ಮಂಕಿಪಾಕ್ಸ್ ಹಾಗೂ ಕೊರೊನಾ ಸೋಂಕು ಏಕಕಾಲಕ್ಕೆ ದೇಹದಲ್ಲಿರಬಹುದೇ?

| Updated By: ನಯನಾ ರಾಜೀವ್

Updated on: May 26, 2022 | 10:35 AM

ಕೊರೊನಾ ಸೋಂಕು ಸತತ ಎರಡು ವರ್ಷಗಳ ಕಾಲ ವಿಶ್ವದ ಜನರನ್ನು ಮೃತ್ಯುಕೂಪಕ್ಕೆ ತಳ್ಳಿತ್ತು. ಭಯದಲ್ಲೇ ಬದುಕುತ್ತಿದ್ದ ಜನರು ಇದೀಗ ಸ್ವಲ್ಪ ನಿಟ್ಟುಸಿರು ಬಿಡುವ ಸಂದರ್ಭದಲ್ಲಿ ಮಂಕಿ ಪಾಕ್ಸ್ ಎನ್ನುವ ಮತ್ತೊಂದು ಸೋಂಕು ಕಾಣಿಸಿಕೊಂಡಿದೆ

ಮಂಕಿಪಾಕ್ಸ್ ಹಾಗೂ ಕೊರೊನಾ ಸೋಂಕು ಏಕಕಾಲಕ್ಕೆ ದೇಹದಲ್ಲಿರಬಹುದೇ?
Monkeypox
Follow us on

ಕೊರೊನಾ ಸೋಂಕು ಸತತ ಎರಡು ವರ್ಷಗಳ ಕಾಲ ವಿಶ್ವದ ಜನರನ್ನು ಮೃತ್ಯುಕೂಪಕ್ಕೆ ತಳ್ಳಿತ್ತು. ಭಯದಲ್ಲೇ ಬದುಕುತ್ತಿದ್ದ ಜನರು ಇದೀಗ ಸ್ವಲ್ಪ ನಿಟ್ಟುಸಿರು ಬಿಡುವ ಸಂದರ್ಭದಲ್ಲಿ ಮಂಕಿ ಪಾಕ್ಸ್ ಎನ್ನುವ ಮತ್ತೊಂದು ಸೋಂಕು ಕಾಣಿಸಿಕೊಂಡಿದೆ. ಇದೀಗ ಮಂಕಿಪಾಕ್ಸ್ ಹಾಗೂ ಕೊರೊನಾ ಸೋಂಕು ಏಕಕಾಲಕ್ಕೆ ಮುನುಷ್ಯನ ದೇಹದಲ್ಲಿರಬಹುದೇ ಎನ್ನುವ ಪ್ರಶ್ನೆ ಎದ್ದಿದೆ ಇದಕ್ಕೆ ವೈದ್ಯರು ಉತ್ತರ ನೀಡಿದ್ದಾರೆ.

ಮಂಕಿಪಾಕ್ಸ್ ಹಾಗೂ ಕೊರೊನಾ ಸೋಂಕು ಏಕಕಾಲಕ್ಕೆ ಮನುಷ್ಯನ ದೇಹವನ್ನು ಸೇರಬಹುದಾಗಿದೆ, ಎರಡೂ ಒಟ್ಟಿಗೆ ಸೇರಿದರೆ ಮರಣ ಸಂಭವಿಸುವ ಸಾಧ್ಯತೆ ಇದೆ. ಮಂಕಿಪಾಕ್ಸ್ ಹಾಗೂ ಕೊರೊನಾ ಸೋಂಕು ಎರಡೂ ಬೇರೆ ಬೇರೆ ವೈರಸ್​ಗಳಾಗಿದ್ದು, ಎರಡೂ ಏಕಕಾಲಕ್ಕೆ ಮನುಷ್ಯನ ದೇಹ ಹೊಕ್ಕರೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದೇ ಹೇಳಬಹುದು.

ಮಂಕಿಪಾಕ್ಸ್​ನಿಂದ ಸಾವನ್ನಪ್ಪುವ ಪ್ರಮಾಣ ಶೇ.1 ರಿಂದ 10ರಷ್ಟಿದೆ, ಆದರೆ ಕೊರೊನಾ ಸೋಂಕು ಅದೇ ಸಮಯದಲ್ಲಿ ದೇಹದಲ್ಲಿದ್ದರೆ ಸೋಂಕು ತೀವ್ರವಾಗಿ ಮರಣ ಸಂಭವಿಸಬಹುದು. ಲಕ್ಷಣಗಳು ಒಂದೇ ರೀತಿ ಇರಬಹುದು ಆದರೆ ರೋಗ ಪತ್ತೆಯಾಗಬೇಕಷ್ಟೆ. ಮಂಕಿಪಾಕ್ಸ್ ಕೊರೊನಾ ಸೋಮಕಿನಷ್ಟು ವೇಗವಾಗಿ ಹರಡುವುದಿಲ್ಲ.

ಮಂಕಿಪಾಕ್ಸ್‌ನ ಲಕ್ಷಣಗಳೇನು?
ಐರೋಪ್ಯ ಪ್ರದೇಶದಲ್ಲಿನ ಯುಎನ್ ಹೆಲ್ತ್ ಏಜೆನ್ಸಿಯ ನಿರ್ದೇಶಕ ಡಾ ಹ್ಯಾನ್ಸ್ ಕ್ಲೂಗೆ ಪ್ರಕಾರ, ಜ್ವರ, ಚರ್ಮದ ದದ್ದು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ರೋಗಲಕ್ಷಣಗಳು ಸಾಮಾನ್ಯವಾಗಿ ಈ ರೋಗದಲ್ಲಿ ಕಂಡುಬರುತ್ತವೆ. ಹಲವು ಬಾರಿ ದೇಹದಲ್ಲಿ ನೋವಿನ ಅನುಭವ ಉಂಟಾಗುತ್ತದೆ ಮತ್ತು ಚರ್ಮದ ಮೇಲೆ ಬೊಬ್ಬೆಗಳು ಹೊರಬರುತ್ತದೆ. ದೇಹದ ಮೇಲೆ ಕೆಂಪು ಕಲೆಗಳು ಸಹ ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ, ಸೋಂಕಿತ ರೋಗಿಗಳು ಯಾವುದೇ ಚಿಕಿತ್ಸೆಯಿಲ್ಲದೆ ಚೇತರಿಸಿಕೊಳ್ಳುತ್ತಾರೆ ಎನ್ನಲಾಗಿದೆ.

ಮಂಕಿಪಾಕ್ಸ್ ಒಂದು ವೈರಲ್ ಕಾಯಿಲೆಯಾಗಿದ್ದು, ಇದೀಗ ಯುರೋಪ್ ನ ಅನೇಕ ದೇಶಗಳು ಈ ಕಾಯಿಲೆಯ ಹಿಡಿತಕ್ಕೆ ಸಿಲುಕಿಕೊಳ್ಳುತ್ತಿವೆ. ಸುಮಾರು 100ಕ್ಕೂ ಅಧಿಕ ಜನರು ಈ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಅಲರ್ಟ್ ಜಾರಿಗೊಳಿಸಿದೆ.

ಅಮೆರಿಕ ಸೇರಿದಂತೆ ವಿಶ್ವದ ಕೆಲವು ಭಾಗಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು WHO ಆತಂಕ ವ್ಯಕ್ತಪಡಿಸಿದೆ. ಇನ್ನೊಂದೆಡೆ, ಕೋವಿಡ್ ಸಾಂಕ್ರಾಮಿಕ ರೋಗಕ್ಕಿಂತ ಮಂಕಿಪಾಕ್ಸ್ ಸೋಂಕು ಹೆಚ್ಚು ಅಪಾಯಕಾರಿ ಸಾಬೀತಾಗಬಹುದೇ ಎಂಬ ಆತಂಕದಲ್ಲಿ ಆರೋಗ್ಯ ತಜ್ಞರಿದ್ದಾರೆ.

ಪ್ರಮುಖವಾಗಿ ಮಧ್ಯ ಮತ್ತು ಪಶ್ಚಿಮ ಆಪ್ರಿಕಾದ ದೇಶಗಳಲ್ಲಿ ಕಂಡು ಬರುವ ಸ್ಥಳೀಯ ಕಾಯಿಲೆಯಾಗಿದೆ. WHO ಪ್ರಕಾರ, ಉಷ್ಣವಲಯದ ಮಳೆಕಾಡು ಪ್ರದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತವೆ. ಆದರೆ, ಕಳೆದ ಕೆಲವು ದಿನಗಳಿಂದ ಜಗತ್ತಿನ ಹಲವೆಡೆ ಮಂಗನ ಕಾಯಿಲೆಯ ಪ್ರಕರಣಗಳು ವರದಿಯಾಗುತ್ತಿರುವುದು ಒಂದು ಆತಂಕಕಾರಿ ಸಂಗತಿಯಾಗಿದೆ.

ಕೋವಿಡ್​ಗಿಂತಲೂ ಅಪಾಯಕಾರಿಯೇ?
ಒಟಾಗೋ ವಿಶ್ವವಿದ್ಯಾನಿಲಯದಲ್ಲಿ ಜೈವಿಕ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿರುವ ಕರ್ಟ್ ಕ್ರೌಸ್ ಅವರ ಪ್ರಕಾರ, ಕೋವಿಡ್‌ನಂತೆ ಮಂಕಿಪಾಕ್ಸ್ ಅಪಾಯಕಾರಿ ಕಾಯಿಲೆ ಅಲ್ಲ ಎನ್ನಲಾಗಿದೆ. ಇದುವರೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ದೃಢೀಕರಿಸಲ್ಪಟ್ಟ ಒಟ್ಟು 92 ಮಂಕಿಪಾಕ್ಸ್​ ಪ್ರಕರಣಗಳು ಪತ್ತೆಯಾಗಿದ್ದು, 28 ರೋಗಿಗಳು ಶಂಕಿತ ರೋಗಿಗಳಾಗಿದ್ದಾರೆ. ಅವರಲ್ಲಿಯೂ ಇದು ದೃಢಪಡಬಹುದು ಎಂದು WHO ಆತಂಕ ವ್ಯಕ್ತಪಡಿಸಿದೆ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ