ಕೊರೊನಾ ಇರಲಿ, ಇಲ್ಲದಿರಲಿ ಆರೋಗ್ಯವೇ ಭಾಗ್ಯ ಎಂಬುದನ್ನು ಅರಿತು ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ! ಹೇಗೆ ಅಂತೀರಾ?

Healthy Diet: ನೀವು ಈ ಆಹಾರ ಪದಾರ್ಥ, ತರಕಾರಿಗಳನ್ನು ಸೇವಿಸುತ್ತಿದ್ದರೆ ನಿಮಗೆ ಕೋವಿಡ್ ಸೋಂಕು ತಗಲುವ ಅಪಾಯ ಶೇ. 40 ರಷ್ಟಿ ಕಡಿಮೆ ಇರುತ್ತದೆ! ಅಮೆರಿಕದ ಬೋಸ್ಟನ್​ನಲ್ಲಿರುವ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನಾನಾ ರೀತಿಯ ಆಹಾರ ಅಭ್ಯಾಸ ಕ್ರಮಗಳು ಮತ್ತು ವಿವಿಧ ರೀತಿಯ ​ಆಹಾರ ಪದಾರ್ಥ, ತರಕಾರಿಗಳ ಸೇವನೆ ಮತ್ತು ಅದರಿಂದ ಆಗುವ ಪರಿಣಾಮಗಳ ಬಗ್ಗೆ ಪರಿಶೋಧನೆಗಳನ್ನು ಇತ್ತೀಚೆಗೆ ಕೈಗೊಂಡಿತ್ತು. ಆ ಅಧ್ಯಯನಗಳ ವರದಿಯ ಆಧರಿಸಿ ಆಹಾರನ ಕ್ರಮಗಳ ಬಗ್ಗೆ ಹೀಗೆ ಹೇಳಬಹುದು.

ಕೊರೊನಾ ಇರಲಿ, ಇಲ್ಲದಿರಲಿ ಆರೋಗ್ಯವೇ ಭಾಗ್ಯ ಎಂಬುದನ್ನು ಅರಿತು ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ! ಹೇಗೆ ಅಂತೀರಾ?
ನೀವು ಈ ತರಕಾರಿಗಳನ್ನು ಸೇವಿಸುತ್ತಿದ್ದರೆ ಕೋವಿಡ್ ಬರುವ ಅಪಾಯ ಶೇ. 40 ರಷ್ಟಿ ಕಡಿಮೆ ಇರುತ್ತದೆ! ಅವು ಯಾವುವು ಗೊತ್ತಾ?
Follow us
| Updated By: ಸಾಧು ಶ್ರೀನಾಥ್​

Updated on: May 25, 2022 | 7:33 PM

ಯುಎಸ್​ಎ ಬೋಸ್ಟನ್​ನಲ್ಲಿರುವ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಇತ್ತೀಚೆಗೆ ಅಂದರೆ ಕೊರೊನಾ ಸೋಂಕು ಕಾಲದಲ್ಲಿ ಸಾಕಷ್ಟು ಅಧ್ಯಯನಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ಪ್ರಮುಖವಾದುದ್ದೊಂದು ವಿವಿಧ ಆಹಾರ ಪದಾರ್ಥ ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಜನರ ಮೇಲೆ ಕೋವಿಡ್ ಸೋಂಕು (Corona Virus) ತಗಲುವ ಅಪಾಯವನ್ನು ತಗ್ಗಿಸಬಹುದಾ ಎಂಬುದಾಗಿದೆ. ಇದರ ಆಧಾರದ ಮೇಲೆ ಕೋವಿಡ್ ಅಪಾಯವನ್ನು ಶೇ. 40 ರಷ್ಟು ಕಡಿಮೆ ಮಾಡಬಹುದು ಎಂದು ತಿಳಿದುಬಂದಿದೆ. ಹೆಚ್ಚು ಹೆಚ್ಚು ಹಣ್ಣುಗಳು, ತರಕಾರಿಗಳು, ಕಾಳುಗಳು, ಡ್ರೈ ಫ್ರೂಟ್ಸ್​​ ತಿನ್ನುವುದರಿಂದ (Covid-19) ಕೋವಿಡ್ ಬರುವ ಅಪಾಯವನ್ನು ಶೇ. 40 ರಷ್ಟು ಕಡಿಮೆ ಮಾಡಬಹುದಂತೆ! ಅದೇ ಕಡಿಮೆ ಪ್ರಮಾಣದಲ್ಲಿ ಹಣ್ಣುಗಳು ಮತ್ತು ತರಕಾರಿ ಸೇವಿಸುವವರಿಗೆ ಕೋವಿಡ್ ಬರುವ ಅಪಾಯ ಹೆಚ್ಚು ಎಂಬುದು ಈ ಅಧ್ಯಯನದ ಸಾರವಾಗಿದೆ. ಏಕೆಂದರೆ ಹಣ್ಣು, ತರಕಾರಿಗಳನ್ನು ನಿಯಮಿತವಾಗಿ ಹೆಚ್ಚು ಹೆಚ್ಚು ಸೇವಿಸುತ್ತಾ ಬಂದರೆ ನಮ್ಮಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ (Immunity).

ಉತ್ತರಮ ಪೋಷಕಾಂಶ ಆಹಾರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊರೋನಾ ಕಾಲದಲ್ಲಿ ಈ ವಿಷಯ ಅನೇಕರಿಗೆ ಮನದಟ್ಟಾಗಿದೆ. ಈಗೇನು ಕೊರೊನಾ ಇಲ್ಲಾ, ಏನೂ ಇಲ್ಲಾ ಅಂತಾ ನಿರ್ಲಕ್ಷ್ಯ ತಾಳಬೇಡಿ. ಕೊರೊನಾ ಇರಲಿ ಇಲ್ಲದಿರಲಿ, ಆರೋಗ್ಯವೇ ಭಾಗ್ಯ ಎಂಬುದನ್ನು ಅರಿತು ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಿ. ಆದರೆ ಈ ಫಾಸ್ಟ್​ ಫುಡ್​ ಯುಗದಲ್ಲಿ ಅನೇಕ ಜನರಿಗೆ ಆರೋಗ್ಯತವಂತ ಆಹಾರ ಯಾವುದು? ಆರೋಗ್ಯ ಹಾಳು ಮಾಡುವ ಆಹಾರ ಯಾವುದು ಎಂಬುದರ ನಡುವಣ ಬಹುಮುಖ್ಯ ವ್ಯತ್ಯಾಸ ಗೊತ್ತಾಗುವುದಿಲ್ಲ. ಸುಮ್ನೇ ಕುರಕುಲು ತಿಂಡಿ ತಿನ್ನುತ್ತಾ ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕೆ ಕಾರಣವಾಗಿಬಿಟ್ತಾರೆ. ಒಳ್ಳೆಯ ಪೋಷಕಾಂಶದ ಆಹಾರ ವೈರಸ್​ ಗೆ ತಡೆಯೊಡ್ಡಬಲ್ಲದು. ಜೊತೆಗೆ, ಅಕಸ್ಮಾತ್​ ವೈರಸ್​ ತಗುಲಿದರೂ ಈ ಉತ್ತಮ ಆಹಾರಾಭ್ಯಾಸದಿಂದ ಬೇಗನೇ ಗುಣಮುಖರಾಗಬಹುದು ಅನ್ನುತ್ತಾರೆ ಈ ಪರಿಣತರು.

ಇದನ್ನೂ ಓದಿ: 8 Years Of Modi Government: ಚಿಕ್ಕ ವಯಸ್ಸಲ್ಲೆ RSS​ ಪ್ರಚಾರಕನಾಗಿ ಸಮಾಜಮುಖಿಯಾದ ನರೇಂದ್ರ ಮೋದಿ, ಮುಂದೆ ದೇಶ ಸೇವೆಯಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ!

ಜಿಂಕ್ (Zinc), ವಿಟಮಿನ್ ಸಿ (Vitamin C), ವಿಟಮಿನ್ ಡಿ (Vitamin D), ಸೆಲಿನಿಯಂ (Selenium) ಅಂತಹ ಖನಿಜಾಂಶ ಯುಕ್ತ ಆಹಾರಗಳು ನಮಗೆ ಕೋವಿಡ್ ವೈರಸ್ ವಿರುದ್ಧ ಹೋರಾಡಲು ಅಗತ್ಯ ತಾಕತ್ತು ನೀಡುತ್ತದೆ. ಕೋವಿಡ್​ ಸೋಂಕು ಬಂದವರಿಗೆ ವೈದ್ಯರು ತಕ್ಷಣ ಈ ಆಹಾರಾಂಶಗಳನ್ನು ನೀಡತೊಡಗುತ್ತಾರೆ. ಅಂದರೆ ಸೋಂಕು ತಗುಲಿದವರಲ್ಲಿ ಇವುಗಳ ಕೊರತೆ ಇದೆಯೆಂದೂ ಮತ್ತು ಇವುಗಳನ್ನು ನೀಡಿದರೆ ಸೋಂಕಿನಿಂದ ಶೀಘ್ರವೇ ಮುಕ್ತಿ ಕಾಣಬಹುದು ಎಂಬುದು ಇದರ ಸಾರವಾಗಿದೆ.

ಈ ಜಿಂಕ್​ ಅನ್ನೆ ತೆಗೆದುಕೊಳ್ಳಿ. ಅದರಲ್ಲಿ ಆಂಟಿ ಇನ್​ಫ್ಲಮೇಟರಿ ಗುಣಗಳು ಇರುತ್ತವೆ. ಒಬ್ಬ ವ್ಯಕ್ತಿಯ ದೇಹದಲ್ಲಿ ತಕ್ಕಮಟ್ಟಿಗೆ ಜಿಂಕ್ ಇದ್ದರೆ ಅಂತಹ ವ್ಯಕ್ತಿ ಶೀಘ್ರವೇ ಗುಣಮುಖರಾಗಬಹುದು. ಈ ಜಿಂಕ್ ಅಂಶವು ಕಾಳುಗಳು, ದ್ವಿದಳ ಧಾನ್ಯಗಳು, ಪನ್ನೀರ್​ ನಲ್ಲಿ ಲಭ್ಯವಿರುತ್ತವೆ. ವಿಟಮಿನ್ ಸಿ ಸಹ ಅಷ್ಟೇ ಮುಖ್ಯ. ಇದರಲ್ಲಿ ಆಂಟಿ ಇನ್​ಫ್ಲಮೇಟರಿ, ಆಂಟಿ ಆಕ್ಸಿಡಂಟ್ ಗುಣಗಳು ಇರುತ್ತವೆ. ಶ್ವಾಸಕೋಶದಲ್ಲಿ ಸೋಂಕನ್ನು ಇದು ತಟಡೆಗಟ್ಟುತ್ತದೆ. ವಿಟಮಿನ್ ಡಿ ಸಹ ಅಷ್ಟೇ ಮುಖ್ಯ. ಇದರ ಜೊತೆಗೆ ಕಿವಿ ಹಣ್ಣು, ಪೈನಾಪಲ್, ಚೇಪೆಕಾಯಿಯನ್ನು ಹೆಚ್ಚು ಹೆಚ್ಚು ತಿನ್ನಬೇಕು. ಚಿಕನ್, ಮೀನು, ಮೊಟ್ಟೆ ಒಳ್ಳೆಯದ್ದೇ ಅನ್ನಬುದಾದರೂ ರೆಡ್​ ಮೀಟ್​ ಅನ್ನು ದೂರವಿಡಿ. ಸಂಸ್ಕರಿತ ಆಹಾರ ಪಾದಾರ್ಥಗಳನ್ನು ಅಸಲು ಮುಟ್ಟಬೇಡಿ.

To read in Telugu click the Link

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ