Date Seed Coffee: ಖರ್ಜೂರದ ಬೀಜಗಳಿಂದ ಕಾಫಿ ತಯಾರಿಸಿ ಕುಡಿದಿದ್ದೀರಾ? ಇಲ್ಲಿದೆ ಇದರ ಆರೋಗ್ಯ ಪ್ರಯೋಜನ

| Updated By: ಅಕ್ಷತಾ ವರ್ಕಾಡಿ

Updated on: Nov 09, 2024 | 2:25 PM

ಖರ್ಜೂರದಲ್ಲಿರುವ ಜೀವಸತ್ವಗಳು, ಖನಿಜಗಳು ದೇಹಕ್ಕೆ ಅನೇಕ ರೀತಿಯಲ್ಲಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ನೀವು ಒಂದೇ ಖರ್ಜೂರ ಸೇವಿಸಿದರೂ, ದೇಹಕ್ಕೆ ತಕ್ಷಣದ ಶಕ್ತಿ ಸಿಗುತ್ತದೆ. ಅಂತಹ ಖರ್ಜೂರದ ಬೀಜಗಳಿಂದ ಕಾಫಿ ತಯಾರಿಸಿ ಅದನ್ನು ಸೇವನೆ ಮಾಡುವುದರಿಂದ ಹೆಚ್ಚು ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಯಾವವು? ಈ ಕಾಫಿ ತಯಾರಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Date Seed Coffee: ಖರ್ಜೂರದ ಬೀಜಗಳಿಂದ ಕಾಫಿ ತಯಾರಿಸಿ ಕುಡಿದಿದ್ದೀರಾ? ಇಲ್ಲಿದೆ ಇದರ ಆರೋಗ್ಯ ಪ್ರಯೋಜನ
Date Seed Coffee
Follow us on

ಖರ್ಜೂರ ಸೇವನೆ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಇದರಲ್ಲಿ ದೇಹಕ್ಕೆ ಅಗತ್ಯವಿರುವ ಕಬ್ಬಿಣ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಖರ್ಜೂರದಲ್ಲಿರುವ ಜೀವಸತ್ವಗಳು, ಖನಿಜಗಳು ದೇಹಕ್ಕೆ ಅನೇಕ ರೀತಿಯಲ್ಲಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ನೀವು ಒಂದೇ ಖರ್ಜೂರ ಸೇವಿಸಿದರೂ, ದೇಹಕ್ಕೆ ತಕ್ಷಣದ ಶಕ್ತಿ ಸಿಗುತ್ತದೆ. ಅಂತಹ ಖರ್ಜೂರದ ಬೀಜಗಳಿಂದ ಕಾಫಿ ತಯಾರಿಸಿ ಅದನ್ನು ಸೇವನೆ ಮಾಡುವುದರಿಂದ ಹೆಚ್ಚು ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಯಾವವು? ಈ ಕಾಫಿ ತಯಾರಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬೀಜಗಳಿಂದ ಕಾಫಿ ಪುಡಿ ತಯಾರಿಸುವುದು ಹೇಗೆ?

ಈ ಖರ್ಜೂರದ ಬೀಜಗಳಿಂದ ಕಾಫಿ ಪುಡಿ ಮಾಡುವಾಗ ಆ ಬೀಜಗಳನ್ನು ತೆಗೆದುಕೊಂಡು ಅವುಗಳನ್ನು ಸ್ವಲ್ಪ ಕತ್ತರಿಸಿ ಅಥವಾ ಜಜ್ಜಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಬಳಿಕ ಆ ಬೀಜಗಳಿಂದ ಪರಿಮಳ ಬರುವ ವರೆಗೆ ಹುರಿದುಕೊಂಡು ತಣ್ಣಗಾಗಲು ಬಿಡಬೇಕು. ನಂತರ ಆ ಮಿಶ್ರಣವನ್ನು ಮಿಕ್ಸಿಯಲ್ಲಿ ಸಣ್ಣಗೆ ಪುಡಿಯಾಗುವ ವರೆಗೆ ರುಬ್ಬಿಕೊಂಡರೆ. ಖರ್ಜೂರದ ಬೀಜಗಳಿಂದ ಕಾಫಿ ಪುಡಿಯನ್ನು ತಯಾರಿಸಿಕೊಳ್ಳಬಹುದು.

ಇದನ್ನೂ ಓದಿ: ಉಗುರು ಸುಲಭವಾಗಿ ಮುರಿಯುತ್ತಿದೆಯೇ? ಹಾಗಿದ್ರೆ ದೇಹದಲ್ಲಿ ಈ ಪೋಷಕಾಂಶಗಳ ಕೊರತೆಯಾಗಿದೆ ಎಂದರ್ಥ

ಈ ಕಾಫಿಯಿಂದ ಸಿಗುವ ಪ್ರಯೋಜನಗಳೇನು?

  • ಸಾಮಾನ್ಯವಾಗಿ ನಾವು ಬಳಸುವ ಕಾಫಿ ಮತ್ತು ಚಹಾ ಪುಡಿಯ ಬದಲು ಈ ಬೀಜದ ಕಾಫಿ ಪುಡಿಯನ್ನು ಬಳಸಬಹುದು.
  • ಅಧಿಕ ತೂಕದಿಂದ ಬಳಲುತ್ತಿರುವವರು ಖರ್ಜೂರದಿಂದ ತಯಾರಿಸಿದ ಕಾಫಿಯನ್ನು ಕುಡಿಯುವ ಮೂಲಕ ತೂಕ ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
  • ಖರ್ಜೂರದ ಬೀಜಗಳು ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಉಪಯುಕ್ತವಾಗಿವೆ.
  • ಕಡಿಮೆ ಲೈಂಗಿಕ ಸಾಮರ್ಥ್ಯ ಹೊಂದಿರುವವರಿಗೆ ಖರ್ಜೂರದ ಬೀಜದಿಂದ ತಯಾರಿಸಿದ ಕಾಫಿ ಕುಡಿಯುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು.
  • ಖರ್ಜೂರದ ಬೀಜಗಳು ಮಧುಮೇಹವನ್ನು ಕಡಿಮೆ ಮಾಡಲು ಸಹ ಉತ್ತಮವಾಗಿವೆ.
  • ಖರ್ಜೂರದ ಬೀಜಗಳಿಂದ ಮಾಡಿದ ಕಾಫಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಎಂದು ತಜ್ಞರು ಹೇಳುತ್ತಾರೆ.
  • ಈ ಪುಡಿಯಲ್ಲಿ ಒಲಿಕ್ ಆಮ್ಲ, ಫೈಬರ್ ಮತ್ತು ಪಾಲಿಫಿನಾಲ್ಗಳು ಸಮೃದ್ಧವಾಗಿವೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
  • ಖರ್ಜೂರದಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ದೇಹದಲ್ಲಿನ ಫ್ರೀ ರಾಡಿಕಲ್ಗಳನ್ನು ನಿಷ್ಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡವು ಉರಿಯೂತವನ್ನು ಕಡಿಮೆ ಮಾಡುತ್ತದೆ.
  • ಖರ್ಜೂರದ ಬೀಜಗಳಿಂದ ತಯಾರಿಸಿದ ಕಾಫಿಯನ್ನು ಪ್ರತಿದಿನ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಫೈಬರ್ ಪ್ರಮಾಣ ಹೆಚ್ಚಾಗುತ್ತದೆ, ಇದು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರವನ್ನು ಒದಗಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 am, Sat, 9 November 24