ಪಂಚೇಂದ್ರಿಯಗಳಲ್ಲಿ ಕಣ್ಣುಗಳಿಗೆ ಸದಾ ಪ್ರಧಾನ ಸ್ಥಾನ ಇದೆ. ಸರ್ವೇಂದ್ರಿಯನಂ ನಯನಂ ಪ್ರಧಾನಂ ಎಂದು ದೊಡ್ಡವರು ಹೇಳಿರುವುದು ಇದೇ ಅರ್ಥದಲ್ಲಿ.. ಹೌದು ಮನುಷ್ಯನಿಗೆ ಇರುವ ಅಂಗಗಳಲ್ಲಿ ಕಣ್ಣುಗಳು ಅತಿ ಸೂಕ್ಷ್ಮ.. ಅದು ನಮಗೆ ಜಗತ್ತನ್ನು ತೋರಿಸುತ್ತದೆ. ಆದರೆ ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆ ಒಂದು ಶಾಕಿಂಗ್ ವಿಷಯ ಪ್ರಕಟಿಸಿದೆ. ಪ್ರಸ್ತುತ ಜಗತ್ತಿನಲ್ಲಿ ಅಂದಾಜು 2.2 ಬಿಲಿಯನ್ ಜನರು ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಇನ್ನು 2050 ರ ಹೊತ್ತಿಗೆ ಈ ಸಂಖ್ಯೆಯು ಇನ್ನೂ ತುಂಬಾ ಹೆಚ್ಚಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (WHO) SPEX 2030 ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ. ಪ್ರಸ್ತುತ ಜಗತ್ತಿನಲ್ಲಿ 2.2 ಬಿಲಿಯನ್‌ಗಳಿಗೆ ಹೆಚ್ಚು ಜನರು ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಸಂತ್ರಸ್ತರಲ್ಲಿ ಒಂದು ಬಿಲಿಯನ್ ಜನರಿಗೆ ಸರಿಪಡಿಸಬಹುದಾದ ದೋಷವಿದೆ. ಶೇ 90 ದೃಷ್ಟಿ ಕೊರತೆ ಇರುವವರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಇದ್ದಾರೆ. ಭಾರತದಲ್ಲಿಯೂ ಸಹ 10 ಕೋಟಿ ಜನರಿಗೆ ಕಣ್ಣಿಗೆ ಕನ್ನಡಕಗಳು ಬೇಕಾಗಿರುವ ಪರಿಸ್ಥಿತಿಯಿದೆ.
ಇದನ್ನು ಓದಿ: Health: ಸಂಜೆಯಾಗುತ್ತಿದ್ದಂತೆ ನಿಮ್ಮಲ್ಲಿ ಈ ಲಕ್ಷಣಗಳು ಕಂಡುಬರುತ್ತಿವೆಯಾ? ಹಾಗಾದರೆ ತಕ್ಷಣ ಅಲರ್ಟ್ ಆಗಿ
ನಿನಿಜವಾಗಿ ಪ್ರತಿಯೊಬ್ಬರಿಗೂ ಸರಿಯಾದ ಕಣ್ಣಿನ ಆರೈಕೆ ಬೇಕಾಗಿದೆ. ಈ ಚಿಕಿತ್ಸೆಗಾಗಿ 24.8 ಬಿಲಿಯನ್ ಯುಎಸ್ ಡಾಲರ್ ಅಗತ್ಯವಿದೆ. ಕಣ್ಣಿನ ರೋಗಿಗಳಿಗೆ ಸಹಾಯ ಮಾಡದಿದ್ದರೆ, ವಿಶ್ವವು ಭಾರೀ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಕಣ್ಣಿನ ಸಮಸ್ಯೆಯಲ್ಲಿ ಮೈಯೋಪಿಯಾ ಒಂದು ಪ್ರಮುಖ ಸಮಸ್ಯೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು WHO ಅಂದಾಜಿಸಿದೆ.
ಸಮೀಪ ದೃಷ್ಟಿ (ಮೈಯೋಪಿಯಾ ಅಥವಾ ಹತ್ತಿರದ ದೃಷ್ಟಿ ಅಸ್ವಸ್ಥತೆ) ಅಸ್ವಸ್ಥತೆ ಎಂದರೆ ಹತ್ತಿರ ಇರುವ ವಸ್ತುಗಳು ಸ್ಪಷ್ಟವಾಗಿ ಕಾಣುತ್ತವೆ. ಆದರೆ ಅದೇ ದೂರವಿರುವ ವಸ್ತುಗಳು ಅಸ್ಪಷ್ಟವಾಗಿ ಮಾತ್ರವೇ ಕಾಣುತ್ತವೆ. ಸಾಮಾನ್ಯವಾಗಿ ಈ ಲಕ್ಷಣವನ್ನು ಹತ್ತಿರದ ದೃಷ್ಟಿ ಎಂದೂ ಕರೆಯಲಾಗುತ್ತದೆ, ಇದು ವಕ್ರೀಭವನದ ಕಣ್ಣಿನ ಪರಿಸ್ಥಿತಿಯಲ್ಲಿ ಅತ್ಯಂತ ಸಾಮಾನ್ಯವಾದುದು. ಸಾಮಾನ್ಯಕ್ಕಿಂತ ಉದ್ದವಾದ ಕಣ್ಣು ಅಥವಾ ಸಾಮಾನ್ಯ ಕಾರ್ನಿಯಾಕ್ಕಿಂತ ಕಡಿದಾದ ಕಾರಣ, ಬೆಳಕು ರೆಟಿನಾದ ಮುಂದೆ ಕೇಂದ್ರೀಕೃತವಾಗಿರುತ್ತದೆ. ಇದರಿಂದ ದೂರದಲ್ಲಿರುವ ವಸ್ತುಗಳು ಅಸ್ಪಷ್ಟವಾಗಿ ಗೋಚರಿಸುತ್ತವೆ. ಸಮೀಪದೃಷ್ಟಿ ಸೌಮ್ಯ, ಮಧ್ಯಮ ಅಥವಾ ತೀವ್ರತರದ್ದಾಗಿರುತ್ತದೆ.
ನಿಜಕ್ಕೂ… ಕಣ್ಣಿನ ದೋಷ ಪೂರ್ಣಪ್ರಮಾಣದಲ್ಲಿ ಕಂಡುಬಂದರೆ ಮಾತ್ರವೇ ಜನ ವೈದ್ಯರ ಬಳಿ ಹೋಗುವುದು. ಆ ವೇಳೆಗೆ ಇಂತಹ ಸಮಸ್ಯೆ ಹೆಚ್ಚೇ ಆಗಿರುತ್ತದೆ. ಮೈಯೋಪಿಯಾದಿಂದ ಮಾಡಬೇಕಾದ ಕೆಲಸಗಳು ಕೂಡ ಮಾಡಿಕೊಳ್ಳಲಾಗದ ಸ್ಟೇಜ್‌ಗೆ ತಲುಪಬಹುದು. 2050 ರಲ್ಲಿ ವಿಶ್ವದ ಅರ್ಧದಷ್ಟು ಜನರು ಇಂತಹ ಮೈಯೋಪಿಯಾದಿಂದ ಬಳಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ -WHO ವಿವರಿಸಿದೆ. ಸಮೀಪ ದೃಷ್ಟಿ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಭಾರತ ಸೇರಿದಂತೆ ಏಷ್ಯಾದ ದೇಶಗಳಲ್ಲಿ ತುಂಬಾ ಹೆಚ್ಚಾಗಿವೆ. ಇಲ್ಲಿ ಹೆಚ್ಚಿನ ವೈದ್ಯಕೀಯ ಸೇವೆಗಳು ಲಭ್ಯವಾಗಬೆಕಿದೆ.
ಇದನ್ನು ಓದಿ: ಕಣ್ಣಿನ ದೃಷ್ಟಿಶಕ್ತಿ ವೃದ್ಧಿಸಿಕೊಳ್ಳಲು ಪ್ರತಿದಿನ ಈ ಪುಡಿಯನ್ನು ತಿನ್ನಿ.. ಕನ್ನಡಕ ಪಕ್ಕಕ್ಕೆ ಇಟ್ಟುಬಿಡಿ
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಮಕ್ಕಳನ್ನು ಡಿಜಿಟಲ್ ಪರದೆಯಿಂದ ದೂರವಿಡುವ ಮೂಲಕ ಇದನ್ನು ಸಾಧಿಸಬಹುದಾಗಿದೆ. ಅಂದರೆ ಸ್ಮಾರ್ಟ್ ಫೋನ್, ಟಿವಿ, ಕಂಪ್ಯೂಟರ್ ಅನ್ನು ನೋಡುವ ಸಮಯ ಮತ್ತು ಅಭ್ಯಾಸವನ್ನು ಕಡಿಮೆ ಮಾಡುವುದು. ಇದರಿಂದ ಸಂತ್ರಸ್ತರಾಗುವವರ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಎಲ್ಲಾ ವಯಸ್ಸಿನವರಿಗೆ ಕಡ್ಡಾಯವಾಗಿ ಕಣ್ಣಿನ ಪರೀಕ್ಷೆಗಳನ್ನು ಮಾಡಬೇಕಾಗಿದೆ. ದೃಷ್ಟಿ ಲೋಪವನ್ನು ಕಡಿಮೆ ಮಾಡಲು ಸರ್ಕಾರದಿಂದ ಸಾರ್ವಜನಿಕ ಜಾಗೃತಿ ಕಾರ್ಯವಾಗುವುದು ಅಗತ್ಯವೆಂದು ಭಾವಿಸಲಾಗಿದೆ. ಇದರಿಂದ ಜನರು ತಮ್ಮ ಮಕ್ಕಳನ್ನು ಕಾಪಾಡಬಹುದು.