Brinjal Side Effects: ಈ 5 ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬದನೆಕಾಯಿಯಿಂದ ದೂರವಿರಿ

ಬದನೆಕಾಯಿ(Brinjal) ಎಂದಾಕ್ಷಣ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ ನೆನಪಾಗಿ ನಾಲಿಗೆಯಲ್ಲಿ ನೀರೂರದೆ ಇರದು.

Brinjal Side Effects: ಈ 5 ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬದನೆಕಾಯಿಯಿಂದ ದೂರವಿರಿ
ಬದನೆಕಾಯಿ

Updated on: Mar 27, 2023 | 2:21 PM

ಬದನೆಕಾಯಿ(Brinjal) ಎಂದಾಕ್ಷಣ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ ನೆನಪಾಗಿ ನಾಲಿಗೆಯಲ್ಲಿ ನೀರೂರದೆ ಇರದು. ಜತೆಗೆ ಬದನೆಕಾಯಿ ಪಲ್ಯ, ಸಾಂಬಾರು, ಮಲೆನಾಡಿನಲ್ಲಿ ಮಾಡುವ ಬದನೆಕಾಯಿ ಮೊಸರುಗೊಜ್ಜು ಹೀಗೆ ಹತ್ತು ಹಲವು ಪದಾರ್ಥಗಳನ್ನು ಮಾಡಲಾಗುತ್ತದೆ. ಮೂಲಂಗಿ ರೀತಿಯೇ ಬದನೆ ಫ್ರೈ ಕೂಡ ಮಾಡಬಹುದು, ನೇರಳೆ ಬಣ್ಣವನ್ನು ಹೊರತುಪಡಿಸಿ,  ಹಸಿರು ಮತ್ತು ಬಿಳಿ ಬಣ್ಣಗಳಲ್ಲಿಯೂ ಬದನೆ ಲಭ್ಯವಿದೆ.

ಈ ಆರೋಗ್ಯ ಸಮಸ್ಯೆ ಇರುವವರು ಬದನೆ ತಿನ್ನುವುದನ್ನು ತಪ್ಪಿಸಬೇಕು
1. ಮೂತ್ರಕೋಶದ ಕಲ್ಲಿನ ಅಪಾಯ
ಕಿಡ್ನಿ ಸ್ಟೋನ್ ಇರುವವರು ಅಂದರೆ ಮೂತ್ರಕೋಶದ ಕಲ್ಲಿನ ಬದನೆ ತಿನ್ನಬಾರದು. ಬದನೆ ಬೀಜಗಳು ಹೆಚ್ಚುವರಿ ಕಲ್ಲುಗಳನ್ನು ಉತ್ಪತ್ತಿ ಮಾಡುವ ಕೆಲಸ ಮಾಡುತ್ತವೆ. ಇದು ಮೂತ್ರಪಿಂಡಕ್ಕೆ ಹಾನಿಯನ್ನುಂಟುಮಾಡುತ್ತದೆ.

2. ಮೂಳೆಗಳಿಗೆ ಒಳ್ಳೆಯದಲ್ಲ
ಆಕ್ಸಲೇಟ್ ಅಂಶ ಬದನೆಕಾಯಿಯಲ್ಲಿ ಕಂಡುಬರುತ್ತದೆ. ಈ ಕಾರಣದಿಂದಾಗಿ, ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯು ಕಡಿಮೆಯಾಗುತ್ತದೆ. ಮೂಳೆ ಆರೋಗ್ಯಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಮೂಳೆಗಳು ದುರ್ಬಲವಾಗಿರುವವರು ಬದನೆ ತಿನ್ನುವುದನ್ನು ತಪ್ಪಿಸಲೇಬೇಕು.

3. ಪೈಲ್ಸ್ ರೋಗಿಗಳು, ರಕ್ತಹೀನತೆಯಿಂದ ಬಳಲುತ್ತಿರುವವರು ಬದನೆ ತಿನ್ನಬಾರದು. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.

ಮತ್ತಷ್ಟು ಓದಿ: ಒಲೆಯಲ್ಲಿ ಬದನೆಕಾಯಿ ಸುಟ್ಟು ಖಾರ ಖಾರ ಚಟ್ನಿ ಮಾಡಿ; ವಿಧಾನ ಹೀಗಿದೆ

4. ಸಂಧಿವಾತ ರೋಗಿಗಳು ಕೂಡ ಬದನೆ ತಿನ್ನಬಾರದು
ಸಂಧಿವಾತದ ಸಮಸ್ಯೆ ಇದ್ದರೂ ಬದನೆಕಾಯಿ ತಿನ್ನಬಾರದು. ಈ ಕಾರಣದಿಂದಾಗಿ, ಸಂಧಿವಾತದ ಸಮಸ್ಯೆಯು ಹೆಚ್ಚು ಗಂಭೀರವಾಗಬಹುದು.

5. ಈ ಸಮಸ್ಯೆಗಳು ಕೂಡ ಬರಬಹುದು

ಹೆಚ್ಚು ಬದನೆಕಾಯಿ ತಿನ್ನುವುದು ಕೂಡ ಹಾನಿಕಾರಕ. ಇದರಿಂದಾಗಿ ಹೊಟ್ಟೆನೋವು, ಹೊಟ್ಟೆ ನೋವು, ವಾಂತಿ, ತಲೆನೋವು, ತುರಿಕೆ ಮುಂತಾದ ಸಮಸ್ಯೆಗಳು ಕಾಡಬಹುದು.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us