How to increase height: ನಿಮ್ಮ ಎತ್ತರ ಹೆಚ್ಚಿಸಲು ಕೆಲವು ನೈಸರ್ಗಿಕ ಮಾರ್ಗಗಳು ಇಲ್ಲಿವೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 09, 2024 | 6:32 PM

ಎತ್ತರದ ವ್ಯಕ್ತಿಗಳನ್ನು ನೋಡುವಾಗ ನಮಗೆ ನಾವು ಹಾಗಿರಬಾರದಿತ್ತೇ ಎನಿಸುವುದು ಸಹಜ. ಆದರೆ ಕಡಿಮೆ ಎತ್ತರವಿರುವ ವ್ಯಕ್ತಿಯನ್ನು ಕೀಳರಿಮೆಯಿಂದ ನೋಡುವುದು ಕೂಡ ತಪ್ಪು. ಉದ್ದವಾಗಿರುವುದು ಅಥವಾ ಕುಳ್ಳಗಿರುವುದು ನಮ್ಮ ಪೂರ್ವಜರಿಂದ ನಮಗೆ ಬಂದಿರುತ್ತದೆ. ಉದಾಹರಣೆಗೆ, ನಿಮ್ಮ ಕುಟುಂಬದಲ್ಲಿ ಎಲ್ಲರೂ ಎತ್ತರವಾಗಿದ್ದರೆ, ನಿಮ್ಮ ಎತ್ತರವು ಹೆಚ್ಚಾಗಿರುವ ಸಾಧ್ಯತೆಗಳಿವೆ. ಅದೇ ನಿಮ್ಮ ಕುಟುಂಬದಲ್ಲಿ ಹೆಚ್ಚಾಗಿ ಕಡಿಮೆ ಎತ್ತರವಿರುವ ವ್ಯಕ್ತಿಗಳಿದ್ದರೆ, ನಿಮ್ಮ ಎತ್ತರವೂ ಕಡಿಮೆ ಇರಬಹುದು. ಆದರೆ ಇದೆಲ್ಲದರ ಹೊರತಾಗಿ ನಿಮ್ಮ ಎತ್ತರವನ್ನು ಹೆಚ್ಚಿಸಲು ಕೆಲವು ನೈಸರ್ಗಿಕ ಮಾರ್ಗಗಳಿವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಎತ್ತರ ಹೆಚ್ಚಿಸಲು ಏನು ಮಾಡಬೇಕು? ಎಷ್ಟು ವಯಸ್ಸಿನವರೆಗೆ ಹೆಚ್ಚಾಗುತ್ತದೆ? ಬೆಳವಣಿಗೆ ನಿಂತ ನಂತರ ಅದನ್ನು ಹೆಚ್ಚಿಸಬಹುದೇ? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ.

How to increase height: ನಿಮ್ಮ ಎತ್ತರ ಹೆಚ್ಚಿಸಲು ಕೆಲವು ನೈಸರ್ಗಿಕ ಮಾರ್ಗಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us on

ಕುಳ್ಳಗಿದ್ದರೆ ಒಂದು ರೀತಿಯ ಮುಜುಗರ, ಎತ್ತರದ ವ್ಯಕ್ತಿಗಳನ್ನು ನೋಡುವಾಗ ನಾವು ಹಾಗಿರಬಾರದಿತ್ತೇ ಎನಿಸುವುದು ಸಹಜ. ಆದರೆ ಕಡಿಮೆ ಎತ್ತರವಿರುವ ವ್ಯಕ್ತಿಯನ್ನು ಕೀಳರಿಮೆಯಿಂದ ನೋಡುವುದು ಕೂಡ ತಪ್ಪು. ಉದ್ದವಾಗಿರುವುದು ಅಥವಾ ಕುಳ್ಳಗಿರುವುದು ನಮ್ಮ ಪೂರ್ವಜರಿಂದ ನಮಗೆ ಬಂದಿರುತ್ತದೆ. ಉದಾಹರಣೆಗೆ, ನಿಮ್ಮ ಕುಟುಂಬದಲ್ಲಿ ಎಲ್ಲರೂ ಎತ್ತರವಾಗಿದ್ದರೆ, ನಿಮ್ಮ ಎತ್ತರವು ಹೆಚ್ಚಾಗಿರುವ ಸಾಧ್ಯತೆಗಳಿವೆ. ಅದೇ ನಿಮ್ಮ ಕುಟುಂಬದಲ್ಲಿ ಹೆಚ್ಚಾಗಿ ಕಡಿಮೆ ಎತ್ತರವಿರುವ ವ್ಯಕ್ತಿಗಳಿದ್ದರೆ, ನಿಮ್ಮ ಎತ್ತರವೂ ಕಡಿಮೆ ಇರಬಹುದು. ಆದರೆ ಇದೆಲ್ಲದರ ಹೊರತಾಗಿ ನಿಮ್ಮ ಎತ್ತರವನ್ನು ಹೆಚ್ಚಿಸಲು ಕೆಲವು ನೈಸರ್ಗಿಕ ಮಾರ್ಗಗಳಿವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಎತ್ತರ ಹೆಚ್ಚಿಸಲು ಏನು ಮಾಡಬೇಕು? ಎಷ್ಟು ವಯಸ್ಸಿನವರೆಗೆ ಹೆಚ್ಚಾಗುತ್ತದೆ? ಬೆಳವಣಿಗೆ ನಿಂತ ನಂತರ ಅದನ್ನು ಹೆಚ್ಚಿಸಬಹುದೇ? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ.

ಸರಿಯಾದ ಪೋಷಣೆ ಮತ್ತು ಆರೋಗ್ಯಕರ ಜೀವನಶೈಲಿ;

ನಾವು ಸೇವಿಸುವ ಆಹಾರ ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಇದರಲ್ಲಿ ಎತ್ತರವೂ ಸೇರಿದೆ. ಅಂತೆಯೇ, ನಮ್ಮ ಜೀವನಶೈಲಿಯೂ ನಮ್ಮ ಎತ್ತರದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಎತ್ತರ ಹೆಚ್ಚಾಗದಿರುವಾಗ, ಸರಿಯಾದ ಪೋಷಣೆ ಮತ್ತು ಆರೋಗ್ಯಕರ ಜೀವನಶೈಲಿಯ ಸಹಾಯದಿಂದ ನಿಮ್ಮ ಎತ್ತರವನ್ನು ಸ್ವಲ್ಪ ಹೆಚ್ಚಿಸಬಹುದು.

ತಜ್ಞರು ಹೇಳುವುದೇನು?

ಯಶೋದಾ ಆಸ್ಪತ್ರೆಯ ಡಾ. ರಾಹುಲ್ ಚೌಡಾ ಅವರು ಹೇಳುವ ಪ್ರಕಾರ, 18 ವರ್ಷದ ನಂತರ ಎತ್ತರದಲ್ಲಿ ಪ್ರಮುಖ ಬದಲಾವಣೆಗಳಾಗುವುದು ಬಹಳ ಕಡಿಮೆ, ಅದರ ಮೊದಲು ಬೆಳವಣಿಗೆ ಆಗುತ್ತದೆ. ಆದರೆ ನಾವು ಸರಿಯಾದ ಪೌಷ್ಠಿಕಾಂಶ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಂಡರೆ, 18 ವರ್ಷಗಳ ನಂತರವೂ ಮೂಳೆ ಮತ್ತು ಭಂಗಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನಿಮ್ಮ ಎತ್ತರದ ಮೇಲೆ ಪರಿಣಾಮ ಬೀರಬಹುದು. ರಾಹುಲ್ ಅವರ ಪ್ರಕಾರ, ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೋಟೀನ್ ಹೊಂದಿರುವ ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮವು ನಿಮ್ಮ ಎತ್ತರ ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ದೇಶದಲ್ಲಿ ಮೊದಲ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿ, ಕೋತಿಗಳಿಗೂ ಮಂಕಿಪಾಕ್ಸ್​​​ಗೂ ಸಂಬಂಧವಿದೆಯೇ?

ಎತ್ತರವನ್ನು ಹೆಚ್ಚಿಸಲು ನೀವು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು;

  • ಕ್ಯಾಲ್ಸಿಯಂ ಸೇವನೆಯನ್ನು ಹೆಚ್ಚಿಸಿ: ಮೂಳೆಗಳನ್ನು ಬಲಪಡಿಸಲು ಕ್ಯಾಲ್ಸಿಯಂ ತುಂಬಾ ಅವಶ್ಯಕ. ಮೂಳೆಗಳನ್ನು ಬಲಪಡಿಸುವುದರ ಜೊತೆಗೆ, ಇದು ವ್ಯಕ್ತಿಯು ಎತ್ತರವಾಗಿ ಕಾಣಲು ಸಹಾಯ ಮಾಡುತ್ತದೆ. ಅದರ ಪೋಷಣೆಗಾಗಿ, ಹಾಲು, ಹಸಿರು ತರಕಾರಿಗಳು ಮತ್ತು ಡೈರಿ ಉತ್ಪನ್ನಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.
  • ವಿಟಮಿನ್ ಡಿ ತೆಗೆದುಕೊಳ್ಳಿ: ಮೂಳೆಗಳನ್ನು ಬಲಪಡಿಸಲು ಕ್ಯಾಲ್ಸಿಯಂ ಅನ್ನು ಸರಿಯಾಗಿ ಹೀರಿಕೊಳ್ಳಲು ವಿಟಮಿನ್ ಡಿ ಬಹಳ ಮುಖ್ಯ, ಇದು ಮೂಳೆಗಳನ್ನು ಬಲಪಡಿಸುತ್ತದೆ. ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಕೊರತೆಯನ್ನು ನಿವಾರಿಸಿಕೊಳ್ಳಬಹುದು. ಪ್ರತಿದಿನ 15- 20 ನಿಮಿಷಗಳ ಕಾಲ ಬೆಳಗಿನ ಬಿಸಿಲಿನಲ್ಲಿ ಕುಳಿತುಕೊಳ್ಳಿ. ಇದಲ್ಲದೆ, ಮೀನು, ಮೊಟ್ಟೆ ಮತ್ತು ಧಾನ್ಯಗಳನ್ನು ಸೇವಿಸಿ.
  • ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿ: ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಬಹಳ ಮುಖ್ಯ. ಅದಕ್ಕಾಗಿ ಆಹಾರದಲ್ಲಿ ಮಾಂಸ, ಬೀನ್ಸ್ ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸಿ. ನಿಮ್ಮ ಎತ್ತರ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.
  • ಸತುವಿನ ಕೊರತೆ ಉಂಟಾಗಲು ಬಿಡಬೇಡಿ: ಸತುವು ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ಅದರ ಕೊರತೆಯು ಸಹ ನಮ್ಮ ಎತ್ತರದ ಮೇಲೆ ಪರಿಣಾಮ ಬೀರುತ್ತದೆ. ಈ ಕೊರತೆಯನ್ನು ನೀಗಿಸಲು ಬೀಜ, ಬೇಳೆಕಾಳುಗಳು ಮತ್ತು ಧಾನ್ಯಗಳನ್ನು ಸೇವನೆ ಮಾಡಿ.
  • ವ್ಯಾಯಾಮ ಮಾಡಿ: ಯೋಗ, ಪಿಲೇಟ್ಸ್ ಮತ್ತು ಸ್ಟ್ರೆಚಿಂಗ್ ನಿಮ್ಮ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಸಾಕಷ್ಟು ನಿದ್ರೆ ಮಾಡಿ: ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುವ ಹಾರ್ಮೋನ್ ನಿದ್ರೆಯ ಸಮಯದಲ್ಲಿ ಮಾತ್ರ ಬಿಡುಗಡೆಯಾಗುತ್ತದೆ, ಆದ್ದರಿಂದ ಪ್ರತಿದಿನ 7- 8 ಗಂಟೆಗಳ ಕಾಲ ನಿದ್ರೆ ಮಾಡಿ.
  • ಹೈಡ್ರೇಟ್ ಆಗಿರಿ: ನಮ್ಮ ದೇಹಕ್ಕೆ ನೀರು ತುಂಬಾ ಅವಶ್ಯಕ. ಇದು ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ಬಲಪಡಿಸುತ್ತದೆ, ಆದ್ದರಿಂದ ಪ್ರತಿದಿನ 2- 3 ಲೀ. ನೀರನ್ನು ತಪ್ಪದೆ ಕುಡಿಯಿರಿ. ದೇಹದಲ್ಲಿ ನೀರಿನ ಕೊರತೆ ಉಂಟಾಗಲು ಬಿಡಬೇಡಿ.

ಆರೋಗ್ಯ ಸುದದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ