Dandruff Remedies: ಚಳಿಗಾಲದಲ್ಲಿ ತಲೆ ಹೊಟ್ಟಿನಿಂದ ಮುಕ್ತಿ ಪಡೆಯುವುದು ಹೇಗೆ?; ಇಲ್ಲಿವೆ ಮನೆಮದ್ದು

|

Updated on: Jan 24, 2023 | 1:21 PM

Beauty Tips: ಬೇವು ನೆತ್ತಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸುವಾಗ ಮುಚ್ಚಿಹೋಗಿರುವ ರಂಧ್ರಗಳನ್ನು ತೆರವುಗೊಳಿಸುತ್ತದೆ.

Dandruff Remedies: ಚಳಿಗಾಲದಲ್ಲಿ ತಲೆ ಹೊಟ್ಟಿನಿಂದ ಮುಕ್ತಿ ಪಡೆಯುವುದು ಹೇಗೆ?; ಇಲ್ಲಿವೆ ಮನೆಮದ್ದು
ತಲೆಹೊಟ್ಟು
Follow us on

ತಲೆಹೊಟ್ಟು (Dandruff) ಪ್ರತಿಯೊಬ್ಬರನ್ನೂ ಕಾಡುವ ಕೂದಲಿನ ಪ್ರಮುಖ ಮತ್ತು ಸಾಮಾನ್ಯ ಸಮಸ್ಯೆಯಾಗಿದೆ. ಇದು ನೆತ್ತಿಯ ಚರ್ಮದ ಮೇಲೆ ಪದರಗಳನ್ನು ಉಂಟುಮಾಡುವ ಸ್ಥಿತಿಯಾಗಿದ್ದು, ನಂತರ ಚರ್ಮದ ಮೇಲೆ ತುರಿಕೆ ಉಂಟಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ (Winter Season) ತಲೆಯ ಚರ್ಮ ಒಣಗುವುದರಿಂದ ಹೊಟ್ಟಿನ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತದೆ. ತಲೆಹೊಟ್ಟು ಹೆಚ್ಚಾಗುವುದಕ್ಕೆ ಇಂಥದ್ದೇ ಕಾರಣ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಕೆಲವರ ದೇಹ ಪ್ರಕೃತಿಯೂ ತಲೆಹೊಟ್ಟಿಗೆ ಕಾರಣವಾಗುತ್ತದೆ.

ತಲೆ ಹೊಟ್ಟನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಮನೆಮದ್ದುಗಳು ಇಲ್ಲಿವೆ:
ಬೇವು:
ಬೇವು ನೆತ್ತಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸುವಾಗ ಮುಚ್ಚಿಹೋಗಿರುವ ರಂಧ್ರಗಳನ್ನು ತೆರವುಗೊಳಿಸುತ್ತದೆ. ಬೇವಿನ ಎಲೆಯನ್ನು ರುಬ್ಬಿ, ಅದನ್ನು ತಲೆಗೆ ಹಚ್ಚಿ, ಉಗುರು ಬೆಚ್ಚಗಿನ ನೀರಿನಿಂದ ತಲೆಯನ್ನು ತೊಳೆಯಿರಿ.

ಮೊಸರು- ನೆಲ್ಲಿಕಾಯಿ ಪುಡಿ:
ನೆಲ್ಲಿಕಾಯಿ ತಲೆಹೊಟ್ಟಿಗೆ ರಾಮಬಾಣವಾಗಿದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಪುಡಿ ಮಾಡಿದ ನೆಲ್ಲಿಕಾಯಿಯನ್ನು ಮೊಸರಿನೊಂದಿಗೆ ಕಲೆಸಿ, ಹಚ್ಚಿಕೊಂಡರೆ ತಲೆಹೊಟ್ಟು ಕಡಿಮೆಯಾಗುತ್ತದೆ.

ಮೊಸರು:
ತಲೆಹೊಟ್ಟು ಚಿಕಿತ್ಸೆಗಾಗಿ ಮನೆಮದ್ದನ್ನು ಅನುಸರಿಸುವುದು ಉತ್ತಮ. ಕೆಮಿಕಲ್​ಗಳನ್ನು ಬಳಸುವುದರಿಂದ ತಲೆಹೊಟ್ಟು ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಮನೆಯಲ್ಲಿಯೇ ಇರುವ ಮೊಸರನ್ನು ನಿಮ್ಮ ಕೂದಲಿಗೆ ಹಚ್ಚಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ. ಸ್ವಲ್ಪ ಮೊಸರನ್ನು ನಿಮ್ಮ ನೆತ್ತಿಯ ಮೇಲೆ ಅರ್ಧ ಗಂಟೆ ಹಚ್ಚಿ ಮತ್ತು ಸೌಮ್ಯವಾದ ಶಾಂಪೂವಿನಿಂದ ತೊಳೆಯಿರಿ.

ಇದನ್ನೂ ಓದಿ: Remedies for Dandruff: ಈ ಮೂರು ಸಿಂಪಲ್​​​ ಟಿಪ್ಸ್​​ ನಿಮ್ಮ ತಲೆ ಹೊಟ್ಟು ಸಮಸ್ಯೆಯನ್ನು ಹೋಗಲಾಡಿಸುತ್ತದೆ

ಬೇವು ಮತ್ತು ತೆಂಗಿನ ಎಣ್ಣೆ:
ಇದು ಅನೇಕ ವಿಟಮಿನ್‌ಗಳು ಮತ್ತು ಕೊಬ್ಬಿನಾಮ್ಲಗಳನ್ನು ಹೊಂದಿರುವುದರಿಂದ, ತೆಂಗಿನ ಎಣ್ಣೆಯು ಚರ್ಮವನ್ನು ತೇವಗೊಳಿಸುತ್ತದೆ. ಆ್ಯಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಬೇವು, ತೆಂಗಿನ ಎಣ್ಣೆಯ ಪ್ರಯೋಜನಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. 1 ಚಮಚ ಬೇವಿನ ಪುಡಿಗೆ 4 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಬೇಕು. ನಿಮ್ಮ ಕೂದಲಿನ ಉದ್ದಕ್ಕೂ ಇದನ್ನು ಹಚ್ಚಬೇಕು. 20 ನಿಮಿಷಗಳ ಮೃದುವಾಗಿ ಮಸಾಜ್ ಮಾಡಿದ ನಂತರ ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.

ಮೆಂತ್ಯ ಬೀಜ:
ಮೆಂತ್ಯ ಟೆಸ್ಟೋಸ್ಟೆರಾನ್ ಅನ್ನು ಹೆಚ್ಚಿಸುತ್ತದೆ ಮತ್ತು ಮಹಿಳೆಯರಿಗೆ ಹೆಚ್ಚು ಹಾಲು ಉತ್ಪಾದಿಸಲು ಸಹಾಯ ಮಾಡುತ್ತದೆ. ಮೆಂತ್ಯವು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಒಂದು ಲೋಟ ನೀರಿಗೆ ಕೆಲವು ಚಮಚ ಮೆಂತ್ಯ ಬೀಜಗಳನ್ನು ಸೇರಿಸಬೇಕು. ಅದನ್ನು ರಾತ್ರಿಯಿಡೀ ನೆನೆಸಿ, ಮರುದಿನ ಬೆಳಿಗ್ಗೆ ಈ ಮಿಶ್ರಣವನ್ನು ಪೇಸ್ಟ್ ಮಾಡಿ ನೆತ್ತಿಯ ಮೇಲೆ ಹಚ್ಚಿ. ಇದನ್ನು 30 ನಿಮಿಷಗಳ ಕಾಲ ಬಿಡಿ ನಂತರ ತಲೆಕೂದಲನ್ನು ತೊಳೆಯಿರಿ.

ಇದನ್ನೂ ಓದಿ: ಪುದೀನಾ ಸೊಪ್ಪಿನಲ್ಲಿದೆ ತಲೆನೋವು ಶಮನಕಾರಿ ಅಂಶ, ಇದರ ಸೇವನೆಯಿಂದಾಗುವ ಇತರೆ ಪ್ರಯೋಜನಗಳು ಇಲ್ಲಿವೆ

ಅಲೋವೆರಾ:
ಅಲೋವೆರಾದ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳು ತಲೆಹೊಟ್ಟು ಕಡಿಮೆಗೊಳಿಸುತ್ತದೆ. ಇದು ತಲೆಯ ನೆತ್ತಿಯನ್ನು ತೇವಾಂಶಗೊಳಿಸಿ, ಕೂದಲನ್ನು ಮೃದುಗೊಳಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ