Winter tips: ಚಳಿಗಾಲದಲ್ಲಿ ಉಂಟಾಗುವ ಉಗುರು ಸುತ್ತು ಸಮಸ್ಯೆಗೆ ಇಲ್ಲಿದೆ ಪರಿಹಾರ
Health Tips: ಚಳಿಗಾಲದಲ್ಲಿ ಬೆರಳುಗಳಲ್ಲಿ ಉಗುರು ಸುತ್ತು ಉಂಟಾಗುತ್ತದೆ. ಇದರಿಂದಾಗಿ ಜನರು ದೈನಂದಿನ ಕೆಲಸ ಮಾಡಲು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತವವಾಗಿ ರಕ್ತ ಪರಿಚಲನೆ ನಿಧಾನವಾಗುವುದರಿಂದ, ಬೆರಳುಗಳಲ್ಲಿ ಊತ ಉಂಟಾಗುತ್ತದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಉಗುರು ಸುತ್ತನ್ನು ತೊಡೆದುಹಾಕಬಹುದು.
Updated on: Dec 26, 2021 | 7:05 AM

ಚಳಿಗಾಲದಲ್ಲಿ ದೇಹವನ್ನು ಒಳಗಿನಿಂದ ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ ಮತ್ತು ಇದಕ್ಕಾಗಿ ವರ್ಕ್ ಔಟ್ ಅಥವಾ ವಾಕಿಂಗ್ ಅತ್ಯುತ್ತಮ ಆಯ್ಕೆಯಾಗಿದೆ. ದೇಹವನ್ನು ಕ್ರಿಯಾಶೀಲವಾಗಿರಿಸಿಕೊಳ್ಳುವುದು ಬಹಳ ಮುಖ್ಯ.

ಕಡಿಮೆ ನೀರು ಕುಡಿಯುವುದರಿಂದ ರಕ್ತ ಸಂಚಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜನರು ಸಾಮಾನ್ಯವಾಗಿ ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುತ್ತಾರೆ. ಇದು ಉತ್ತಮ ಅಭ್ಯಾಸ ಅಲ್ಲ. ಹೆಚ್ಚು ಹೆಚ್ಚು ನೀರು ಕುಡಿಯಿರಿ ಮತ್ತು ದೇಹವನ್ನು ಚೆನ್ನಾಗಿ ನೋಡಿಕೊಳ್ಳಿ.

ಉಗುರು ಸುತ್ತು ಜತೆಗೆ ಈ ಋತುವಿನಲ್ಲಿ ಬೆರಳುಗಳ ಮಧ್ಯೆ ತುರಿಕೆ ಉಂಟಾಗುತ್ತದೆ. ತುರಿಕೆ ಹುಣ್ಣುಗಳನ್ನು ಉಂಟುಮಾಡುತ್ತದೆ. ಹೀಗಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಹುಣ್ಣುಗಳು ಬೆಳೆಯುವ ಮೊದಲು ವೈದ್ಯರನ್ನು ಭೇಟಿ ಮಾಡಲು ಮರೆಯದಿರಿ.

ತಪ್ಪಾದ ಪಾದರಕ್ಷೆಗಳಿಂದಲೂ ಉಗುರು ಸುತ್ತು ಉಂಟಾಗುತ್ತದೆ. ಚಳಿಯಲ್ಲಿ ಬಿಗಿಯಾದ ಬೂಟುಗಳು ಅಥವಾ ಚಪ್ಪಲಿಗಳನ್ನು ಧರಿಸುವುದನ್ನು ತಪ್ಪಿಸಿ ಮತ್ತು ಆರಾಮದಾಯಕ ಪಾದರಕ್ಷೆಗಳನ್ನು ಧರಿಸಲು ಪ್ರಯತ್ನಿಸಿ.

ಕೈಕಾಲುಗಳನ್ನು ತೊಳೆದ ನಂತರ ಅಥವಾ ತಣ್ಣೀರಿನಲ್ಲಿ ಕೆಲಸ ಮಾಡಿದ ನಂತರ ಜನರು ಬೆಂಕಿಯ ಮುಂದೆ ಕೈಕಾಲು ಒಣಗಿಸುವ ಪ್ರಯತ್ನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಬೆರಳುಗಳಲ್ಲಿ ಊತ ಉಂಟಾಗುತ್ತದೆ ಮತ್ತು ಉಗುರು ಸುತ್ತಾಗುತ್ತದೆ.



















