ಹುಷಾರು! ಕೆಮ್ಮುವವರಿಂದ ದೂರ ಇದ್ದುಬಿಡಿ, ಕೊರೊನಾ ಲೇಪಿತ ಕಣಗಳು 6 ಅಡಿಗಿಂತ ಹೆಚ್ಚು ದೂರ ಚಿಮ್ಮಬಲ್ಲವು!

Cough, Sneeze and COVID 19: ಕೆಮ್ಮು, ಸೀನು ಮತ್ತು ಕೊರೊನಾ ಮಹಾಮಾರಿ! ಹುಷಾರು ಕೆಮ್ಮುವವರಿಂದ ದೂರ ಇದ್ದುಬಿಡಿ, ಕೊರೊನಾ ಲೇಪಿತ ಕಣಗಳು 6 ಅಡಿಗಿಂತ ಹೆಚ್ಚು ದೂರ ಚಿಮ್ಮಬಲ್ಲವು!

ಹುಷಾರು! ಕೆಮ್ಮುವವರಿಂದ ದೂರ ಇದ್ದುಬಿಡಿ, ಕೊರೊನಾ ಲೇಪಿತ ಕಣಗಳು 6 ಅಡಿಗಿಂತ ಹೆಚ್ಚು ದೂರ ಚಿಮ್ಮಬಲ್ಲವು!
ಹುಷಾರು! ಕೆಮ್ಮುವವರಿಂದ ದೂರ ಇದ್ದುಬಿಡಿ, ಕೊರೊನಾ ಲೇಪಿತ ಕಣಗಳು 6 ಅಡಿಗಿಂತ ಹೆಚ್ಚು ದೂರ ಚಿಮ್ಮಬಲ್ಲವು!

ಹುಷಾರು. ಮೊದಲು ಕೆಮ್ಮುವವರಿಂದ ಸುರಕ್ಷಿತವಾಗಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಅಪ್ಪಿತಪ್ಪಿ ಕೆಮ್ಮುವ ಸೋಂಕಿತ ವ್ಯಕ್ತಿಯ ಎದುರು ಸುಳಿದಾಡಬೇಡಿ. ಸಾಮಾಜಿಕ ಅಂತರ ಅಂತಾ ಹೇಳಿ 6 ಅಡಿ ಅಂತರ ಕಾಪಾಡಿಕೊಂಡರೆ ಸುರಕ್ಷಿತವೇ ಸರಿ. ಆದರೆ ಅದೇ ಸೋಂಕಿತ ವ್ಯಕ್ತಿಗೆ ಕೆಮ್ಮು ಇದ್ದು, ಅವರು ಆಗಾಗ ಕೆಮ್ಮುತ್ತಾ ಇದ್ದರೆ ಅವರತ್ತ ಸಾಗಲೇಬೇಡಿ. ಏಕೆಂದ್ರೆ ಇಷ್ಟೊತ್ತಿಗೆ ನಿಮಗೆ ಗೊತ್ತಾಗಿರಬಹುದು ಕೆಮ್ಮು ಪವರ್​ಫುಲ್​ ಆಗಿ ಹೊರಬಂದಾಗ ಅದರೊಟ್ಟಿಗೆ ಸೋಂಕಿತನ ಬಾಯಿಯಲ್ಲಿರುವ ಸೋಂಕಿನ ಕಣಗಳು ಖಚಿತವಾಗಿ ಎದುರಿಗಿರುವ ವ್ಯಕ್ತಿಯವರೆಗೂ ತಲುಪಬಲ್ಲದು! ಸಾಮಾಜಿಕ ಅಂತರದ 6 ಅಡಿ ದೂರದಾಚೆಗೂ ಚಿಮ್ಮಬಲ್ಲವು! ಮತ್ತು ಎಲ್ಲಕ್ಕಿಂತ ಅಪಾಯಕಾರಿ ಸಂಗತಿಯೆಂದ್ರೆ ಖಂಡಿತಾ ಅವು ಸೋಂಕನ್ನು ಎದುರಗಿನ ವ್ಯಕ್ತಿಗೆ ಹಚ್ಚಬಲ್ಲದು.

ಅಲ್ಲಿಗೆ ಕೊರೊನಾ ಕಾಲದಲ್ಲಿ 6 ಅಡಿ ಸಾಮಾಜಿಕ ಅಂತರ ಪಾಲನೆ ಮಾಡಿದರೆ ಸಾಕು; ವೈರಾಣು ಎದುರಿಗಿನ ವ್ಯಕ್ತಿವರೆಗೂ ತಲುಪುವುದಿಲ್ಲ ಎಂಬ ಮಾತು ಸಾಲದಾಗಿ ಇದೀಗ, ಅದರಾಚೆಗೂ ಹುಷಾರಾಗಿರಿ ಅನ್ನುತ್ತಿದೆ ಇಂದಿನ ಅಧ್ಯಯನ.

ಕೆಮ್ಮು, ಸೀನು ಮತ್ತು ಕೊರೊನಾ ಮಹಾಮಾರಿ!

Coughs and sneezes Can Send COVID Virus Farther Than social distance of 6 Feet 1

ಕೆಮ್ಮು, ಸೀನು ಮತ್ತು ಕೊರೊನಾ ಮಹಾಮಾರಿ!

ಯಪ್ಪಾ ಹಾಗಾದ್ರೆ ಏನು ಮಾಡಬೇಕು? ಎಲ್ಲಿವರೆಗೂ ಓಡಿಹೋಗಬೇಕು ಅಂತಾ ಅದಾಗಲೇ ಲೆಕ್ಕಾಚಾರ ಹಾಕುತ್ತಿದ್ದೀರಿ? ಇರಿ ಆ ಲೆಕ್ಕಾಚಾರವನ್ನೂ ಅಧ್ಯಯನಕಾರರು ಹೊಸದಾಗಿ ತಿಳಿಸಿದ್ದಾರೆ. ಕೆಲವೊಂದು ಹೆಚ್ಚು ಸಾಂದ್ರತೆಯ ಕಣಗಳು ಕೆಮ್ಮುವಾಗ ಅಥವಾ ಸೀನುವಾಗ 6.5 ಅಡಿ ವರೆಗೂ ಚಿಮ್ಮಬಲ್ಲವು! ಅಂದ್ರೆ ಶೇ. 65ರಷ್ಟು ಕಣಗಳು ಎದುರಿಗಿರುವ ವ್ಯಕ್ತಿಯ ಮೈಮೇಲೆ ಆಕ್ರಮಿಸಿಕೊಳ್ಳಬಲ್ಲದು. ಅವು ಹೆಚ್ಚು ತೂಕದ, ತೇವಾಂಶದಿಂದ ಕೂಡಿರುತ್ತವೆ. ಅದೇ ಭಯಂಕರ ಮಾರಾಯರೇ ಅನ್ನುತ್ತಿದ್ದಾರೆ ಕೊವಿಡ್​ ಅಧ್ಯಯನಕಾರರು!

ಸಾಮಾನ್ಯವಾಗಿ ಕೆಮ್ಮು ಅಥವಾ ಸೀನಿದಾಗ ವೈರಾಣುಗಳು ನೇರವಾಗಿ ಮುಖದ ಮೇಲೆ ಬೀಳುವುದಿಲ್ಲವಾದರೂ ಎದುರಿಗಿನ ವ್ಯಕ್ತಿಯ ಬಟ್ಟೆ, ದೇಹದ ಮೇಲೆ ಬೀಳುತ್ತದೆ. ಆ ಎದುರಿಗಿನ ವ್ಯಕ್ತಿ ತಿಳಿದೊ, ತಿಳಿಯದೆಯೋ ಕೈಯಲ್ಲಿ ಮುಟ್ಟಿ ಅದನ್ನು ಮೂಗಿನವರೆಗೂ ಕೊಂಡೊಯ್ಯಬಲ್ಲರು. ಅದುವೇ ಕೊರೊನಾ ಸೋಂಕಿನ ಕಣಗಳಿಗೆ ರಹದಾರಿ! ಗಾಳಿಯಿಂದಲೂ ಕೊರೊನಾ ಸೋಂಕು ಹರಡಬಲ್ಲದು ಎಂಬುದಕ್ಕೆ ಇದು ಪುಷ್ಟಿ ನೀಡಿದಂತಾಗಿದೆ.

ಸೋಂಕಿತರ ಎದುರಿಗೆ ಮಕ್ಕಳನ್ನು ಕರೆದುಕೊಂಡು ಹೋಗಬಾರದು ಅನ್ನುವುದೂ ಇದಕ್ಕೇ. ಸೋಂಕಿತರು ಕೆಮ್ಮಿದಾಗ ಅಥವಾ ಸೀನಿದಾಗ ಅವರ ಬಾಯಿ, ಮೂಗಿಂದ ಸೋಂಕಿನ ಕಣಗಳು ಕೆಳಗಿರುವ ಮಕ್ಕಳ ಮೇಲೆ ಚಿಮ್ಮಬಲ್ಲವು.

ಇನ್ನು ಸೋಂಕಿತರು ಹಾಡುವಾಗಲು ಮತ್ತು ಮಾತನಾಡುವಾಗಲೂ ಇದೇ ಜಾಗ್ರತೆ ವಹಿಸಬೇಕು. ಏಕೆಂದ್ರೆ ಕೆಲವರು ಜೋರಾಗಿ ಮಾತನಾಡುತ್ತಾರೆ ಮತ್ತು ಜೋರು ಧ್ವನಿಯಲ್ಲಿ ಹಾಡುತ್ತಾರೆ. ಆಗ ಸೋಂಕಿನ ಕಣಗಳು ಸರಾಗವಾಗಿ ಎದುರಿಗಿನ ವ್ಯಕ್ತಿಯತ್ತ ರಹದಾರಿ ಪಡೆಯಬಲ್ಲವು.

ಅದಕ್ಕೇ ಹೇಳಿದ್ದು ಬರೀ ಆರಕ್ಕೆ ಅಂತ ಆರು ಅಡಿವರೆಗೂ ಅಂತರ ಕಪಾಡಿಕೊಂಡರೆ ಸಾಲದು ಹೆಚ್ಚು ದೂರವಿದ್ದಷ್ಟೂ ಕ್ಷೇಮಕರ. ಜೊತೆಗೆ ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವುದು ಶುಭ್ರ ಬಟ್ಟೆ ಧರಿಸುವುದು. ಮುಖಕ್ಕೆ ಮಾಸ್ಕ್​ ಹಾಕಿಕೊಳ್ಳುವುದು, ಅನಗತ್ಯ ಓಡಾಟ ನಿಲ್ಲಿಸುವುದು ಮುಖ್ಯಾತಿಮುಖ್ಯ ಎಂದು ಪಾಳನೆ ಮಾಡಬೇಕು.

(Coughs and sneezes Can Send COVID Virus Farther Than social distance of 6 Feet)