ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಗಳ ಮಿಶ್ರಣ ಪರಿಣಾಮಕಾರಿ; ಐಸಿಎಂಆರ್ ಅಧ್ಯಯನ

| Updated By: ಸುಷ್ಮಾ ಚಕ್ರೆ

Updated on: Oct 18, 2021 | 9:33 PM

ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಅಧ್ಯಯನದ ಪ್ರಕಾರ, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬ ಎರಡು ಲಸಿಕೆಯ ಡೋಸ್​ಗಳನ್ನು ಒಟ್ಟಿಗೆ ಬೆರೆಸುವುದು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ.

ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಗಳ ಮಿಶ್ರಣ ಪರಿಣಾಮಕಾರಿ; ಐಸಿಎಂಆರ್ ಅಧ್ಯಯನ
ಕೊವಿಡ್ ಲಸಿಕೆ
Follow us on

ನವದೆಹಲಿ: ಭಾರತದಲ್ಲಿ‌ ಕೊವಿಡ್ ಉಚಿತ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲು ತುರ್ತು ಅನುಮತಿಯನ್ನು ಕೂಡ ನೀಡಲಾಗಿದೆ. ಹಲವು ದೇಶಗಳು ʼಬೂಸ್ಟರ್ ಶಾಟ್ʼ ಕೂಡ ನೀಡಲು ಆರಂಭಿಸಿವೆ. ಇತ್ತೀಚಿನ ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಅಧ್ಯಯನದ ಪ್ರಕಾರ, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬ ಎರಡು ಲಸಿಕೆಯ ಡೋಸ್​ಗಳನ್ನು ಒಟ್ಟಿಗೆ ಬೆರೆಸುವುದು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ.

ಈ ಸಂಶೋಧನೆಗಾಗಿ ನಾನಾ ರೀತಿಯ ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಒಂದು ವಾರಗಳ ಅಂತರದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಡೋಸ್​ಗಳನ್ನು ನೀಡಲಾಯಿತು. 18 ಜನರಿಗೆ ಮೊದಲು ಕೋವಿಶೀಲ್ಡ್ ಅನ್ನು ಮೊದಲ ಶಾಟ್ ಆಗಿ ಮತ್ತು ಕೊವ್ಯಾಕ್ಸಿನ್ ಅನ್ನು ಎರಡನೇ ಶಾಟ್ ಆಗಿ ನೀಡಲಾಯಿತು.

ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಪ್ರಸ್ತುತ ಭಾರತದಲ್ಲಿ ಬಳಕೆಯಲ್ಲಿರುವ ಪ್ರಾಥಮಿಕ ಕೋವಿಡ್-19 ಲಸಿಕೆಗಳಾಗಿವೆ. ಒಂದೇ ರೀತಿಯ ಆದರೂ ವಿಭಿನ್ನ ಸಾಂಪ್ರದಾಯಿಕ ಲಸಿಕೆ ತಯಾರಿಸುವ ತಂತ್ರಜ್ಞಾನ ವೇದಿಕೆಗಳನ್ನ ಬಳಸಿಕೊಂಡು ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೊವಾಕ್ಸಿನ್ ಅನ್ನು ಇತ್ತೀಚೆಗೆ 2ರಿಂದ 18 ವರ್ಷದೊಳಗಿನ ಮಕ್ಕಳಿಗೂ ತುರ್ತು ಬಳಕೆಗೆ ಅನುಮೋದಿಸಲಾಗಿದೆ.

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಮಿಶ್ರಣ ಕುರಿತ ಅಧ್ಯಯನಕ್ಕೆ ಡಿಸಿಜಿಐ ಅನುಮೋದನೆ ನೀಡಿದೆ. ತಮಿಳುನಾಡಿನ ವೆಲ್ಲೂರಿನ ಸಿಎಮ್‌ಸಿ ಆಸ್ಪತ್ರೆಗೆ ಲಸಿಕೆಗಳ ಡೋಸ್‌ ಮಿಶ್ರಣ ಕುರಿತು ಅಧ್ಯಯನಕ್ಕೆ ಅನುಮತಿ ನೀಡಲಾಗಿದೆ. ಐಸಿಎಂಆರ್ ಉತ್ತರಪ್ರದೇಶದಲ್ಲಿ 18 ಜನರಿಗೆ ಕೋವಿಶೀಲ್ಡ್ ಅನ್ನು ಮೊದಲ ಡೋಸ್ ಆಗಿ ಮತ್ತು ಕೋವಾಕ್ಸಿನ್ ಅನ್ನು ಎರಡನೆಯದಾಗಿ ನೀಡಲಾಗಿತ್ತು. ಆದರೆ ಈ ಎರಡು ಕೋವಿಡ್ -19 ಲಸಿಕೆಗಳನ್ನು ಸಂಯೋಜಿಸಿರುವುದು ಒಂದೇ ಲಸಿಕೆಯ ಎರಡು ಡೋಸ್ ಗಳಿಂದ ಸಿಗುವ ರೋಗ ನಿರೋಧಕ ಸಾಮರ್ಥ್ಯಕ್ಕಿಂತ ಹೆಚ್ಚಿನ ಫಲಿತಾಂಶವನ್ನು ನೀಡಿದೆ. ಒಂದೇ ರೀತಿಯ ಕೋವಿಡ್-19 ಲಸಿಕೆಯ ಎರಡು ಡೋಸ್ ಪಡೆಯುವುದಕ್ಕಿಂತಲೂ ಎರಡು ಭಿನ್ನ ಲಸಿಕೆಗಳ ಡೋಸ್ ಗಳನ್ನು ಪಡೆಯುವುದು ಪರಿಣಾಮಕಾರಿ ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: CoWIN Certificate | ಕೋವಿಶೀಲ್ಡ್ ಬಳಿಕ ಭಾರತದ ಕೊವಿಡ್ ಲಸಿಕೆಯ ಸರ್ಟಿಫಿಕೆಟ್ ಬಗ್ಗೆ ಇಂಗ್ಲೆಂಡ್ ತಗಾದೆ

ಕೊವಿಶೀಲ್ಡ್​-ಕೊವ್ಯಾಕ್ಸಿನ್​ ಲಸಿಕೆಗಳ ಮಿಶ್ರಣ ಕ್ಲಿನಿಕಲ್​ ಪ್ರಯೋಗ, ಅಧ್ಯಯನಕ್ಕೆ ಡಿಸಿಜಿಐ ಅನುಮೋದನೆ..