Foamy Urine: ಮೂತ್ರದಲ್ಲಿ ನೊರೆ ನೊರೆ ಬರುತ್ತಿದೆಯಾ? ಹಾಗಿದ್ದರೆ ಈ ವಿಷಯವನ್ನು ತಿಳಿದುಕೊಳ್ಳಿ

|

Updated on: Dec 08, 2023 | 4:45 PM

ಒತ್ತಡದ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರಕ್ರಮ ದೇಹದಲ್ಲಿ ಹೊಸ ಹೊಸ ಕಾಯಿಲೆಗಳನ್ನು ಸ್ವಾಗತಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮೂತ್ರ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು, ಮೂತ್ರದ ಸೋಂಕು, ಮೂತ್ರದ ಬಣ್ಣ ಮತ್ತು ವಾಸನೆಯಲ್ಲಿ ಬದಲಾವಣೆಗಳಿವೆ ಮುಂತಾದ ಸಮಸ್ಯೆಗಳನ್ನು ಕಾಣಬಹುದು.

Foamy Urine: ಮೂತ್ರದಲ್ಲಿ ನೊರೆ ನೊರೆ ಬರುತ್ತಿದೆಯಾ? ಹಾಗಿದ್ದರೆ ಈ ವಿಷಯವನ್ನು ತಿಳಿದುಕೊಳ್ಳಿ
Foamy Urine
Follow us on

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮೂತ್ರ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು, ಮೂತ್ರದ ಸೋಂಕು, ಮೂತ್ರದ ಬಣ್ಣ ಮತ್ತು ವಾಸನೆಯಲ್ಲಿ ಬದಲಾವಣೆ ಮುಂತಾದ ಸಮಸ್ಯೆಗಳನ್ನು ಕಾಣಬಹುದು. ಇದರೊಂದಿಗೆ ಮೂತ್ರ ವಿಸರ್ಜನೆಯ ಸಮಯದಲ್ಲಿ ಮೂತ್ರದಲ್ಲಿ ನೊರೆ ನೊರೆ ಬರುತ್ತಿದ್ದರೆ ಎಂದಿಗೂ ನಿರ್ಲಕ್ಷ್ಯಬೇಡ. ಮೂತ್ರ ನೊರೆ ನೊರೆಯಾಗಿ ಕಾಣಿಸಿಕೊಳ್ಳುವುದು ಕೆಲವು ಅಪಾಯಕಾರಿ ರೋಗಗಳ ಆರಂಭಿಕ ಲಕ್ಷಣಗಳಾಗಿರಬಹುದು. ಆದ್ದರಿಂದ ಮೂತ್ರ ವಿಸರ್ಜನೆಯ ಸಮಯದಲ್ಲಿ ಮೂತ್ರದಲ್ಲಿ ನೊರೆ ನೊರೆ ಬರಲು ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನೊರೆ ಮೂತ್ರಕ್ಕೆ ಕಾರಣಗಳು:

ಕಡಿಮೆ ನೀರು ಕುಡಿಯುವುದು:

ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯುವ ಅಭ್ಯಾಸ ನಿಮ್ಮ ಮೂತ್ರಪಿಂಡವನ್ನು ಹಾನಿಗೊಳಿಸಬಹುದು. ಆದ್ದರಿಂದ ಬಾಯಾರಿಕೆ ಆಗದಿದ್ದರೂ ದಿನಕ್ಕೆ ಎರಡರಿಂದ ಮೂರು ಲೀಟರ್​​ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ನೊರೆ ಮೂತ್ರ ಹಾಗೂ ಮೂತ್ರದ ಬಣ್ಣ ಬದಲಾವಣೆಯ ಲಕ್ಷಣಗಳು  ಕಂಡುಬರುತ್ತದೆ.

ಕಿಡ್ನಿ ಸಮಸ್ಯೆ:

ಕಿಡ್ನಿ ಸಮಸ್ಯೆಯಿಂದ ಕೆಲವರಲ್ಲಿ ಮೂತ್ರ ನೊರೆಯಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು. ಹೀಗೆ ದೇಹದಲ್ಲಿ ನೀರಿನಂಶ ಕಡಿಮೆ ಇರುವವರಲ್ಲಿಯೂ ಕಿಡ್ನಿ ಕಲ್ಲುಗಳ ಸಮಸ್ಯೆ ಹೆಚ್ಚುತ್ತದೆ.

ಒತ್ತಡ:

ಮೂತ್ರದಲ್ಲಿ ನೊರೆ ಬರಲು ಮುಖ್ಯ ಕಾರಣ ಒತ್ತಡ . ಮೂತ್ರದಲ್ಲಿ ನೊರೆ ಬರುವ ಜನರು ಹೆಚ್ಚು ಒತ್ತಡಕ್ಕೆ ಒಳಗಾಗಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.

ಇದನ್ನೂ ಓದಿ: ನಿಮ್ಮ ಮನೆಯಲ್ಲಿ ನಾಯಿ ಸಾಕಿದರೆ, ಈ ರೋಗಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ

ಅಮಿಲೋಯ್ಡೋಸಿಸ್:

ಅಮಿಲೋಯ್ಡೋಸಿಸ್ ಬಹಳ ಅಪರೂಪದ ಕಾಯಿಲೆಯಾಗಿದೆ. ಇದರಿಂದ ಮೂತ್ರದಲ್ಲಿ ನೊರೆ ಕೂಡ ಬರುತ್ತದೆ ಎನ್ನುತ್ತಾರೆ ತಜ್ಞರು. ಇದರಿಂದ ಕೆಲವರಲ್ಲಿ ಮೂತ್ರ ವಿಸರ್ಜನೆಯ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.

ಮಧುಮೇಹ:

ಮಧುಮೇಹವೂ ಮೂತ್ರದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ. ಮಧು ಮೇಹದಿಂದ ಬಳಲುತ್ತಿರುವವರು ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದಲ್ಲದೇ ಮೂತ್ರದಲ್ಲಿ ನೊರೆ ಕೂಡ ಬರುತ್ತದೆ . ಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇಲ್ಲದಿದ್ದರೆ, ಇವುಗಳು ವಿವಿಧ ರೀತಿಯ ಸೋಂಕುಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:29 pm, Fri, 8 December 23