ಬೆಂಗಳೂರು: ಭಾರತದಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ವೈರಸ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಆರಂಭದ ದಿನಗಳಲ್ಲಿ ನೂಕುನುಗ್ಗಲು ಹೆಚ್ಚಾಗಬಹುದು ಎಂದು ನಿರೀಕ್ಷಿಸಿರುವ ಸರ್ಕಾರವು 18ರಿಂದ 45 ವಯೋಮಾನದವರು CoWin ಪೋರ್ಟಲ್ ಅಥವಾ ಆ್ಯಪ್ನಲ್ಲಿ ನೋಂದಣಿ ಮಾಡಿಕೊಂಡು, ನಿಗದಿತ ಸಮಯದಲ್ಲಿ ಮಾತ್ರವೇ ಲಸಿಕೆ ಪಡೆಯಲು ಬರಬೇಕು ಎಂದು ಸೂಚಿಸಿದೆ. ನೋಂದಣಿ ಮಾಡಿಕೊಳ್ಳದೇ ಲಸಿಕೆ ಕೇಂದ್ರಗಳಿಗೆ ಬಂದವರನ್ನು ವಾಪಸ್ ಕಳಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
CoWin ವೇದಿಕೆಗಳು ಮತ್ತು ಆರೋಗ್ಯ ಸೇತು ಆ್ಯಪ್ನಲ್ಲಿ ಏಪ್ರಿಲ್ 28ರ ನಂತರ ಕೊರೊನಾ ವೈರಸ್ ನಿರೋಧಕ ಲಸಿಕೆ ವಿತರಣೆಗೆ 18 ವರ್ಷ ದಾಟಿದವರು ನೋಂದಣಿ ಮಾಡಿಕೊಳ್ಳಲು ಅವಕಾಶ ಸಿಗಲಿದೆ. 45 ವರ್ಷ ದಾಟಿದವರಿಗೂ ಹಿಂದಿನಂತೆ CoWin ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಒಂದು ವೇಳೆ ನೋಂದಣಿ ಮಾಡಿಕೊಳ್ಳದೇ ಲಸಿಕೆ ಕೇಂದ್ರಕ್ಕೆ ಹೋದರೂ ಅಂಥವರಿಗೆ ಲಸಿಕೆ ನೀಡಲಾಗುವುದು. ಆದರೆ 18ರಿಂದ 45ರ ವಯೋಮಾನವರಿಗೆ ಮಾತ್ರ ನೋಂದಣಿ ಕಡ್ಡಾಯವಾಗಿದೆ.
18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಪಡೆಯಲು ಮುಕ್ತ ಅವಕಾಶ ನೀಡಿದ ನಂತರ ಸಹಜವಾಗಿಯೇ ಲಸಿಕಾ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚಾಗಬಹುದು ಎಂದು ಸರ್ಕಾರ ನಿರೀಕ್ಷಿಸಿದೆ. ಜನಸಂದಣಿಗೆ ಕಡಿವಾಣ ಹಾಕಲೆಂದೇ CoWin ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡು, ಸಮಯ ನಿಗದಿಪಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ವಯೋಮಾನದವರು ನೇರವಾಗಿ ಲಸಿಕಾ ಕೇಂದ್ರಗಳಿಗೆ ಬಂದರೆ ಲಸಿಕೆ ನೀಡಲಾಗುವುದಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಲಸಿಕೆ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ..
1) CoWin ಪೋರ್ಟಲ್ನಲ್ಲಿ ಲಸಿಕೆಗೆ ಏಪ್ರಿಲ್ 28ರಿಂದ ನೋಂದಣಿ ಆರಂಭವಾಗಲಿದೆ
2) ಮೇ 1ರ ನಂತರ ಲಸಿಕೆ ನೀಡಲಾಗುವುದು
3) ಕೇವಲ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುವುದು
4) ಮುಂಚಿತವಾಗಿ ನಿಮ್ಮ ಸಮಯವನ್ನು CoWin ಪೋರ್ಟಲ್ ಮೂಲಕ ನಿಗದಿಪಡಿಸಿಕೊಳ್ಳಬೇಕು
5) ನೇರವಾಗಿ ಲಸಿಕಾ ಕೇಂದ್ರಕ್ಕೆ ಹೋದರೆ ಲಸಿಕೆ ನೀಡುವುದಿಲ್ಲ
#LargestVaccineDrive #Unite2FightCorona
Here’s a step-by-step process on how to register yourself on CoWIN portal for getting #COVIDVaccination appointments. Vaccination drive opens for everyone between 18-45 years from 1st of May, 2021. pic.twitter.com/xfhSf9F0U5
— Ministry of Health (@MoHFW_INDIA) April 25, 2021
ನೋಂದಣಿ ಹೇಗೆ?
1) cowin.gov.in ಪೋರ್ಟಲ್ಗೆ ಭೇಟಿ ನೀಡಿ.
2) ನಿಮ್ಮ ಮೊಬೈಲ್ ನಂಬರ್, ಆಧಾರ್ ನಂಬರ್ ಕೊಟ್ಟು ಒಟಿಪಿಗಾಗಿ ಕಾಯಿರಿ.
3) ಒಟಿಪಿ ನೀಡಿದ ನಂತರ ನಿಮ್ಮ ಹೆಸರು, ಜನ್ಮ ದಿನಾಂಕ ಇತ್ಯಾದಿ ವಿವರಗಳನ್ನು ತುಂಬಬೇಕು. ಈ ಹಂತದಲ್ಲಿ ಯಾವುದೇ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಿ.
4) ಸರ್ಕಾರದ ಮಾನ್ಯತೆಯಿರುವ ಯಾವುದಾದರೂ ಒಂದು ಫೋಟೊ ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡಬೇಕಾಗುತ್ತೆ. ಆಧಾರ್, ಪ್ಯಾನ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಹಲವು ದಾಖಲೆಗಳನ್ನು ಬಳಸಬಹುದು.
5) ಲಸಿಕಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಿ. ಸದ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನದ ಪ್ರಕಾರ 18-45 ವಯೋಮಾನದವರಿಗೆ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತಿದೆ.
6) ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳಿ. ಒಂದು ವೇಳೆ ನೀವು ಇಷ್ಟಪಟ್ಟ ಸಮಯ, ವೇಳೆ ಸಿಗದಿದ್ದರೆ ಮುಂದಿನ ದಿನಾಂಕಗಳನ್ನು ಪರಿಶೀಲಿಸಿ.
7) ಸಮಯ ನಿಗದಿಯಾದ ದಾಖಲೆ ಜನರೇಟ್ ಆಗುತ್ತದೆ. ಇದರ ಜೊತೆಗೆ ಒಂದು ಫೋಟೊ ಐಡಿ ಕಾರ್ಡ್ ತೆಗೆದುಕೊಂಡು ನಿಗದಿತ ದಿನ, ಸಮಯಕ್ಕೆ ಲಸಿಕಾ ಕೇಂದ್ರಕ್ಕೆ ಹೋಗಿ.
#LargestVaccineDrive #Unite2FightCorona
All eligible beneficiaries between 18-45 years can now register on Co-Win portal, i.e https://t.co/cFCl4sLDAf pic.twitter.com/UWQsmcxsWC
— Ministry of Health (@MoHFW_INDIA) April 25, 2021
ನಿಮ್ಮ ಮನದಲ್ಲಿ ಮೂಡಬಹುದಾದ ಕೆಲ ಸಾಮಾನ್ಯ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..
1) ನಿಗದಿಯಾದ ಸಮಯವನ್ನು ಬದಲಿಸಲು ಸಾಧ್ಯವೇ?
ಸಮಯವನ್ನು ಬದಲಿಸಲು ಪೋರ್ಟಲ್ನಲ್ಲಿ ಅವಕಾಶವಿಲ್ಲ. ಒಂದು ವೇಳೆ ನಿಮಗೆ ನಿಗದಿತ ದಿನಾಂಕ, ಸಮಯದಲ್ಲಿ ಲಸಿಕೆ ತೆಗೆದುಕೊಳ್ಳಲು ಆಗದಿದ್ದರೆ ಮತ್ತೊಮ್ಮೆ (ನಂತರದ ದಿನ) ರಿಶೆಡ್ಯೂಲ್ ಟ್ಯಾಬ್ ಮೂಲಕ ಹೊಸದಾಗಿ ಸಮಯ ನಿಗದಿಪಡಿಸಿಕೊಳ್ಳಬಹುದು.
2) ಲಸಿಕೆಯ 2ನೇ ಡೋಸ್ಗೆ ಸಮಯ ನಿಗದಿಪಡಿಸಿಕೊಳ್ಳುವುದು ಹೇಗೆ?
ಮೊದಲ ಡೋಸ್ ಪಡೆದುಕೊಂಡ ನಂತರ 2ನೇ ಡೋಸ್ಗೆ ನೀವು ಸಮಯ ನಿಗದಿಪಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಮೊದಲ ಡೋಸ್ ತೆಗೆದುಕೊಂಡ 29ನೇ ದಿನಕ್ಕೆ ತನ್ನಿಂತಾನೆ ಅದೇ ಲಸಿಕಾ ಕೇಂದ್ರದಲ್ಲಿ ಸಮಯ ನಿಗದಿಯಾಗುತ್ತದೆ.
3) ಒಂದೇ ಲಾಗಿನ್ ಐಡಿ ಬಳಸಿ ಎಷ್ಟು ಜನರು ನೋಂದಣಿ ಮಾಡಿಕೊಳ್ಳಬಹುದು?
ಒಂದು ಲಾಗಿನ್ ಐಡಿಯಿಂದ ಗರಿಷ್ಠ ನಾಲ್ವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬಹುದು. ಫೋನ್ ನಂಬರ್ ಒಂದೇ ಕೊಟ್ಟರೂ ಪ್ರತ್ಯೇಕ ಫೋಟೊ ಐಡಿ ಅಪ್ಲೋಡ್ ಮಾಡಬೇಕಾಗುತ್ತದೆ.
4) ನೋಂದಣಿಗೆ ಇರುವ ಇತರ ಅವಕಾಶಗಳು ಏನು?
ಸ್ವಯಂ ನೋಂದಣಿ ಮಾಡಿಕೊಳ್ಳಲು ತಿಳಿಯುವುದಿಲ್ಲ ಎನ್ನುವವರಿಗಾಗಿ ಸರ್ಕಾರವು ನೋಂದಣಿ ಮಾಡಿಕೊಡಲು ವ್ಯವಸ್ಥೆ ಮಾಡಿದೆ. ಇಂಥ ವ್ಯವಸ್ಥೆ ಎಲ್ಲಿದೆ ಎಂಬ ಬಗ್ಗೆ ವೆಬ್ಸೈಟ್ಗಳಲ್ಲಿ ಮಾಹಿತಿಯಿಲ್ಲ. ಸ್ಥಳೀಯ ಆಸ್ಪತ್ರೆಗಳಲ್ಲಿ, ಲಸಿಕಾ ಕೇಂದ್ರಗಳಲ್ಲಿ ವಿಚಾರಿಸಿಕೊಳ್ಳಬೇಕಾಗುತ್ತದೆ.
5) ನಾವು ತಿಳಿದಿರಬೇಕಾದ ಇತರ ಅಂಶಗಳೇನಾದರೂ ಇದೆಯೇ?
ಲಸಿಕೆ ತೆಗೆದುಕೊಂಡ ಒಂದು ತಿಂಗಳ ಅವಧಿಯಲ್ಲಿ ರಕ್ತದಾನ ಮಾಡಬಾರದು. ಲಸಿಕೆ ಪಡೆದುಕೊಂಡ ನಂತರವೂ ಕೈತೊಳೆಯುವ, ಅಂತರ ಪಾಲಿಸುವ ಮತ್ತು ಮಾಸ್ಕ್ ಧರಿಸುವ ನಿಯಮಗಳನ್ನು ಪಾಲಿಸಬೇಕು. ಹೆಚ್ಚಿನ ಮಾಹಿತಿಗೆ http://mohfw.gov.in/ ವೆಬ್ಸೈಟ್ ಗಮನಿಸಿ.
(Covid Vaccine Things you need to know about corona vaccine for all aged 18 registering in cowin portal how to get appointment)
ಇದನ್ನೂ ಓದಿ: ವೈರಸ್ ಅಧ್ಯಯನ ಕೇಂದ್ರ, ಲಸಿಕೆ ಉತ್ಪಾದನಾ ಸಂಸ್ಥೆಯಿರುವ ಪುಣೆಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವುದೇಕೆ?
ಇದನ್ನೂ ಓದಿ: ಮೇ 1ರಿಂದ ಮೂರನೇ ಹಂತದ ಕೊವಿಡ್ ಲಸಿಕೆ ಅಭಿಯಾನ; ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
Published On - 6:57 pm, Sun, 25 April 21