ಕೊರೋನಾ ಸೋಂಕಿತ ಗರ್ಭಿಣಿಯರಿಗೂ ಆರೋಗ್ಯಯುತ ಮಗು ಜನನ : ಅಧ್ಯಯನ

| Updated By: Pavitra Bhat Jigalemane

Updated on: Dec 26, 2021 | 2:11 PM

ಮಗುವಿಗೆ ಯಾವುದೇ ರೀತಿ ಸೋಂಕಿನ ಅಪಾಯವಿರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಜರ್ನಲ್​ ಆಫ್​ ಫೇರಿನಾಟಲ್​ ಮೆಡಿಸಿನ್​ ಎನ್ನುವ ವರದಿಯಲ್ಲಿ ಇದನ್ನು ಪ್ರಕಟಿಸಲಾಗಿದೆ. 

ಕೊರೋನಾ ಸೋಂಕಿತ ಗರ್ಭಿಣಿಯರಿಗೂ ಆರೋಗ್ಯಯುತ ಮಗು ಜನನ : ಅಧ್ಯಯನ
ಪ್ರಾತಿನಿಧಿಕ ಚಿತ್ರ
Follow us on

ಕೊರೋನಾ ಕಾಲದಲ್ಲಿ ಗರ್ಭಿಣಿಯರಿಗೆ ಸೋಂಕು ವೇಗವಾಗಿ ಹರಡುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತು. ಹೀಗಾಗಿ ಕೊರೋನಾ ಸೋಂಕಿತ ಗರ್ಭಿಣಿಯಿಂದ ಹುಟ್ಟು ಮಗುವಿಗೂ ಕೊರೋನಾ ಸೋಂಕಿನ ಸೋಂಕು ತಗುಲಬಹುದು ಎನ್ನುವ ಆತಂಕವಿತ್ತು. ಆದರೆ ಇದೀಗ ಅಧ್ಯಯನದ ಪ್ರಕಾರ ಕೊರೋನಾ ಸೋಂಕಿತ ಮಹಿಳೆಯೂ ಆರೋಗ್ಯಯುತ ಮಗುವನ್ನು ಪಡೆಯಬಹುದು. ಮಗುವಿಗೆ ಯಾವುದೇ ರೀತಿ ಸೋಂಕಿನ ಅಪಾಯವಿರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಜರ್ನಲ್​ ಆಫ್​ ಫೇರಿನಾಟಲ್​ ಮೆಡಿಸಿನ್​ ಎನ್ನುವ ವರದಿಯಲ್ಲಿ ಇದನ್ನು ಪ್ರಕಟಿಸಲಾಗಿದೆ. 

ಕೊರೋನಾ ಸೋಂಕಿತ ತಾಯಿಯಿಂದ ಜನಿಸಿದ ಮಗುವಿನ ಬೆಳವಣಿಗೆಯನ್ನು ಆರು ತಿಂಗಳವರೆಗೆ ಗಮನಿಸಿ ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ಕೊರೋನಾ ಕಾಲದಲ್ಲಿ ಇದು ಒಂದು ಸಂತೋಷದ ವಿಷಯವಾಗಿದೆ. ಅಧ್ಯಯನದಲ್ಲಿ ಗರ್ಭಾವಸ್ತೆಯಲ್ಲಿ ಕೊರೋನಾ ಸೋಂಕಿಗೆ ಒಳಗಾಗಿದ್ದ 33 ಮಹಿಳೆಯರನ್ನು ಒಳಪಡಿಸಲಾಗಿತ್ತು. ಕೊರೋನಾ ಸೋಂಕಿತ ಶೇ.55ರಷ್ಟು ಮಹಿಳೆಯರು ಮಗು ಜನನಕ್ಕಿಂತ 10 ದಿನ ಮೊದಲು ಸೋಂಕಿಗೆ ತುತ್ತಾಗಿದ್ದರು. ಅದರೆ ಯಾವುದೇ ಮಗುವಿಗೆ ಸೋಂಕು ಹರಡಲಿಲ್ಲ. ಇನ್ನು 10 ಪ್ರತಿಷತದಷ್ಟು ಮಹಿಳೆಯರು  ಮುಂಚಿತವಾಗಿ ಹೆರಿಗೆಯಾಗಿದ್ದರು. ಮತ್ತು 15 ಪ್ರತಿಶತದಷ್ಟು ನವಜಾತ ಶಿಶುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಯುಎಸ್​ನ ವೈದ್ಯರ ತಂಡ ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ.  ಆದರೆ 2020ರ ಎಪ್ರಿಲ್​ -ಜುಲೈ ತಿಂಗಳಿನಲ್ಲಿ ಜನಿಸಿದ ಮಕ್ಕಳನ್ನು ಆದರಿಸಿ ಈ ವರದಿಯನ್ನು ತಯಾರಿಸಲಾಗಿದೆ. ಆದರೆ ಕೋರೋನಾ ರೂಪಾಂತರಿಗಳು ಹರಡುತ್ತಿರುವುದರಿಂದ  ದೀರ್ಘಾವಧಿಯ ಫಲಿತಾಂಶಗಳನ್ನು ಪರೀಕ್ಷಿಸುವುದು ಅನಿವಾರ್ಯವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ:

Omicron: ಭಾರತದಲ್ಲಿ ಒಮಿಕ್ರಾನ್ ಕೇಸ್ ಎರಡೇ ತಿಂಗಳಲ್ಲಿ 10 ಲಕ್ಷಕ್ಕೇರುವ ಸಾಧ್ಯತೆ; ಇದನ್ನು ನಿಯಂತ್ರಿಸಲು ತಿಂಗಳ ಸಮಯವೂ ಉಳಿದಿಲ್ಲ: ಡಾ.ಅನೀಶ್

Published On - 2:11 pm, Sun, 26 December 21