ಬಂಜೆತನವು ಭಾರತದಲ್ಲಿ ದೊಡ್ಡ ಸಮಸ್ಯೆಯಾಗುತ್ತಿದೆ. ವೃದ್ಧಾಪ್ಯದಲ್ಲಿ ಮದುವೆ, ಕೆಟ್ಟ ಜೀವನಶೈಲಿ, ವಿವಿಧ ಕಾಯಿಲೆಗಳು ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸದ ಕಾರಣ ಬಂಜೆತನದ ಸಮಸ್ಯೆ ಹೆಚ್ಚುತ್ತಿದೆ. ಇದೆಲ್ಲದರ ಜೊತೆಗೆ ಆಹಾರ ಪದ್ಧತಿಯಲ್ಲಿ ಮಾಡುವ ತಪ್ಪುಗಳು ಬಂಜೆತನದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಅನಾರೋಗ್ಯಕರ ಆಹಾರವನ್ನು ಸೇವಿಸುವ ಮತ್ತು ನಿಯಮಿತವಾಗಿ ಧೂಮಪಾನ ಮಾಡುವವರಿಗೆ ಈ ಅಪಾಯವು ಅನೇಕ ಪಟ್ಟು ಹೆಚ್ಚಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ, ತಡರಾತ್ರಿಯವರೆಗೆ ಫೋನ್ ಬಳಕೆ ಮಾಡುವುದು ಸಾಮಾನ್ಯವಾಗಿದೆ. ಅನಾರೋಗ್ಯಕರ ಆಹಾರ ಮತ್ತು ಇತರ ಎಲ್ಲಾ ಅಂಶಗಳು ಒಟ್ಟಾಗಿ ಬಂಜೆತನದ ಅಪಾಯವನ್ನು ಹೆಚ್ಚಿಸುತ್ತವೆ.
ವರದಿಯು, 2031 ರ ವೇಳೆಗೆ, ವಿಶ್ವಾದ್ಯಂತ 90.79 ಬಿಲಿಯನ್ ಜನರು ಬಂಜೆತನದ ಸಮಸ್ಯೆಯಿಂದ ಬಳಲುತ್ತಾರೆ ಎಂದಿದೆ. ಇನ್ನು ಡಾ. ಚಂಚಲ್ ಶರ್ಮಾ ಅವರು ಹೇಳುವ ಪ್ರಕಾರ ಕಳಪೆ ಆಹಾರ ಪದ್ಧತಿಯು ಬಂಜೆತನಕ್ಕೆ ಕಾರಣವಾಗಬಹುದು. ಇದು ಮುಂದಿನ ದಿನಗಳಲ್ಲಿ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದಿದ್ದಾರೆ.
ಇದನ್ನೂ ಓದಿ: ಡೆಂಗ್ಯೂವಿನ ರೋಗ ಲಕ್ಷಣ, ಚಿಕಿತ್ಸೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳು
ಡಾ. ಚಂಚಲ್ ಶರ್ಮಾ ಅವರು ಅತಿಯಾದ ಸಕ್ಕರೆ ಹಾಕಿರುವ ಆಹಾರಗಳ ಸೇವನೆ ಜೊತೆಗೆ ಫಾಸ್ಟ್ ಫುಡ್ ಸೇವನೆಯು ಬಂಜೆತನದ ಅಪಾಯವನ್ನು ಹೆಚ್ಚಿಸುತ್ತದೆ. ಅನೇಕ ಸಂದರ್ಭಗಳಲ್ಲಿ, ಕೆಫೀನ್ ನಿಂದ ತಯಾರಿಸಿದ ವಸ್ತುಗಳು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು.
ಬಂಜೆತನದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಮಸ್ಯೆಯಾಗಿದ್ದು, ಚಿಕಿತ್ಸಾಲಯಗಳು ಕೂಡ ವೇಗವಾಗಿ ಬೆಳೆಯುತ್ತಿದೆ ಎಂದು ಡಾ. ಶರ್ಮಾ ಹೇಳುತ್ತಾರೆ. ಇದರ ಚಿಕಿತ್ಸೆಯ ವೆಚ್ಚವೂ ಲಕ್ಷಗಟ್ಟಲೆಯಾಗಿದ್ದು. ಹೀಗಿರುವಾಗ ಜನರು ತಮ್ಮ ಆಹಾರ ಪದ್ಧತಿಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ, ಏಕೆಂದರೆ ಇಂದು ನೀವು ಇಷ್ಟಪಡುವ ಆಹಾರ ಪದ್ಧತಿಯು ನಾಳೆ ವಿವಿಧ ವೈದ್ಯರನ್ನು ಭೇಟಿ ಮಾಡಬೇಕಾದ ಪರಿಸ್ಥಿತಿಗೆ ತರಬಹುದು. ಹಾಗಾಗಿ ಸಮಯಕ್ಕೆ ಸರಿಯಾಗಿ ನಿಮ್ಮ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಿ ಜೊತೆಗೆ ದಿನನಿತ್ಯ ಸೇವನೆ ಮಾಡುವ ಆಹಾರದಲ್ಲಿ ಪೌಷ್ಠಿಕ ವಸ್ತುಗಳನ್ನು ಸೇರಿಸಿಕೊಳ್ಳಿ. ಜೊತೆಗೆ ಪ್ರತಿದಿನ ವ್ಯಾಯಾಮ ಮಾಡಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ