AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಬೆನ್ನು ನೋವಿಗೆ ಪರಿಹಾರವೇನು?

ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಮತ್ತು ಭಂಗಿಯನ್ನು ಬದಲಾಯಿಸದೆ ಕೆಲಸ ಮಾಡುವುದರಿಂದ ಬೆನ್ನಿನ ಸ್ನಾಯು ದುರ್ಬಲಗೊಳ್ಳುತ್ತಿದ್ದಂತೆ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯ ಬೆನ್ನು ನೋವಿಗೆ ಪರಿಹಾರವೇನು?

Health Tips: ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಬೆನ್ನು ನೋವಿಗೆ ಪರಿಹಾರವೇನು?
ಬೆನ್ನು ನೋವು
ಸುಷ್ಮಾ ಚಕ್ರೆ
|

Updated on: Nov 09, 2024 | 9:35 PM

Share

ಬೆಂಗಳೂರು: ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಲ್ಲಿ ಬಹುತೇಕರಿಗೆ ಬೆನ್ನು ನೋವು ಕಾಣಿಸಿಕೊಳ್ಳುವುದು ಸಹಜ. ಅದರಲ್ಲೂ ಐಟಿ ಉದ್ಯೋಗಿಗಳು, ಡಿಜಿಟಲ್​ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹೆಚ್ಚು ಕಾಲ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಾರೆ. ಹೀಗಾಗಿ ಅವರಲ್ಲಿ ಬೆನ್ನು ನೋವು ಬಹುಬೇಗನೆ ಕಾಣಿಸಿಕೊಳ್ಳುತ್ತದೆ. ಈ ರೀತಿಯ ಬೆನ್ನು ನೋವಿಗೆ ಪರಿಹಾರವೇನು? ಕೆಲಸದೊತ್ತಡದ ಮಧ್ಯೆ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆಂಬುದರ ಕುರಿತು ಮಾಹಿತಿ ಇಲ್ಲಿದೆ.

ಬಹುತೇಕ ಪ್ರಕರಣಗಳಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರೇ ಬೆನ್ನು ನೋವಿಗೆ ಹೆಚ್ಚು ಗುರಿಯಾಗುತ್ತಾರೆ. ಅದಕ್ಕೆ ಕಾರಣ ಹೆಚ್ಚಿನ ಸಮಯ ಕಂಪ್ಯೂಟರ್ ಮುಂದೆ ವಿವಿಧ ಭಂಗಿಗಳಲ್ಲಿ ಕೂರುವುದು, ಇದರ ಜೊತೆಗೆ ಯಾವುದೇ ರೀತಿಯ ದೈಹಿಕ ಚಲನೆ ಇಲ್ಲದಿರುವುದು. ದೀರ್ಘಕಾಲ ಒಂದೆಡೆ ಯಾವುದೇ ಚಲನೆ ಇಲ್ಲದೆ ಕೂರುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸ್ವಾಸ್ಥ್ಯವಲ್ಲ. ಇದರಿಂದ ದಿನೇ ದಿನೇ ಬೆನ್ನು ಮೂಳೆ ಸಂಕುಚಿತಗೊಳ್ಳುತ್ತಾ ಹೋಗುವುದರ ಜೊತೆಗೆ ಬೆನ್ನಿನ ಮೇಲೆ ಒತ್ತಡ ಹೆಚ್ಚಾಗುತ್ತದೆ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ನ್ಯೂರೋಸರ್ಜನ್ ಡಾ. ಪ್ರಥಮ್ ಬೈಸಾನಿ.

ಇದನ್ನೂ ಓದಿ: Health News: ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ತಲೆನೋವು ಕಾಡುತ್ತದೆಯೇ?

ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಮತ್ತು ಭಂಗಿಯನ್ನು ಬದಲಾಯಿಸದೆ ಕೆಲಸ ಮಾಡುವುದರಿಂದ ಬೆನ್ನಿನ ಸ್ನಾಯು ದುರ್ಬಲಗೊಳ್ಳುತ್ತಿದ್ದಂತೆ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಡಿಜಿಟಲ್ ಆಧಾರಿತ ಕೆಲಸಗಳನ್ನು ಮಾಡುವಾಗ ಉದ್ಯೋಗಿಗಳು ಕಂಪ್ಯೂಟರ್ ಮುಂದೆಯೇ ಕುಳಿತು ಕೆಲಸ ನಿರ್ವಹಿಸಬೇಕಿರುವ ಅನಿವಾರ್ಯತೆ ಇದೆ. ಆದ್ದರಿಂದ ಉದ್ಯೋಗಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಂತದಲ್ಲಿ ಬೆನ್ನು ನೋವು ಬರದಂತೆ ನೋಡಿಕೊಳ್ಳಬೇಕು ಜೊತೆಗೆ ಅಗತ್ಯ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.

ಬೆನ್ನು ನೋವನ್ನು ತಡೆಗಟ್ಟಲು ಪ್ರತಿನಿತ್ಯ ಉತ್ತಮ ಚಟುವಟಿಕೆಗಳನ್ನು ಅನುಸರಿಸಿದರೆ ಜೀವನಶೈಲಿಯಲ್ಲಿ ಬದಲಾವಣೆಗಳು ಸಾಧ್ಯ. ಕಂಪ್ಯೂಟರ್ ಮುಂದೆ ಕುಳಿತಾಗ ನೇರವಾಗಿ ಉತ್ತಮ ಭಂಗಿಯಲ್ಲಿ ಕೂರುವ ಪ್ರಯತ್ನ ಮಾಡುವುದು, ಆಗಾಗ್ಗೆ ಸಣ್ಣ ಪುಟ್ಟ ವ್ಯಾಯಾಮಗಳನ್ನು ಮಾಡುವುದು, ಕಚೇರಿಯಲ್ಲಿ ಸೂಕ್ತವಾದ ಕುರ್ಚಿಯ ಮೇಲೆ ಕುಳಿತು ಪಾದಗಳನ್ನು ನೆಲದ ಮೇಲಿಡಬೇಕು, ಕೆಲಸದ ನಡುವೆ 30 ನಿಮಿಷಗಳಿಗೊಮ್ಮೆ ನಿಲ್ಲುವುದು, ಕೈಗಳನ್ನು ಚಾಚುವುದು ಮತ್ತು ಒಂದೆರಡು ಹೆಜ್ಜೆ ನಡೆಯುವ ಅಭ್ಯಾಸವನ್ನು ಮಾಡಬೇಕು. ಆಗ ದೇಹ, ಕುತ್ತಿಗೆ ಮತ್ತು ಕೈ, ಕಾಲುಗಳಿಗೆ ಅಗತ್ಯ ವ್ಯಾಯಾಮ ದೊರೆಯುವುದರ ಜೊತೆಗೆ ದೇಹಕ್ಕೆ ಉತ್ಸಾಹ ದೊರೆಯುತ್ತದೆ.

ಇದನ್ನೂ ಓದಿ: Health Tips : ಊಟ ಮಾಡಿದ ತಕ್ಷಣ ಹೊಟ್ಟೆ ನೋವು ಶುರುವಾಗುತ್ತಾ? ಈ ಸಲಹೆ ಪಾಲಿಸಿ

ಬೆನ್ನು ನೋವಿನ ಜೊತೆಗೆ ಕಂಡುಬರುವ ಇತರೆ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರವೇನು?:

ಕುರ್ಚಿಯ ಮೇಲೆ ನಿರಂತರವಾಗಿ ಕುಳಿತುಕೊಳ್ಳುವುದರಿಂದ ಕಾಣಿಸಿಕೊಳ್ಳುವ ಬೆನ್ನು ನೋವು ಒಂದೆಡೆಯಾದರೆ ಕೆಲಸದ ಒತ್ತಡದಿಂದ ತಲೆ ನೋವಿನ ಸಮಸ್ಯೆಯನ್ನು ಕೂಡ ಉದ್ಯೋಗಿಗಳು ಅನುಭವಿಸುತ್ತಾರೆ. ಈ ತಲೆ ನೋವಿನ ಸಮಸ್ಯೆಯು ಅನೇಕ ಕಾರಣಗಳಿಂದಾಗಿ ಕಾಣಿಸಿಕೊಳ್ಳುತ್ತದೆ. ಅವುಗಳೆಂದರೆ ಒತ್ತಡ, ಕುರ್ಚಿಯ ಮೇಲೆ ಕುಳಿತುಕೊಳ್ಳುವ ಭಂಗಿ, ಸರಿಯಾಗಿ ನೀರು ಸೇವಿಸದಿರುವುದು ಹಾಗೂ ಹೆಚ್ಚಿನ ಸಮಯ ಕಂಪ್ಯೂಟರ್ ಅನ್ನು ನೋಡುವುದರಿಂದಲೂ ಉದ್ಭವಿಸುತ್ತದೆ.

ಈ ಆರೋಗ್ಯ ಸಮಸ್ಯೆಯು ಮಾರಣಾಂತಿಕವಲ್ಲವೆಂದೆನಿಸಿದರೂ ಕಾಲಕ್ರಮೇಣ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ ಹೋಗುತ್ತದೆ. ತಲೆ ನೋವಿನ ಲಕ್ಷಣಗಳನ್ನು ಗಮನಿಸಿದಾಗ ತಲೆಯ ಎರಡೂ ಬದಿಯಲ್ಲಿ ನೋವು ಅಥವಾ ಒತ್ತಡ, ಹಣೆಯಲ್ಲಿ ಬಿಗಿತ ಉಂಟಾಗುವುದು, ನೆತ್ತಿ, ಕುತ್ತಿಗೆ ಮತ್ತು ಭುಜಗಳಲ್ಲಿ ಸ್ನಾಯುಗಳ ಸೆಳೆತ ಉಂಟಾಗುವುದು, ಭಾವನಾತ್ಮಕವಾಗಿ ಒತ್ತಡ ಉಂಟಾಗುವುದು ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು ಎಂದು ತಜ್ಞರು ವಿವರಿಸಿದ್ದಾರೆ.

ಉದ್ಯೋಗಿಗಳಲ್ಲಿ ತಲೆ ನೋವನ್ನು ದೂರವಿಡಲು ಕೆಲಸದ ನಡುವೆ ಆಗಾಗ ವಿರಾಮ ಅಗತ್ಯ. ನೀರಿನ ಸೇವನೆ, ಕೆಲಸದ ಒತ್ತಡ ಕಡಿಮೆಯಾಗಲು ಧ್ಯಾನ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಕುರ್ಚಿಯ ಮೇಲೆ ಉತ್ತಮ ಭಂಗಿಯಲ್ಲಿ ಕೂರುವುದರಿಂದ ಸ್ನಾಯುಗಳ ಮೇಲೆ ಒತ್ತಡ ಬೀರುವುದನ್ನು ತಪ್ಪಿಸಬಹುದು. ನೋವಿನಿಂದ ಮುಕ್ತಿ ಹೊಂದಲು ನೋವು ನಿವಾರಕಗಳನ್ನು ತೆಗೆದುಕೊಳ್ಳುವ ಮೂಲಕವೂ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಬಹುದು. ಇಷ್ಟಾದರೂ ತಲೆ ನೋವು ಕಡಿಮೆಯಾಗದಿದ್ದಲ್ಲಿ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ ಎಂದು ವಾಸವಿ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ನ್ಯೂರೋಸರ್ಜನ್ ಡಾ. ಪ್ರಥಮ್ ಬೈಸಾನಿ ಸಲಹೆ ನೀಡಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ