ಕ್ಯಾನ್ಸರ್ ಗೆ ಆಯುರ್ವೇದದಿಂದ ಮುಕ್ತಿ ಸಿಗುತ್ತದೆಯೇ? ತಜ್ಞರು ಹೇಳುವುದೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 16, 2025 | 9:55 AM

ಆಯುರ್ವೇದವು ಭಾರತದ ಪ್ರಾಚೀನ ವೈದ್ಯಕೀಯ ವ್ಯವಸ್ಥೆ. ಇದರ ಅಡಿಯಲ್ಲಿ ಅನೇಕ ರೋಗಗಳನ್ನು ನಿವಾರಣೆ ಮಾಡಬಹುದಾಗಿದೆ. ಅದರಲ್ಲಿ ಕ್ಯಾನ್ಸರ್ ಕೂಡ ಒಂದು. ಆದರೆ ಈ ರೋಗಕ್ಕೆ ಆಯುರ್ವೇದದ ಜೊತೆಗೆ ಆಧುನಿಕ ಔಷಧ ತೆಗೆದುಕೊಳ್ಳುವುದು ಬಹಳ ಸೂಕ್ತವೆಂದು ಪರಿಗಣಿಸಲಾಗಿದೆ. ಆಯುರ್ವೇದ ಔಷಧಿಗಳು ಕ್ಯಾನ್ಸರ್ ರೋಗಿಗಳ ನೋವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಡಾ. ಅಂಶುಮಾನ್ ಕುಮಾರ್ ಅವರು ಹೇಳಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಕ್ಯಾನ್ಸರ್ ಗೆ ಆಯುರ್ವೇದದಿಂದ ಮುಕ್ತಿ ಸಿಗುತ್ತದೆಯೇ? ತಜ್ಞರು ಹೇಳುವುದೇನು?
ಸಾಂದರ್ಭಿಕ ಚಿತ್ರ
Follow us on

ಕ್ಯಾನ್ಸರ್ ಎಂಬ ಹೆಸರು ಕೇಳಿದ ತಕ್ಷಣ ಎಷ್ಟೇ ಗಟ್ಟಿ ಮನಸ್ಸಿನವರಲ್ಲಿಯೂ ಭಯ ಹುಟ್ಟುತ್ತದೆ. ಏಕೆಂದರೆ ಅದು ಚಿಕ್ಕ ಪುಟ್ಟ ಕಾಯಿಲೆ ಅಲ್ಲವೇ ಅಲ್ಲ. ಜೀವವನ್ನೇ ಹಿಂಡಿ ಹಿಪ್ಪೆ ಮಾಡಿ ಕೊನೆಗೆ ಉಸಿರನ್ನು ಕಸಿದುಕೊಳ್ಳಬಹುದಾದ ರೋಗ. ಆದರೆ ನಮ್ಮಲ್ಲಿರುವ ಧೈರ್ಯ ಎಲ್ಲ ರೋಗಕ್ಕೂ ಮದ್ದು. ಬಹಳ ಸಮಯದಲ್ಲಿ ಅದೇ ನಮ್ಮನ್ನು ರಕ್ಷಿಸುತ್ತದೆ. ಹಾಗಾಗಿ ಮೊದಲು ನಾವು ನಮ್ಮ ಆರೋಗ್ಯದ ಬಗ್ಗೆ ಸರಿಯಾಗಿ ತಿಳಿದಿದ್ದರೆ, ಅನೇಕ ರೋಗಗಳು ಬರುವುದನ್ನು ತಪ್ಪಿಸಬಹುದು. ಇದಕ್ಕಾಗಿ, ಪ್ರತಿದಿನ ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಅಭ್ಯಾಸ ಮಾಡಬೇಕು. ಏಕೆಂದರೆ ಕ್ಯಾನ್ಸರ್ ವಿರುದ್ಧ ಹೋರಾಡಲು, ಇವೆಲ್ಲವೂ ಸಹಾಯ ಮಾಡುತ್ತದೆ. ನೀವು ಎಲ್ಲಿಯ ವರೆಗೆ ನನ್ನ ಬಳಿ ಆಗುವುದಿಲ್ಲ ಎಂದು ಕೈಚೆಲ್ಲಿ ಕುಳಿತಿರುತ್ತೀರೋ ಅಲ್ಲಿಯವರೆಗೆ ಅದು ನಿಮ್ಮನ್ನು ಬಿಡುವುದಿಲ್ಲ. ಹಾಗಾದರೆ ಕ್ಯಾನ್ಸರ್ ಗೆ ಔಷಧವಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಡಾ. ಅಂಶುಮಾನ್ ಕುಮಾರ್ ಎಂಬುವವರು ಉತ್ತರಿಸಿದ್ದು, ಈ ಬಗ್ಗೆ ಅವರು ನೀಡಿರುವ ಸಲಹೆಗಳು ಇಲ್ಲಿವೆ.

ಅವರ ಪ್ರಕಾರ ಕ್ಯಾನ್ಸರ್ ಗೆ ಆಯುರ್ವೇದವು ಮದ್ದಾಗಬಹುದು. ಏಕೆಂದರೆ ನಿಮ್ಮ ಆಹಾರವೇ ನಿಮಗೆ ಔಷಧಿ ಎಂದು ಹೇಳುತ್ತಾರೆ. ಇದರರ್ಥ ನೀವು ಏನು ಮತ್ತು ಹೇಗೆ ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಸಂಪೂರ್ಣ ಗಮನ ಹರಿಸುವುದು ಅತ್ಯಗತ್ಯ. ಆಯುರ್ವೇದವು ನಮ್ಮ ದೇಹವು ತನ್ನನ್ನು ತಾನು ಗುಣಪಡಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಸರಿಯಾದ ನಿರ್ದೇಶನ ಮತ್ತು ಬೆಂಬಲ ಸಿಕ್ಕಾಗ ಅದು ಕಾರ್ಯರೂಪಕ್ಕೆ ಬರುತ್ತದೆ. ಆದ್ದರಿಂದ, ಆಯುರ್ವೇದವು ಕ್ಯಾನ್ಸರ್ ಗೆ ಹೇಗೆ ಸಹಾಯ ಮಾಡುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಇದು ಕೆಲವು ಅಧ್ಯಯನಗಳ ಮೂಲಕವೂ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ಡಾ. ಅಂಶುಮಾನ್ ಕುಮಾರ್ ಅವರು, ದೇಹದ ಮೂರು ದೋಷಗಳಾದ ವಾತ, ಪಿತ್ತ ಮತ್ತು ಕಫದ ಕುರಿತಾಗಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಇವು ಮೂರು ತೀವ್ರವಾಗಿ ಅಸಮತೋಲನಗೊಂಡಾಗ ಕ್ಯಾನ್ಸರ್ ಉಂಟಾಗುತ್ತದೆ ಎಂದು ಆಯುರ್ವೇದಲ್ಲಿ ಹೇಳಲಾಗಿದೆ. ಅದಲ್ಲದೆ ಹೆಚ್ಚುವರಿಯಾಗಿ, ಜೀವಾಣುಗಳು ದೇಹದಲ್ಲಿ ಸಂಗ್ರಹವಾಗಿ ಒಟ್ಟಾಗಿ ಜೀವಕೋಶಗಳನ್ನು ಹಾನಿಗೊಳಿಸುತ್ತವೆ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಕಾರಣವಾಗುತ್ತವೆ. ಹಾಗಾಗಿ ಇಂತಹ ಕಾಯಿಲೆ ವಿರುದ್ಧ ಹೋರಾಡಲು ಸಹಾಯ ಮಾಡುವ ಕೆಲವು ಗಿಡಮೂಲಿಕೆಗಳು ಆಯುರ್ವೇದದಲ್ಲಿವೆ, ಅವುಗಳೆಂದರೆ:

ಅರಿಶಿನ: ಅರಿಶಿನವು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ, ಇದು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ.

ಬೇವು: ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದು ಹಾಕುತ್ತದೆ.

ಪಂಚಕರ್ಮ ಚಿಕಿತ್ಸೆ

ಆಯುರ್ವೇದದಲ್ಲಿ ಇದಕ್ಕೆ ಬಹಳ ಮಹತ್ವ ನೀಡಲಾಗಿದ್ದು, ಇದು ದೇಹದೊಳಗಿನ ಕಲ್ಮಶಗಳನ್ನು ಶುದ್ಧೀಕರಿಸುತ್ತದೆ. ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಕರುಳಿನಲ್ಲಿ ಸಿಲುಕಿರುವ ಅನೇಕ ಹಾನಿಕಾರಕ ವಸ್ತುಗಳು ಬಿಡುಗಡೆಯಾಗುತ್ತವೆ.

ಪುನರುಜ್ಜೀವನ ಚಿಕಿತ್ಸೆ

ಆಯುರ್ವೇದದಲ್ಲಿ, ರಸಾಯನ ಚಿಕಿತ್ಸೆ (ಪುನರುಜ್ಜೀವನ ಚಿಕಿತ್ಸೆ) ಯನ್ನು ಮಾಡಲಾಗುತ್ತದೆ. ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದು, ದೇಹದ ಅಂಗಾಂಶಗಳನ್ನು ಪುನರುಜ್ಜೀವನಗೊಳಿಸಲು ಇದನ್ನು ಬಳಸಲಾಗುತ್ತದೆ.

ಇದನ್ನೂ ಓದಿ:

ಏನು ತಿನ್ನಬೇಕು, ತಿನ್ನಬಾರದು ತಿಳಿದುಕೊಳ್ಳಿ

ನಾವು ದಿನನಿತ್ಯ ಸೇವನೆ ಮಾಡುವ ಆಹಾರದಲ್ಲಿ ತಾಜಾ ಹಣ್ಣು ಮತ್ತು ತರಕಾರಿಗಳ ಪ್ರಮಾಣವನ್ನು ಹೆಚ್ಚಿಸಬೇಕು. ವಿಶೇಷವಾಗಿ ಹಸಿರು ಎಲೆಗಳ ತರಕಾರಿಗಳನ್ನು ಹೆಚ್ಚು ತಿನ್ನಬೇಕು. ಹೆಚ್ಚುವರಿಯಾಗಿ, ತಾಜಾ ಹಣ್ಣಿನ ರಸಗಳನ್ನು ಸೇವಿಸುವುದು ಒಳ್ಳೆಯದು. ಕರಿದ, ಜಂಕ್ ಫುಡ್ ಮತ್ತು ಅತಿಯಾದ ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ. ಆಯುರ್ವೇದವು ಮ್ಯಾಜಿಕ್ ಅಲ್ಲ, ಕೇವಲ ಆಯುರ್ವೇದ ಔಷಧಿಯನ್ನು ತೆಗೆದುಕೊಂಡರೆ ಸರಿಯಾಗುವುದಿಲ್ಲ. ಬದಲಾಗಿ ಇದನ್ನು ಆಧುನಿಕ ಚಿಕಿತ್ಸೆಗೆ ಅಳವಡಿಸಿಕೊಂಡರೆ, ಅದರ ಪ್ರಯೋಜನಗಳು ಖಂಡಿತವಾಗಿಯೂ ಸಾಕಾರಗೊಳ್ಳುತ್ತವೆ. ಇಂದಿನ ಯುಗದಲ್ಲಿ, ಕ್ಯಾನ್ಸರ್ ಚಿಕಿತ್ಸೆ ಅಸಾಧ್ಯವಲ್ಲ. ಆಯುರ್ವೇದವು ದೇಹ ಮತ್ತು ಮನಸ್ಸು ಎರಡನ್ನೂ ಬಲಪಡಿಸಲು ಸಹಾಯ ಮಾಡುತ್ತದೆ. ಸ್ವಲ್ಪ ತಾಳ್ಮೆ ಅಗತ್ಯವಿದೆ, ಹಾಗಾಗಿ ವೈದ್ಯರಿಂದ ಸರಿಯಾದ ಸಲಹೆಯನ್ನು ಪಡೆದು ನಿಮ್ಮನ್ನು ನೀವು ನಂಬಿ, ಆರೋಗ್ಯವಾಗಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ