Dangerous Plant: ಮುಟ್ಟಿದ್ದು ಒಂದು ಗಿಡ, ಆದ್ರೆ ಆ ಗಿಡವೇ ಜೀವಕ್ಕೆ ಮಾರಕವಾಗಿದೆ!

ಯುವತಿಯೊಬ್ಬಳು ತನ್ನ ನಾಯಿಯನ್ನು ವಾಕಿಂಗ್​​ಗೆ ಕರೆದುಕೊಂಡು ಹೋದಾಗ ಗಿಡವೊಂದನ್ನು ಮುಟ್ಟಿದ್ದಾಳೆ. ಮರುದಿನ ಬೆಳಿಗ್ಗೆ ಏಳುತ್ತಿದ್ದಂತೆ ಬಲಗೈ ತುಂಬಾ ತೀವ್ರವಾದ ಗುಳ್ಳೆಗಳು ಕಾಣಿಸಿಕೊಂಡಿದೆ. ಆಕೆಯ ಕೈಗಳ ಮೇಲೆ ಯಾರೋ ಆಸಿಡ್ ಸುರಿದಿದ್ದಾರೆ ಎಂದು ವೈದ್ಯರು ಊಹಿಸಿದ್ದಾರೆ.

Dangerous Plant: ಮುಟ್ಟಿದ್ದು ಒಂದು ಗಿಡ, ಆದ್ರೆ ಆ ಗಿಡವೇ ಜೀವಕ್ಕೆ ಮಾರಕವಾಗಿದೆ!
Dangerous Plant
Image Credit source: BBC

Updated on: Jun 16, 2023 | 6:14 PM

ಅಲರ್ಜಿಯು ದೊಡ್ಡ ವಿಷಯವಲ್ಲ ಎಂದು ಕಡೆಗಣಿಸದಿರಿ. ಯಾಕೆಂದರೆ ಅಲರ್ಜಿಗಳು ಕೆಲವೊಮ್ಮೆ ಮಾರಕವಾಗಿ ಪರಿಣಮಿಸಬಹುದು. ಸಾಮಾನ್ಯವಾಗಿ ಧೂಳು, ಕೆಲವು ಆಹಾರಗಳಿಂದ ಅಲರ್ಜಿಗಳು ಉಂಟಾಗುತ್ತವೆ. ಆದರೆ ಇಲ್ಲೊಂದು ಸಸ್ಯದಿಂದ ಯುವತಿಯೊಬ್ಬಳ ಕೈಗಳ ಮೇಲೆ ಗುಳ್ಳೆಗಳು ಹುಟ್ಟಿಕೊಳ್ಳಲು ಪ್ರಾರಂಭವಾಗಿದೆ. ಬೆಳಿಗ್ಗೆ ಎಂದಾಕ್ಷಣ ಎಡಗೈ ಮೇಲೆ ಗುಳ್ಳೆಗಳನ್ನು ಕಂಡು ಆತಂಕಗೊಂಡಿದ್ದಾಳೆ.

ಏನಿದು ಘಟನೆ?

ಯುವತಿಯೊಬ್ಬಳು ತನ್ನ ನಾಯಿಯನ್ನು ವಾಕಿಂಗ್​​ಗೆ ಕರೆದುಕೊಂಡು ಹೋದಾಗ ಸಸ್ಯವೊಂದನ್ನು ಸ್ಪರ್ಶಿಸಿದ್ದಾಳೆ. ಮರುದಿನ ಬೆಳಿಗ್ಗೆ ಏಳುತ್ತಿದ್ದಂತೆ ಬಲಗೈ ತುಂಬಾ ತೀವ್ರವಾದ ಗುಳ್ಳೆಗಳು ಕಾಣಿಸಿಕೊಂಡಿದೆ. ಆಕೆಯ ಕೈಗಳ ಮೇಲೆ ಯಾರೋ ಆಸಿಡ್ ಸುರಿದಿದ್ದಾರೆ ಎಂದು ವೈದ್ಯರು ಊಹಿಸಿದ್ದಾರೆ. ಮುಖದ ಮೇಲೂ ಗುಳ್ಳೆಗಳು ಕಾಣಿಸಿಕೊಂಡಿದೆ. ಕೆಲಹೊತ್ತಿನಲ್ಲೇ ವಿಷಕಾರಿ ಹಾಗ್ವೀಡ್ ಸಸ್ಯವನ್ನು ಈಕೆ ಸ್ವರ್ಶಿಸಿರುವುದು ವೈದ್ಯರಿಗೆ ತಿಳಿದುಬಂದಿದೆ. ಪರಿಣಾಮವಾಗಿ, ಅವಳು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಉಳಿಸಿಕೊಂಡಿದ್ದಾರೆ. ಎರಡು ವಾರಗಳ ವರೆಗೆ ಮಲಗಿದ ಸ್ಥಿತಿಯಲ್ಲೇ ಇದ್ದಿದರಿಂದ ಬೆನ್ನುಮೂಳೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿದ್ದು, ನಡೆಯಲೂ ಕೂಡ ಆಗದೇ ಇರುವ ಸ್ಥಿತಿಗೆ ಬಂದು ತಲುಪಿದ್ದಾಳೆ.

ಇದನ್ನೂ ಓದಿ: ಮಹಿಳೆಯರಲ್ಲಿ ಮೂತ್ರಪಿಂಡದ ಕಾಯಿಲೆಗೆ ಕಾರಣಗಳು ಮತ್ತು ಆಯುರ್ವೇದ ಸಲಹೆಗಳು

ಏನಿದು ಹಾಗ್ವೀಡ್ ಸಸ್ಯ?

ಸಾಮಾನ್ಯವಾಗಿ ಬ್ರಿಟನ್‌ನ ಅತ್ಯಂತ ಅಪಾಯಕಾರಿ ಸಸ್ಯ ಎಂದು ಕರೆಯಲ್ಪಡುವ ದೈತ್ಯ ಹಾಗ್‌ವೀಡ್ ವಿಷಕಾರಿ ಸಸ್ಯವಾಗಿದ್ದು, ಅದರ ರಸದಲ್ಲಿ ರಾಸಾಯನಿಕಗಳನ್ನು ಹೊಂದಿರುತ್ತದೆ. ಇದು ಸೂರ್ಯನ ಬೆಳಕಿಗೆ ಚರ್ಮವನ್ನು ತುಂಬಾ ಸೂಕ್ಷ್ಮವಾಗಿಸುತ್ತದೆ, ಇದರಿಂದಾಗಿ ಪಿಗ್ಮೆಂಟೇಶನ್, ಗುಳ್ಳೆಗಳು ಮತ್ತು ದೀರ್ಘಕಾಲೀನ ಚರ್ಮದ ಸಮಸ್ಯೆಗೆ ಕಾರಣವಾಗುತ್ತದೆ. ಈ ಸಸ್ಯದ ರಸವು ಅಪ್ಪಿ ತಪ್ಪಿ ಕಣ್ಣುನೊಳಗಡೆ ಬಿದ್ದರೆ ಅದು ಕುರುಡುತನಕ್ಕೆ ಕಾರಣವಾಗಬಹುದು. ಹಾಗ್ವೀಡ್ ಹೆಸರಿನ ಸಸ್ಯವನ್ನು ಹೆರಾಕ್ಲಿಯಮ್ ಮಾಂಟೇಜಿಯಮ್ ಎಂದು ಕರೆಯಲಾಗುತ್ತದೆ. ಇದರ ಹೂವು ಅತ್ಯಂತ ವಿಷಕಾರಿಯಾಗಿದೆ. ಯಾರಾದರೂ ಈ ಹೂವನ್ನು ಮುಟ್ಟಿದರೆ ಅದು ದೇಹದ ಮೇಲೆ ಗಾಯಗಳನ್ನುಂಟು ಮಾಡುತ್ತದೆ. ಅಲ್ಲದೆ ಇದು ಚರ್ಮದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.

ಹಾಗ್ವೀಡ್ನಿಂದ ಉಂಟಾಗುವ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡುವುದು ಹೇಗೆ?

ಒಂದು ದೈತ್ಯ ಹಾಗ್ವೀಡ್ನೊಂದಿಗೆ ಸಂಪರ್ಕಕ್ಕೆ ಬಂದರೆ, ಪೀಡಿತ ಪ್ರದೇಶವನ್ನು ಮುಚ್ಚಲು ಮತ್ತು ನೀರು ಮತ್ತು ಸಾಬೂನಿನಿಂದ ತೊಳೆಯಲು ಸಲಹೆ ನೀಡಲಾಗುತ್ತದೆ. ಜೊತೆಗೆ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಹಾಗ್ವೀಡ್ 25 ಅಡಿಗಳಷ್ಟು ಎತ್ತರವಾಗಿದ್ದು, ಇದು ಹಸಿರು ಎಲೆಗಳು, ಸಣ್ಣ ಬಿಳಿ ಹೂವುಗಳು, ಉದ್ದವಾದ ಹಸಿರು ಕಾಂಡಗಳು ಮತ್ತು ನೇರಳೆ ಮಚ್ಚೆಗಳನ್ನು ಹೊಂದಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: