ಹೊಟ್ಟೆ ಉಬ್ಬರಕ್ಕೆ ಕಾರಣವೇನು? ಈ ಆಹಾರಗಳನ್ನು ತಪ್ಪಿಸಿದಲ್ಲಿ ಗ್ಯಾಸ್ ನಿಂದ ಮುಕ್ತಿ ಪಡೆಯಬಹುದು!

ಯಾವ ಆಹಾರಗಳು ಗ್ಯಾಸ್ ಮತ್ತು ಉಬ್ಬರಕ್ಕೆ ಕಾರಣವಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಜೀರ್ಣಕಾರಿ ಸಮಸ್ಯೆಯನ್ನು ಬಗೆಹರಿಸುವ ಮೊದಲ ಹೆಜ್ಜೆಯಾಗಿದೆ. ಗ್ಯಾಸ್ ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣವಾಗುವ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಹೊಟ್ಟೆ ಉಬ್ಬರಕ್ಕೆ ಕಾರಣವೇನು? ಈ ಆಹಾರಗಳನ್ನು ತಪ್ಪಿಸಿದಲ್ಲಿ ಗ್ಯಾಸ್ ನಿಂದ ಮುಕ್ತಿ ಪಡೆಯಬಹುದು!
ಗ್ಯಾಸ್ ಮತ್ತು ಹೊಟ್ಟೆ ಉಬ್ಬರ
Follow us
| Updated By: ಅಕ್ಷತಾ ವರ್ಕಾಡಿ

Updated on: Aug 08, 2023 | 6:44 PM

ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ನಿಮಗೆ ಅಹಿತಕರ ಹಾಗೂ ಮುಜುಗರವನ್ನುಂಟುಮಾಡಬಹುದು, ಆದರೆ ಈ ಜೀರ್ಣಕಾರಿ ತೊಂದರೆಗಳಿಗೆ ಕಾರಣವಾದ ಆಹಾರಗಳ ಬಗ್ಗೆ ತಿಳಿದುಕೊಳ್ಳುವುದು ಇಂತಹ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕೆಲವು ಆಹಾರಗಳು ಜೀರ್ಣಾಂಗ ವ್ಯವಸ್ಥೆಯಲ್ಲಿ ಹೆಚ್ಚುವರಿ ಗ್ಯಾಸ್ ಉತ್ಪಾದಿಸಲು ಕುಖ್ಯಾತವಾಗಿವೆ, ಇದು ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ. ಗ್ಯಾಸ್ ಗೆ ಕಾರಣವಾಗಬಹುದಾದ ಐದು ಸಾಮಾನ್ಯ ಆಹಾರಗಳ ಬಗ್ಗೆ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಅವುಗಳ ಪರಿಣಾಮಗಳನ್ನು ಕಡಿಮೆ ಮಾಡಲು ಕೆಲವು ಸಲಹೆಗಳು ಇಲ್ಲಿವೆ.

ಜೀರ್ಣಾಂಗ ಕ್ರಿಯೆ ಉತ್ತಮವಿದ್ದಲ್ಲಿ ಒಟ್ಟಾರೆ ಆರೋಗ್ಯವೂ ಸರಿಯಾಗಿರುತ್ತದೆ. ಆದರೆ ಅನೇಕ ವ್ಯಕ್ತಿಗಳು ಅನಿಲ ಅಥವಾ ಗ್ಯಾಸ್ ಸಂಬಂಧಿತ ಸಮಸ್ಯೆಗಳೊಂದಿಗೆ ಹೋರಾಡುತ್ತಾರೆ, ಇದು ದೈನಂದಿನ ಜೀವನಕ್ಕೆ ಅಡ್ಡಿಪಡಿಸುತ್ತದೆ ಮತ್ತು ಅಸ್ವಸ್ಥತೆ ಉಂಟುಮಾಡುತ್ತದೆ. ಜೀರ್ಣಾಂಗವ್ಯೂಹದಲ್ಲಿ ಹೆಚ್ಚುವರಿ ಗ್ಯಾಸ್ ಸಂಗ್ರಹವಾದಾಗ ಹೊಟ್ಟೆ ತುಂಬಿದ ಭಾವನೆ, ಬಿಗಿತ ಮತ್ತು ಕೆಲವೊಮ್ಮೆ ನೋವಿಗೆ ಕಾರಣವಾಗುತ್ತದೆ. ಗ್ಯಾಸ್ ಸಾಮಾನ್ಯವಾಗಿದ್ದರೂ, ನಿರಂತರ ಸಮಸ್ಯೆಗಳು ಕೆಲವು ಆಹಾರ ಆಯ್ಕೆಗಳಿಗೆ ಸಂಬಂಧಿಸಿರಬಹುದು.

ಗ್ಯಾಸ್ ಮತ್ತು ಹೊಟ್ಟೆಯುಬ್ಬರಕ್ಕೆ ಕಾರಣವಾಗುವ ಆಹಾರಗಳು:

ಆಯುರ್ವೇದ ಪೌಷ್ಟಿಕತಜ್ಞೆ ರಾಧಿಕಾ ದೇವ್ಲುಕಿಯಾ ಶೆಟ್ಟಿ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಗ್ಯಾಸ್ ಆಗುವ ಐದು ಆಹಾರಗಳನ್ನು ಹೈಲೈಟ್ ಮಾಡಿದ್ದಾರೆ. ಈ ಆಹಾರಗಳ ಪಟ್ಟಿಯ ಬಗೆಗೆ ಇಲ್ಲಿದೆ ಮಾಹಿತಿ.

1. ಪಾಪ್ಕಾರ್ನ್:

ಪಾಪ್ಕಾರ್ನ್ ಎಲ್ಲರಿಗೂ ಇಷ್ಟವಾದ ತಿಂಡಿಯಾಗಿದೆ. ಆದರೆ ಅದರ ಹೆಚ್ಚಿನ ಫೈಬರ್ ಅಂಶವು ಕೆಲವು ವ್ಯಕ್ತಿಗಳಿಗೆ ಸಮಸ್ಯೆಯಾಗಬಹುದು. ದೇಹವು ಪಾಪ್ಕಾರ್ನ್ನಲ್ಲಿರುವ ಫೈಬರ್ ಅನ್ನು ವಿಭಜಿಸಿದಾಗ, ಅದು ಗ್ಯಾಸ್ ಬಿಡುಗಡೆ ಮಾಡುತ್ತದೆ, ಇದು ಉಬ್ಬರಕ್ಕೆ ಕಾರಣವಾಗುತ್ತದೆ.

ಪರಿಹಾರ: ಪಾಪ್ ಕಾರ್ನ್ ಅನ್ನು ಹೆಚ್ಚು ಜೀರ್ಣಕಾರಿ ಸ್ನೇಹಿಯನ್ನಾಗಿ ಮಾಡಲು, ಇದನ್ನು ಮಾಡುವಾಗ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಳಸಿ. ಜೊತೆಗೆ ಜೀರಿಗೆ ಅಥವಾ ಅರಿಶಿನದಂತಹ ಕೆಲವು ಮಸಾಲೆಗಳನ್ನು ಅದಕ್ಕೆ ಸಿಂಪಡಿಸಿ. ಇವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ನೀವು ತಿನ್ನುವ ಪಾಪ್ಕಾರ್ನ್ ಅನ್ನು ಚೆನ್ನಾಗಿ ಜಗಿಯಲು ಎಂದಿಗೂ ಮರೆಯದಿರಿ.

2. ಕಚ್ಚಾ ಸಲಾಡ್:

ಸಲಾಡ್ಗಳನ್ನು ಹೆಚ್ಚಾಗಿ ಆರೋಗ್ಯಕರ ಆಯ್ಕೆಯಾಗಿದ್ದರೂ, ಕಚ್ಚಾ ಸಲಾಡ್ಗಳು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕಠಿಣ ಪರಿಣಾಮ ಬೀರಬಹುದು. ವಿಶೇಷವಾಗಿ ಸೂಕ್ಷ್ಮ ಕರುಳು ಹೊಂದಿರುವವರಿಗೆ. ಕಚ್ಚಾ ತರಕಾರಿಗಳು ಗ್ಯಾಸ್ ಮತ್ತು ಉಬ್ಬರಕ್ಕೆ ಕಾರಣವಾಗಬಹುದು.

ಪರಿಹಾರ: ನೀವು ಮಾಡುವ ಸಲಾಡ್ಗಳನ್ನು ಸುಲಭವಾಗಿಸಲು ಜೀರ್ಣಿಸಿಕೊಳ್ಳಲು, ನಿಮ್ಮ ಸಲಾಡ್ಗೆ ಮೊದಲು ಕೆಲವು ತರಕಾರಿಗಳನ್ನು ಲಘುವಾಗಿ ಹುರಿದು ಅಥವಾ ಹಬೆಯಲ್ಲಿ ಬೇಯಿಸಿ ಬಳಿಕ ಸಲಾಡ್ಗೆ ಸೇರಿಸಿ. ಈ ಪ್ರಕ್ರಿಯೆಯು ಜೀರ್ಣ ಕ್ರಿಯೆಗೆ ಕಷ್ಟವಾದ ಕೆಲವು ತರಕಾರಿಗಳನ್ನು ಮೃದುವಾಗಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡಲು ನಿಮ್ಮ ಸಲಾಡ್ ಗೆ ಶುಂಠಿ ಅಥವಾ ಕರಿಮೆಣಸಿನಂ ಹುಡಿಯನ್ನು ಕೂಡ ತರಕಾರಿ ಬಿಸಿ ಮಾಡುವಾಗ ಸೇರಿಸಿಕೊಳ್ಳಿ.

3. ಚೂಯಿಂಗ್ ಗಮ್:

ಚೂಯಿಂಗ್ ಗಮ್ ನಿಮಗೆ ಬರೀ ಚಾಕ್ಲೆಟ್ ನ ಭಾಗವಾಗಿರಬಹುದು, ಆದರೆ ಇದು ಗ್ಯಾಸ್ ಮತ್ತು ಉಬ್ಬರಕ್ಕೆ ಕಾರಣವಾಗಬಹುದು. ನೀವು ಚೂಯಿಂಗ್ ಗಮ್ ಜಗಿಯುವುದರಿಂದ ಗ್ಯಾಸ್ ಉಂಟಾಗಬಹುದು, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಂಗ್ರಹವಾಗಿ ಅಸ್ವಸ್ಥತೆಗೆ ಕಾರಣವಾಗಬಹುದು.

ಪರಿಹಾರ: ಚೂಯಿಂಗ್ ಗಮ್ ಜಗಿಯುವ ಅಭ್ಯಾಸವನ್ನು ಆದಷ್ಟು ಮಿತಗೊಳಿಸಿ, ವಿಶೇಷವಾಗಿ ಸಕ್ಕರೆ ಮುಕ್ತವಾಗಿರುವ ಪುದೀನಾ ಆಹಾರ ಅಥವಾ ಕ್ಯಾಂಡಿ ಗಳನ್ನು ಪ್ರಯತ್ನಿಸಿ ಅಥವಾ ಬೇರೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಿ.

4. ಈರುಳ್ಳಿ:

ಈರುಳ್ಳಿ ಅನೇಕ ಭಕ್ಷ್ಯಗಳಿಗೆ ಪರಿಮಳ ನೀಡುತ್ತದೆ. ಆದರೆ ಅವುಗಳು ಕೆಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟಕರವಾದ ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿದೆ.

ಪರಿಹಾರ: ನೀವು ಈರುಳ್ಳಿ ಇಷ್ಟ ಪಡುವವರಾಗಿದ್ದರೇ ಇಂದಿನಿಂದ ಅದನ್ನು ತಿನ್ನುವುದನ್ನು ಕಡಿಮೆ ಮಾಡಿ. ಏಕೆಂದರೆ ಅವುಗಳನ್ನು ಸೇವಿಸಿದ ನಂತರ ಗ್ಯಾಸ್ ಮತ್ತು ಉಬ್ಬರ ಅನುಭವಿಸಬೇಕಾಗುತ್ತದೆ. ಹಾಗಾಗಿ ಅವುಗಳನ್ನು ಚೆನ್ನಾಗಿ ಬೇಯಿಸಿ ನಂತರ ಅದನ್ನು ತಿನ್ನಿ.

5. ಹಸಿ ಸೇಬು ಮತ್ತು ಪೀಚ್ ಹಣ್ಣು:

ಸೇಬು ಮತ್ತು ಪೀಚ್ ನಂತಹ ಹಣ್ಣುಗಳು, ವಿಶೇಷವಾಗಿ ಹಸಿಯಾಗಿ ಸೇವಿಸಿದಾಗ, ಫ್ರಕ್ಟೋಸ್ ಎಂಬ ಒಂದು ರೀತಿಯ ಸಕ್ಕರೆಯು ಅಧಿಕವಾಗಿರುತ್ತದೆ, ಇದು ಗ್ಯಾಸ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ.

ಪರಿಹಾರ: ಈ ಹಣ್ಣುಗಳನ್ನು ಬೇಯಿಸುವುದರಿಂದ ಅವು ಗ್ಯಾಸ್ ಉಂಟುಮಾಡುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಬೆರ್ರಿಗಳಂತಹ ಕಡಿಮೆ ಫ್ರಕ್ಟೋಸ್ ಅಂಶವನ್ನು ಹೊಂದಿರುವ ಹಣ್ಣುಗಳನ್ನು ಆಯ್ಕೆ ಮಾಡುವುದು ಕೆಲವರಿಗೆ ಹೆಚ್ಚು ಸೂಕ್ತವಾದ ಆಯ್ಕೆಯಾಗಿದೆ.

ನಿಮ್ಮ ಆಹಾರ ಆಯ್ಕೆಗಳು ಮತ್ತು ತಯಾರಿ ಮಾಡುವ ವಿಧಾನಗಳಲ್ಲಿ ಕೆಲವು ಹೊಂದಾಣಿಕೆಗಳನ್ನು ಮಾಡುವ ಮೂಲಕ, ನೀವು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ ಪಡೆದುಕೊಳ್ಳಬಹುದು. ಆದರೆ ದೀರ್ಘಕಾಲದವರೆಗೆ ಗ್ಯಾಸ್ ಆಗಿ ಹೊಟ್ಟೆ ನೋವು ಬರುತ್ತಿದ್ದಲ್ಲಿ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ