Health Tips : ಊಟ ಮಾಡಿದ ತಕ್ಷಣ ಹೊಟ್ಟೆ ನೋವು ಶುರುವಾಗುತ್ತಾ? ಈ ಸಲಹೆ ಪಾಲಿಸಿ

ಇತ್ತೀಚಿನ ದಿನಗಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿದೆ. ಕೆಲವರು ಮಿತಿ ಮೀರಿ ಆಹಾರ ಸೇವಿಸಿದ ಬಳಿಕ ಹೊಟ್ಟೆ ನೋವೆಂದು ಹೊಟ್ಟೆ ಹಿಡಿದುಕೊಳ್ಳುತ್ತಾರೆ. ಯಾಕಾದ್ರೂ ಇಷ್ಟು ಊಟ ಮಾಡಿದೆ, ಊಟ ಮಾಡದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುವುದನ್ನು ಕೇಳಿರಬಹುದು. ನಿಮಗೂ ಕೂಡ ಇದೇ ರೀತಿ ಹೊಟ್ಟೆ ನೋವು ಶುರುವಾದ್ರೆ ಈ ಕೆಲವು ತಪ್ಪುಗಳು ನಿಮ್ಮಿಂದ ಆಗದಂತೆ ನೋಡಿಕೊಳ್ಳಿ.

Health Tips : ಊಟ ಮಾಡಿದ ತಕ್ಷಣ ಹೊಟ್ಟೆ ನೋವು ಶುರುವಾಗುತ್ತಾ? ಈ ಸಲಹೆ ಪಾಲಿಸಿ
Follow us
| Updated By: ಅಕ್ಷತಾ ವರ್ಕಾಡಿ

Updated on: Nov 06, 2024 | 7:06 PM

ಇಂದಿನ ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತದೆ. ಅದರಲ್ಲೂ ನಮ್ಮ ಊಟ ತಿಂಡಿಯಿಂದ ಪ್ರಾರಂಭವಾಗಿ ಮಲಗುವ ಸಮಯದವರೆಗಿನ ಸಣ್ಣ ಸಣ್ಣ ತಪ್ಪುಗಳಿಂದಲೇ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಊಟ ಮಾಡಿದ ತಕ್ಷಣವೇ ಹೊಟ್ಟೆ ನೋವು ಶುರುವಾಗುತ್ತದೆ. ಸ್ವಲ್ಪ ಊಟ ಮಾಡಿದರೂ ಹೆಚ್ಚು ಊಟ ಮಾಡಿದ್ದಂತೆ ಅನಿಸುತ್ತದೆ. ಆದರೆ ಹೊಟ್ಟೆಯಲ್ಲಿ ಹುಣ್ಣು, ಥೈರಾಯ್ಡ್, ಎದೆಯುರಿ, ಮಲಬದ್ಧತೆ, ಒತ್ತಡದಿಂದ ಏನಾದ್ರು ತಿಂದ ನಂತರವೂ ಹೊಟ್ಟೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾದ್ರೆ ಊಟ ಮಾಡಿದ ತಕ್ಷಣ ಹೊಟ್ಟೆ ನೋವು ಬಾರದಂತೆ ತಡೆಯಲು ಈ ಕೆಲವು ಸಲಹೆಗಳನ್ನು ಅನುಸರಿಸುವುದು ಉತ್ತಮ.

ನೀರು ಕುಡಿಯುವ ಅಭ್ಯಾಸವಿರಲಿ :

ಸೇವಿಸಿದ ಆಹಾರ ಜೀರ್ಣವಾಗಬೇಕಾದರೆ ನೀರು ಬೇಕೇ ಬೇಕು. ಆದರೆ ಹೆಚ್ಚಿನವರು ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುತ್ತಾರೆ. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗಿ ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಹೀಗಾಗಿ ಹೊಟ್ಟೆಯೊಳಗೆ ನೋವು ಅಥವಾ ಸೆಳೆತದಂತಹ ಅನುಭವವಾಗುತ್ತದೆ. ಆದ ಕಾರಣ ಊಟವಾದ ಬಳಿಕ ಹಾಗೂ ದಿನನಿತ್ಯ ಇಂತಿಷ್ಟು ಲೀಟರ್ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ತಿಂದ ನಂತರ ಮಲಗುವುದನ್ನು ತಪ್ಪಿಸಿ :

ಹೆಚ್ಚಿನವರು ಊಟ ಮಾಡಿದ ತಕ್ಷಣವೇ ಹಾಸಿಗೆಯ ಮೇಲೆ ಒರಗಿಕೊಳ್ಳುತ್ತಾರೆ. ಮಲಗಿದ್ದಾಗ ಹೊಟ್ಟೆಯ ಆಮ್ಲವು ಹಿಂದಕ್ಕೆ ಮತ್ತು ಮೇಲಕ್ಕೆ ಚಲಿಸುತ್ತದೆ. ಊಟವಾದ ತಕ್ಷಣವೇ ಮಲಗುವ ಅಭ್ಯಾಸವು ಹೊಟ್ಟೆ ನೋವು ಮತ್ತು ಸೆಳೆತಕ್ಕೆ ಕಾರಣವಾಗಬಹುದು.

ಅಗತ್ಯಕ್ಕಿಂತ ಆಹಾರವನ್ನು ಸೇವಿಸಬೇಡಿ :

ಕೆಲವರು ಅತಿಯಾಗಿ ತಿನ್ನುತ್ತಾರೆ. ಒಂದೇ ಬಾರಿಗೆ ಸಾಕಷ್ಟು ಆಹಾರ ಸೇವಿಸಿದ್ರೆ, ಹೊಟ್ಟೆ ನೋವು ಉಂಟಾಗಬಹುದು. ಅದಲ್ಲದೇ, ಕಳಪೆ ಜೀರ್ಣಕ್ರಿಯೆಯು ಹೊಟ್ಟೆ ನೋವಿಗೆ ಕಾರಣ ಎನ್ನಬಹುದು. ಹೀಗಾಗಿ ನಿಧಾನವಾಗಿ ಜೀರ್ಣವಾಗುವ, ಜೀರ್ಣಿಸಿಕೊಳ್ಳಲು ಕಷ್ಟಕರವಾದ ಆಮ್ಲೀಯ ಆಹಾರ, ಬ್ರೆಡ್, ಮಸಾಲೆಯುಕ್ತ ಆಹಾರವನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.

ಇದನ್ನೂ ಓದಿ : ಮುಟ್ಟಿನ ಸಮಯದಲ್ಲಿ ಹೊಟ್ಟೆಯುಬ್ಬರಕ್ಕೆ ಕಾರಣವೇನು? ತಜ್ಞರ ಮಾಹಿತಿ ಇಲ್ಲಿದೆ

ಅಸಿಡಿಕ್ ಆಹಾರ ಹಾಗೂ ಸಿಹಿ ತಿನಿಸುಗಳಿಂದ ದೂರವಿರಿ :

ಅಸಿಡಿಕ್ ಆಹಾರಗಳಾದ ಹಣ್ಣಿನ ರಸ, ಸಂಸ್ಕರಿಸಿದ ಚೀಸ್ ಗಳ ಸೇವನೆಯೂ ಹೊಟ್ಟೆ ನೋವಿಗೆ ಆಹ್ವಾನಕೊಟ್ಟಂತೆ. ಅದಲ್ಲದೇ, ಊಟ ಮಾಡಿದ ತಕ್ಷಣವೇ ಸಿಹಿ ಸೇವಿಸುವುದನ್ನು ಕಡಿಮೆ ಮಾಡುವುದರಿಂದ ಈ ಸಮಸ್ಯೆಯನ್ನು ದೂರವಾಗಿಸಬಹುದು.

ಊಟದ ಬಳಿಕ ವಾಕ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ :

ಊಟದ ನಂತರ ಹೊಟ್ಟೆ ನೋವನ್ನು ತಪ್ಪಿಸಲು ಬಯಸಿದರೆ, ಸ್ವಲ್ಪ ಸಮಯದವರೆಗೆ ನಡೆಯುವ ಅಭ್ಯಾಸವಿರಲಿ. ರಾತ್ರಿಯ ಊಟದ ನಂತರ ಅರ್ಧ ಗಂಟೆಯಾದರೂ ನಡೆಯಬೇಕು ಎನ್ನುತ್ತಾರೆ ತಜ್ಞರು. ಒಂದು ಸಣ್ಣ ನಡಿಗೆಯೂ ಸೇವಿಸಿದ ಆಹಾರವು ಜೀರ್ಣವಾಗಲು ಸಹಾಯ ಮಾಡುತ್ತದೆ. ಇದು ಹೊಟ್ಟೆಗೆ ಸಂಬಂಧ ಪಟ್ಟಂತಹ ಸಮಸ್ಯೆಗಳು ಬಾರದಂತೆ ತಡೆಯುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿಕೆ ಬ್ರದರ್ಸ್ ಸಿಡಿ ಪ್ಲೇಯರ್ಸ್, ಹಾಸನದಲ್ಲಿ ಗೊತ್ತಾಗಿದೆ; ಕುಮಾರಸ್ವಾಮಿ
ಡಿಕೆ ಬ್ರದರ್ಸ್ ಸಿಡಿ ಪ್ಲೇಯರ್ಸ್, ಹಾಸನದಲ್ಲಿ ಗೊತ್ತಾಗಿದೆ; ಕುಮಾರಸ್ವಾಮಿ
ತುಂಗಾ, ಭದ್ರಾ ನದಿಗಳ ಉಳಿವಿಗಾಗಿ ಶೃಂಗೇರಿಯಿಂದ ಕಿಷ್ಕಿಂದೆವರೆಗೆ ಪಾದಯಾತ್ರೆ
ತುಂಗಾ, ಭದ್ರಾ ನದಿಗಳ ಉಳಿವಿಗಾಗಿ ಶೃಂಗೇರಿಯಿಂದ ಕಿಷ್ಕಿಂದೆವರೆಗೆ ಪಾದಯಾತ್ರೆ
ಚುನಾವಣೆ ಗೆಲ್ಲಲು ತಂತ್ರಗಾರಿಕೆ ಸಾಕೆಂದು ಆಡಿಯೋದಲ್ಲಿ ಹೇಳಿರುವ ಹೆಚ್​ಡಿಕೆ
ಚುನಾವಣೆ ಗೆಲ್ಲಲು ತಂತ್ರಗಾರಿಕೆ ಸಾಕೆಂದು ಆಡಿಯೋದಲ್ಲಿ ಹೇಳಿರುವ ಹೆಚ್​ಡಿಕೆ
ಪುರುಷರು ಹೆದರಿ ಹಿಂದೆ ಸರಿಯುವಾಗ ಮುಂದೆ ಬಂದು ಹೆಬ್ಬಾವು ಹಿಡಿದ ಧೀರ ಮಹಿಳೆ!
ಪುರುಷರು ಹೆದರಿ ಹಿಂದೆ ಸರಿಯುವಾಗ ಮುಂದೆ ಬಂದು ಹೆಬ್ಬಾವು ಹಿಡಿದ ಧೀರ ಮಹಿಳೆ!
ವಕ್ಫ್ ವಿರುದ್ಧ ನಡೆಯುತ್ತಿರುವ ಹೋರಾಟ ಎಲ್ಲ ಜಾತಿಗಳಿಗೆ ಸೇರಿದ್ದು: ಯತ್ನಾಳ್
ವಕ್ಫ್ ವಿರುದ್ಧ ನಡೆಯುತ್ತಿರುವ ಹೋರಾಟ ಎಲ್ಲ ಜಾತಿಗಳಿಗೆ ಸೇರಿದ್ದು: ಯತ್ನಾಳ್
ಬಿಗ್​ಬಾಸ್: ಹನುಮಂತನಿಗೆ ಸಾಕಾಗಿದೆ ಕ್ಯಾಪ್ಟನ್ಸಿ ರಗಳೆ
ಬಿಗ್​ಬಾಸ್: ಹನುಮಂತನಿಗೆ ಸಾಕಾಗಿದೆ ಕ್ಯಾಪ್ಟನ್ಸಿ ರಗಳೆ
ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕೆಂದು ಹೇಳಿದ್ದು ನಾನು: ದೇವೇಗೌಡ
ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕೆಂದು ಹೇಳಿದ್ದು ನಾನು: ದೇವೇಗೌಡ
ಸಿಎಂ ಲೋಕಾಯುಕ್ತ ಅಧಿಕಾರಿಗಳ ಮುಂದೆ ಕೈಕಟ್ಟಿ ಕೂರೋದು ನಾಚಿಕೆಗೇಡು: ಅಶೋಕ
ಸಿಎಂ ಲೋಕಾಯುಕ್ತ ಅಧಿಕಾರಿಗಳ ಮುಂದೆ ಕೈಕಟ್ಟಿ ಕೂರೋದು ನಾಚಿಕೆಗೇಡು: ಅಶೋಕ
ಎಲ್ಲ ಸಚಿವರಿಗೆ 10-15 ಆಪ್ತ ಕಾರ್ಯದರ್ಶಿಗಳಿರುತ್ತಾರೆ ಎಂದ ಹೆಬ್ಬಾಳ್ಕರ್
ಎಲ್ಲ ಸಚಿವರಿಗೆ 10-15 ಆಪ್ತ ಕಾರ್ಯದರ್ಶಿಗಳಿರುತ್ತಾರೆ ಎಂದ ಹೆಬ್ಬಾಳ್ಕರ್
CM ರಾಜೀನಾಮೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ BJP ನಾಯಕರು ಪೊಲೀಸ್​ ವಶಕ್ಕೆ
CM ರಾಜೀನಾಮೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ BJP ನಾಯಕರು ಪೊಲೀಸ್​ ವಶಕ್ಕೆ