ಡಯಾಬಿಟಿಸ್ ಡಯಟ್: ನಿಮಗಿದು ಗೊತ್ತಾ.. ಈ ಬೇಳೆ ತಿಂದರೆ ಮಧುಮೇಹ ದೂರವಾಗುತ್ತದೆ
Diabetes Diet: ಡಯಾಬಿಟೀಸ್ ರೋಗಿಗಳಿಗೆ ತೂರ್ ದಾಲ್ ಅಂದರೆ ಕರ್ನಾಟಕದಲ್ಲಿ ವ್ಯಾಪಕವಾಗಿ, ಹೆಚ್ಚಾಗಿ ಬಳಸುವ ತೊಗರಿ ಬೇಳೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ, ಇದು ರಕ್ತದಲ್ಲಿನ ಸಕ್ಕರೆಯನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಅದು ಹೇಗೆ ಇಲ್ಲಿದೆ ವಿವರ
ಪ್ರಪಂಚದಲ್ಲಿ ಅತಿ ದೊಡ್ಡ ಸಾರ್ವತ್ರಿಕ ಸಮಸ್ಯೆಯಾಗಿ ಮಧುಮೇಹ ರೂಪುಗೊಂಡುಬಿಟ್ಟಿದೆ. ಸರಿಯಾದ ಅರಿವು ಮಾತ್ರ ಈ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಜಗತ್ತಿನಾದ್ಯಂತ ಕೋಟ್ಯಂತರ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದು ದೇಹದಲ್ಲಿ ನಿಶ್ಶಬ್ಧವಾಗಿ ವಿಧ್ವಂಸವನ್ನು ಸೃಷ್ಟಿಸುತ್ತದೆ ಅಂದರೆ ಇದೊಂದು ಸೈಲೆಂಟ್ ಕಿಲ್ಲರ್ ಆಗಿ ರೂಪುಗೊಂಡಿದೆ. ಆದರೆ ಇದರ ಬಗ್ಗೆ ಸರಿಯಾದ ಅರಿವಿದ್ದಲ್ಲಿ ಇದನ್ನು ಕಟ್ಟಿಹಾಕುವುದು ಕಷ್ಟವೇನೂ ಅಲ್ಲ. ಬ್ಲಡ್ ಶುಗರ್ ರೋಗಿಗಳಿಗೆ ಸರಿಯಾದ ಆಹಾರ ಸೇವನೆಯೊಂದಿಗೆ ವ್ಯಾಯಾಮವನ್ನು ಸಹ ಮಾಡವುದು ಕಡ್ಡಾಯ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ. ಆದರೆ ನಿಮಗೆ ಗೊತ್ತಾ.. ನಾವು ದಿನ ಮನೆಯಲ್ಲಿ ಬಳಸುವ ತೊಗರಿ ಬೇಳೆಯಿಂದ ಕೂಡ ಶುಗರ್ ಕಂಟ್ರೋಲ್ ಆಗುತ್ತದೆ. ಹೌದು ಇದನ್ನು ನಿತ್ಯ ಆಹಾರದಲ್ಲಿ ಸೇವಿಸುವುದರಿಂದ ರಕ್ತದಲ್ಲಿ ಶುಗರ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು.
ತೊಗರಿ ಬೇಳೆಯಲ್ಲಿ ಪೊಟಾಶಿಯಂ, ಮೆಗ್ನೀಷಿಯಂ, ಕಾಲ್ಶಿಯಂ, ಫೈಬರ್, ಸೋಡಿಯಂ ಮುಂತಾದ ಪೌಷ್ಟಿಕಾಂಶಗಳು ಹೇರಳವಾಗಿ ಇರುತ್ತದೆ. ಹೊಟ್ಟೆಗೆ ಒಳ್ಳೆಯ ಆಹಾರ ಆಗುವುದರ ಜೊತೆಗೆ ಇದು ಷುಗರ್ ಅನ್ನು ಕೂಡ ನಿಯಂತ್ರಿಸುತ್ತದೆ. ಡಯಾಬೆಟಿಕ್ ಪೇಷೆಂಟ್‌ಗಳಿಗೆ ತೊಗರಿ ಬೇಳೆ ಯಾವ ರೀತಿಯಲ್ಲಿ ಒಳ್ಳೆಯದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಡಯಾಬೆಟಿಕ್ ಪೇಷೆಂಟ್‌ಗಳಿಗೆ ತೊಗರಿ ಬೇಳೆ ಹೇಗೆ ಪ್ರಯೋಜನಕಾರಿಯಾಗಿದೆ?
ಆರೋಗ್ಯ ತಜ್ಞರ ಅಭಿಪ್ರಾಯದ ಪ್ರಕಾರ.. ಆಕ್ಸಿಡೇಟಿವ್ ಒತ್ತಡ (Oxidative stress) ಹೆಚ್ಚಾಗುವುದರಿಂದ ನಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ರಕ್ತದಲ್ಲಿ ಸಕ್ಕರೆ ಹೆಚ್ಚಾಗುವುದರಿಂದ ಮಧುಮೇಹ ಬರುತ್ತದೆ. ತೊಗರಿ ಬೇಳೆಯಲ್ಲಿ ಅಧಿಕ ಆಂಟಿ ಆಕ್ಸಿಡೆಂಟ್‌ಗಳು ಇರುತ್ತವೆ. ಆದ್ದರಿಂದ ಇದು ಆಕ್ಸೀಕರಣ ಒತ್ತಡ ಕಡಿಮೆ ಮಾಡುತ್ತದೆ. ಈ ಬೇಳೆಯನ್ನು ನಿತ್ಯ ತಿನ್ನುವುದರಿಂದ ಬ್ಲಡ್ ಶುಗರ್ ನಿಯಂತ್ರಣದಲ್ಲಿಡಬಹುದಾಗಿದೆ.
Also Read: ಸಂಧ್ಯಾಕಾಲದಲ್ಲಿ ನಿಮ್ಮಲ್ಲಿ ಈ ಲಕ್ಷಣಗಳು ಕಂಡುಬರುತ್ತಿವೆಯಾ? ಹಾಗಾದರೆ ತಕ್ಷಣ ಅಲರ್ಟ್ ಆಗಿ
ಇನ್ನು ಮೊಳಕೆ ಕಟ್ಟಿದ ಹೆಸರುಬೇಳೆ (Sprouted green lentils) ಕೂಡ ಹೈಪರ್‌ಗ್ಲೈಸೀಮಿಯಾಗೆ ಎಂದರೆ ಅಧಿಕ ರಕ್ತ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಮೇಲುಗೈ ಸಾಧಿಸಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ಗಳನ್ನು (Complex carbohydrates) ಹೊಂದಿರುತ್ತದೆ. ಹಾಗಾಗಿ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗದು.
ಪ್ರತಿರೋಧ ಶಕ್ತಿ ಹೆಚ್ಚಾಗುತ್ತದೆ ಡಯಾಬಿಟಿಕ್ ರೋಗಿಗಳ ರೋಗನಿರೋಧಕ ಶಕ್ತಿ ದುರ್ಬಲವಾಗಿ, ಅದರ ಕಾರಣದಿಂದಾಗಿ ಅವರು ಬೇಗನೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ವೈದ್ಯರು ಹೇಳುತ್ತಾರೆ. ಆದಾಗ್ಯೂ ತೊಗರಿ ಬೇಳೆಯನ್ನು ಆಹಾರದಲ್ಲಿ ನಿರಂತರವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದನ್ನು ತಿನ್ನುವುದರಿಂದ ದೇಹದಲ್ಲಿನ ಜೀರ್ಣಾಂಗ ವ್ಯವಸ್ಥೆ ಕೂಡ ಸುಧಾರಿಸುತ್ತದೆ. ಅದೂ ಕೂಡ ಡಯಾಬಿಟಿಸ್ ನಿಯಂತ್ರಣಕ್ಕೆ ದಾರಿಯಾಗುತ್ತದೆ.
ತೂಕ ಕಡಿಮೆ ಮಾಡಿಕೊಳ್ಳುವುದು ಸಹ ಸಹಾಯಕವೇ.. ಮಧುಮೇಹದಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತ್ವರಿತವಾಗಿ ಹೆಚ್ಚಾಗುತ್ತದೆ. ಆದ್ದರಿಂದ ಆಹಾರ ಸೇವನೆಯಲ್ಲಿ ಕಠಿಣ ಕ್ರಮ/ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇದರ ಕಾರಣದಿಂದಾಗಿ ತುಂಬಾ ಜನರು ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ತೊಗರಿ ಬೇಳೆ ತಿನ್ನುವುದರಿಂದ ದೇಹ ತೂಕ ನಿಯಂತ್ರಣದಲ್ಲಿರುತ್ತದೆ. ಬೇಳೆಗಳಲ್ಲಿ ಫೈಬರ್ ಪುಷ್ಕಳವಾಗಿ ಲಭ್ಯವಿದೆ. ಇದನ್ನು ತಿನ್ನುವುದರಿಂದ ಪದೇ ಪದೇ ಹಸಿವು ಆಗುವುದಿಲ್ಲ. ಇದರಿಂದ ಅತಿಯಾಗಿ ಆಹಾರ ತಿನ್ನುವುದನ್ನು ಸಹ ತಡೆಯಬಹುದು. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಶೇಖರಣೆ ಕಡಿಮೆಯಾಗುತ್ತದೆ.
(ಸೂಚನೆ: ಮೇಲೆ ತಿಳಿಸಿದ ವಿಷಯಗಳು ಕೇವಲ ಪ್ರಾಥಮಿಕ ಮಾಹಿತಿಗಾಗಿ ಒದಗಿಸಿದವು ಮಾತ್ರ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಉಪಸ್ಥಿತಿಯಲ್ಲಿ ಅವರ ಸೂಚನೆ ಮೇರೆಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ)
ಹೆಚ್ಚಿನ ಆರೋಗ್ಯ ಸುದ್ದಿಗಳಿಗಾಗಿ ಇಲ್ಲ ಕ್ಲಿಕ್ ಮಾಡಿ..