ಚೀನಾದಲ್ಲಿ ಏಕಾಏಕಿ ನಿಗೂಢ ಉಸಿರಾಟದ ತೊಂದರೆ ಹೆಚ್ಚಳ: ಮಕ್ಕಳಲ್ಲಿ ನ್ಯುಮೋನಿಯಾದ 5 ಲಕ್ಷಣಗಳಿವು

ಚೀನಾದಲ್ಲಿ ಉಂಟಾಗಿರುವ ನಿಗೂಢವಾದ ಉಸಿರಾಟದ ಕಾಯಿಲೆ ಏಕಾಏಕಿ ಎಲ್ಲೆಡೆ ಆತಂಕ ಮೂಡಿಸಿದೆ. ಉತ್ತರ ಚೀನಾದಲ್ಲಿ H9N2 ಪ್ರಕರಣಗಳು ಮತ್ತು ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳ ಪ್ರಕರಣಗಳು ಹೆಚ್ಚಾಗಿವೆ. ಮಕ್ಕಳಲ್ಲಿ ನ್ಯುಮೋನಿಯಾ ಬಾರದಂತೆ ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.

ಚೀನಾದಲ್ಲಿ ಏಕಾಏಕಿ ನಿಗೂಢ ಉಸಿರಾಟದ ತೊಂದರೆ ಹೆಚ್ಚಳ: ಮಕ್ಕಳಲ್ಲಿ ನ್ಯುಮೋನಿಯಾದ 5 ಲಕ್ಷಣಗಳಿವು
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on: Nov 25, 2023 | 2:36 PM

ನ್ಯುಮೋನಿಯಾ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಉಸಿರಾಟದ ಕಾಯಿಲೆಯಾಗಿದೆ. ಚೀನಾದಲ್ಲಿ ನಿಗೂಢ ಉಸಿರಾಟದ ತೊಂದರೆಯ ಹರಡುವಿಕೆ ಹೆಚ್ಚಾಗಿದ್ದು, ನಿಮ್ಮ ಮಕ್ಕಳನ್ನು ಉಸಿರಾಟದ ಸಮಸ್ಯೆ, ನ್ಯುಮೋನಿಯಾದಿಂದ ಸುರಕ್ಷಿತವಾಗಿರಿಸಲು ಸಹಾಯ ಮಾಡುವ ಅಂಶಗಳು ಇಲ್ಲಿವೆ. ಚೀನಾದಲ್ಲಿ ಉಂಟಾಗಿರುವ ನಿಗೂಢವಾದ ಉಸಿರಾಟದ ಕಾಯಿಲೆ ಏಕಾಏಕಿ ಎಲ್ಲೆಡೆ ಆತಂಕ ಮೂಡಿಸಿದೆ. ಉತ್ತರ ಚೀನಾದಲ್ಲಿ H9N2 ಪ್ರಕರಣಗಳು ಮತ್ತು ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳ ಪ್ರಕರಣಗಳು ಹೆಚ್ಚಾಗಿವೆ.

ಈ ಹಿನ್ನೆಲೆಯಲ್ಲಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ನಿರ್ದೇಶಕ ಡಾ. ಅಜಯ್ ಶುಕ್ಲಾ ಹೆಚ್ಚು ಜಾಗರೂಕರಾಗಿರಿ, ನೀವು ಉಸಿರಾಟದ ಕಾಯಿಲೆ ಅಥವಾ ಸೋಂಕಿಗೆ ಒಳಗಾಗಿದ್ದರೆ ಸ್ವಚ್ಛತೆಯ ಕಡೆ ಹೆಚ್ಚು ಗಮನ ನೀಡಿ ಎಂದು ಜನರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Parijat: ಹಲವು ರೀತಿಯ ಜ್ವರಗಳಿಗೆ ಪಾರಿಜಾತ ಹೂವು, ಎಲೆಗಳು ದಿವ್ಯೌಷಧಿ

ನ್ಯುಮೋನಿಯಾ ಒಂದು ಅಥವಾ ಎರಡೂ ಶ್ವಾಸಕೋಶಗಳಲ್ಲಿ ಉಂಟಾಗುವ ಸೋಂಕು. ನ್ಯುಮೋನಿಯಾವು ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಶಿಲೀಂಧ್ರಗಳಿಂದ ಉಂಟಾಗಬಹುದು. ಇದು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಮಕ್ಕಳಲ್ಲಿ ನ್ಯುಮೋನಿಯಾದ ಲಕ್ಷಣಗಳು:

ಕೆಮ್ಮು: ಕೆಮ್ಮು ನ್ಯುಮೋನಿಯಾದ ಸಾಮಾನ್ಯ ಲಕ್ಷಣವಾಗಿದೆ. ಇದು ಶುಷ್ಕ ಅಥವಾ ಒಣ ಕೆಮ್ಮಾಗಿರುತ್ತದೆ. ಅಂದರೆ ಇದು ಕಫವನ್ನು ಉತ್ಪಾದಿಸುತ್ತದೆ.

ಜ್ವರ: ಜ್ವರವು ನ್ಯುಮೋನಿಯಾದ ಮತ್ತೊಂದು ಸಾಮಾನ್ಯ ಲಕ್ಷಣವಾಗಿದೆ. ಜ್ವರ ಕೆಲವರಲ್ಲಿ ಹೆಚ್ಚು ಅಥವಾ ಕಡಿಮೆ ಇರಬಹುದು.

ತ್ವರಿತ ಉಸಿರಾಟ: ನ್ಯುಮೋನಿಯಾ ಹೊಂದಿರುವ ಮಕ್ಕಳು ತ್ವರಿತವಾಗಿ ಅಥವಾ ದೀರ್ಘವಾಗಿ ಉಸಿರಾಡಬಹುದು. ಅವರಿಗೆ ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳಬಹುದು.

ಎದೆನೋವು: ನ್ಯುಮೋನಿಯಾ ಇರುವ ಕೆಲವು ಮಕ್ಕಳಿಗೆ ಎದೆನೋವು ಉಂಟಾಗಬಹುದು. ನೋವು ತೀಕ್ಷ್ಣವಾಗಿರಬಹುದು ಅಥವಾ ಕ್ರಮೇಣ ಕಡಿಮೆಯಾಗಬಹುದು.

ಇತರ ಲಕ್ಷಣಗಳು: ನ್ಯುಮೋನಿಯಾದ ಇತರ ಲಕ್ಷಣಗಳೆಂದರೆ, ಉಬ್ಬಸ, ಆಯಾಸ, ಹಸಿವಿನ ಕೊರತೆ ಮತ್ತು ವಾಂತಿ.

ಇದನ್ನೂ ಓದಿ: Pneumonia Early Symptoms; ನ್ಯುಮೋನಿಯಾದ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಹೇಗೆ?

ನ್ಯುಮೋನಿಯಾ ಚಿಕಿತ್ಸೆ:

ನ್ಯುಮೋನಿಯಾ ಚಿಕಿತ್ಸೆಯು ಸೋಂಕಿನ ಕಾರಣವನ್ನು ಅವಲಂಬಿಸಿರುತ್ತದೆ. ಬ್ಯಾಕ್ಟೀರಿಯಾದಿಂದಾಗುವ ನ್ಯುಮೋನಿಯಾವನ್ನು ಪ್ರತಿಜೀವಕಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ವೈರಲ್ ನ್ಯುಮೋನಿಯಾ ಸಾಮಾನ್ಯವಾಗಿ ಒಂದು ಅಥವಾ ಎರಡು ವಾರಗಳಲ್ಲಿ ತನ್ನಷ್ಟಕ್ಕೆ ತಾನೇ ಗುಣವಾಗುತ್ತದೆ. ಆದರೂ ರೋಗಲಕ್ಷಣಗಳನ್ನು ನಿವಾರಿಸಲು ನಿಮ್ಮ ವೈದ್ಯರು ಕೆಲವು ಔಷಧಿಗಳನ್ನು ನೀಡಬಹುದು. ಫಂಗಲ್ ನ್ಯುಮೋನಿಯಾಗೆ ಆಂಟಿಫಂಗಲ್ ಔಷಧಿಯ ಚಿಕಿತ್ಸೆ ನೀಡಲಾಗುತ್ತದೆ.

ನ್ಯುಮೋನಿಯಾ ತಡೆಗಟ್ಟುವಿಕೆ:

ನ್ಯುಮೋನಿಯಾವನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಲಸಿಕೆಯನ್ನು ಪಡೆಯುವುದು. ಲಸಿಕೆಯನ್ನು ಪಡೆಯುವುದರ ಜೊತೆಗೆ, ನೀವು ನ್ಯುಮೋನಿಯಾವನ್ನು ತಡೆಯಲು ನಿಮ್ಮ ಮಗುವಿನ ಕೈಗಳನ್ನು ಆಗಾಗ ತೊಳೆಯಿರಿ. ನಿಮ್ಮ ಮಗುವನ್ನು ಅನಾರೋಗ್ಯದಿಂದ ದೂರವಿಡಿ. ನಿಮ್ಮ ಮಗುವಿನ ಸುತ್ತಲೂ ಧೂಮಪಾನ ಮಾಡಬೇಡಿ. ಇದರಿಂದ ಕೊಂಚ ಮಟ್ಟಿಗೆ ನ್ಯುಮೋನಿಯಾವನ್ನು ನಿಯಂತ್ರಿಸಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್