ಕೆಲವೊಮ್ಮೆ ಸಣ್ಣಪುಟ್ಟ ವಿಷಯಗಳೇ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಗಟ್ಟಿಯಾದ, ಒಣ ಮಲವನ್ನು ವಿಸರ್ಜಿಸಲು ಕಷ್ಟವಾದಾಗ ಅದನ್ನು ಮಲಬದ್ಧತೆ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ವಾರಕ್ಕೆ 3 ಬಾರಿಗಿಂತ ಕಡಿಮೆ ಸಲ ಮಲವಿಸರ್ಜನೆ ಉಂಟಾದರೆ ಅದು ಮಲಬದ್ಧತೆಯಾಗುತ್ತದೆ. ಮಲ ವಿಸರ್ಜಿಸುವಾಗ ನಿಮಗೆ ತೀವ್ರವಾದ ನೋವು, ನಿಮ್ಮ ಮಲದಲ್ಲಿ ರಕ್ತ ಉಂಟಾಗುವುದು ಕೂಡ ಮಲಬದ್ಧತೆಯ ಲಕ್ಷಣ.
ನಿಮ್ಮ ಮಲವು ಶುಷ್ಕ ಮತ್ತು ಗಟ್ಟಿಯಾಗಿದ್ದರೆ, ನಿಮ್ಮ ಕರುಳಿನ ಚಲನೆಗಳು ನೋವಿನಿಂದ ಕೂಡಿದ್ದರೆ, ಮಲ ವಿಸರ್ಜಿಸಲು ಕಷ್ಟವಾಗುತ್ತಿದ್ದರೆ, ನಿಮ್ಮ ಹೊಟ್ಟೆಯನ್ನು ನೀವು ಸಂಪೂರ್ಣವಾಗಿ ಖಾಲಿ ಮಾಡಿಲ್ಲ ಎಂಬ ಭಾವನೆ ನಿಮ್ಮಲ್ಲಿದ್ದರೆ ಅದು ಮಲಬದ್ಧತೆಯ ಲಕ್ಷಣವಾಗಿರುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡುವ ಕೆಲವು ಜ್ಯೂಸ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
ಅಲೋವೆರಾ ಜ್ಯೂಸ್:
ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಸಾಮಾನ್ಯ ಕರುಳಿನ ಚಲನೆ ಹೊಂದಿರುವ ಜನರಲ್ಲಿ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಮಲಬದ್ಧತೆಯನ್ನು ನಿವಾರಿಸುವ ಮಾರ್ಗವಾಗಿದೆ.
ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಏನಾಗುತ್ತದೆ?
ಸೇಬಿನ ಜ್ಯೂಸ್:
ಸೇಬು ಹಣ್ಣಿನ ಜ್ಯೂಸ್ ಸೋರ್ಬಿಟೋಲ್ ಅನ್ನು ಹೊಂದಿರುತ್ತದೆ. ಆದರೆ ಇದು ಕಡಿಮೆ ಪ್ರಮಾಣದಲ್ಲಿರುತ್ತದೆ. ದ್ರಾಕ್ಷಿ ಜ್ಯೂಸ್ ಇಷ್ಟಪಡದ ಜನರಿಗೆ ಸೇಬಿನ ಜ್ಯೂಸ್ ಉತ್ತಮ ಪರ್ಯಾಯವಾಗಿದೆ.
ಕಿತ್ತಳೆ ಜ್ಯೂಸ್:
ಕಿತ್ತಳೆ ಹಣ್ಣುಗಳು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದ್ದು, ಇದು ಮಲಕ್ಕೆ ದೊಡ್ಡ ಪ್ರಮಾಣದಲ್ಲಿ ಸೇರಿಕೊಳ್ಳುತ್ತದೆ. ಇದು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಈ ಸಿಟ್ರಸ್ ಹಣ್ಣಿನಲ್ಲಿ ನರಿಂಗೆನಿನ್ ಎಂದು ಕರೆಯಲ್ಪಡುವ ಫ್ಲೇವೊನಾಲ್ ಕೂಡ ಇದೆ. ಇದು ಮಲಬದ್ಧತೆಯ ಸಮಸ್ಯೆಯಿಂದ ತಕ್ಷಣದ ಪರಿಹಾರವನ್ನು ನೀಡುತ್ತದೆ.
ಪಾಲಕ್ ಜ್ಯೂಸ್:
ಪಾಲಕ್ ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದಾಗಿದೆ. ಏಕೆಂದರೆ ಇದು ಮಲಬದ್ಧತೆಗೆ ಚಿಕಿತ್ಸೆ ನೀಡಲು ಮತ್ತು ತಡೆಗಟ್ಟಲು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ಪಿಯರ್ ಜ್ಯೂಸ್:
ಫೈಬರ್ ಅಂಶ ಸಮೃದ್ಧವಾಗಿರುವುದರ ಹೊರತಾಗಿ ಪಿಯರ್ ಜ್ಯೂಸ್ ನೈಸರ್ಗಿಕ ವಿರೇಚಕವಾಗಿದೆ. ಏಕೆಂದರೆ ಇದು ಹೆಚ್ಚಿನ ಫ್ರಕ್ಟೋಸ್ ಅಂಶ ಮತ್ತು ಸೋರ್ಬಿಟೋಲ್ನಿಂದ ತುಂಬಿರುತ್ತದೆ. ಸೋರ್ಬಿಟೋಲ್ ಸಕ್ಕರೆಯ ಆಲ್ಕೋಹಾಲ್ ಆಗಿದ್ದು ಇದು ಚೆನ್ನಾಗಿ ಹೀರಲ್ಪಡುವುದಿಲ್ಲ. ಪಿಯರ್ ಜ್ಯೂಸ್ ಮಲವನ್ನು ಮೃದುವಾಗಿ ಮತ್ತು ಸುಲಭವಾಗಿ ಹಾದುಹೋಗುವಂತೆ ಮಾಡುತ್ತದೆ.
ಇದನ್ನೂ ಓದಿ: ಟೈಫಾಯ್ಡ್ನಿಂದ ಪಾರಾಗಲು ಟೊಮ್ಯಾಟೋ ಜ್ಯೂಸ್ ಸೇವಿಸಿ; ಇಲ್ಲಿದೆ ಅಚ್ಚರಿಯ ಸಂಗತಿ
ನಿಂಬೆ ಜ್ಯೂಸ್:
ಕರುಳಿನ ಚಲನೆಯನ್ನು ಶುದ್ಧೀಕರಿಸಲು ನಿಂಬೆ ಜ್ಯೂಸ್ ಅತ್ಯುತ್ತಮ ಮಾರ್ಗವಾಗಿದೆ. ಮಲಗುವ ಮೊದಲು ಮತ್ತು ಮರುದಿನ ಬೆಳಿಗ್ಗೆ ನೀವು ಎದ್ದಾಗ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯಬಹುದು.
ದ್ರಾಕ್ಷಿ ಜ್ಯೂಸ್:
ದ್ರಾಕ್ಷಿಗಳು ಫೈಬರ್‌ನಿಂದ ತುಂಬಿರುತ್ತವೆ. ಅವುಗಳಲ್ಲಿ ಬಹಳಷ್ಟು ನೀರಿನಂಶ ಇರುತ್ತದೆ. ಇದು ಗಟ್ಟಿಯಾದ ಮಲಕ್ಕೆ ತೇವಾಂಶವನ್ನು ಸೇರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಮಲಬದ್ಧತೆಯನ್ನು ನಿವಾರಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ