Weight Loss: ಸಂಜೆ 7 ಗಂಟೆ ನಂತರ ಆಹಾರ ಸೇವಿಸಿದರೂ ತೂಕ ಇಳಿಸಿಕೊಳ್ಳಬಹುದೇ?

ತಿಂದು ಕೊಬ್ಬು( Fat) ಕರಗಿಸಬೇಕೇ ಹೊರತು ಹಸಿದುಕೊಂಡು ಮಲಗುವುದರಿಂದಲ್ಲ, ಹೌದು ತೂಕ( Weight) ಇಳಿಸಬೇಕು ಎಂದು ಸಾಕಷ್ಟು ಮಂದಿ ಒಂದೊಂದು ಹೊತ್ತಿನ ಊಟವನ್ನೇ ಬಿಡುತ್ತಾರೆ ಹೀಗೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸೇರಿದಂತೆ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

Weight Loss: ಸಂಜೆ 7 ಗಂಟೆ ನಂತರ ಆಹಾರ ಸೇವಿಸಿದರೂ ತೂಕ ಇಳಿಸಿಕೊಳ್ಳಬಹುದೇ?
Weight Loss
Updated By: ನಯನಾ ರಾಜೀವ್

Updated on: Jun 23, 2022 | 3:28 PM

ತಿಂದು ಕೊಬ್ಬು( Fat) ಕರಗಿಸಬೇಕೇ ಹೊರತು ಹಸಿದುಕೊಂಡು ಮಲಗುವುದರಿಂದಲ್ಲ, ಹೌದು ತೂಕ( Weight) ಇಳಿಸಬೇಕು ಎಂದು ಸಾಕಷ್ಟು ಮಂದಿ ಒಂದೊಂದು ಹೊತ್ತಿನ ಊಟವನ್ನೇ ಬಿಡುತ್ತಾರೆ ಹೀಗೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸೇರಿದಂತೆ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಸಂಜೆ 7 ಗಂಟೆಯ ನಂತರ ತಿನ್ನುವುದರಿಂದ ನಿಮ್ಮ ತೂಕ ಇಳಿಯಲೂಬಹುದು ಹೆಚ್ಚು ಕೂಡ ಆಗಬಹುದು. ನಿಮ್ಮ ದೇಹವು ಯಂತ್ರದ ರೀತಿಯಲ್ಲಿ ಕೆಲಸ ಮಾಡುತ್ತದೆ. ಪ್ರತಿ ಕ್ಷಣವೂ ಕ್ಯಾಲೊರಿಯನ್ನು ಸುಡುವುದೇ ದೇಹದ ಕೆಲಸವಾಗಿರುತ್ತದೆ. ಹಾಗಿರುವಾಗ ಸಂಜೆ 7 ಗಂಟೆ ಬಳಿಕ ಊಟ ಮಾಡಿದರೂ ಕೂಡ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ.

ನೀವು 7 ಗಂಟೆ ಬಳಿಕ ತಿಂದರೂ ತೂಕ ಇಳಿಸಿಕೊಳ್ಳಬಹುದು
ಹೆಚ್ಚು ಕ್ಯಾಲೊರಿಯಿರುವ ಆಹಾರವನ್ನು ಬೆಳಗ್ಗೆ ತಿನ್ನಬೇಕು, ನೀವು ಯಾವಾಗ ತಿನ್ನುತ್ತೀರಿ ಎನ್ನುವುದಕ್ಕಿಂತ ಏನು ತಿನ್ನುತ್ತೀರಿ ಎಂಬುದು ಕೂಡ ಪ್ರಮುಖವಾಗಿರುತ್ತದೆ. ನಿಮ್ಮ ಊಟದ ತಟ್ಟೆಯು ಫೈಬರ್, ವೆಜಿಟೇಬಲ್, ಪ್ರೋಟೀನ್ ಹಾಗೂ ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡಿರಲಿ ಇಂತಹ ಆಹಾರವನ್ನು ಸೇವನೆ ಮಾಡಿದಾಗ ಇಡೀ ದಿನವು ನಿಮ್ಮ ಹೊಟ್ಟೆ ತುಂಬಿರುವಂತಹ ಅನುಭವವಿರಲಿದೆ.

ಊಟದ ಬಳಿಕ 10-15 ನಿಮಿಷ ವಾಕಿಂಗ್ ಮಾಡಿ
ಊಟದ ಬಳಿಕ 10-15 ನಿಮಿಷಗಳ ಕಾಲ ವಾಕಿಂಗ್ ಮಾಡಿ ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಮೆಟಬಾಲಿಸಂ ಹೆಚ್ಚಾಗುತ್ತದೆ. ಮಲಗುವ 3 ಗಂಟೆಗಳ ಮೊದಲು ಊಟ ಮಾಡಿ.

ಸಕ್ಕರೆಯುಕ್ತ ಆಹಾರವನ್ನು ಕಡಿಮೆ ಮಾಡಿ
ಐಸ್​ಕ್ರೀಂ, ಕುಕೀಸ್, ಸಕ್ಕರೆಯುಕ್ತ ಆಹಾರಗಳು, ಸಕ್ಕರೆ ಮಿಶ್ರಿತ ಜ್ಯೂಸ್​ಗಳನ್ನು ಸೇವನೆ ಮಾಡಬೇಡಿ.

ರಾತ್ರಿ ಲೈಟ್​ ಆದ ಆಹಾರ ಸೇವಿಸಿ
ಕೆಲವರಿಗೆ ಬೆಳಗ್ಗೆ ತುಂಬಾ ಹಸಿವಾಗುವುದಿಲ್ಲ ಹಾಗಾಗಿ ಮಧ್ಯಾಹ್ನ ನಂತರದಲ್ಲಿ ಹೆಚ್ಚು ಆಹಾರವನ್ನು ಸೇವನೆ ಮಾಡುತ್ತಾರೆ, ಆದರೆ ಹೀಗೆ ಮಾಡುವುದರಿಂದ ತೂಕ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ. ಬೆಳಗ್ಗೆ ಉತ್ತಮ ಆಹಾರವನ್ನು ಸೇವಿಸಿ ಮಧ್ಯಾಹ್ನವೂ ನಿಮಗೆ ಬೇಕಾದ ಆಹಾರವನ್ನು ತಿನ್ನಿ ಆದರೆ ಸಂಜೆ ಸೇವಿಸುವ ಆಹಾರ ಮಿತವಾಗಿರಲಿ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ