಕಾರಣವಾಗಬಹುದು. ಈ ಕಾರಣದಿಂದಾಗಿ, ತೂಕ ನಷ್ಟ, ಆಯಾಸ ಮತ್ತು ಹೊಟ್ಟೆಯ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ.

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಆರೋಗ್ಯ ತಜ್ಞರ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ನಿರಂತರವಾಗಿ ಹೆಚ್ಚುತ್ತಿವೆ. ಇದಕ್ಕೆ ಮುಖ್ಯ ಕಾರಣ ಸರಿಯಾದ ಆಹಾರದ ಕೊರತೆ. ಈ ಸಮಸ್ಯೆ ಎಲ್ಲಾ ವಯಸ್ಸಿನ ಜನರಲ್ಲಿ ಕಂಡುಬರುತ್ತದೆ. ಸಮಸ್ಯೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು. ಹೊಟ್ಟೆ ನೋವು ದೀರ್ಘಕಾಲದವರೆಗೆ ಮುಂದುವರೆದರೆ, ತಕ್ಷಣವೇ ಚಿಕಿತ್ಸೆ ನೀಡಬೇಕು. ಸ್ವಯಂ ಚಿಕಿತ್ಸೆ ಮಾಡಬೇಡಿ ಮತ್ತು ವೈದ್ಯರನ್ನು ಭೇಟಿ ಮಾಡಿ. ಉದರ ಸಂಬಂಧಿ ಕಾಯಿಲೆ ಅಪಾಯ ಯಾರಲ್ಲಿ ಹೆಚ್ಚು ಆರೋಗ್ಯ ತಜ್ಞರ ಪ್ರಕಾರ, 50 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಕರುಳಿನ ಉರಿಯೂತ ಕಾಣಿಸಿಕೊಳ್ಳುತ್ತದೆ.

ಮತ್ತಷ್ಟು ಓದಿ: ಪ್ಯಾಕೆಟ್​ ಪುಡ್​​​ ಸುಲಭವಾಗಿ ಲಭ್ಯವಿದ್ದರೂ ಕೂಡ ಸೇವನೆಗೂ ಮುನ್ನ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ

ಕರುಳಿನ ಉರಿಯೂತವನ್ನು ತಪ್ಪಿಸುವುದು ಹೇಗೆ? -ಫೈಬರ್ ಮತ್ತು ಪ್ರೋಟೀನ್ ಭರಿತ ಆಹಾರವನ್ನು ತೆಗೆದುಕೊಳ್ಳಿ. -ದಿನವೂ ವ್ಯಾಯಾಮ ಮಾಡಿ -ಮದ್ಯಪಾನದಿಂದ ಅಂತರ ಕಾಯ್ದುಕೊಳ್ಳಿ. -ಮಾನಸಿಕ ಒತ್ತಡವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. -ತಡರಾತ್ರಿಯಲ್ಲಿ ತಿನ್ನುವ ಅಭ್ಯಾಸವನ್ನು ಬದಲಾಯಿಸಿ. -ಪ್ರತಿರಕ್ಷಣಾ ವ್ಯವಸ್ಥೆಯನ್ನು ಸರಿಯಾಗಿ ಇರಿಸಿ. -ಹೆಚ್ಚು ಮೈದಾ ಮತ್ತು ಎಣ್ಣೆ ಪದಾರ್ಥಗಳನ್ನು ತಿನ್ನಬೇಡಿ. -ನಿಮಗೆ ಹೊಟ್ಟೆ ನೋವು ಇದ್ದರೆ ವೈದ್ಯರನ್ನು ಭೇಟಿ ಮಾಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ