New Chikungunya Vaccine: ಚಿಕನ್ ಗುನ್ಯಾ ಲಸಿಕೆಯ ಮೂರನೇ ಹಂತ ಯಶಸ್ವಿ: ಲಸಿಕೆ ಸಂಪೂರ್ಣ ಸುರಕ್ಷಿತ

ಮೂರನೇ ಹಂತದ ಚಿಕನ್ ಗುನ್ಯಾ ಲಸಿಕೆಯ ಪ್ರಯೋಗವು ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಇದು ಅತ್ಯಂತ ಪರಿಣಾಮಕಾರಿ ಮತ್ತು ಸುರಕ್ಷಿತವಾಗಿದೆ ಎಂದು ಈ ಲಸಿಕೆಯನ್ನು ತಯಾರಿಸುತ್ತಿರುವ ಫ್ರೆಂಚ್​​ನ ಬಯೋಟೆಕ್ ಕಂಪೆನಿ ವೆಲ್ನೆವಾ ಹೇಳಿಕೆ ನೀಡಿದೆ.

New Chikungunya Vaccine: ಚಿಕನ್ ಗುನ್ಯಾ ಲಸಿಕೆಯ ಮೂರನೇ ಹಂತ ಯಶಸ್ವಿ: ಲಸಿಕೆ ಸಂಪೂರ್ಣ ಸುರಕ್ಷಿತ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 16, 2023 | 6:08 PM

ಸೊಳ್ಳೆಗಳಿಂದ ಹರಡುವ ಅಪಾಯಕಾರಿ ಕಾಯಿಲೆಗಳಲ್ಲಿ ಚಿಕನ್ ಗುನ್ಯಾ ಕೂಡಾ ಒಂದು. ಪ್ರತಿ ವರ್ಷ ಅನೇಕ ಜನರು ಈ ರೋಗಕ್ಕೆ ತುತ್ತಾಗುತ್ತಾರೆ. ಪ್ರಸ್ತುತ ಚಿಕನ್ ಗುನ್ಯಾದಿಂದ ಉಂಟಾಗುವ ರೋಗವನ್ನು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ. ಅಲ್ಲದೆ ಈ ಕಾಯಿಲೆಗೆ ಯಾವುದೇ ಪರಿಣಾಮಕಾರಿ ಅಂಟಿವೈರಲ್ ಚಿಕಿತ್ಸೆ ಕೂಡಾ ಇಲ್ಲ. ಈ ಮಾರಣಾಂತಿಕ ಕಾಯಿಲೆಯಿಂದ ಜನರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸದ್ಯದಲ್ಲೇ ಲಸಿಕೆ ಬರುವ ಸಾಧ್ಯತೆಯಿದೆ. ಲಸಿಕೆಯ ಮೂರನೇ ಹಂತದ ಪ್ರಯೋಗ ಯಶಸ್ವಿಯಾಗಿದ್ದು, ಪ್ರಯೋಗದಲ್ಲಿ ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಘೋಷಿಸಲಾಗಿದೆ. ಫ್ರೆಂಚ್​​ನ ಬಯೋಟೆಕ್ ಕಂಪೆನಿ ವೆಲ್ನೆವಾ ಈ ಲಸಿಕೆಯನ್ನು ತಯಾರಿಸುತ್ತಿದೆ. ಈ ಲಸಿಕೆ ಒಂದೇ ಡೋಸ್ ನಲ್ಲಿರುತ್ತದೆ. ಕಂಪೆನಿಯು 3ನೇ ಹಂತದ ಪ್ರಯೋಗದ ಫಲಿತಾಂಶವನ್ನು ಲ್ಯಾನ್ಸೆಟ್ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟಿಸಿದೆ.

ಈ ಅಧ್ಯಯನವು ಲಸಿಕೆಯನ್ನು ಪಡೆದವರು ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ತೋರಿಸಿದೆ. ಲಸಿಕೆಯನ್ನು ಪಡೆದ ಎಲ್ಲಾ ವಯಸ್ಸಿನ ಗುಂಪುಗಳಲ್ಲಿ ಉತ್ತಮ ಪ್ರತಿಕಾಯಕಗಳು ಅಭಿವೃದ್ಧಿಗೊಂಡಿವೆ ಎಂದು ಸಂಶೋಧಕರು ಹೇಳಿದ್ದಾರೆ. ಹೀಗಿದ್ದರೂ ‘VLA1553’ ಲಸಿಕೆಯು ಚಿಕನ್ ಗುನ್ಯಾ ಸೋಂಕಿನ ನಂತರ ಬೆಳವಣಿಗೆಯಾಗುವ ಇತರ ಕಾಯಿಲೆಗಳನ್ನು ಎಷ್ಟರ ಮಟ್ಟಿಗೆ ತಡೆಯುತ್ತದೆ ಎಂಬುದನ್ನು ವಿಜ್ಞಾನಿಗಳು ಇನ್ನೂ ನಿರ್ಧರಿಸಿಲ್ಲ.

ಇದು ಪ್ಲಸ್ ಬೋ ನಿಯಂತ್ರಿತ ಮಾದರಿಯ ಮೂರು ಹಂತದ ಪ್ರಯೋಗವಾಗಿತ್ತು. ಈ ಮೂರು ಪ್ರಯೋಗಗಳಲ್ಲಿ, ಈ ಲಸಿಕೆಯು ವೈರಸ್​​​ನ್ನು ಹೇಗೆ ದುರ್ಬಲಗೊಳಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೇಗೆ ಬಲಪಡಿಸುತ್ತದೆ ಎಂಬುದನ್ನು ನೋಡಲಾಯಿತು. ದಿ ಲ್ಯಾನ್ಸೆಟ್ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ಈ ಸಂಶೋಧನೆಯಲ್ಲಿ 266 ಜನರ ಮೇಲೆ ಪ್ರಯೋಗ ನಡೆಸಲಾಯಿತು. ಇದರಲ್ಲಿ 263 ಜನರು ಅಂದರೆ ಶೇಕಡಾ 99% ನಷ್ಟು ಜನರು ಲಸಿಕೆಯಿಂದ ಪ್ರತಿಕಾಯಕಗಳನ್ನು ಅಭಿವೃದ್ಧಿಪಡಿಸಿದ್ದಾರೆ, ಈ ಪ್ರತಿಕಾಯಕಗಳು ಚಿಕನ್ ಗುನ್ಯಾ ವೈರಸ್​​​ನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ.

ಈ ಅಧ್ಯಯನದ ಪ್ರಕಾರ, ಇಲ್ಲಿಯವರೆಗೆ ನಡೆಸಲಾದ ಈ ಪ್ರಯೋಗದಲ್ಲಿ 4100 ಆರೋಗ್ಯವಂತ ಜನರ ಮೇಲೆ ಈ ಒಂದು ಡೋಸ್ ಲಸಿಕೆಯನ್ನು ಅನ್ವಯಿಸಲಾಗಿದೆ. ಅದರ ಫಲಿತಾಂಶವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಅಷ್ಟೇ ಅಲ್ಲ, ಇತರ ಲಸಿಕೆಗಳಿಗೆ ಹೋಲಿಸಿದರೆ ಇದರ ಅಡ್ಡ ಪರಿಣಾಮಗಳು ತುಂಬಾ ಕಡಿಮೆ. ಈ ಲಸಿಕೆಯನ್ನು ಪಡೆದ ನಂತರ, ಕೇವಲ ಇಬ್ಬರಲ್ಲಿ ಗಂಭೀರ ಅಡ್ಡ ಪರಿಣಾಮಗಳು ಕಂಡುಬಂದವು, ನಂತರ ಅವರು ಸಂಪೂರ್ಣವಾಗಿ ಚೇತರಿಸಿಕೊಂಡರು ಎಂದು ಹೇಳಿದೆ.

ಇದನ್ನೂ ಓದಿ: ಬೆಂಗಳೂರು: ನಿರಂತರವಾಗಿ ಚಳಿ ಹಾಗೂ ಮಳೆ; ಡೆಂಗ್ಯೂ, ಚಿಕನ್ ಗುನ್ಯಾ ಕೇಸ್ ಹೆಚ್ಚಳ

ಸಂಶೋಧಕರು ಏನು ಹೇಳುತ್ತಾರೆ:

ವೆಲ್ನೆವಾ ಕ್ಲಿನಕಲ್ ಸ್ಟ್ರಾಟಜಿ ಮ್ಯಾನೇಜರ್ ಮತ್ತು ಈ ಅಧ್ಯಯನದ ಪ್ರಮುಖ ಲೇಖಕರಾದ ಮಾರ್ಟಿನಾ ಷ್ನೇಯ್ಡರ್ ಹೇಳುತ್ತಾರೆ, ಈ ಅಧ್ಯಯನ ಫಲಿತಾಂಶಗಳು ಆಶಾವಾದಿಯಾಗಿದೆ. ಈ ಲಸಿಕೆ ಚಿಕನ್ ಗುನ್ಯಾ ಪೀಡಿತರಿಗೆ ಮೊದಲ ಲಸಿಕೆಯಾಗಲಿದೆ. ಹಾಗೂ ಇದು ಲಕ್ಷಾಂತರ ಜನರನ್ನು ಸೊಳ್ಳೆಯಿಂದ ಹರಡುವ ರೋಗದಿಂದ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:23 pm, Fri, 16 June 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ