
ಇತ್ತೀಚಿನ ದಿನಗಳಲ್ಲಿ ಕಣ್ಣುಗಳಲ್ಲಿ ತುರಿಕೆ (Itchy Eyes) ಕಂಡು ಬರುವುದು ಹೆಚ್ಚಾಗುತ್ತಿದ್ದು, ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಬೇಸಿಗೆ (Summer), ಚಳಿಗಾಲದಲ್ಲಿ ಕಂಡು ಬರುವ ಶುಷ್ಕ ಗಾಳಿ, ಅಥವಾ ದೈನಂದಿನ ಜೀವನಶೈಲಿಯಲ್ಲಿ (Lifestyle) ನಮ್ಮ ಅಭ್ಯಾಸಗಳು ಕಣ್ಣುಗಳ ಅಸ್ವಸ್ಥತೆಗೆ ಕಾರಣವಾಗಿರಬಹುದು. ಆದರೆ ಇದು ಕೇವಲ ಅಲರ್ಜಿಗಳಿಂದ ಮಾತ್ರ ಉಂಟಾಗುತ್ತಿಲ್ಲ ಬದಲಾಗಿ ಅನೇಕ ರೀತಿಯ ಆರೋಗ್ಯ (Health) ಸಮಸ್ಯೆಗಳು ಬರುವ ಮುನ್ಸೂಚನೆಯೂ ಆಗಿರಬಹುದು. ಇದು ಯಾವುದರಿಂದ ಉಂಟಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು ನಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾದರೆ ಕಣ್ಣುಗಳಲ್ಲಿ ತುರಿಕೆ ಕಂಡು ಬರುವುದಕ್ಕೆ ಕಾರಣವೇನು? ಅವುಗಳನ್ನು ತಡೆಗಟ್ಟಲು ಇಲ್ಲಿವೆ ಕೆಲವು ಸಲಹೆಗಳು.
ಧೂಳು ಅಥವಾ ಇನ್ನಿತರ ಅಲರ್ಜಿಕಾರಕಗಳು ಕಣ್ಣಿನ ತುರಿಕೆ, ಕೆಂಪಾಗುವಿಕೆ ಮತ್ತು ನೀರು ತುಂಬುವಿಕೆಗೆ ಕಾರಣವಾಗಬಹುದು.
ಕಣ್ಣುಗಳಲ್ಲಿ ಅಗತ್ಯವಿರುವಷ್ಟು ನೀರು ಉತ್ಪತ್ತಿಯಾಗದಿದ್ದಾಗ ಅಥವಾ ಕಣ್ಣೀರು ಬೇಗನೆ ಆವಿಯಾದಾಗ, ಕಣ್ಣುಗಳು ಒಣಗುತ್ತವೆ ಮತ್ತು ತುರಿಕೆಗೆ ಕಾರಣವಾಗುತ್ತದೆ. ಜೊತೆಗೆ ಪರದೆಗಳ ಮುಂದೆ ಹೆಚ್ಚು ಸಮಯ ಕಳೆಯುವುದು, ಹವಾನಿಯಂತ್ರಣ ಅಥವಾ ಕಡಿಮೆ ಆರ್ದ್ರತೆಯ ವಾತಾವರಣದಲ್ಲಿ ಹೆಚ್ಚು ಸಮಯ ಕಳೆಯುವುದು ಕೂಡ ಇದಕ್ಕೆ ಕಾರಣವಾಗಿರಬಹುದು.
ಕಂಜಂಕ್ಟಿವಿಟಿಸ್ (ಗುಲಾಬಿ ಕಣ್ಣು) ನಂತಹ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳು ಕಣ್ಣುಗಳಲ್ಲಿ ತುರಿಕೆ, ಕೆಂಪಾಗುವಿಕೆ ಕಾರಣವಾಗಬಹುದು.
ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು ಮತ್ತು ಅವುಗಳನ್ನು ದೀರ್ಘಕಾಲದ ವರೆಗೆ ಬಳಕೆ ಮಾಡುವುದರಿಂದ ಕಣ್ಣುಗಳಲ್ಲಿ ತುರಿಕೆ ಅಥವಾ ಅಸ್ವಸ್ಥತೆಗೆ ಕಾರಣವಾಗಬಹುದು.
ಮಾಲಿನ್ಯ, ಹೊಗೆ ಅಥವಾ ರಾಸಾಯನಿಕ ಅಂಶಗಳು ಕಣ್ಣುಗಳನ್ನು ಕಿರಿಕಿರಿಗೊಳಿಸಬಹುದು. ಬೇಸಿಗೆಯಲ್ಲಿ ಸೂರ್ಯ ಶಾಖ ಅಥವಾ ಚಳಿಗಾಲದ ತಂಪು ಗಾಳಿ ಕಣ್ಣಿನ ಕಿರಿಕಿರಿ, ತುರಿಕೆಗೆ ಕಾರಣವಾಗಬಹುದು.
ಕೆಲವು ಔಷಧಿಗಳು ಕಣ್ಣುಗಳನ್ನು ಒಣಗಿಸಬಹುದು ಮತ್ತು ತುರಿಕೆಗೆ ಕಾರಣವಾಗಬಹುದು.
ಇದನ್ನೂ ಓದಿ: ಮಾಂಸಾಹಾರ ಸೇವನೆ ಮಾಡುವ ಬದಲು ಈ ಒಂದು ಹಣ್ಣನ್ನು ತಿನ್ನಿ
ಬ್ಲೆಫಾರಿಟಿಸ್ (ಕಣ್ಣುರೆಪ್ಪೆಗಳ ಊತ), ಎಸ್ಜಿಮಾ, ಅಥವಾ ಥೈರಾಯ್ಡ್ ಸಂಬಂಧಿತ ಸಮಸ್ಯೆಗಳು ಸಹ ಕಣ್ಣುಗಳಲ್ಲಿ ತುರಿಕೆಗೆ ಕಾರಣವಾಗಬಹುದು. ಮಧುಮೇಹ ಅಥವಾ ಆಟೋಇಮ್ಯೂನ್ ಕಾಯಿಲೆಗಳು ಸಹ ಕೆಲವು ಸಂದರ್ಭಗಳಲ್ಲಿ ಕಣ್ಣುಗಳ ಮೇಲೆ ಪರಿಣಾಮ ಬೀರಬಹುದು.
ಕೆಲವೊಮ್ಮೆ ಬಿಸಿಯಾದ ವಸ್ತುಗಳನ್ನು ಸೇವಿಸಿದಾಗಲೂ ಕೂಡ, ಕಣ್ಣುಗಳಲ್ಲಿ ತುರಿಕೆ ಮತ್ತು ಕೆಂಪು ಕಣ್ಣುಗಳಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ, ನೀವು ಸಾಕಷ್ಟು ನೀರು ಕುಡಿಯವುದು ಒಳ್ಳೆಯದು ಅದಲ್ಲದೆ ಚಹಾ ಮತ್ತು ಕಾಫಿಯಂತಹ ಪಾನೀಯಗಳ ಸೇವನೆ ಮಾಡುವುದನ್ನು ತಪ್ಪಿಸಬೇಕು. ಅದರ ಜೊತೆಗೆ ಈ ರೀತಿಯ ಸಮಸ್ಯೆ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಬಹಳ ಅವಶ್ಯಕ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ